ಒಡೆದ ಹಿಮ್ಮಡಿಯ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

ಒಡೆದ ಹಿಮ್ಮಡಿಯ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ.
ಒಡೆದ ಹಿಮ್ಮಡಿಯನ್ನು ಸರಿಯಾಗಿಸಲು ನಿಮ್ಮ ಮನೆಯಲ್ಲೇ ಪರಿಹಾರವಿದೆ. ಎಣ್ಣೆ, ಲಿಂಬೆಹಣ್ಣು, ಅಕ್ಕಿ ಹಿಟ್ಟು, ಬೇವಿನ ಎಲೆ, ಗ್ಲಿಸರಿನ್ ಮತ್ತು ರೋಸ್ ವಾಟರ್ ಬಳಸಿದರೆ ಒಡೆದ ಹಿಮ್ಮಡಿ ಕೂಡಿಕೊಳ್ಳುತ್ತದೆ.
ಎಣ್ಣೆ:
ಮನೆಯಲ್ಲಿರುವ ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ, ಸಾಸಿವೆ ಎಣ್ಣೆ ಅಥವಾ ಯಾವುದೇ ಎಣ್ಣೆಯನ್ನು ಆಗಾಗ ಹಚ್ಚುತ್ತಿದ್ದರೆ ಒಡೆದ ಹಿಮ್ಮಡಿ ಬೇಗ ಸರಿಯಾಗುತ್ತದೆ. ರಾತ್ರಿ ಮಲಗುವ ಮೊದಲು ನಿಮ್ಮ ಪಾದಗಳನ್ನು ಅರ್ಧ ಗಂಟೆ ನೀರಿನಲ್ಲಿ ಮುಳುಗಿಸಿ. ನಂತರ ಹಿಮ್ಮಡಿಗೆ ಮೆದುವಾಗಿ ಮಸಾಜ್ ಮಾಡಿ. ನಂತರ ಯಾವುದಾದರೂ ಎಣ್ಣೆಯನ್ನು ಹಚ್ಚಿಕೊಂಡು, ಸಾಕ್ಸ್​ ಹಾಕಿಕೊಳ್ಳಿ.
ಲಿಂಬೆ ಹಣ್ಣು:
ಆಯಸಿಡಿಕ್ ಅಂಶವಿರುವ ಲಿಂಬೆ ಹಣ್ಣಿನಿಂದ ಒಡೆದ ಹಿಮ್ಮಡಿ ಬೇಗ ಸರಿಯಾಗುತ್ತದೆ. ಉಗುರು ಬೆಚ್ಚಗಿನ ನೀರಿಗೆ ಲಿಂಬೆ ಹಣ್ಣಿನ ರಸವನ್ನು ಹಾಕಿ. ಆ ನೀರಿನಲ್ಲಿ ನಿಮ್ಮ ಕಾಲನ್ನು ಮುಳುಗಿಸಿಡಿ. ನಂತರ ಹಿಮ್ಮಡಿಯನ್ನು ಮಸಾಜ್ ಮಾಡಿ. ಅಥವಾ ಕಲ್ಲಿನ ಮೇಲೆ ಕಾಲನ್ನು ಉಜ್ಜಿರಿ. ನಂತರ ಆ ಕಾಲನ್ನು ನೀರಿನಿಂದ ತೊಳೆದು, ಟವೆಲ್​ನಿಂದ ಒರೆಸಿಕೊಳ್ಳಿ.
ಅಕ್ಕಿ ಹಿಟ್ಟು:
ಒಂದು ಮುಷ್ಠಿ ಅಕ್ಕಿ ಹಿಟ್ಟನ್ನು ಒಂದು ಬೌಲ್​ಗೆ ಹಾಕಿ. ಅದಕ್ಕೆ 2 ಟೇಬಲ್ ಸ್ಪೂನ್ ಜೇನುತುಪ್ಪ ಸೇರಿಸಿ. ಅದಕ್ಕೆ ಸ್ವಲ್ಪ ವನೇಗರ್ ಸೇರಿಸಿ, ಪೇಸ್ಟ್ ಮಾಡಿಕೊಳ್ಳಿ. ನಂತರ ಆ ಪೇಸ್ಟನ್ನು ಒಡೆದ ಹಿಮ್ಮಡಿಯ ಮೇಲೆ ಹಚ್ಚಿ ಮಸಾಜ್ ಮಾಡಿ. ಹಿಮ್ಮಡಿಯ ಬಿರುಕು ಆಳವಾಗಿದ್ದರೆ ಆ ಮಿಶ್ರಣದ ಮೇಲೆ ಸ್ವಲ್ಪ ಆಲಿವ್ ಎಣ್ಣೆ ಹಚ್ಚಿ. ಈ ಮಿಶ್ರಣವನ್ನು ಹಚ್ಚಿಕೊಳ್ಳುವ ಮೊದಲು ಕಾಲನ್ನು ಸ್ವಚ್ಛವಾಗಿ ತೊಳೆದುಕೊಳ್ಳಲು ಮರೆಯಬೇಡಿ.
ಬೇವಿನ ಎಲೆ:
ಬೇವಿನ ಎಲೆ ಮತ್ತು ಅರಿಶಿಣ ಗಾಯವಾದ ಜಾಗಕ್ಕೆ ಅಥವಾ ಬಿರುಕು ಬಿಟ್ಟ ಜಾಗವನ್ನು ಸರಿಯಾಗಿಸಲು ಬಹಳ ಸಹಾಯಕಾರಿ. ಬೇವಿನ ಎಲೆ ಹಾಗೂ ಅರಿಶಿಣವನ್ನು ರೊಬ್ಬಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಹಿಮ್ಮಡಿಗೆ ಹಚ್ಚಿರಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತೊಳೆಯಿರಿ.
ರೋಸ್ ವಾಟರ್:
ಗ್ಲಿಸರಿನ್ ಅಥವಾ ರೋಸ್ ವಾಟರ್​ನಿಂದ ಹಿಮ್ಮಡಿಯ ಗಾಯವನ್ನು ಬೇಗ ಸರಿ ಮಾಡಬಹುದು. ಇವೆರಡನ್ನೂ ರಾತ್ರಿ ಮಲಗುವ ಮೊದಲು ಹಿಮ್ಮಡಿಯ ಗಾಯಕ್ಕೆ ಹಚ್ಚಿರಿ.
ನಿಮ್ಮ ಪಾದಗಳನ್ನು ತೇವಗೊಳಿಸುವುದರಿಂದ ಪಾದಗಳು ಒಣಗುವುದನ್ನು ತಡೆಯಬಹುದು. ದಪ್ಪ ಕೆನೆ ಅಥವಾ ಮಾಯಿಶ್ಚರೈಸರ್ ಕ್ರೀಮನ್ನು ಬಳಸುವುದರಿಂದ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಬಹುದು. ಸ್ನಾನ ಮಾಡಿದ ತಕ್ಷಣ ನಿಮ್ಮ ಪಾದಗಳಿಗೆ ದಪ್ಪವಾದ ಮಾಯಿಶ್ಚರೈಸರ್/ಮುಲಾಮು ಹಚ್ಚಿ ಮತ್ತು ಸಾಕ್ಸ್‌ನಿಂದ ಕವರ್ ಮಾಡಿ.
ಅಲೋವೆರಾ ಜೆಲ್ ಸೌಂದರ್ಯದ ಪ್ರಯೋಜನಗಳಿಂದ ತುಂಬಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಮೊದಲಿಗೆ, ನಿಮ್ಮ ಪಾದಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ ಮತ್ತು ತಾಜಾ ಅಲೋವೆರಾ ಜೆಲ್ ಅನ್ನು ಸರಿಯಾಗಿ ಹಚ್ಚಿರಿ. ಸಾಕ್ಸ್ ಧರಿಸಿ ಮತ್ತು ಅಲೋವೆರಾ ಜೆಲ್ ಅನ್ನು ಹಚ್ಚಿಕೊಂಡು ರಾತ್ರಿ ಮಲಗಿರಿ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author