ಶೂನ್ಯ ಮುದ್ರೆಯನ್ನು ಹೇಗೆ ಮಾಡುವುದು ಮತ್ತು ಪ್ರಯೋಜನಗಳು

ಸುಮಾರು ಐದಾರು ವರ್ಷಗಳ ಹಿಂದೆ ಯುಗಾದಿ ಆಸುಪಾಸು ನಾನು ವಿದೇಶದಲ್ಲಿದ್ದಾಗ ನನ್ನ ಪರಿಚಿತ ಸುಮಾರು 50 ವರ್ಷದ ವ್ಯಕ್ತಿಯೊಬ್ಬರು ಸಿಕ್ಕಿದ್ದರು. ಅವರು ಯಾಕೋ ಸರಿಯಾಗಿ ನಿಲ್ಲಲು ಸಹ ತೊಂದರೆ ಪಡುತ್ತಿದ್ದರು ( imbalance ). ಜೊತೆಗೆ ತಲೆಸುತ್ತು ( vertigo ) ಅಲ್ಲದೇ ಕೇವಲ ಬಲ ಕಿವಿಯನ್ನೇ ಉಪಯೋಗಿಸುತ್ತಿದ್ದರು. ಕೇಳಿದಾಗ ಅವರು ಹೇಳಿದ್ದು :- ಅವರ ಎಡ ಕಿವಿಗೆ, ವೈದ್ಯರ ಪ್ರಕಾರ Meniere,s disease ಎಂಬ ಯಾವುದೇ ಪರಿಹಾರವಿಲ್ಲದ ತೊಂದರೆ ಉಂಟಾಗಿ 70% ಕಿವುಡಾಗಿದೆ ಹಾಗಾಗಿ ಎಲ್ಲಾ ತೊಂದರೆಯಾಗಿದೆ ಹಾಗೂ ಇದಕ್ಕೆ ಶಸ್ತ್ರಚಿಕಿತ್ಸೆ ಸೇರಿದಂತೆ ಯಾವುದೇ ಔಷಧ ಇಲ್ಲ ( ಅಲೋಪತಿಯಲ್ಲಿ ).
ನನ್ನ ಸಲಹೆ ಕೇಳಿದಾಗ ಅವರಿಗೆ ನಾನೊಂದು ಮುದ್ರೆ ಹೇಳಿಕೊಟ್ಟು, ನಿಯಮಿತವಾಗಿ ಪ್ರಯೋಗಿಸಲು ಹೇಳಿದ್ದೆ. ಕಳೆದವರ್ಷ ಪುನಃ ಅವರು ಸಿಕ್ಕಿದಾಗ, ತುಂಬಾ ವಿಶ್ವಾಸ ದಲ್ಲಿದ್ದರು. ಅವರ vertigo ಸಂಪೂರ್ಣ ಗುಣವಾಗಿದೆ, 70 ಶೇಕಡ ಕೇಪ್ಪಾಗಿದ್ದ ಕಿವಿ ಈಗ 20 % ಇಳಿದಿದೆ. ಯಾವುದೇ ರೀತಿ ತದವರಿಸದೇ ನಡೆಯುತ್ತಿದ್ದರು. ಅಲ್ಲದೆ Mobile ಅನ್ನು ಎಡ ಕಿವಿಯಲ್ಲೇ ಉಪಯೋಗಿಸುತ್ತಿದ್ದರು. ನಮ್ಮ ದೇಶದ ಯೋಗ ಮುದ್ರೆಗೆ, ಅದನ್ನು ತಿಳಿಸಿದ ನನಗೆ ಆಭಾರಿಯಾಗಿದ್ದರು.
ಈಗ ಮುಖ್ಯ ವಿಷಯಕ್ಕೆ ಬಂದರೆ, ಅಂದು ನಾನು ಅವರಿಗೆ ಹೇಳಿಕೊಟ್ಟ ಮುದ್ರೆ " ಶೂನ್ಯ ಮುದ್ರೆ " ( ಚಿತ್ರ ನೋಡಿ ). ಶೂನ್ಯ ಎಂದರೆ ಆಕಾಶ, ಅನಂತ....ಇತ್ಯಾದಿ ಅರ್ಥವಿದೆ. ದೇಹದ ಖಾಲಿತನವನ್ನು, ಶೂನ್ಯವನ್ನು ನಿವಾರಿಸುವ ಮುದ್ರೆ.
ವಿಧಾನ :-
ಮದ್ಯದ ಬೆರಳಿನ ತುದಿಯನ್ನು ಹೆಬ್ಬೆರಳಿನ ಬುಡದಲ್ಲಿ ಮೆದುವಾಗಿ ಆದರೆ ದೃಢವಾಗಿ ಇಟ್ಟುಕೊಳ್ಳಿ. ನಂತರ ಹೆಬ್ಬೆರಳನ್ನು ಮಾಡಚಿದ ಮದ್ಯ ಬೆರಳಿನ ಮೊದಲ ಗಿಣ್ಣಿನ ಮೇಲೆ ಸ್ವಲ್ಪ ಒತ್ತಿ ಹಿಡಿದುಕೊಳ್ಳಿ, ( ಬಲ ಪ್ರಯೋಗ ಬೇಡ ). ಉಳಿದ ಮೂರು, ತೋರು, ಉಂಗುರ ಹಾಗೂ ಕಿರು ಬೆರಳುಗಳನ್ನು free ಆಗಿ ಬಿಡಿ. ಅಲ್ಲದೇ ಏಕಕಾಲದಲ್ಲಿ ಎರಡೂ ಹಸ್ತಗಳಿಂದ ಮಾಡಬೇಕು.
ದಿನಕ್ಕೆ 2 - 3 ಸಲ, 10 - 15 ನಿಮಿಷ, ಮದ್ಯೆ ಸಾಧ್ಯವಾದಷ್ಟು ಬಿಡದೆ, ಮುದ್ರಾ ಸ್ಥಿತಿಯಲ್ಲಿರಿ. ನಿಮ್ಮ ತೊಂದರೆ ಸಂಪೂರ್ಣ ನಿವಾರಣೆ ಆಗುವವರೆಗೂ ಮಾತ್ರ ಮುಂದುವರೆಸಿ. ನಂತರ ನಿಲ್ಲಿಸಿ ( ಕೆಲವು ವಾರಗಳಿಂದ, ಹಲವು ತಿಂಗಳುಗಳ ವರೆಗೂ, ತೊಂದರೆಯ ತೀಕ್ಷ್ಣತೆಗೆ ತಕ್ಕಂತೆ ಸಮಯಾವಕಾಶ ಬೇಕು ).
ಸಾಧ್ಯವಾದಷ್ಟು ಬೆಳಿಗ್ಗೆ, ಸಂಜೆ ಧ್ಯಾನ ಮಾಡುವಾಗ, ಪಾರ್ಕ್ ನಲ್ಲಿ ವಿಶ್ರಾಂತಿಗೆ ಕುಳಿತಿರುವಾಗ ಮುದ್ರೆಯಲ್ಲಿರಿ. Office ನಲ್ಲಿ, ಬಸ್, ಕಾರ್ ನಲ್ಲಿ ಪ್ರಯಾಣಿಸುವಾಗ , TV ನೋಡುವಾಗ ಸಹ ತೊಂದರೆಯಿಲ್ಲ. ಆದರೆ ದೇಹ ಸಡಿಲವಾಗಿ ವಿಶ್ರಾಂತಿ ಸ್ಥಿತಿಯಲ್ಲಿ ಇರಬೇಕು.
ಪ್ರಯೋಜನ :-
ಸಾಮಾನ್ಯವಾಗಿ 40 - 45 ವರ್ಷದ ನಂತರ ಬರುವ ಕಿವುಡುತನ, Vertigo ದಿಂದಾಗಿ ಬರುವ ತಲೆಸುತ್ತು, ತಲೆ ಚಕ್ಕರ್ ಬರುವುದು, ತಲೆಸುತ್ತಿ ಬೀಳುವಂತಾಗುವುದು. ಕಿವಿಯಲ್ಲಿ ಗುಯ್ ಗುಟ್ಟುವುದು - Tinnitus, ನಡೆಯುವಾಗ ಎಡವಿದಂತೆ ಆಗುವುದು, ಕಿವಿ ನೋವು, ದೇಹದ ಕೆಲವು ಭಾಗಗಳು ಕೆಲವೊಮ್ಮೆ ಮರಗಟ್ಟಿದಂತೆ ಆಗುವುದು. ವಾತ ಪ್ರಕೋಪದಿಂದ ಬರುವ ನರದ ದೌರ್ಬಲ್ಯ, ದೇಹದ ವಿಸರ್ಜನಾ ಪ್ರಕ್ರಿಯೆಯಲ್ಲಿ ತೊಂದರೆ...ಇತ್ಯಾದಿ..ಇತ್ಯಾದಿ...
ಚಿತ್ರ, ಲೇಖನ :- ಮಂಜುನಾಥ್ ಪ್ರಸಾದ್.

Enjoyed this article? Stay informed by joining our newsletter!

Comments

You must be logged in to post a comment.

About Author