ಮನೆಯಲ್ಲಿ ಉಪ್ಪಿನಕಾಯಿ ಮಸಾಲಾವನ್ನು ತಯಾರಿಸುವ ಪಾಕವಿಧಾನ:
ಭಾರತದಲ್ಲಿ ಹಲವಾರು ರೀತಿಯ ಉಪ್ಪಿನಕಾಯಿಗಳಿವೆ,ಇದನ್ನು ಅನ್ನ, ಚಪಾತಿ ಮತ್ತು ಪರಾಠದೊಂದಿಗೆ ಸೈಡ್ ಡಿಶ್ ಆಗಿ ತೆಗೆದುಕೊಳ್ಳಲಾಗುತ್ತದೆ. ಉಪ್ಪಿನಕಾಯಿಗೆ ಸೇರಿಸುವ ಮುಖ್ಯ ಅಂಶವೆಂದರೆ ಉಪ್ಪಿನಕಾಯಿ ಮಸಾಲಾ.
ನೀವು ಸುಲಭವಾಗಿ ಮನೆಯಲ್ಲಿ ಉಪ್ಪಿನಕಾಯಿ ಮಸಾಲಾವನ್ನು ತಯಾರಿಸಬಹುದು ,ಮತ್ತು ಉಪ್ಪಿನಕಾಯಿ ಮಾಡುವಾಗ ಅದನ್ನು ಬಳಸಬಹುದು. ಇದನ್ನು ಉಪ್ಪಿನಕಾಯಿ, ಅಥವಾ ತರಕಾರಿ ಪಲ್ಯ ಮಾಡುವಾಗಲೂ ಸೇರಿಸಬಹುದು.
ಬೇಕಾದ ಪದಾರ್ಥಗಳು:
* ಸಾಸಿವೆ ಬೀಜಗಳು 50 ಗ್ರಾಂ,
* ಜೀರಿಗೆ 25 ಗ್ರಾಂ,
* ಮೆಂತ್ಯ ಬೀಜಗಳು 1 ಟೀಸ್ಪೂನ್,
* ಸೋಂಪು ಕಾಳು 2 ಟೀಸ್ಪೂನ್,
* ಅರಿಶಿನ ಪುಡಿ 2 ಟೀಸ್ಪೂನ್,
* 200 ಗ್ರಾಂ ಒಣಗಿದ ಕಾಶ್ಮೀರಿ ಕೆಂಪು ಮೆಣಸು
* ಕೆಂಪು ಮೆಣಸಿನಕಾಯಿ 50 ಗ್ರಾಂ,
* ಉಪ್ಪು 1 ಟೀಸ್ಪೂನ್,
* ಇಂಗು 1 ಟೀಚಮಚ,
ಪೂರ್ವಸಿದ್ಧತೆ ವಿಧಾನ:
* ಜೀರಿಗೆ, ಸಾಸಿವೆ ಬೀಜಗಳು ,ಮೆಂತ್ಯ ಬೀಜಗಳು , ಸೋಂಪು ಕಾಳು, ಪ್ರತಿಯೊಂದೂ ಪದಾರ್ಥಗಳನ್ನು ಬೇರೆ ಬೇರೆಯಾಗಿ ಬಾಣಲೆಯಲ್ಲಿ 5 ನಿಮಿಷಗಳ ಹುರಿದುಕೊಳ್ಳಿ,
ಬಾಣಲೆಯಿಂದ ಹೊರತೆಗೆಯಿರಿ
* 2 ನಿಮಿಷಕ್ಕೆ ಒಣ ಕೆಂಪು ಮೆಣಸಿನಕಾಯಿ ,ಕಾಶ್ಮೀರಿ ಕೆಂಪು ಮೆಣಸು ಹುರಿದುಕೊಳ್ಳಿ
ಬಾಣಲೆಯಿಂದ ಹೊರತೆಗೆಯಿರಿ
ಹುರಿದ ಎಲ್ಲಾ ಪದಾರ್ಥಗಳನ್ನು 1 ಗಂಟೆ ಕೋಣೆಯ ಉಷ್ಣಾಂಶದವರೆಗೆ ತಣ್ಣಗಾಗಿಸಲು ಇಡಬೇಕು,
ತಯಾರಿಸುವ ವಿಧಾನ:
(ಮಿಕ್ಸರ್ ಮಷೀನ್ )ಗ್ರೈಂಡರ್ ಜಾರ್ನಲ್ಲಿ ಸಂಪೂರ್ಣ ಹುರಿದ ಎಲ್ಲಾ ಮಸಾಲ ಪದಾರ್ಥಗಳನ್ನು ಒರಟಾಗಿ ರುಬ್ಬಿಕೊಳ್ಳಿ
ನಂತರ ಅದೇ ಜಾರ್ನಲ್ಲಿ ಅರಿಶಿನ ಪುಡಿ,ಇಂಗು,ಉಪ್ಪು ಸೇರಿಸಿ 2 ನಿಮಿಷ ನುಣ್ಣಗೆ ರುಬ್ಬಿಕೊಳ್ಳಿ
ಈಗ ಉಪ್ಪಿನಕಾಯಿ ಮಸಾಲಾ ಬಳಸಲು ಸಿದ್ಧವಾಗಿದೆ
ಅದನ್ನು ಗ್ಲಾಸ್ ಜಾರ್ ಉಪಯೋಗಿಸಿ ಗಾಳಿಯಾಡದಗೆ ಮುಚ್ಚಳ ವನ್ನು ಟೈಟ್ ಮಾಡಿ ಸಂಗ್ರಹಿಸಿ
ಸೂಚನೆ: ಪ್ಲಾಸ್ಟಿಕ್ ಜಾರ್ ಬಳಸಬೇಡಿ
***********************************************************************
ಮಂಗಳೂರು ವಿಶೇಷ ತರಕಾರಿ ಉಪ್ಪಿನಕಾಯಿ (ಸಂರಕ್ಷಿಸುವ) ಪಾಕವಿಧಾನ
ವಿವಿಧ ತಾಜಾ ತರಕಾರಿಗಳನ್ನು ಭಾರತೀಯ ಮಸಾಲೆಗಳೊಂದಿಗೆ ಸಂಯೋಜಿಸಲಾಗಿದೆ. ಉಪ್ಪಿನಕಾಯಿಯನ್ನು ಮೆಣಸಿನಕಾಯಿಗಳು ಮತ್ತು ಮಸಾಲೆಗಳೊಂದಿಗೆ ಕಟುವಾಗಿ ಮಸಾಲೆ ಹಾಕಲಾಗುತ್ತದೆ. ವಿನೆಗರ್ ಮತ್ತು ಎಣ್ಣೆಯಲ್ಲಿ ಸಂರಕ್ಷಿಸಿದ, ತರಕಾರಿ ಉಪ್ಪಿನಕಾಯಿ 6 ತಿಂಗಳವರೆಗೆ ಸಂಗ್ರಹಿಸಬಹುದು.
ತರಕಾರಿಗಳ ಪೂರ್ವಸಿದ್ಧತೆ ವಿಧಾನ:
* 100 ಗ್ರಾಂ ಕ್ಯಾರೆಟ್, ಸಿಪ್ಪೆ ಸುಲಿಸಿ ತೊಳೆದು ಮತ್ತು ಉತ್ತಮವಾಗಿ 1 ಸೆಂ.ಮೀ x 1 ಸೆಂ.ಮೀ x 3 ಸೆಂ.ಮೀ ಉದ್ದವಾಗಿ ತುಂಡುಗಳಾಗಿ ಕತ್ತರಿಸಿ,
* 50 ಗ್ರಾಂ ಹಸಿರು ಬೀನ್ಸ್, 3 ಸೆಂ.ಮೀ ತುಂಡುಗಳಾಗಿ ಅಡ್ಡಲಾಗಿ ಕತ್ತರಿಸಿ,
* 50 ಗ್ರಾಂ ಹಸಿರು ಮೆಣಸಿನಕಾಯಿಗಳು ಸಣ್ಣದಾಗಿ ಉದ್ದ ಕತ್ತರಿಸಿ,
* 100 ಗ್ರಾಂ ತೊಂಡೆಕಾಯಿ ಸಣ್ಣದಾಗಿ ಉದ್ದ ಕತ್ತರಿಸಿ,
* 50 ಗ್ರಾಂ ಬೆಳ್ಳುಳ್ಳಿ ಎಸಳು ಸಣ್ಣದಾಗಿ ಉದ್ದ ಕತ್ತರಿಸಿ,
* 100 ಗ್ರಾಂ ಬಿಟ್ರೂಟ್ ಸಿಪ್ಪೆ ಸುಲಿಸಿ ತೊಳೆದು ಮತ್ತು 1 ಸೆಂ.ಮೀ x 1 ಸೆಂ.ಮೀ x 3 ಸೆಂ.ಮೀ ಉದ್ದವಾಗಿ ತುಂಡುಗಳಾಗಿ ಕತ್ತರಿಸಿ,
* ಕಾಯಿ ಪಪ್ಪಾಯ ಸಿಪ್ಪೆ ಸುಲಿಸಿ ತೊಳೆದು ಮತ್ತು 1 ಸೆಂ.ಮೀ x 1 ಸೆಂ.ಮೀ x 3 ಸೆಂ.ಮೀ ಉದ್ದವಾಗಿ ತುಂಡುಗಳಾಗಿ ಕತ್ತರಿಸಿ, 100ಗ್ರಾಂ ನಷ್ಟು,
ದೊಡ್ಡ ಸ್ಟೀಲ್ ಬಟ್ಟಲಿನಲ್ಲಿ ಕತ್ತರಿಸಿದ ಕ್ಯಾರೆಟ್, ಹಸಿರು ಬೀನ್ಸ್, ಮೆಣಸಿನಕಾಯಿಗಳು, ತೊಂಡೆಕಾಯಿ ಮತ್ತು ಬೆಳ್ಳುಳ್ಳಿ ಎಸಳು ಬಿಟ್ರೂಟ್ ,ಎಲ್ಲಾ ತರಕಾರಿಗಳಾನ್ನು 100 ಗ್ರಾಂ ಉಪ್ಪಿನೊಂದಿಗೆ ಸೇರಿಸಿ, ಪ್ರತಿ ದಿನಗಳಿಗೊಮ್ಮೆ ಬೆರೆಸಿ. ಒಂದು ವಾರ ಬಿಸಿಲಿಗೆ ಒಣಗಲು ಬಿಡಿ
ಉಪ್ಪಿನಕಾಯಿ ತಯಾರಿಸಲು ಬೇಕಾದ ಪದಾರ್ಥಗಳು:
* 250 ಗ್ರಾಂ ಉಪ್ಪಿನಕಾಯಿ ಮಸಾಲಾ,
* 2 ಟೀಚಮಚ ಸಾಸಿವೆ ಬೀಜವನ್ನು,
* 6 ಬೆಳ್ಳುಳ್ಳಿ ಎಸಳು ಸಿಪ್ಪೆ ಸುಲಿದ ಹೋಳು,
* 25 ಕರಿಬೇವಿನ ಎಲೆ,
* 1/2 ಲೀಟರ್ ವಿನೆಗರ್,
* 3/4 ಲೀಟರ್ ಸಾಸಿವೆ ಎಣ್ಣೆ ,
ಉಪ್ಪಿನಕಾಯಿ ಮಾಡುವ ವಿಧಾನ:
ದೊಡ್ಡ ಸ್ಟೀಲ್ ಬಟ್ಟಲಿನಲ್ಲಿ ಒಣಗಿದ ಕ್ಯಾರೆಟ್, ಹಸಿರು ಬೀನ್ಸ್, ಮೆಣಸಿನಕಾಯಿಗಳು, ತೊಂಡೆಕಾಯಿ ಮತ್ತು ಬೆಳ್ಳುಳ್ಳಿ ಎಸಳು ಬಿಟ್ರೂಟ್ ,ಒಣಗಿದ ಎಲ್ಲಾ ತರಕಾರಿಗಳಾನ್ನು ಹಾಕಿ
250 ಗ್ರಾಂ ಉಪ್ಪಿನಕಾಯಿ ಮಸಾಲಾ,1/2 ಲೀಟರ್ ವಿನೆಗರ್, ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಒಂದು ಗಂಟೆಯ ಕಾಲ ವಿನೆಗರ್ ಅನ್ನು ಹೀರಿಕೊಳ್ಳಲು ಪಾತ್ರೆಯನ್ನು ಮುಚ್ಚಿ ಇಡಿ.
ಬಾಣಲೆ /ಪಾತ್ರೆಯನ್ನು ಬಿಸಿ ಮಾಡಿ ಮತ್ತು ಸಾಸಿವೆ ಎಣ್ಣೆಯನ್ನು ಸೇರಿಸಿ.ಎಣ್ಣೆ ಬಿಸಿಯಾದ ನಂತರ, ಬೆಳ್ಳುಳ್ಳಿ ಸೇರಿಸಿ.ಬೆಳ್ಳುಳ್ಳಿ ಚಿನ್ನದ ಕಂದು ಬಣ್ಣಕ್ಕೆ ತಿರುಗಿದಾಗ ಸಾಸಿವೆ ಸೇರಿಸಿ.ಸಾಸಿವೆ ಬೀಜಗಳು ಹೊಡೆಯಲು ಆರಂಭಿಸಿದಾಗ ಕರಿಬೇವಿನ ಎಲೆ ಸೇರಿಸಿ, ಗ್ಯಾಸ್ ಅನ್ನು ಕಡಿಮೆ/ಮಧ್ಯಮಕ್ಕೆ 2 ನಿಮಿಷ ಇಡಿ ಸ್ಟೌವ್ ಆರಿಸಿ,1 ಗಂಟೆ ಕೋಣೆಯ ಉಷ್ಣಾಂಶದವರೆಗೆ ತಣ್ಣಗಾಗಿಸಲು ಇಡಬೇಕು, ಒಗ್ಗರಣೆಯನ್ನು ಉಪ್ಪಿನಕಾಯಿ ಮಿಶ್ರಣಕ್ಕೆ ಸೇರಿಸಿ.
ಉಪ್ಪಿನಕಾಯಿ ಚೆನ್ನಾಗಿ ಮಿಶ್ರಣ ಮಾಡಿ ಕೆಲವು ಗಂಟೆಗಳ ಕಾಲ ಮುಚ್ಚದೆ ಇಡಿ,
ಉಪ್ಪಿನಕಾಯಿ ಮಿಶ್ರಣವನ್ನು ಗ್ಲಾಸ್ ಜಾರ್, ಜಾಡಿಗಲ್ಲಿ ಗಾಳಿ ಹೋಗದಗೆ ಮುಚ್ಚಿ ಇಡಿ,
ಸೂಚನೆ: ಪ್ಲಾಸ್ಟಿಕ್ ಜಾರ್ ಬಳಸಬೇಡಿ
ಉಪ್ಪಿನಕಾಯಿಯನ್ನು ಸಾಸಿವೆ ಎಣ್ಣೆ ,ವಿನೆಗರ್ ನಲ್ಲಿ ಸಂರಕ್ಷಿಸಲಾಗುತ್ತದೆ ಮತ್ತು ಸುಮಾರು 6 ತಿಂಗಳ ತನ್ನದೇ ಸ್ವಂತ ಅವಧಿ (self life) ಹೊಂದಿದೆ.
You must be logged in to post a comment.