ಸದಾ ಕಾಲಕ್ಕೂ ಮಹಿಳೆಯರನ್ನ ಕಾಡುವ ಈ 6 ರೋಗಗಳ ಬಗ್ಗೆ ಇರಲಿ ಸದಾ ಎಚ್ಚರ.

 

ಪ್ರಸ್ತುತ ದಿನಮಾನಗಳಲ್ಲಿ ಸ್ತ್ರೀ ಹಾಗೂ ಪುರುಷರು ಸಮ ಜೀವನ ನಡೆಸುತ್ತಿದ್ದಾರೆ. ಪುರುಷರಂತೆ ಮಹಿಳೆಯರು ಎಲ್ಲಾ ಉದ್ಯೋಗ ಮಾಡುತ್ತಿದ್ದು ಮನೆ ಹಾಗೂ ಕೆಲಸವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

ಮನೆಯಲ್ಲಿ ನಾವು ಒತ್ತಡಗಳ ಜೊತೆಗೆ ಕೆಲಸದಲ್ಲಿನ ಜವಾಬ್ದಾರಿಯನ್ನು ನಿಭಾಯಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಮಹಿಳೆಯರು ತಮಗೆ ಅರಿವಿಲ್ಲದಂತೆ ಸಾಕಷ್ಟು ಅನಾರೋಗ್ಯದ ಸಮಸ್ಯೆಗಳನ್ನು ತಂದುಕೊಳ್ಳುತ್ತಿದ್ದಾರೆ.. ಹೀಗಾಗಿಯೇ ಪುರುಷರಿಗೆ ಹೋಲಿಕೆ ಮಾಡಿಕೊಂಡರೆ ಮಹಿಳೆಯರಲ್ಲಿ ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದ ಸಮಸ್ಯೆಗಳು ಕಾಡುವುದು ಹೆಚ್ಚಾಗಿದೆ. ಅಲ್ಲದೇ ಪ್ರತಿ ವರ್ಷ ದೇಶ ಹಾಗೂ ವಿಶ್ವದಲ್ಲಿ ಅನೇಕ ಮಹಿಳೆಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ.. ಹಾಗಿದ್ರೆ ಮಹಿಳೆಯರನ್ನು ಕಾಡುವ ಆರೋಗ್ಯ ಸಮಸ್ಯೆಗಳು,ಯಾವುವು ಎನ್ನುವ ಮಾಹಿತಿ ಇಲ್ಲಿದೆ..ಮಾಹಿತಿ ತಿಳಿದ ಬಳಿಕ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಸೂಕ್ತವಾಗಿದೆ.

 

1) ಮುಟ್ಟಿನ ತೊಂದರೆಗಳು: ಇತ್ತೀಚಿನ ದಿನಗಳಲ್ಲಿ ಮುಟ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದು ಮಹಿಳೆಯರಲ್ಲಿ ಸಾಮಾನ್ಯ ವಿಷಯವಾಗಿದೆ. ಕೆಲವು ಮಹಿಳೆಯರಿಗೆ ಮುಟ್ಟು ಎನ್ನುವುದು ನಿಜವಾಗಿಯೂ ನೋವಿನಿಂದ ಕೂಡಿರುತ್ತದೆ.

ಮುಟ್ಟಿನ ಸಮಯದಲ್ಲಿ ಹಾರ್ಮೋನುಗಳು ತುಂಬಾ ಅನಿರೀಕ್ಷಿತವಾಗಿ ಇರುತ್ತದೆ. ಒಂದು ಋತುಚಕ್ರದ ಆರಂಭ ಮತ್ತು ಮುಂದಿನ ಋತುಚಕ್ರದ ಪ್ರಾರಂಭದ ನಡುವಿನ ಸಮಯ ಸಾಮಾನ್ಯವಾಗಿ 28 ದಿನಗಳಾಗಿರುತ್ತದೆ. ಅದು ಒಂದು ವಾರ ಮೀರಿದರೆ ಸಮಸ್ಯೆಯಾಗಬಹುದು. ಇಂತಹ ಸಮಯದಲ್ಲಿ ಅನಿಮಿಯತ ಮುಟ್ಟಿನ ಸಮಸ್ಯೆ ಬರುತ್ತದೆ.ಅಲ್ಲದೆ

ಪ್ರಪಂಚದಾದ್ಯಂತ 47.8% ಮಹಿಳೆಯರು ಇಂದು ಪ್ರಿ ಮೆನ್ಸ್ಟ್ರುಯೇಶನ್ ಸಿಂಡ್ರೋಮ್ (Pre menturation syndrome) ಸಮಸ್ಯೆಯಿಂದ ಬಳಲುತ್ತಿದ್ದಾರೆ.

 

2) ಸಂತಾನೋತ್ಪತ್ತಿಯ ಸಮಸ್ಯೆ: ಪ್ರಸ್ತುತ ದಿನಮಾನಗಳಲ್ಲಿ ಭಾರತೀಯ ಮಹಿಳೆಯರಲ್ಲಿ ಸಂತಾನೋತ್ಪತ್ತಿ ದರ 4.97 ರಿಂದ 2.3 ಕ್ಕೆ 50% ಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಪಿಸಿಓಎಸ್, ಗರ್ಭನಿರೋಧಕ ತೊಡಕುಗಳು, ಗರ್ಭಪಾತದ ಸೋಂಕುಗಳು, ಎಸ್‌ಟಿಡಿಗಳು, ಪ್ರಸವಾನಂತರದ ಸೋಂಕುಗಳು, ಶ್ರೋಣಿಯ ಉರಿಯೂತದ ಕಾಯಿಲೆಗಳು, ಧೂಮಪಾನ, ಮದ್ಯಪಾನ, ಸಂಸ್ಕರಿಸಿದ ಆಹಾರ ಸೇವನೆ, ದೈಹಿಕ ಮತ್ತು ಭಾವನಾತ್ಮಕ ಒತ್ತಡಗಳು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಸ್ಯೆಗಳನ್ನು ತಂದು ಇಡುತ್ತೇವೆ.ಇನ್ನು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ ಪ್ರತಿ ಹತ್ತು ಮಹಿಳೆಯರಲ್ಲಿ ಒಬ್ಬರು ಬಂಜೆತನವನ್ನು ಅನುಭವಿಸುತ್ತಿದ್ದಾರೆ.

 

3) ಥೈರಾಯ್ಡ್ ಸಮಸ್ಯೆ: ಥೈರಾಯ್ಡ್ ಕಾಯಿಲೆಯು ಪುರುಷರಿಗಿಂತ ಮಹಿಳೆಯರಲ್ಲಿ ಎರಡು ಪಟ್ಟು ಹೆಚ್ಚು ಹೆಚ್ಚಾಗಿದೆ. ಪ್ರಸ್ತುತ ಹೈಪೋಥೈರಾಯ್ಡಿಸಮ್ ಹಸಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅಲ್ಲದೆ ಮಹಿಳೆಯರ ಗರ್ಭಧಾರಣೆಯು ರಕ್ತದಲ್ಲಿನ ಥೈರಾಯ್ಡ್ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಸುಮಾರು 5% ರಿಂದ 10% ರಷ್ಟು ಮಹಿಳೆಯರು ಪ್ರಸವಾನಂತರದ ಥೈರಾಯ್ಡಿಟಿಸ್‌ನಿಂದ ಬಳಲುತ್ತಿದ್ದಾರೆ, ಇದು ಹೆರಿಗೆಯ ನಂತರ 1 ವರ್ಷದೊಳಗೆ ಸಂಭವಿಸುತ್ತದೆ.

 

4) ಸ್ತನ ಕ್ಯಾನ್ಸರ್: ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಸಾವುಗಳಿಗೆ ಸ್ತನ ಕ್ಯಾನ್ಸರ್ ಎರಡನೇ ಪ್ರಮುಖ ಕಾರಣವಾಗಿದೆ. ಇತ್ತೀಚಿನ ಜಾಗತಿಕ ಅಂಕಿಅಂಶಗಳು ಪ್ರತಿ ವರ್ಷ ಸುಮಾರು ಅರ್ಧ ಮಿಲಿಯನ್ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಸಾಯುತ್ತಾರೆ. ಅದ್ರಲ್ಲೂ ಮೂವತ್ತು ಮತ್ತು ನಲವತ್ತರ ವಯಸ್ಸಿನ ಹೆಚ್ಚಿನ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.

 

5) ಲೈಂಗಿಕ ಆರೋಗ್ಯ ಮತ್ತು ಮೂತ್ರಕೋಶದ ಸಮಸ್ಯೆಗಳು: ಮಹಿಳೆಯರು ತಮ್ಮ ಲೈಂಗಿಕ ಮತ್ತು ಮೂತ್ರಕೋಶದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಏಕೆಂದರೆ ಅವರು ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಮೂತ್ರದ ಸೋಂಕುಗಳೆರಡರಿಂದಲೂ ವೇಗವಾಗಿ ಪರಿಣಾಮ ಬೀರುತ್ತಾರೆ. STD ಯ ಪರಿಣಾಮವು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ತೀವ್ರವಾಗಿರುತ್ತದೆ. ಇನ್ನು ಲೈಂಗಿಕ ಆರೋಗ್ಯದ ಹೊರತಾಗಿ, ಮಹಿಳೆಯರು ತಮ್ಮ ವೈಯಕ್ತಿಕ ನೈರ್ಮಲ್ಯವನ್ನು ಕಾಳಜಿ ವಹಿಸಬೇಕು.

 

6) ಖಿನ್ನತೆ: ಹಾರ್ಮೋನ್‌ ಬದಲಾವಣೆಯ ಸಮಯದಲ್ಲಿ ಕೆಲವು ಮಹಿಳೆಯರು ಪ್ರಸವೋತ್ತರ ಖಿನ್ನತೆ, ಋತುಚಕ್ರಪೂರ್ವ ಡಿನ್ಪೋರಿಕ್‌ ಡಿಸಾರ್ಡರ್‌ ಮತ್ತು ಪೆರಿಮೆನೊಪಾಸ್‌ ಸಂಬಂಧಿ ಖಿನ್ನತೆಯಂತಹ ಮಾನಸಿಕ ತೊಂದರೆಗಳ ಲಕ್ಷಣಗಳನ್ನು ಅನುಭವಿಸಬಹುದು. ಓಬೆಸಿವ್‌ ಕಂಪಲ್ಸಿವ್‌ ಡಿಸಾರ್ಡರ್‌ ಮತ್ತು ಸಾಮಾಜಿಕ ಫೋಬಿಯಾಗಳಂತಹ ಮಾನಸಿಕ ಸಮಸ್ಯೆಗಳಿಗೆ ಪುರುಷರು ಮತ್ತು ಮಹಿಳೆಯರಿಬ್ಬರೂ ತುತ್ತಾಗುತ್ತಾರೆ. ಆದರೆ ಸ್ತ್ರೀಯರು ಪ್ಯಾನಿಕ್‌ ಡಿಸಾರ್ಡರ್‌, ಜನರಲೈಸ್ಡ್ ಆಯಂಕ್ಸೆ„ಟಿ ಮತ್ತು ನಿರ್ದಿಷ್ಟ ಫೋಬಿಯಾಗಳಿಗೆ ತುತ್ತಾಗುವ ಸಾಧ್ಯತೆಗಳು ಎರಡು ಪಟ್ಟು ಹೆಚ್ಚು.

 

Enjoyed this article? Stay informed by joining our newsletter!

Comments

You must be logged in to post a comment.

About Author