IAF ವಿಮಾನದ ಮೂಲಕ ಇಂಗ್ಲೆಂಡ್, ಜರ್ಮನಿಯಿಂದ ಭಾರತಕ್ಕೆ ಆಕ್ಸಿಜನ್ ಕಂಟೇನರ್‍

ನವದೆಹಲಿ:ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನಿಂದಾಗಿ  ಬೆಡ್‍, ಆಕ್ಸಿಜನ್‍ಗಳ ಸಮಸ್ಯೆ ಕಂಡು ಬರುತ್ತಿದೆ. ಹೀಗಾಗಿ ನಾನಾ ದೇಶಗಳು ಭಾರತಕ್ಕೆ ಆಕ್ಸಿಜನ್ ಸರಬರಾಜು ಮಾಡುತ್ತಿವೆ. ಹೀಗಾಗಿ ನಾನಾ ದೇಶಗಳು ಭಾರತಕ್ಕೆ ಆಕ್ಸಿಜನ್ ಸರಬರಾಜು ಮಾಡುತ್ತಿವೆ. ಇನ್ನು ದೇಶದ ನಾನಾ ನಾನಾ ಭಾಗಗಳಿಗೆ ತ್ವರಿತವಾಗಿ ಆಕ್ಸಿಜನ್ ಪೂರೈಕೆ ಮಾಡಲು ಭಾರತೀಯ ವಾಯುಪಡೆ ಕೂಡ ಕೈ ಜೋಡಿಸಿದೆ. ಸೇನಾ ವಿಮಾನದ ಮೂಲಕ ಆಕ್ಸಿಜನ್ ಟ್ಯಾಂಕರ್​ಗಳ ಸಾಗಾಟ ಮಾಡಲಾಗುತ್ತಿದೆ.


ಭಾರತೀಯ ವಾಯುಸೇನೆಯ ಸಿ-17 ವಿಮಾನದ ಮೂಲಕ 4 ಕ್ರಿಯೋಜೆನಿಕ್ ಆಕ್ಸಿಜನ್ ಕಂಟೇನರ್​ಗಳನ್ನು ದೆಹಲಿಯ ಹಿಂಡನ್ ವಾಯುನೆಲೆಗೆ ಶಿಫ್ಟ್ ಮಾಡಲಾಗಿದೆ. ಜರ್ಮನಿಯಫ್ರಾಂಕ್ ಫುರ್ಟ್‍4 ಆಕ್ಸಿಜನ್ ಕಂಟೇನರ್​​ಗಳನ್ನು ಭಾರತೀಯ ವಾಯುಪಡೆ ಭಾರತಕ್ಕೆ ಏರ್​ಲಿಫ್ಟ್​ ಮಾಡಿದೆ.

Indian Air Force ferries oxygen containers

Image source and credits : ANI 

ಅಲ್ಲದೆ, ಇಂಗ್ಲೆಂಡ್​ನಿಂದ 450 ಆಕ್ಸಿಜನ್ ಸಿಲಿಂಡರ್​ಗಳನ್ನು ತಮಿಳುನಾಡಿನ ಚೆನ್ನೈ ವಾಯುನೆಲೆಗೆ ಏರ್​ಲಿಫ್ಟ್​ ಮಾಡಲಾಗಿದೆ. ಹಾಗೇ, ಸಿ-17 ವಿಮಾನಗಳಲ್ಲಿ ಚಂಡೀಗಢದಿಂದ ಭುವನೇಶ್ವರಕ್ಕೆ 2 ಕ್ರಿಯೋಜೆನಿಕ್ ಆಕ್ಸಿಜನ್ ಕಂಟೇನರ್​ಗಳನ್ನು ಏರ್​ಲಿಫ್ಟ್ ಮಾಡಲಾಗಿದೆ.

 

Enjoyed this article? Stay informed by joining our newsletter!

Comments

You must be logged in to post a comment.

About Author