ಬೆಳಗ್ಗೆ ನೀರು, ಊಟದ ಕೊನೆಗೆ ಮಜ್ಜಿಗೆ ಮತ್ತು ಸಾಯಂಕಾಲ ಹಾಲು ಕುಡಿಯುವುದರ ಮಹತ್ವ

ಆಧ್ಯಾತ್ಮಿಕ ದೃಷ್ಟಿಕೋನದಿಂದ – ಸಾಯಂಕಾಲ (ಮಲಗುವ ಮೊದಲು) ಹಾಲು ಕುಡಿಯುವುದು, ಬೆಳಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿಯುವುದು ಮತ್ತು ಊಟದ ಕೊನೆಗೆ ಮಜ್ಜಿಗೆ ಕುಡಿಯುವುದು ಇವುಗಳ ಮಹತ್ವ

ದಿನಾಂತೇ ಚ ಪಿಬೇದ್‌ದುಗ್ಧಂ ನಿಶಾಂತೇ ಚ ಪಿಬೇತ್ವಯಃ|
ಭೋಜನಾಂತೇ ಪಿಬೇತ್ತಕ್ರಂ ಕಿಂ ವೈದ್ಯಸ್ಯ ಪ್ರಯೋಜನಮ್||
 – ಸುಭಾಷಿತ

ಅರ್ಥ: ಸಾಯಂಕಾಲ (ಅಂದರೆ ಮಲಗುವ ಮುನ್ನ) ಹಾಲು ಕುಡಿಯಬೇಕು ಮತ್ತು ಬೆಳಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿಯಬೇಕು (ಉಷಃಪಾನ), ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿಯಬೇಕು; ಹೀಗೆ ಮಾಡಿದರೆ ವೈದ್ಯನಿಗೇನು ಕೆಲಸ?

ಸಾಯಂಕಾಲ (ಮಲಗುವ ಮೊದಲು) ಹಾಲು ಕುಡಿಯುವುದು : ಸಾಯಂಕಾಲದ ಸಮಯದಲ್ಲಿ ವಾಯುಮಂಡಲದಲ್ಲಿ ರಜ-ತಮಾತ್ಮಕ ಲಹರಿಗಳ ಪ್ರವಾಹದ ಮಾಧ್ಯಮದಿಂದ ಅನೇಕ ಕೆಟ್ಟ ಶಕ್ತಿಗಳ ಆಗಮನವಾಗುತ್ತಿರುತ್ತದೆ. ರಾತ್ರಿಯ ಸಮಯದಲ್ಲಿ ಕೆಟ್ಟ ಶಕ್ತಿಗಳ ರಜ-ತಮಾತ್ಮಕ ಕಾರ್ಯವು ನಡೆದಿರುತ್ತದೆ; ಆದುದರಿಂದ ಈ ಸಮಯದಲ್ಲಿ ಸಗುಣತತ್ತ್ವರೂಪಿ ಚೈತನ್ಯದ ಸ್ರೋತವಾಗಿರುವ ಹಾಲನ್ನು ಕುಡಿದರೆ, ಈ ರಜ-ತಮಾತ್ಮಕ ಕೆಟ್ಟ ಶಕ್ತಿಗಳ ಪ್ರಭಾವದಿಂದ ಜೀವದ ರಕ್ಷಣೆಯಾಗುತ್ತದೆ. ಆದುದರಿಂದ ಈ ಸಮಯದಲ್ಲಿ ಹಾಲು ಕುಡಿಯಬೇಕೆಂದು ಹೇಳಲಾಗಿದೆ.

ಬೆಳಗ್ಗೆ ಎದ್ದ ನಂತರ ನೀರು ಕುಡಿಯುವುದು : ಬೆಳಗ್ಗೆ ಎದ್ದ ನಂತರ (ಮುಖ ತೊಳೆದುಕೊಂಡು) ನೀರು ಕುಡಿಯಬೇಕು, ಏಕೆಂದರೆ ನೀರು ಹೇಗೆ ಪುಣ್ಯಕಾರಕವಾಗಿದೆಯೋ, ಹಾಗೆಯೇ ಪಾಪನಾಶಕವೂ ಆಗಿದೆ. ರಾತ್ರಿಯ ರಜ-ತಮಾತ್ಮಕ ವಾಯುಮಂಡಲದಲ್ಲಿ ದೇಹದ ಮೇಲಾಗುವ ಕೆಟ್ಟ ಶಕ್ತಿಗಳ ಸೂಕ್ಷ್ಮಆಕ್ರಮಣಗಳಿಂದ, ದೇಹ ಮತ್ತು ಬಾಯಿಯ ಟೊಳ್ಳು ರಜ-ತಮಾತ್ಮಕ ಲಹರಿಗಳಿಂದ ತುಂಬಿರುತ್ತದೆ. ರಾತ್ರಿಯಿಡೀ ದೇಹದಲ್ಲಿ ಘನೀಕೃತವಾದ ಈ ರಜ-ತಮಯುಕ್ತ ಪಾಪಲಹರಿಗಳ ನಿವಾರಣೆಗೆ ಸರ್ವಸಮಾವೇಶಕವಾಗಿರುವ ನಿರ್ಗುಣರೂಪಿ ನೀರನ್ನು ಕುಡಿಯಬೇಕು. ನೀರು ಕುಡಿಯುವುದರಿಂದ ದೇಹವು ರಜ-ತಮಾತ್ಮಕ ಲಹರಿಗಳ ಸಂಕ್ರಮಣದಿಂದ ಮುಕ್ತವಾಗುತ್ತದೆ; ಆದುದರಿಂದ ಸಂಪೂರ್ಣ ರಾತ್ರಿಯ ಪಾಪಯುಕ್ತ ರಜ-ತಮಗಳನ್ನು ನಾಶ ಮಾಡಲು ಬೆಳಗ್ಗೆ ಎದ್ದ ಮೇಲೆ ನೀರು ಕುಡಿಯಬೇಕು. ಬೆಳಗ್ಗೆ ನೀರು ಕುಡಿದು ದೇಹವನ್ನು ಶುದ್ಧಗೊಳಿಸಿಕೊಂಡು, ನಂತರ ಬ್ರಾಹ್ಮೀಮೂಹೂರ್ತದಲ್ಲಿ ಸಾಧನೆಗೆ ಕುಳಿತರೆ, ಸಾಧನೆಯಲ್ಲಿನ ಸಾತ್ತ್ವಿಕತೆಯು ದೇಹದಲ್ಲಿನ ರಜ-ತಮಗಳ ಉಚ್ಚಾಟನೆಗೆ ಖರ್ಚಾಗುವುದಿಲ್ಲ.

 

ಊಟದ ಕೊನೆಯಲ್ಲಿ ಮಜ್ಜಿಗೆಯನ್ನು ಕುಡಿಯುವುದು : ಮಜ್ಜಿಗೆಯು ರಜೋಗುಣಿ ಲಹರಿಗಳಿಂದ ಕೂಡಿರುತ್ತದೆ, ಆದುದರಿಂದ ಅದು ಕೃತಿದರ್ಶಕ ಚಲನವಲನಕ್ಕೆ ಗತಿ ನೀಡುತ್ತದೆ. ಮಜ್ಜಿಗೆಯಲ್ಲಿನ ರಜೋಗುಣವು ಆಹಾರದ ಜೀರ್ಣಪ್ರಕ್ರಿಯೆಗೆ ವೇಗವನ್ನು ದೊರಕಿಸಿಕೊಡುತ್ತದೆ ಮತ್ತು ಆಹಾರದಿಂದ ನಿರ್ಮಾಣವಾಗುವ ಇಂಧನವನ್ನು (ಶಕ್ತಿಯನ್ನು) ದೇಹದ ಕಾರ್ಯಕ್ಕೆ ಪೂರೈಸುತ್ತದೆ ಅಥವಾ ಆವಶ್ಯಕತೆಗನುಸಾರ ಆಯಾಯ ಜಾಗಗಳಲ್ಲಿ ಘನೀಕರಿಸುತ್ತದೆ. ರಜೋಗುಣದಿಂದ ಕಾರ್ಯ ವೃದ್ಧಿಯಾಗುವುದರಿಂದ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡಿ ಕಾರ್ಯಕ್ಕೆ ರಜೋಗುಣಿ ಶಕ್ತಿಯನ್ನು ಪೂರೈಸಿ ದಿನವಿಡೀ ಉತ್ಸಾಹವನ್ನು ಉಳಿಸುವ ಮಜ್ಜಿಗೆಗೆ ಊಟದ ನಂತರದ ಮಹತ್ವದ ಸ್ಥಾನವನ್ನು ನೀಡಲಾಗಿದೆ.’

(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಆಹಾರದ ನಿಯಮಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ’)

ಜಾಲತಾಣ : sanatanshop.com/
                                                                                   ಸಂಗ್ರಹ - ಶ್ರೀ. ವಿನೋದ ಕಾಮತ
ವಕ್ತಾರರು, ಸನಾತನ ಸಂಸ್ಥೆ
ಸಂಪರ್ಕ : 93425 99299

Enjoyed this article? Stay informed by joining our newsletter!

Comments

You must be logged in to post a comment.

Related Articles
About Author