20,30, 40, ಮುಂದಕ್ಕೂ ಆರೋಗ್ಯಕರ ಸೆಕ್ಸ್‍ ಜೀವನ ನಡೆಸುವುದು ಹೇಗೆ?

How to have healthy sex at 20s 30s 40s
Featured Image Credits : Amazon.com

ಸೆಕ್ಸ್‍ ಅನ್ನುವುದು ಜೀವನದ ಒಂದು ಪ್ರಮುಖ ಭಾಗ. ಒಂದೊಂದು ವಯಸ್ಸಿನಲ್ಲಿ ಒಂದೊಂದು ರೀತಿಯ ಸೆಕ್ಸ್‍ ಅನುಭವಗಳು ಇರುತ್ತವೆ ಎನ್ನುತ್ತಾರೆ ಲೈಂಗಿಕ ತಜ್ಞರು. ಆದರೆ ಸೆಕ್ಸ್‍ ಬಗ್ಗೆ ಜನ ಮುಕ್ತವಾಗಿ ಚರ್ಚೆ ನಡೆಸುವುದು ಕಡಿಮೆ. ಸೆಕ್ಸ್‍ ಬಗ್ಗೆ ಮಾಹಿತಿ, ತಿಳುವಳಿಕೆ, ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ. ಲೈಂಗಿಕ ಶಿಕ್ಷಣದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆಸಕ್ತಿ ಹೆಚ್ಚಾಗುತ್ತಿದ್ದು, ಅಂತದ್ದೇ ಕೆಲ ಮಾಹಿತಿ ಇಲ್ಲಿದೆ.

ನಮ್ಮ ಜೀವನದುದ್ದಕ್ಕೂ ಆರೋಗ್ಯಕರ ಸೆಕ್ಸ್‍ ಮಾಡುವುದು ಹೇಗೆ? ನಮಗೆ ಏನು ಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ? ಈ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ.

ನಿಮ್ಮ ಜೀವನದಲ್ಲಿ ನೀವು ಬ್ಯುಸಿ ಆದಾಗ ನಿಮ್ಮ ಸೆಕ್ಸ್‍ ಜೀವನ ಬದಲಾಗುವುದು ಸಾಮಾನ್ಯ. ನೀವು ಟೆನ್ಷನ್‍ನಿಂದ ಜೀವನ ನಡೆಸುತ್ತಿದ್ದರೂ ನಿಮ್ಮ ಸೆಕ್ಸ್‍ ಲೈಫ್‍ ಏರುಪೇರಾಗುತ್ತದೆ ಎನ್ನುತ್ತಾರೆ ಲೈಂಗಿಕ ತಜ್ಞರು.

ದಂಪತಿ, ಪ್ರೇಮಿಗಳು ಅಪ್ಪಟ ಪ್ರೀತಿ ಇಲ್ಲವೇ ಮೋಹದಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಸಾಧ್ಯವಾಗದೆ ಇದ್ದರೆ, ಕೊನೆ ಪಕ್ಷ ಒಟ್ಟಿಗಿರಲು ಇಲ್ಲವೇ ತಮ್ಮ ನಡುವಿನ ಪ್ರೀತಿಯನ್ನು ಪುನಃ ಕಂಡುಕೊಳ್ಳಲು ಸೆಕ್ಸ್‍ ಮಾಡುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಸೆಕ್ಸ್‍ ಎನ್ನುವುದು ಊಟವಿದ್ದಂತೆ. ಯಾವಾಗ ಏನು ಬೇಕು ಎನ್ನುವುದನ್ನು ನೀವೇ ಅರಿತುಕೊಳ್ಳಬೇಕು ಎನ್ನುತ್ತಾರೆ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯದ ಲೈಂಗಿಕ ತಜ್ಞೆ ಜ್ಯಾಕ್ವೆಲಿನ್‍ ಹೆಲ್ಯೆರ್‍.

20ರ ವಯಸ್ಸಿನಲ್ಲಿ ಸೆಕ್ಸ್

how to have a healthy sex at 30s age

Image Source : healthi guide

20ರಿಂದ 30ನೇ ವಯಸ್ಸಿನ ವರೆಗೂ ಯುವತಿಯರಿಗೆ ಸೆಕ್ಸ್‍ ಎನ್ನುವುದು ತಮ್ಮಲ್ಲಿನ ಆಸೆ,ಆಕಾಂಕ್ಷೆ, ಮೋಹವನ್ನು ಕಂಡುಕೊಳ್ಳುವ ಕ್ರಿಯೆ. ಆದರೆ ಇದೇ ಎಲ್ಲವೂ ಅಂತಲ್ಲ. ಯುವತಿಯರು ತಮ್ಮಲಿರುವ ಆಸೆಗಳನ್ನು ಈಡೇರಿಸಿಕೊಳ್ಳುವುದು ಸರಿ ಹಾಗೂ ಸಾಮಾನ್ಯ ಎನ್ನುವುದನ್ನು ತಿಳಿದುಕೊಳ್ಳಬೇಕು. ಅಲ್ಲದೇ ತಮ್ಮ ಜೊತೆಗಾರನಿಗೆ ತಮ್ಮ ಇಷ್ಟ-ಕಷ್ಟಗಳನ್ನು ತಿಳಿಸುವ ಭಾಷೆ ಹಾಗೂ ಆತ್ಮವಿಶ್ವಾಸವನ್ನು ಕಂಡುಕೊಳ್ಳುವುದನ್ನು ಮರೆಯಬಾರದು.

ಮೆಲ್ಬರ್ನ್‍ ಮೂಲದ ಲೈಂಗಿಕ-ಮಾನಸಿಕ ತಜ್ಞೆ ಚಾಂಟೆಲಿ ಒಟೆನ್‍ ಪ್ರಕಾರ, 20ರ ಬಹುತೇಕ ಯುವತಿಯರಿಗೆ ತಮ್ಮ ದೇಹ ಅಂಗಾಂಗಗಳ ಬಗ್ಗೆ, ಅವುಗಳ ಸೂಕ್ಷ್ಮತೆ ಬಗ್ಗೆ ಸಂಪೂರ್ಣವಾಗಿ ಅರಿವಿರುವುದಿಲ್ಲ. ಮೊದಲು ತಮ್ಮ ದೇಹದ ಬಗ್ಗೆ ತಾವು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ ಒಟೆನ್‍.

ಇಷ್ಟೇ ಅಲ್ಲ, ತಾವು ಜೀವನದಲ್ಲಿ ಲೈಂಗಿಕ ಸುಖ ಅನುಭವಿಸುವ ಹಕ್ಕು ಹೊಂದಿದ್ದಾರೆ. ಇದು ಸಾಮಾನ್ಯ ಎನ್ನುವುದೂ ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ. ಸೆಕ್ಸ್‍ಗಾಗಿ ಆಸೆ ಪಡುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ಜೀವನದ ಒಂದು ಭಾಗ ಎನ್ನುವದನ್ನೂ ಮನದಟ್ಟು ಮಾಡಿಕೊಳ್ಳಬೇಕು.

ಹುಡುಗರು ಪೋರ್ನ್‍ ನೋಡುವುದು ಎಷ್ಟು ಸರಿ?

ಇನ್ನು ಯುವ ಪುರುಷರು ತಮ್ಮ ಜೀವನದ ಮೇಲೆ ಪೋರ್ನ್‍ ಎಷ್ಟು ಪ್ರಭಾವ ಬೀರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಪೋರ್ನ್‍ ವಿಡಿಯೋಗಳ ವೀಕ್ಷಣೆ ತಪ್ಪಲ್ಲ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ, ಪೋರ್ನ್‍ ವೀಕ್ಷಣೆಯೂ ಅತಿಯಾಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡುತ್ತಾರೆ ತಜ್ಞರು.

ಅತಿಯಾಗಿ ಪೋರ್ನ್‍ ವೀಕ್ಷಣೆಯಿಂದ ಹುಡುಗರಲ್ಲಿ ಸೆಕ್ಸ್‍ ಬಗ್ಗೆ ಇಲ್ಲ ಸಲ್ಲದ ಆಸೆಗಳು ಹುಟ್ಟಿಕೊಳ್ಳುತ್ತವೆ. ಪೋರ್ನ್‍ ವಿಡಿಯೋಗಳಲ್ಲಿ ನೋಡುವ ಸೆಕ್ಸ್‍ಗೂ ನಿಜ ಜೀವನದಲ್ಲಿ ನಡೆಯುವ ಸೆಕ್ಸ್‍ಗೂ ವ್ಯತ್ಯಾಸವಿರಲಿದೆ. ಇದರ ಬಗ್ಗೆ ಹುಡುಗರು, ಯುವತಿಯರು ತಿಳಿದುಕೊಂಡಿರಬೇಕು ಎಂದು ತಜ್ಞೆ ಹೆಲ್ಯರ್‍ ಹೇಳುತ್ತಾರೆ.

30ನೇ ವಯಸ್ಸಿನಲ್ಲಿ ಸೆಕ್ಸ್‍ ಹೇಗೆ?

ಜನ 30 ವರ್ಷ ದಾಟಿದ ಬಳಿಕ ಕೆಲಸದ ಒತ್ತಡದಲ್ಲಿ ಸಿಲುಕಿ ಲೈಂಗಿಕ ಕ್ರಿಯೆಯನ್ನೇ ಮರೆತು ಬಿಡುತ್ತಾರೆ. ಸೆಕ್ಸ್‍ ಹಾಗೂ ಸೆಕ್ಸ್‍ ಜೀವನಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ. ಮಹಿಳೆಯರು ಕೆಲಸದ ಒತ್ತಡ, ಸಂಸಾರ ನಿಭಾಯಿಸುವ ಜವಾಬ್ದಾರಿಯಲ್ಲಿ ಬ್ಯುಸಿಯಾದರೆ, ಅವರ ಪತಿಯಂದಿರು ಹಣಕಾಸಿನ ಸಮಸ್ಯೆ, ಕೆಲಸದ ಒತ್ತಡ, ಟ್ರಾಫಿಕ್‍ ಜಂಜಾಟದಲ್ಲಿ ಸಿಲುಕಿ ಒದ್ದಾಡುತ್ತಿರುತ್ತಾರೆ. ಮಹಿಳೆಯರು ಸೆಕ್ಸ್‍ ಬಗ್ಗೆ ಆಸಕ್ತಿ ಕಳೆದುಕೊಂಡಂತೆ ಪುರುಷರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಹೀಗಾಗಿ, ಸೆಕ್ಸ್‍ ಥೆರಾಪಿಸ್ಟ್‍ ಡಾ. ಶೆವಾ ಮಾರ್ಕಸ್‍, 30ರ ಮಹಿಳೆ-ಪುರುಷರಿಗೆ ವಿಶೇಷ ಸಲಹೆಯೊಂದನ್ನು ನೀಡುತ್ತಾರೆ. ಆಗಾಗ ಸೆಕ್ಸ್‍ ನಡೆಸಲು ವೇಳಾಪಟ್ಟಿಯೊಂದನ್ನು ಸಿದ್ಧಪಡಿಸಿಕೊಳ್ಳಬೇಕು ಎನ್ನುತ್ತಾರೆ. ಆರಂಭದಲ್ಲಿ ಇದು ತಮಾಷೆ, ಕಷ್ಟ ಎನಿಸಿದರೂ ದಿನ ಕಳೆದಂತೆ ಇದು ಅಭ್ಯಾಸವಾಗುತ್ತದೆ ಹಾಗೂ ಲೈಂಗಿಕ ಅಗತ್ಯತೆಗಳನ್ನು ಪೂರೈಸುತ್ತದೆ ಎನ್ನುತ್ತಾರೆ.

40ನೇ ವಯಸ್ಸಿನಲ್ಲಿ ಸೆಕ್ಸ್‍

how to have healthy sex at 40s ageImage Credits : Shutterstock

40ನೇ ವಯಸ್ಸಿನ ಹೊ0ತ್ತಿಗೆ ಜೀವನದಲ್ಲಿ ಆದ್ಯತೆಗಳು ಬದಲಾಗಿರುತ್ತವೆ. ಮಕ್ಕಳು ದೊಡ್ಡವರಾಗಿರುತ್ತಾರೆ. ಕೆಲಸದ ಸ್ಥಳಗಳಲ್ಲಿ ಹೆಚ್ಚಿನ ಜವಾಬ್ದಾರಿ ಇರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸೆಕ್ಸ್‍ ಬಗ್ಗೆ ಆಸಕ್ತಿಯೂ ಕಡಿಮೆಯಾಗುತ್ತದೆ. ದಂಪತಿಗೆ ಇದು ಬಹಳ ಮುಖ್ಯವಾದ ಸಮಯ ಎನ್ನುತ್ತಾರೆ ತಜ್ಞರು.

ದಂಪತಿಗಳು ಪರಸ್ಪರ ಕೂತು ಮಾತನಾಡಬೇಕು. ತಾವೇಕೆ ಆಗಾಗ ಲೈಂಗಿಕ ಕ್ರಿಯೆ ನಡೆಸಬೇಕು. ತಮ್ಮ ಹಿಂದಿನ ದಿನಗಳಲ್ಲಿ ಅನುಭವಿಸಿದ ಸಿಹಿ ಕ್ಷಣಗಳನ್ನು ಮೆಲುಕು ಹಾಕಬೇಕು.ತಾವು ಹೇಗೆ ಮತ್ತೆ ಆನಂದದ ಕ್ಷಣಗಳನ್ನು ಕಳೆಯಬೇಕು ಎನ್ನುವುದನ್ನು ಚರ್ಚಿಸಿ, ಲೈಂಗಿಕ ಕ್ರಿಯೆ ನಡೆಸಿ ಖುಷಿ ಸಾಧಿಸಬೇಕು ಎಂದು ಸಲಹೆ ನೀಡುತ್ತಾರೆ.

ಹಲವರಿಗೆ 40ನೇ ವಯಸ್ಸು ಜೀವನದಲ್ಲಿ ಹೊಸ ಘಟ್ಟ. ಇತ್ತೀಚಿನ ದಿನಗಳಲ್ಲಿ ಡಿವೋರ್ಸ್‍ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಹೊಸ ಆರಂಭಕ್ಕೆ, ಡೇಟಿಂಗ್‍ ಅನುಭವಗಳಿಗೆ ಹಲವರು ಕಾಯುತ್ತಿರುತ್ತಾರೆ.

50ನೇ ವಯಸ್ಸಿನಲ್ಲಿ ಸೆಕ್ಸ್ ಹೇಗೆ?

ಬಹುತೇಕ ಮಹಿಳೆಯರಿಗೆ 50ನೇ ವಯಸ್ಸಿನ ಆಸುಪಾಸಿನಲ್ಲಿ ಮುಟ್ಟು ನಿಲ್ಲುವ ಸಮಯವಾಗಿರಲಿದೆ. ಅನೇಕರಿಗೆ ಮುಟ್ಟು ನಿಲ್ಲುತ್ತದೆ ಕೂಡ. ಈ ಸಮಯದಲ್ಲಿ ಮಹಿಳೆಯರಿಗೆ ತಾವು ಋತುಮತಿಯಾಗುವ ಸಮಯದಲ್ಲಿ ಆದ ಅನುಭವ ಆಗುತ್ತದೆ ಎನ್ನುತ್ತಾರೆ ತಜ್ಞೆ ಮಾರ್ಕಸ್‍.

ತಮ್ಮ ದೇಹದಲ್ಲಿ ಹಾರ್ಮೋನ್‍ ಬದಲಾವಣೆ ಆಗುವ ಕಾರಣ, ಸೆಕ್ಸ್‍ ಬಗ್ಗೆಯ ಆಸೆಗಳು ಬದಲಾಗಲಿವೆ. ಹಲವು ಮಹಿಳೆಯರಿಗೆ ಸಮಸ್ಯೆಯೂ ಉಂಟಾಗಲಿದ್ದು, ಇದಕ್ಕೆ ಪರಿಹಾರವನ್ನೂ ಕಂಡುಕೊಳ್ಳಬಹುದು.

ಈ ವಯಸ್ಸಿನಲ್ಲಿ ಲೈಂಗಿಕ ಕ್ರಿಯೆ ನಡೆಸಲು ಸಂವಹನ ಬಹಳ ಮುಖ್ಯ. ತಮ್ಮ ಜೊತೆಗಾರರೊಂದಿಗೆ ಎಷ್ಟು ಪ್ರೀತಿ, ಸಲುಗೆಯಿಂದ ಇರುತ್ತಾರೋ ಅಷ್ಟು ಒಳ್ಳೆಯದು. ತಮಗೆ ಏನು ಬೇಕು ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಯವಾದ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಖಂಡಿತ ಖುಷಿ ಸಿಗಲಿದೆ. ದಂಪತಿ ನಡುವಿನ ಸಂಬಂಧವೂ ಹಸನಾಗಿ ಉಳಿಯಲಿದೆ ಎನ್ನುತ್ತಾರೆ ತಜ್ಞೆ ಮಾರ್ಕಸ್‍.

ಸೆಕ್ಸ್‍ ಥೆರಾಪಿಸ್ಟ್‍ಗಳ ಪ್ರಕಾರ ಜೀವನದುದ್ದಕ್ಕೂ ಆರೋಗ್ಯಕರ ಲೈಂಗಿಕ ಕ್ರಿಯೆ ಕಾಪಾಡಿಕೊಂಡರೆ, 70,80ನೇ ವಯಸ್ಸಿನ ವರೆಗೂ ಸೆಕ್ಸ್‍ ಜೀವನ ಆನಂದಿಸಬಹುದು. ಸೆಕ್ಸ್‍ ಅನ್ನು ಕೇವಲ ಒಂದು ಕ್ರಿಯೆಯಾಗಿ, ಆ ಕ್ಷಣಕ್ಕೆ ಖುಷಿ ಅನುಭವಿಸುವುದಕ್ಕೆ, ತಮ್ಮ ಜೊತೆಗಾರ್ತಿಯ ಸಮ್ಮತಿ ಇಲ್ಲದೆ ಲೈಂಗಿಕ ಕ್ರಿಯೆ ನಡೆಸಿದರೆ ಸುದೀರ್ಘಾವಧಿಗೆ ಸೆಕ್ಸ್‍ ಆನಂದ ಕೊಡುವುದಿಲ್ಲ.

ಲೈಂಗಿಕ ಕ್ರಿಯೆಯನ್ನು ಪರಸ್ಪರ ಆನಂದಿಸಿ, ಖುಷಿಯಿಂದ ಇಬ್ಬರೂ ಸಂಪೂರ್ಣ ಆಸಕ್ತಿ ತೋರಿ ನಡೆಸಿದಾಗ ಖುಷಿ ಹೆಚ್ಚಾಗಲಿದೆ. ಅಲ್ಲದೇ ತಮ್ಮ ಜೀವನದಲ್ಲಿರುವ ಒತ್ತಡಗಳನ್ನು ಮರೆಯಲು ಸಹ ಸಹಕಾರಿಯಾಗಲಿದೆ. ಸೆಕ್ಸ್‍ ಎನ್ನುವುದು ಒಂದು ಕಲೆ. ತಮ್ಮ ಜೊತೆಗಾರ್ತಿಯನ್ನು ಒಲಿಸಿಕೊಂಡು, ಆಕೆಯ ಇಷ್ಟ-ಕಷ್ಟಗಳನ್ನು ಅರಿತು ಸಂಭೋಗ ಕ್ರಿಯೆಯಲ್ಲಿ ತೊಡಗಿದಾಗ ಜೀವನ ಖುಷಿಯಾಗಿರುತ್ತದೆ ಎಂದು ಸೆಕ್ಸ್‍ ಥೆರಾಪಿಸ್ಟ್‍ಗಳು ಸಲಹೆ ನೀಡುತ್ತಾರೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author