ಕೂದಲಿನ ಆರೈಕೆ ಮಾಡುವಾಗ ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ

ಕೂದಲಿನ ಆರೈಕೆ ಮಾಡುವಾಗ ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ

 

ಕಾಂತಿಯುತವಾದ, ಸೊಂಪಾದ, ಉದ್ದಾದ ಕೂದಲು ಬೇಕೆಂದು ಪ್ರತಿಯೊಬ್ಬ ಹೆಣ್ಣುಮಕ್ಕಳೂ ಇಷ್ಟಪಡುತ್ತಾರೆ. ಆದರೆ ಇವತ್ತಿನ ದಿನಗಳಲ್ಲಿ ಬದಲಾದ ವಾತಾವರಣ, ಆಹಾರ ಕ್ರಮದಿಂದ ಹಲವರಲ್ಲಿ ಕೂದಲುದುರುವ ಸಮಸ್ಯೆ ಕಂಡು ಬರುತ್ತಿದೆ. ಕೂದಲು ಉದುರಲಾರಂಭಿಸಿದಾಗ ಹೆಚ್ಚಿನವರು ಯಾವ ಎಣ್ಣೆ ಹಚ್ಚಬೇಕು, ಯಾವ ಶ್ಯಾಂಪೂ ಹಚ್ಚಿದರೆ ಕೂದಲು ಉದುರುವುದನ್ನು ತಟೆಗಟ್ಟಬಹುದು ಎಂದು ಯೋಚಿಸುತ್ತಾರೆ. ಆದರೆ, ಇದಕ್ಕಿಂತಲೂ ಹೆಚ್ಚಾಗಿ ನಾವು ಕೂದಲಿನ ಆರೈಕೆಯ ಸಂದರ್ಭ ಮಾಡುವ ತಪ್ಪುಗಳನ್ನು ಗಮನಿಸಿಕೊಳ್ಳಬೇಕು.

 

ಹೌದು, ಕೂದಲಿನ ಆರೈಕೆಯಲ್ಲಿ ಮಾಡುವ ಕೆಲವು ಸಣ್ಣ ಪುಟ್ಟ ತಪ್ಪುಗಳಿಂದಾಗಿ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತದೆ. ಕೂದಲಿನ ಸೌಂದರ್ಯ ಹಾಳಾಗುತ್ತದೆ. ಸಮಯಕ್ಕೆ ಸರಿಯಾಗಿ ಕೂದಲಿಗೆ ಎಣ್ಣೆ, ಶಾಂಪೂ, ಕಂಡೀಶನರ್ ಹಾಕಿದರೂ ಕೆಲವೊಂದು ತಪ್ಪುಗಳು ಕೂದಲು ಉದುರಲು, ಗಂಟು ಗಂಟಾಗಲು ಕಾರಣವಾಗುತ್ತದೆ. ಹೀಗಾಗಿ ಕೂದಲನ್ನು ಆರೈಕೆ ಮಾಡುವ ಸಂದರ್ಭ ಈ ಕೆಳಗಿನ ತಪ್ಪುಗಳನ್ನು ಮಾಡಬೇಡಿ.

 

ಕೂದಲಿಗೆ ಬಿಸಿನೀರಿನ ಸ್ನಾನ ಒಳ್ಳೆಯದಲ್ಲ

ಕೂದಲಿಗೆ ಬಿಸಿನೀರಿನ ಸ್ನಾನ ಒಳ್ಳೆಯದಲ್ಲ hot water not good for hairImage Credits : Trendingnews.news

ಬಿಸಿನೀರಿನಿಂದ ಸ್ನಾನ ಮಾಡಿದಾಗ ತಕ್ಷಣಕ್ಕೆ ಫ್ರೆಶ್ ಫೀಲ್ ಆಗುತ್ತದೆ ಅನ್ನೋ ಕಾರಣಕ್ಕೆ ಹಲವರು ಬಿಸಿನೀರಿನಲ್ಲಿ ಸ್ನಾನ ಮಾಡಲು ಇಷ್ಟಪಡುತ್ತಾರೆ. ಆದರೆ, ಈ ರೀತಿ ಬಿಸಿನೀರಿನಲ್ಲಿ ಸ್ನಾನ ಮಾಡುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಬಿಸಿನೀರಿನ ಬಳಕೆ ಕೂದಲಿನ ನೈಸರ್ಗಿಕ ಕೋಮಲತೆಯನ್ನು ಹೋಗಲಾಡಿಸುತ್ತದೆ. ಕೂದಲು ಹೆಚ್ಚು ಒರಟು ಒರಟಾಗುತ್ತದೆ. ಬಿಸಿನೀರು ನೆತ್ತಿಯ ಮೇಲೆ ಬೀಳುವುದರಿಂದ ಕೂದಲು ಮೊಳೆಯುವ ಜಾಗ ನಿರ್ಜೀವಗೊಳ್ಳುತ್ತದೆ.

 

ಶಾಂಪೂ ಆಗಾಗ ಬದಲಾಯಿಸುವುದು ಒಳ್ಳೆಯದಲ್ಲ

ಶಾಂಪೂ ಆಗಾಗ ಬದಲಾಯಿಸುವುದು ಒಳ್ಳೆಯದಲ್ಲ changing shampooImage Credits : Hairfinder.com

ಕೂದಲಿಗೆ ಸರಿ ಹೊಂದುವಂತಹ ಶಾಂಪೂ ಆಯ್ಕೆ ಮಾಡುವುದು ಬಹಳ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಮಾರುಕಟ್ಟೆಗೆ ಬರುವ ಹೊಸ ಹೊಸ ಉತ್ಪನ್ನಗಳನ್ನು ಬಳಕೆ ಮಾಡುತ್ತಿರುತ್ತಾರೆ. ಆದರೆ ಇದು ತಪ್ಪು. ಜಾಹೀರಾತಿನಲ್ಲಿ ಕಂಡ ತಕ್ಷಣ ಶಾಂಪೂ ಬದಲಾಯಿಸಲು ಹೋಗಬೇಡಿ. ಎಲ್ಲಾ ಶಾಂಪೂಗಳನ್ನೂ ಟ್ರೈ ಮಾಡುತ್ತಾ ಕೂದಲನ್ನು ಹಾಳುಮಾಡಿಕೊಳ್ಳುವ ಬದಲಾಗಿ ನಿಮ್ಮ ಕೂದಲಿಗೆ ಹೊಂದುವ ಒಂದು ಶಾಂಪೂವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ.

 

ಕೂದಲಿಗೆ ಎಣ್ಣೆ ಹಚ್ಚಿದ ಸಂದರ್ಭ, ಮಳೆಯಲ್ಲಿ ನೆನೆದು ಬಂದ ಸಂದರ್ಭ ಶಾಂಪೂ ಹಾಕಿ ಕೂದಲು ತೊಳೆಯವುದನ್ನು ಮರೆಯಬೇಡಿ. ಇದರಿಂದ ಕೂದಲು ಸ್ವಚ್ಛವಾಗುತ್ತದೆ. ತಲೆಹೊಟ್ಟು, ತುರಿಕೆ ಮೊದಲಾದ ಸಮಸ್ಯೆ ಇರುವುದಿಲ್ಲ. ವಾರಕ್ಕೆರಡು ಬಾರಿ ಅಥವಾ ಎರಡರಿಂದ ಮೂರು ದಿನಗಳ ಬಳಿಕ ಶಾಂಪೂ ಬಳಸಿ ಸ್ನಾನ ಮಾಡುವುದು ಉತ್ತಮ. ಅದಕ್ಕಿಂತ ಹೆಚ್ಚು ಶಾಂಪೂ ಬಳಕೆ ಅಗತ್ಯವಿಲ್ಲ. ಮತ್ತು ತಲೆಸ್ನಾನ ಮಾಡುವಾಗ ಶಾಂಪೂ ಬಳಕೆ ಮಿತವಾಗಿರಲಿ. ತುಂಬಾ ಹೊತ್ತು ಶಾಂಪೂವನ್ನು ಕೂದಲಲ್ಲಿ ಬಿಡುವುದು ಸಹ ಒಳ್ಳೆಯದಲ್ಲ.

 

ಕಂಡೀಷನರ್ ಬಳಕೆಯಿಂದ ಕೂದಲು ಹೆಚ್ಚು ಉದುರುತ್ತದೆ

ಕಂಡೀಷನರ್ ಬಳಕೆಯಿಂದ ಕೂದಲು ಹೆಚ್ಚು ಉದುರುತ್ತದೆ hair fall by using conditionerImage Credits : hair-transplant-source

ಕೂದಲು ನುಣುಪಾಗಲೆಂದು ಹೆಚ್ಚಿನ ಜನರು ಕಂಡೀಷನರ್ ಬಳಸುತ್ತಾರೆ. ಆದರೆ ಕಂಡೀಷನರ್ ಕೂದಲಿಗೆ ಹಚ್ಚುವ ರೀತಿ ತಪ್ಪಾದರೆ ಕೂದಲಿಗೆ ಹಾನಿಯಾಗುವ ಸಂಭವವಿರುತ್ತದೆ. ಆದ್ದರಿಂದ ಕಂಡೀಷನರ್ ಅನ್ನು ಹಚ್ಚುವಾಗ ಕೆಲವು ವಿಷಯಗಳನ್ನು ಗಮನದಲ್ಲಿಡಬೇಕಾಗುತ್ತದೆ. ಕಂಡೀಷನರ್ ಹಚ್ಚಿದ ಮೇಲೆ ಸ್ಪಲ್ಪ ಹೊತ್ತು ಮಾತ್ರ ಕೂದಲಿನಲ್ಲಿ ಬಿಡಬೇಕು. ನಂತರ ತಕ್ಷಣ ನೀಟಾಗಿ ತಿಕ್ಕಿ ತೊಳೆದು ತೆಗೆಯಬೇಕು.

 

ಹೆಚ್ಚು ಸಮಯ ಕಂಡೀಷನರ್ ನ್ನು ಕೂದಲಿಗೆ ಹಚ್ಚುವುದರಿಂದ ಇದರಲ್ಲಿರುವ ಕೆಮಿಕಲ್ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಕಂಡೀಷನರ್ ಹಾಕಿದ ಬಳಿಕ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಕಂಡೀಷನರ್ ಅನ್ನು ಹಚ್ಚಿದ ನಂತರ ಅನೇಕ ಜನರು ಕೂದಲನ್ನು ತೊಳೆಯುವುದಿಲ್ಲ, ಈ ವಿಧಾನ ತಪ್ಪಾಗಿದೆ. ಇದರಿಂದ ಕೂದಲಿಗೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು

 

ತಲೆಸ್ನಾನವಾದ ಬಳಿಕ ಕೂದಲನ್ನು ಆರಿಸಿಕೊಳ್ಳಬೇಕು

ತಲೆಸ್ನಾನವಾದ ಬಳಿಕ ಕೂದಲನ್ನು ಆರಿಸಿಕೊಳ್ಳಬೇಕು drying hairImage Credits : Istock

ತಲೆಸ್ನಾನವಾದ ಬಳಿಕ ಕೂದಲನ್ನು ನೀಟಾಗಿ ಒಣಗಿಸಿಕೊಳ್ಳುವುದು ಮುಖ್ಯ. ಮೊದಲು ಟವೆಲ್ ನಲ್ಲಿ ನೀಟಾಗಿ ಕೂದಲಿನ ಒದ್ದೆ ತೆಗೆದುಕೊಳ್ಳಬೇಕು. ಬಳಿಕ ಫ್ಯಾನ್ ಅಥವಾ ಹೇರ್ ಡ್ರೈಯರ್‍ ನಲ್ಲಿ ಕೂದಲನ್ನು ಒಣಗಿಸಿಕೊಳ್ಳಬೇಕು. ಒದ್ದೆ ಕೂದಲನ್ನು ಹಾಗೆಯೇ ಗಂಟು ಹಾಕಿಕೊಳ್ಳುವುದರಿಂದ, ರಬ್ಬರ್ ಬ್ಯಾಂಡ್ ಹಾಕುವುದರಿಂದ ಕೂದಲು ಹೆಚ್ಚು ಒರಟಾಗುತ್ತದೆ. ಮರುದಿನ ಕೂದಲು ಬಾಚುವಾಗ ಹೆಚ್ಚು ಕೂದಲು ಉದುರುತ್ತದೆ.

 

ಒದ್ದೆ ಕೂದಲನ್ನು ಗಂಟು ಕಟ್ಟದಿರಿ

ಒದ್ದೆ ಕೂದಲನ್ನು ಗಂಟು ಕಟ್ಟದಿರಿ wet hair rounded by towelImage Credits : Lorealparisusa.com

ನಮಗೆ ಗೊತ್ತಿಲ್ಲದೇ ಮಾಡುವ ತಪ್ಪುಗಳಲ್ಲಿ ಇದೂ ಒಂದು. ಹಲವರು ಒದ್ದೆ ಕೂದಲನ್ನು ಒಣಗಿಸಿಕೊಳ್ಳಲು ಸಮಯವಿಲ್ಲದಿದ್ದಾಗ ಗಂಟು ಕಟ್ಟಿಕೊಳ್ಳುತ್ತಾರೆ.  ಆದರೆ ಇದರಿಂದ ಕೂದಲಿಗೆ ಹೆಚ್ಚು ಹಾನಿಯಾಗುತ್ತದೆ. ಕೂದಲುದುರುವಿಕೆ, ತಲೆಹೊಟ್ಟು ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಕೂದಲನ್ನು ಗಂಟುಕಟ್ಟಿಕೊಳ್ಳಬೇಕಾದ ಸಂದರ್ಭ ಎದುರಾದರೆ ಕೂದಲು ಒಣಗಿರಬೇಕಾಗಿರುವುದು ಅವಶ್ಯವಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಕೂದಲು ಅರೆಬರೆ ಒಣಗಿದ್ದಾಗ ಕೂದಲನ್ನು ಗಂಟುಕಟ್ಟಿಕೊಳ್ಳಬೇಕಾಗಿ ಬಂದರೆ ಸಡಿಲವಾಗಿ ಗಂಟು ಹಾಕಿಕೊಳ್ಳಬೇಕು.

 

ಒದ್ದೆ ಕೂದಲನ್ನು ಬಾಚಬಾರದು

ಒದ್ದೆ ಕೂದಲನ್ನು ಬಾಚಬಾರದು dont comb wet hairsImage Credits : pantene.com

ಕೂದಲು ಸಂಪೂರ್ಣ ಒಣಗಿದ ಮೇಲಷ್ಟೇ ಕೂದಲನ್ನು ಬಾಚಬೇಕು.  ಒಣಗಿದ ಕೂದಲಿಗಿಂತ ಒದ್ದೆಯಾದ ಕೂದಲು ತುಂಬಾ ದುರ್ಬಲವಾಗಿರುತ್ತದೆ. ಒದ್ದೆಯಾದ ಕೂದಲನ್ನು ಬಾಚಿದಾಗ ಕೂದಲಿನ ಮೇಲಿನ ಒತ್ತಡ ಬಿದ್ದು, ಇದರಿಂದ ಕೂದಲಿನ ಶಕ್ತಿ ಕಡಿಮೆಯಾಗಿ ಉದುರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಒದ್ದೆ ಕೂದಲನ್ನು ಬಾಚಬಾರದು. ಹಾಗೆಯೇ ಒದ್ದೆಯಾದ ಕೂದಲು ದೀರ್ಘಕಾಲದ ವರೆಗೆ ಕಟ್ಟಿರುವುದರಿಂದ ಕೂದಲಿನ ಬುಡ ನೆನೆದು ಕೂದಲು ದುರ್ಬಲಗೊಳ್ಳುತ್ತದೆ ಮತ್ತು ಉದುರಲು ಪ್ರಾರಂಭಿಸುತ್ತದೆ. ಹಾಗೆಯೇ ಕೂದಲಿಗೆ ಎಣ್ಣೆ ಹಚ್ಚಿದ ಕೂಡಲೇ ಬಾಚಬಾರದು.

 

ಅಗಲವಾದ ಬಾಚಣಿಗೆ ಬಳಸಿ

ಅಗಲವಾದ ಬಾಚಣಿಗೆ ಬಳಸಿ use wide combImage Credits : Hairfinder

ಯಾವ ರೀತಿಯ ಬಾಚಣಿಗೆ ಬಳಸುತ್ತೇವೆ ಅನ್ನೋದು ಮುಖ್ಯವಾಗುತ್ತದಾ ಎಂದು ನೀವು ಯೋಚಿಸಬಹುದು. ಆದರೆ ಇದು ನಿಜ. ಚಿಕ್ಕ ಹಲ್ಲುಗಳಿರುವ ಬಾಚಣಿಗೆಯಿಂದ ಕೂದಲನ್ನು ಬಾಚಿಕೊಂಡರೆ ಕೂದಲಿಗೆ ಹೆಚ್ಚು ಹಾನಿಯಾಗುತ್ತದೆ. ಕೂದಲು ಸುಲಭವಾಗಿ ತುಂಡಾಗುತ್ತದೆ. ಹೀಗಾಗಿ ಅಗಲವಾದ ಮತ್ತು ಕೊಂಚ ದೂರ ದೂರ ಹಲ್ಲುಗಳಿರುವ ಬಾಚಣಿಗೆಯಿಂದ ತಲೆ ಬಾಚಿಕೊಳ್ಳುವುದು ಉತ್ತಮ. ಬಾಚಣಿಗೆ ಕೂದಲ ಮೇಲೆ ಹೆಚ್ಚಿನ ಒತ್ತಡವನ್ನು ಹಾಕದೆ ಬಾಚಿಕೊಳ್ಳಲು ನೆರವಾಗುತ್ತದೆ. ಹೀಗಾಗಿ ಕೂದಲು ಬಾಚಲು ಉತ್ತಮ ಗುಣಮಟ್ಟದ, ಅಗಲವಾದ ಬಾಚಣಿಗೆ ಆಯ್ಕೆ ಮಾಡಿಕೊಳ್ಳಿ.

 

ಕೂದಲಿನ ಆರೈಕೆಯ ಸಂದರ್ಭ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದಿರಂದ ಹೆಚ್ಚೆಚ್ಚು ಕೂದಲುದುರುವುದನ್ನು ತಪ್ಪಿಸಬಹುದು. ಮತ್ತು ಇಂಥಹಾ ಉತ್ತಮ ಅಭ್ಯಾಸಗಳು ಕೂದಲು ಸೊಂಪಾಗಿ ಬೆಳೆಯಲು ಕಾರಣವಾಗುತ್ತದೆ.

Featured Image Credits : Smartcompany.com.au

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author