ಹೆಚ್ಚು ಸಮಯ ಮೇಕಪ್ ಉಳೀತಿಲ್ವಾ..? ಹಾಗಿದ್ದರೆ ಹೀಗೆ ಮಾಡಿ..

ಮೇಕಪ್ ಕಾಪಾಡಿಕೊಳ್ಳಲು ಇಲ್ಲಿವೆ ಸಿಂಪಲ್ ಟಿಪ್ಸ್..

ಈಗಂತೂ ಅದೆಷ್ಟೋ ಜನಕ್ಕೆ ಮೇಕಪ್ ಹಾಳಾಗದಂತೆ ನೋಡಿಕೊಳ್ಲುವುದೇ ದೊಡ್ಡ ಸಮಸ್ಯೆ.. ಮೇಕಪ್ ಗಾಗಿಯೇ ಸಮಯ ಮೀಸಲಿಟ್ಟು ಸುಂದರವಾಗಿ ಅಲಂಕಾರ ಮಾಡಿಕೊಂಡರೆ ಕೆಲವೇ ಸಮಯದಲ್ಲಿ ಮುಖದ ಮೇಲೆ ಆಯಿಲ್ ಕಾಣಿಸಿಕೊಳ್ಳುವುದು, ಕಾಜಲ್ ಕಣ್ಣ ಸುತ್ತಲು ಹರಡಿದಂತೆ ಕಾಣುವುದನ್ನ ಗಮನಿಸಿರುತ್ತೀರೆ, ಇಲ್ಲ ಈ ಸಮಸ್ಯೆಗಳು ನಿಮ್ಮ ಅನುಭವಕ್ಕೂ ಬಂದಿರುತ್ತವೆ. 

ಆದ್ರೆ ಕೆಲವೊಂದು ಸಿಂಪಲ್ ಟಿಪ್ಸ್ ಗಳನ್ನ ಫಾಲೋ ಮಾಡಿದ್ರೆ ಸುಂದರವಾದ ಮೇಕಪ್ ಅನ್ನ ಹೆಚ್ಚು ಸಮಯ ಉಳಿಸಿಕೊಳ್ಳಬಹುದು. ಮ್ಯಾಟ್ ಲುಕ್ ನೀಡಲು ಪೌಡರ್ ಗಳನ್ನು ಬಳಸಿ ಮೇಕಪ್ ಮಾಡೋದ್ರಿಂದ ಮೇಕಪ್ ಅನ್ನ ಹೆಚ್ಚು ಸಮಯ ಕಾಪಾಡಿಕೊಳ್ಳಬಹುದು. ಪೌಡರ್ ಬೇಸ್ಡ್ ಫೌಂಡೇಶನ್ ಹೆಚ್ಚು ಸಮಯದವರೆಗೆ ಉಳಿಯುತ್ತದೆ. ಜೊತೆಗೆ ಮೇಕಪ್ ಹಚ್ಚುವ ಮೊದಲು ಪ್ರೈಮರ್ ಬಳಕೆ ಇರಲಿ. ಪಿಂಕ್ ಅಥವಾ ಲೈಟ್ ಬ್ರೌನ್ ಬಣ್ಣದ ಮ್ಯಾಟ್ ಲಿಪ್ಸ್ಟಿಕ್ಗಳು ಹ್ಯುಮಿಡ್ ವಾತಾವರಣಕ್ಕೆ ಹೆಚ್ಚು ಸೂಕ್ತ. ಇವು ಹೆಚ್ಚು ಕಾಲ ಇರುವುದಲ್ಲದೆ ನಿಮ್ಮ ತುಟಿಗಳ ಸೌಂದರ್ಯ ಹೆಚ್ಚಿಸುತ್ತದೆ.

ಕಣ್ಣಿನ ಸೌಂದರ್ಯ ಹೆಚ್ಚಿಸಲು ವಾಟರ್ಪ್ರೂಫ್ ಐಲೈನರ್ಗಳಾದರೂ ಕ್ರೀಮ್ ಬೇಸ್ಡ್ ಪೆನ್ಸಿಲ್ ಲೈನರ್ ಬದಲು ಪೆನ್ ಲೈನರ್ ಉಪಯೋಗಿಸಿ. ಕಪ್ಪು ಕಾಜಲ್ ಬದಲು ಬಿಳಿ ಬಣ್ಣದ ಲೈನರ್ ಟ್ರೈ ಮಾಡಿ. ಇದರಿಂದ ಕಪ್ಪು ಬಣ್ಣ ಕರಗಿ ಮೇಕಪ್ ಹಾಳಾಗುವುದನ್ನು ತಡೆಯಬಹುದು. ಮೇಕಪ್ ಮೇಂಟೇನ್ ಮಾಡುವ ರೀತಿಯೇ ನಿಮ್ಮ ಚರ್ಮದ ಆರೈಕೆಯೂ ಇರಲಿ. ಹೆಚ್ಚು ಮೇಕಪ್ ಮಾಡೋದ್ರಿಂದ ಕೆಲವೊಮ್ಮೆ ಕೆಲವೊಬ್ಬರಿಗೆ  ಚರ್ಮ ಸೀಳುವುದು ಅಥವಾ ಪೊರೆ ಏಳುವುದು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೈಸರ್ಗಿಕವಾಗಿಯೇ ತ್ವಚೆಯ ಅಂದವನ್ನ ಕಾಪಾಡಿಕೊಳ್ಳುವುದು ಉತ್ತಮ.. 

ಚರ್ಮದ ಆರೈಕೆಗೆ ಮನೆಯಲ್ಲೇ ಸುಲಭವಾಗಿ ಸಿಗುವ ಸಕ್ಕರೆ ಮತ್ತು ಜೇನನ್ನು ಬೆರೆಸಿ ನಯವಾಗಿ ಮುಖದ ಚರ್ಮದ ಮೇಲೆ ಉಜ್ಜುತ್ತಾ ಬನ್ನಿ. ಇದರಿಂದ ಮುಖದ ಮೇಲಿನ ಸತ್ತ ಜೀವಕೋಶಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.. ಹಾಗಯೇ ಸಮಪ್ರಮಾಣದಲ್ಲಿ ಹಾಲಿನ ಕೆನೆ, ಕಡ್ಲೆಹಿಟ್ಟು ಮತ್ತು ಚಿಟಿಕೆಯಷ್ಟು ಅರಿಶಿನ ಸೇರಿಸಿ ಪೇಸ್ಟ್ ರೆಡಿ ಮಾಡಿಕೊಳ್ಳಿ. ಈ ಪ್ಯಾಕ್ ಅನ್ನ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಇದು ಸಹ ಚರ್ಮಕ್ಕೆ ಹೊಳಪು ನೀಡುತ್ತದೆ..

#MakeUp #Mekup #EyeLiner #Shadow #Lipstick

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author