ಮನೆಯಲ್ಲೇ, ಕೆಲವೇ ನಿಮಿಷಗಳಲ್ಲಿ ಗಣೇಶನ ಮೂರ್ತಿ ತಯಾರಿ ಹೇಗೆ?

How to do ganesha at home

ಗಣೇಶ ಚತುರ್ಥಿಯ ದಿನ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಸ್ಥಾಪಿಸಿ ಪೂಜಿಸುವುದು ಪ್ರತೀತಿ. ಗಣೇಶನ ಮೂರ್ತಿಯನ್ನು ಅಂಗಡಿಗಳಲ್ಲಿ ಖರೀದಿಸಿದ ಗಣೇಶನನ್ನು ತಂದು ಮನೆಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಆದರೆ ಗಣೇಶನ ಮೂರ್ತಿಯನ್ನು ಕೆಲವೇ ನಿಮಿಷಗಳಲ್ಲಿ ಮನೆಯಲ್ಲೇ ತಯಾರಿಸಬಹುದು. ಮನೆಯಲ್ಲಿ ಶುದ್ಧ ಮನಸಿನಿಂದ, ಶ್ರದ್ಧಾ ಭಕ್ತಿಯಿಂದ ಗಣೇಶನನ್ನು ತಯಾರಿಸಿ ಅದನ್ನೇ ಸ್ಥಾಪಿಸಿ ಪೂಜಿಸುವುದು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. 

ಹಾಗಿದ್ದರೆ ಮನೆಯಲ್ಲೇ ಗಣೇಶ ಮೂರ್ತಿಗಳನ್ನು ತಯಾರು ಮಾಡುವುದು ಹೇಗೆ? ಯಾವೆಲ್ಲಾ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಯನ್ನು ಸಿದ್ಧಪಡಿಸಬಹುದು? ಇಲ್ಲಿದೆ ನೋಡಿ ಅದರ ವಿವರ. 

ಮಣ್ಣಿನ ಗಣೇಶ

clay ganesha eco friendly ganesha

ಗೌರಿ-ಗಣೇಶನನ್ನು ಒಟ್ಟಿಗೆ ಮನೆಗೆ ತಂದು ಪೂಜಿಸುವುದು ವಾಡಿಕೆ. ಮಾರುಕಟ್ಟೆಯಲ್ಲಿ ವಿಧ ವಿಧ ಅಲಂಕಾರದ ಗಣೇಶ ಮೂರ್ತಿಗಳು ದೊರೆಯುತ್ತವೆ. ಆದರೆ ಮಣ್ಣಿನಿಂದ ಮಾಡಿದ ಗಣೇಶ ಪ್ರಕೃತಿ ಸ್ನೇಹಿ ಮತ್ತು ಶ್ರೇಷ್ಠ ಸಹ. ಕೆರೆಯ ಜೇಡಿಮಣ್ಣನ್ನು ತಂದು ಹದಮಾಡಿ, ಗಣಪನ ಕಲಾಕೃತಿಯನ್ನು ಸುಂದರವಾಗಿ ಮೂಡಿಸುವುದು ಒಂದು ಕಲೆ. ಕೆರೆಯಿಂದ ಮಣ್ಣು ತಂದು ನಿಮಗೆ ಬಂದಂತೆನ ಗಣೇಶ ಮೂರ್ತಿ ಮಾಡಿ ಪೂಜಿಸಿ, ನಂತರ ಮತ್ತೆ ಕೆರೆಯಲ್ಲಿ ಮುಳುಗಿಸಿ. ಇದರಿಂದ ಶ್ರೇಷ್ಠ ಭಾವನೆ ಜೊತೆಗೆ ಪರಿಸರ ಸ್ನೇಹಿ ಆಚರಣೆಯೂ ಆಗಿರುವುದು.

ಕೆರೆ ನೀರನು ಕೆರೆಗೆ ಚೆಲ್ಲಿ ಎನ್ನುವ ಮಾತಿದೆ. ಅದೇ ರೀತಿ ಪರಿಸರದಿಂದ ಸಿಕ್ಕ ವಸ್ತುಗಳನ್ನು ಬಳಸಿಕೊಂಡು, ಅದನ್ನು ಮತ್ತೆ ಪರಿಸರಕ್ಕೇ ಅರ್ಪಿಸುವುದರಿಂದ ಪರಿಸರದ ಆರೋಗಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬಹುದು. ಇದರಿಂದ ಎಲ್ಲರಿಗೂ ಒಳ್ಳೆಯದು. 

ಅರಿಶಿನ ಗಣಪ

turmeric ganesha idolImage Credits : wordzz

ಮೊದಲು ಅರಿಶಿಣ ಹಾಗೂ ಮೈದಾಹಿಟ್ಟಿಗೆ ನೀರು ಮಿಶ್ರಣ ಮಾಡಿ ಹದವಾಗಿ ಮಾಡಿಕೊಂಡು ಗಣೇಶನ ಆಕಾರ ನೀಡಬೇಕು. ಸೊಂಡಿಲನ್ನು ಮಾಡಿದ ಬಳಿಕ ಮೆಣಸಿನ ಕಾಳನ್ನು ಬಳಸಿ ಮೂರ್ತಿಗೆ ಕಣ್ಣು ಮಾಡಬಹುದು. ಬಳಿಕ ಹೂವಿನ ಅಲಂಕಾರ ಮಾಡಿ ಮೂರ್ತಿ ಪ್ರತಿಷ್ಠಾಪಿಸಬೇಕು. ಇಂತಹ ಪುಟ್ಟ ಪ್ರತಿಮೆಗಳನ್ನು ತಯಾರಿಸಿ ಮನೆಯ ಆವರಣದಲ್ಲಿ ವಿಸರ್ಜನೆ ಮಾಡಬಹುದು. ಇದರಿಂದಲೂ ಪರಿಸರಕ್ಕೆ ಯಾವುದೇ ತೊಂದರೆಯಿಲ್ಲ. ಜೊತೆಗೆ ಗಣೇಶನ ವಿಗ್ರಹಗಳನ್ನು ನೀವೇ ನಿಮ್ಮಷ್ಟದ ಆಕಾರದಲ್ಲಿ ತಯಾರಿಸಿದ ಖುಷಿ, ನೆಮ್ಮದಿಯೂ ಸಿಗಲಿದೆ. 

ಗೋಮಯ ಗಣಪ

gomaya ganeshaImage credits : pixean.com

ಪೂರ್ವಜರು ಸಗಣಿಯ ಉಂಡೆಯನ್ನು ಇಟ್ಟು ಅದರ ಮೆಲೆ ಗರಿಕೆಯನ್ನು ಇಟ್ಟು ಗಣಪ ಎಂದು ಪೂಜಿಸುತ್ತಿದ್ದರು. ಗೋಮಯ ಗಣಪತಿ ಮೂರ್ತಿಯನ್ನು ಹಸುವಿನಿಂದ ಸಿಗುವಂತಹ ಪಂಚಗವ್ಯಗಳನ್ನು ಬಳಸಿಕೊಂಡು ಮಾಡಬಹುದು. ಇದು ಮನೆಯಲ್ಲಿ ವಿಸರ್ಜನೆ ಮಾಡಿದರೆ ಗೊಬ್ಬರವಾಗುತ್ತದೆ ಅಥವಾ ಕೆರೆಯಲ್ಲಿ ವಿಸರ್ಜನೆ ಮಾಡಿದರೆ ಜೀವಿಗಳಿಗೆ ಆಹಾರವಾಗುತ್ತದೆ. ಆಕಳ ಸಗಣಿಯನ್ನು ಚೆನ್ನಾಗಿ ಒಣಗಿಸಿ ಅದನ್ನು ಪುಡಿಮಾಡಿ ಜರಡಿ ಹಿಡಿದು ಅದರೊಂದಿಗೆ ಗೋಮೂತ್ರ, ಹಾಲು, ಮೊಸರು, ತುಪ್ಪ ಬೆರೆಸಿ ಚೆನ್ನಾಗಿ ಹದಗೊಳಿಸಿ ಬೇಕಾದ ಗಣಪತಿ ಆಕಾರಕ್ಕೆ ಹಾಕಿ ಒಂದು ವಾರದವರೆಗೆ ನೆರಳಿನಲ್ಲಿ ಒಣಗಿಸಿ. ಅಲಂಕಾರಿಕವಾಗಿ ಕಣ್ಣು, ಹಲ್ಲುಗಳಿಗೆ ಬಣ್ಣ ಹಚ್ಚಿದರೆ ಪರಿಸರಸ್ನೇಹಿ ಗೋಮಯ ಗಣಪ ಸಿದ್ಧವಾಗುತ್ತದೆ. 

ಈಗಿನ ಇಕೋ ಫ‍್ರೆಂಡ್ಲಿ(ಪರಿಸರ ಸ್ನೇಹಿ) ಗಣಪತಿ ಎಂದು ಮಾರುಕಟ್ಟೆಗಳಲ್ಲಿ ಸಿಗುವ ವಿವಿಧ ಗಣಪತಿ ವಿಗ್ರಹಗಳಿಗಿಂತಲೂ ಇದು ಉತ್ತಮ ಮತ್ತು ಶ್ರೇಷ್ಠ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಗಣೇಶನ ವಿಗ್ರಹಗಳನ್ನು ಸಾಧ್ಯವಾದಷ್ಟು ಮನೆಗಳಲ್ಲಿಯೇ ತಯಾರಿಸಿ, ಮನೆಗಳಲ್ಲಿಯೇ ವಿಸರ್ಜನೆ ಮಾಡಿದರೆ ಪರಿಸರಕ್ಕೂ ಯಾವುದೇ ಹಾನಿ ಆಗುವುದಿಲ್ಲ. ಅಲ್ಲದೇ ಪರಿಸರ ಸಂರಕ್ಷಣೆ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸಿದಂತೆಯೂ ಆಗುತ್ತದೆ. ಎಲ್ಲರೂ ಪರಿಸರ ಸ್ನೇಹಿ, ಮನೆಯಲ್ಲೇ ತಯಾರಿಸಿದ ಗಣೇಶನನ್ನೇ ಇಟ್ಟು ಪೂಜಿಸಬೇಕು ಎಂದು ಪ್ಲಾನೆಟ್‍ಟಿವಿ ಕನ್ನಡ ವತಿಯಿಂದ ಕೋರಿಕೆ. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author