ಮೊಬೈಲ್ ಆ್ಯಪ್‍ಗಳಲ್ಲಿ ಸಾಲ ತಗಂಡ್ಡೀರಾ ಜೋಕೆ!

ಮೊಬೈಲ್ ಆ್ಯಪ್‍ಗಳಲ್ಲಿ ಸಾಲ ತಗಂಡ್ಡೀರಾ ಜೋಕೆ!

ಚೀನಾ ವಿರುದ್ಧ ರಾಜತಾಂತ್ರಿಕವಾಗಿ ಯುದ್ಧ ಸಾರಿರುವ ಪ್ರಧಾನಿ ಮೋದಿ, ಒಂದಾದ್ಮೇಲೆ ಒಂದು ಚೀನಾದ ಮೊಬೈಲ್ ಆ್ಯಪ್‍ಗಳನ್ನು ಬ್ಯಾನ್ ಮಾಡ್ತಾಲೆ ಇದ್ದಾರೆ... ಇದಕ್ಕೆ ಏನ್ ಕಾರಣ... ಚೀನಾ ಆ್ಯಪ್‍ಗಳಿಂದ ನಮ್ ಜನ್ರಿಗೆ ಆಗ್ತಿರೋ ಮೋಸ ಎಂತದ್ದು ಅನ್ನೋದನ್ನ ಕೇಳಿದ್ರೆ ನಿಮಗೆ ಶಾಕ್ ಆಗಬಹುದು... 
 
ಈ ಮೊಬೈಲ್ ಆ್ಯಪ್‍ಗಳ ಮೂಲಕ ಕೆಲವೇ ನಿಮಿಷಗಳಲ್ಲಿ ಸಾಲ ತೊಗೊಳೋ ಸ್ಕೀಮ್‍ಗಳ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತೆ.. ಆದರೆ ಆ್ಯಪ್‍ಗಳ ಮೂಲಕ ಸಾಲ ತೊಗೊಳೋಕೆ ಮುಂಚೆ ಒಂದ್ ಸಾರಿ ಈ ವಿಡಿಯೋ ನೋಡಿ... ಚೀನಾದ ಕುತಂತ್ರಿಗಳು 10000, 15000 ಸಾಲ ನೀಡೋ ನೆಪದಲ್ಲಿ ಏನೆಲ್ಲಾ ಮಾಡ್ತಿದ್ದಾರೆ ಅಂತ... 

https://youtu.be/ilwVo0tv3J8

 ಮೊಬೈಲ್ ಆ್ಯಪ್‍ನಲ್ಲಿ ಸಾಲ ತಗೊಂಡ್ರೆ ಉಂಡೆನಾಮ ಗ್ಯಾರಂಟಿ! 

ಫ್ರೆಂಡ್ಸ್.. ಚೀನಾ ಆ್ಯಪ್‍ಗಳು ಕೊಡೋ ಸಣ್ಣ ಮೊತ್ತದ ಸಾಲಕ್ಕೆ ವರ್ಷಕ್ಕೆ ಶೇ.36ರವರೆಗೂ ಬಡ್ಡಿ ಹಾಕುತ್ವೆ. ಅಜೆಂಟ್ ಆಗಿ ಹಣ ಬೇಕಿರೋರು ಚೀನಾ ಆ್ಯಪ್‍ಗಳನ್ನ ಮೊಬೈಲ್‍ನಲ್ಲಿ ಇನ್‍ಸ್ಟಾಲ್ ಮಾಡಿ ತಮ್ಮ ಪ್ಯಾನ್, ಆಧಾರ್ ನಂಬರ್, ಮನೆ ವಿಳಾಸ, ಬ್ಯಾಂಕ್ ಅಕೌಂಟ್ ಮಾಹಿತಿ ಜೊತೆಗೆ ಒಂದು ಸೆಲ್ಫಿ ಸಹ ತೆಗೆದುಕೊಂಡು ಅಪ್‍ಲೋಡ್ ಮಾಡಬೇಕು. ಈ ಪ್ರಕ್ರಿಯೆ ವೇಳೆ ನಿಮ್ಮ ಮೊಬೈಲ್‍ನಲ್ಲಿರುವ ಕಾಂಟ್ಯಾಕ್ಟ್ ಡೀಟೇಲ್ಸ್, ಫೋಟೋ ಗ್ಯಾಲರಿಯನ್ನು ಎಲ್ಲೋ ಕೂತಿರುವವರಿಗೆ ಅಪರೇಟ್ ಮಾಡಲು ಪರ್ಮಿಷನ್‍ಗಳನ್ನು ವಂಚಕರು ಪಡೆಯುತ್ತಾರೆ.. 

ಸಾಲದ ಹಣ ಏನೋ ತಕ್ಷಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತೆ.. ಆದರೆ ನೀವೇನಾದ್ರೂ ಟೈಮಿಗೆ ಸರಿಯಾಗಿ ಸಾಲ ತೀರಿಸದೆ ಹೋದ್ರೆ ಆ ವಂಚಕರೇ ನಿಮಗೆ ಮತ್ತೊಂದು ಆ್ಯಪ್ ಮೂಲಕ ಸಾಲ ತೀರಿಸೋಕೆ ಇನ್ನೊಂದು ಸಾಲ ಕೊಡ್ತಾರೆ. ಹೀಗೆ ನಿಧಾನವಾಗಿ ಸಾಲಗರರನ್ನ ತಮ್ಮ ಕಪಿಮುಷ್ಠಿಗೆ ಎಳೆದುಕೊಳ್ತಾರೆ... 

ಆಮೇಲೆ ನೀವು ಸಾಲ ತೀರಿಸಿಲ್ಲ ಎಂದು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‍ನಲ್ಲಿರುವ ಎಲ್ಲರಿಗೂ ಮೆಸೇಜ್ ಕಳುಹಿಸಿ, ಸಾಲ ತೀರಿಸೋಕೆ ಅವರಿಗೆ ಹೇಳಿ ಅಂತಲೂ ಹೇಳ್ತಾರೆ. ನಿಮಗಾಗಲೇ ಇಂತಹ ಮೆಸೇಜ್‍ಗಳು ಬಂದಿರಬಹುದು.. ಕೆಲವರಿಗೆ ಫೋನ್ ಕಾಲ್ ಕೂಡ ಬಂದಿರುತ್ತೆ... ಜೊತೆಗೆ ನೀವು ಸಾಲ ತಗೋಳೋವಾಗ ಸೆಲ್ಫಿ ತೆಗೆದು ಹಾಕಿರ್ತಿರಲ್ಲ, ಆ ಫೋಟೋ ಮೇಲೆ ಈತ ಫ್ರಾಡ್ ಅಂತ ಬರೆದು ಎಲ್ಲರ ನಂಬರ್‍ಗೆ ಕಳುಹಿಸ್ತಾರೆ. ಸೋಷಿಯಲ್ ಮೀಡಿಯಾಗಳಲ್ಲೂ ಹಾಕಬಹುದು... 

ಇದಷ್ಟೇ ಅಲ್ಲ, ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ಅನ್ನು ಬಳಸಿಕೊಂಡು ವಂಚಕರು ತಾವೇ ಒಂದು ವಾಟ್ಸ್‍ಆ್ಯಪ್ ಗ್ರೂಪ್ ಮಾಡಿ ಅಲ್ಲಿಯೂ ನಿಮ್ಮ ಸೆಲ್ಫಿ ಮೇಲೆ ಫ್ರಾಡ್ ಅಂತ ಬರೆದು ಹಾಕ್ತಾರೆ. ಜೊತೆಗೆ ಸಾಲ ಕೊಡೋ ಆ್ಯಪ್‍ಗಳ ಬಗ್ಗೆ ಪ್ರಚಾರ ಮಾಡ್ತಾರೆ. ಅಗತ್ಯವಿರೋರನ್ನ ಬುಟ್ಟಿಗೆ ಬೀಳಿಸಿ ಅವರಿಂದ ಸುಲಿಗೆ ಮಾಡ್ತಾರೆ... ಹೀಗೆ ಪರಿಚಯಸ್ಥರ ಮುಂದೆ ಮರ್ಯಾದೆ ಕಳೆದುಕೊಳ್ಳುವ ಸಾಲಗಾರರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಇವೆ ಎಂದು ಪೊಲೀಸರು ತಿಳಿಸಿದ್ದು, ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.

ಸಾಲ ಕೊಟ್ಟು ಸುಲಿಗೆ ಮಾಡೋ ಅದೆಷ್ಟೋ ಆ್ಯಪ್‍ಗಳು ಪ್ಲೇ-ಸ್ಟೋರ್‍ನಲ್ಲಿವೆ. ಅದರಲ್ಲಿ ಕೇವಲ 4 ಆ್ಯಪ್‍ಗಳ ಜಾಲ ಭೇದಿಸಿದಾಗಲೇ ಅವರು ಈಗಾಗಲೇ 1.4 ಕೋಟಿಗೂ ಹೆಚ್ಚು ವ್ಯವಹಾರ ಮಾಡಿದ್ದು 21000 ರುಪಾಯಿಗೂ ಹೆಚ್ಚು ಸಾಲ ನೀಡಿದ್ದಾರೆ ಅನ್ನೋದು ಬೆಳಕಿಗೆ ಬಂದಿದೆ.. 

 

ಚೀನಾ ಆ್ಯಪ್‍ಗಳಿಗೆ ಮೋದಿ ಹಾಕ್ತಿದ್ದಾರೆ ಮೂಗುದಾರ!  


ಚೀನಾದಲ್ಲೇ ಕೂತ್ಕೊಂಡು ಈ ರೀತಿ ಅವ್ಯವಹಾರದ ಮೂಲಕ ಭಾರತೀಯರನ್ನ ಬಲೆಗೆ ಕೆಡವುತ್ತಿರೋರನ್ನ ಮಟ್ಟ ಹಾಕಲೆಂದೇ ಮೋದಿ ಚೀನಾ ಆ್ಯಪ್‍ಗಳನ್ನ ಬ್ಯಾನ್ ಮಾಡ್ತಿದ್ದಾರೆ.. ಈ ರೀತಿ ಕೆಲಸವನ್ನ ಮೋದಿ ಮಾತ್ರ ಮಾಡಿದ್ರೆ ಸಾಕಾಗಲ್ಲ. ನಾವುಗಳು ಹುಷಾರಾಗಿರಬೇಕು. ಚೀನಾ ಆ್ಯಪ್‍ಗಳನ್ನ ಬಳಕೆ ಮಾಡೋದನ್ನ ನಿಲ್ಲಿಸಬೇಕು. ಯಾವುದೇ ಆ್ಯಪ್ ಇನ್‍ಸ್ಟಾಲ್ ಮಾಡ್ಕೋಳೊಕೆ ಮುಂಚೆ ಅದರ ಬಗ್ಗೆ ತಿಳಿದ್ಕೊಬೇಕು.... 

 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

About Author