ಮೊಡವೆಗಳ ಗೊಡವೆಗೆ ಸುಲಭ ಮನೆ ಮದ್ದು..

ಮೊಡವೆಗಳ ಗೊಡವೆಗೆ ಸುಲಭ ಮನೆ ಮದ್ದು..

ಹಲವರಿಗೆ ಸದಾ ಕಾಡುವ ಸಮಸ್ಯೆ ಅಂದ್ರೆ ಅದು ಮೊಡವೆಗಳು. ಈ ಮೊಡವೆಗಳ ಗೊಡವೆಯಿಂದ ಪಾರಾಗಲು ಯಾರು ಏನೇ ಪರಿಹಾರ ಹೇಳಿದ್ರೂ ಈಗಾಗಲೇ ಎಲ್ಲವನ್ನೂ ಟ್ರೈ ಮಾಡಿರ್ತೀರ ಅಲ್ವಾ..? ಆದ್ರೆ ಮೊಡವೆಗಳಿಂದ ಮುಕ್ತಿ ಮಾತ್ರ ಸಿಕ್ಕಿರೋಲ್ಲ.. ಆದ್ರೆ ಮೊಡವೆ ಕಿರಿಕಿರಿಯನ್ನು ದೂರ ಮಾಡಲು ಮನೆಯಲ್ಲೇ ಸುಲಭವಾಗಿ ಪಾಲಿಸಬಹುದಾ ಕೆಲವೊಂದು ವಿಧಾನಗಳನ್ನ ತಿಳಿಸಿಕೊಡ್ತೀವಿ..

ಮೊಸರು, ನಿಂಬೆ ಹಾಗೂ ಅರಿಶಿಣದ ಫೇಸ್ ಪ್ಯಾಕ್

ಮೂರರಿಂದ ನಾಲ್ಕು ಟೀ ಸ್ಪೂನ್ ಮೊಸರಿಗೆ 1 ಟೀ ಸ್ಪೂನ್ ಅರಿಶಿಣ ಹಾಗೂ ಕಾಲು ಟೀ ಸ್ಪೂನ್ ನಿಂಬೆ ಸೇರಿಸಿ ಚೆನ್ನಾಗಿ ಕಲೆಸಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಒಣಗುವವರೆಗು ಬಿಟ್ಟು ನಂತರ ಸಾಧಾರಣ ನೀರಿನಲ್ಲಿ ಮುಖ ತೊಳೆಯಿರಿ. ಈ ವಿಧಾನವನ್ನು ನಿಯಮಿತವಾಗಿ ಅನುಸರಿಸುತ್ತಾ ಬಂದಲ್ಲಿ ಮುಖದ ಕಾಂತಿ ಹೆಚ್ಚುವುದರ ಜೊತೆಗೆ ಮೊಡವೆಗಳು ನಿಯಂತ್ರಣಕ್ಕೆ ಬರುತ್ತವೆ

ಹಾಲಿನ ಕೆನೆ ಮತ್ತು ಅರಿಶಿಣ

ಮೊಡವೆಗಳು ಇನ್ನು ಪ್ರಾರಂಭದ ಹಂತದಲ್ಲಿದ್ದರೆ ಹಾಲಿನ ಕೆನೆ ಸ್ವಲ್ಪ ಅರಿಶಿಣ ಸೇರಿಸಿ ಮೃದುವಾದ ಪೇಸ್ಟ್ ತಯಾರಿಸಿ ಹತ್ತಿಯಯಿಂದ ಮೊಡವೆಗಳ ಮೇಲೆ ತೆಳುವಾಗಿ ಲೇಪಿಸಿ ಒಣಗುವವರೆಗೆ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದು ಶುದ್ಧವಾದ ಟವೆಲ್ ನಲ್ಲಿ ಮುಖವನ್ನು ನಿಧಾನವಾಗಿ ಒರೆಸಿ. ಈ ವಿಧಾನವನ್ನು ಮೊಡವೆಗಳು ಹೊಡೆದುಕೊಂಡ ನಂತರವೂ ಬಳಸಬಹುದು. ಆದರೆ ಟವೆಲ್ ನಿಂದ ಮುಖ ಒರೆಸುವಾಗ ಹೆಚ್ಚು ಒತ್ತಿ ಒರೆಸದೆ ಮೇಲೆ ಮೇಲೆ ನಿಧಾನವಾಗಿ ಪ್ರೆಸ್ ಮಾಡಿ.

ಟೊಮ್ಯಾಟೋ ಮಸಾಜ್

ಮನೆಯಲ್ಲೇ ಸುಲಭವಾಗಿ ಸಿಗುವ ಟೊಮ್ಯಾಟೋ ಮೊಡವೆ ಹಾಗೂ ಕಲೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಪ್ರತಿ ದಿನ ಸ್ನಾನಕ್ಕಿಂತ ಮೊದಲು ಟೊಮ್ಯಾಟೋ ರಸದಿಂದ ಮುಖವನ್ನು ಹತ್ತರಿಂದ ಹದಿನೈದು ನಿಮಿಷ ಮಸಾಜ್ ಮಾಡಿ ಒಣಗುವವರೆಗು ಬಿಟ್ಟು ಸಾಧಾರಣ ನೀರಿನಲ್ಲಿ ಮುಖ ತೊಳೆಯಿರಿ.. ಈ ವಿಧಾನವನ್ನು ನಿಯಮಿತವಾಗಿ ಅನುಸರಿಸುತ್ತಾ ಬಂದರೆ ಮೊಡವೆಗಳು ನಿಯಂತ್ರಣಕ್ಕೆ ಬರುವುದರ ಜೊತೆಗೆ ಕಪ್ಪುಕಲೆಗಳು ಕಡಿಮೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author