ಸ್ವಲ್ಪ ದೇಹದ ತೂಕ ಇಳಿಯಿತು ಎಂದರೆ ಮೊದಲ ಚಾಳಿ ಮುಂದುವರೆಯುತ್ತದೆ. ಹೀಗೆ ಮಾಡುವುದರಿಂದ ದೇಹದ ತೂಕ ಮತ್ತೆ ಹೆಚ್ಚಾಗುತ್ತದೆ. ಹೊಟ್ಟೆ ತುಂಬಾ ತಿನ್ನಬೇಕು ಅನಿಸುತ್ತೆ. ಆದರೆ ದಪ್ಪ ಆಗುತ್ತೀವಿ ಅನ್ನೊ ಭಯ ಅಲ್ವಾ?
ಹೊಟ್ಟೆ ತುಂಬಾ ತಿಂದ ತಕ್ಷಣ ದಪ್ಪ ಆಗಲ್ಲ. ಆದ್ರೆ ಯಾವ ಆಹಾರ ತಿನ್ನುತ್ತೀವಿ ಅನ್ನೋದು ಮುಖ್ಯ ಆಗುತ್ತೆ. ಹಾಗಾದರೆ ಇಳಿಸಿದ ದೇಹದ ತೂಕ ಮತ್ತೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಹೇಗೆ? ಚಿಂತೆ ಬಿಡಿ. ಅದಕ್ಕೂ ಪರಿಹಾರವಿದೆ.
ನಿರಂತರ ವ್ಯಾಯಾಮ
ಹೇಗೋ ಕಷ್ಟಪಟ್ಟು ದೇಹದ ತೂಕ ಕಡಿಮೆಯಾಗಿರುತ್ತದೆ. ತೂಕ ಕಡಿಮೆಯಾಗುತ್ತಿದ್ದಂತೆ ಮತ್ತೆ ಹಳೇ ಅಭ್ಯಾಸ ಶುರುವಾಗುತ್ತದೆ. ಹೀಗೆ ಮಾಡುವುದು ಸರಿಯಲ್ಲ. ಹೀಗಾಗಿ ಪ್ರತಿದಿನ ವ್ಯಾಯಾಮ ಮಾಡಬೇಕು. ಬೆಳಿಗ್ಗೆ ಅಥವಾ ಸಂಜೆ ಕನಿಷ್ಠ ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆ ಕಾಲ ವ್ಯಾಯಾಮ ಮಾಡಬೇಕು. ದೇಹದ ತೂಕ ಇಳಿಸಲು ಇರುವ ವ್ಯಾಯಾಮವನ್ನೇ ಮಾಡಿದರೆ ಸೂಕ್ತ.
ಉತ್ತಮ ಆಹಾರ ಸೇವಿಸಿ
ದೇಹದ ತೂಕ ಇಳಿಸುವವರು ಮತ್ತು ಇಳಿಸಿಕೊಂಡ ದೇಹದ ತೂಕವನ್ನು ಮೇಂಟೇನ್ ಮಾಡುವವರು ಉತ್ತಮ ಆಹಾರ ಸೇವಿಸಬೇಕು. ಜಂಕ್ ಫುಡ್ಗಳಿಂದ ಆದಷ್ಟೂ ದೂರವಿರಬೇಕು. ಊಟದ ತಟ್ಟೆಯಲ್ಲಿ ತರಕಾರಿ ಮತ್ತು ಹಣ್ಣಿನ ಪ್ರಮಾಣ ಜಾಸ್ತಿ ಇರಬೇಕು. ಮದ್ಯ ಮದ್ಯ ಹಸಿವಾದಗಲೆಲ್ಲ ಹಣ್ಣು ಅಥವಾ ಹಣ್ಣಿನ ರಸ ಸೇವಿಸಿ.
ಹೆಚ್ಚು ನೀರು ಕುಡಿಯಿರಿ
ಪ್ರತಿದಿನ ಮೂರರಿಂದ ನಾಲ್ಕು ಲೀಟರ್ ನೀರು ದೇಹಕ್ಕೆ ಅಗತ್ಯವಿದೆ. ಇನ್ನು ಡಯೇಟ್ ಮಾಡುವವರು ನೀರನ್ನ ಹೆಚ್ಚು ಕುಡಿಯಬೇಕು. ಊಟದ ಮೊದಲು ನೀರು ಕುಡಿದರೆ ಹೆಚ್ಚು ಊಟ ಸೇವಿಸುವ ಅಗತ್ಯವಿರಲ್ಲ. ಹೀಗಾಗಿ ಹಸಿವಾದಾಗಲೆಲ್ಲ ನೀರು ಕುಡಿಯುವ ಅಭ್ಯಾಸ ನಿರಂತರವಾಗಿರಬೇಕು.
ಬೆಳಿಗ್ಗೆಯ ತಿಂಡಿ ಬಿಡಬಾರದು
ಬೆಳಿಗ್ಗೆ ತಿಂಡಿ ಬಿಡುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಅಂತ ಹಲವರು ಅಂದುಕೊಂಡಿದ್ದಾರೆ. ಆದರೆ ಅದು ತಪ್ಪು. ಬೆಳಿಗ್ಗೆ ತಿಂಡಿಯನ್ನು ಸ್ಕಿಪ್ ಮಾಡಬಾರದು. ರಾತ್ರಿ ಊಟ ಹಣ್ಣು ಅಥವಾ ತರಕಾರಿಯಿಂದ ಕೂಡಿರಲಿ. ಉಪಹಾರ ಸೇವಿಸದೆ ಇದ್ದಾಗ ದೇಹಕ್ಕೆ ಸುಸ್ತಾಗುತ್ತದೆ. ಕೆಲಸ ಮಾಡಲು ಮನಸ್ಸು ಇರಲ್ಲ. ಅಲ್ಲದೇ ಗ್ಯಾಸ್ಟ್ರಿಕ್ಗೆ ಕಾರಣವಾಗುತ್ತದೆ.
You must be logged in to post a comment.