ಸ್ಯಾನಿಟರಿ ಪ್ಯಾಡ್ ಉತ್ಪಾದನಾ ಘಟಕ’’ ಉದ್ಘಾಟನೆ.

 

ಕೊಪ್ಪಳ:-ಸ್ಯಾನಿಟರಿ ಪ್ಯಾಡ್ ಉತ್ಪಾದನಾ ಘಟಕ’’ ಉದ್ಘಾಟನೆ.ಸಂಜೀವಿನಿ-ಎನ್.ಆರ್.ಎಲ್.ಎಂ ಯೋಜನೆಯಡಿ “ಸ್ವ-ಸಹಾಯ ಸಂಘಧ ಮಹಿಳೆಯಿಂದ ಸಂಜೀವಿನಿ ಸ್ಯಾನಿಟರಿ ಪ್ಯಾಡ್ ಉತ್ಪಾದನಾ ಘಟಕ” ವನ್ನು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರುನ್ನುಮ್ ರವರು ಇತ್ತೀಚೆಗೆ (ಜ.29) ಉದ್ಘಾಟನೆ ಮಾಡಿದರು.

ಕೊಪ್ಪಳ ತಾಲ್ಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತ್ ಶ್ರೀ ಕನ್ಯಾಕುಮಾರಿ ಮಹಿಳಾ ಒಕ್ಕೂಟ (ರಿ)ದ ವತಿಯಿಂದ 5 ಜನ ಸ್ವ-ಸಹಾಯ ಸಂಘದ ಮಹಿಳೆಯರಿಂದ ಸಂಜೀವಿನಿ-ಎನ್.ಆರ್.ಎಲ್.ಎಂ ಯೋಜನೆಯಡಿ ಸ್ಯಾನಿಟರಿ ಪ್ಯಾಡ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ.

ಕೇಂದ್ರ ಪುರಸ್ಕೃತ ಸಂಜೀವಿನಿ-ಎನ್.ಆರ್.ಎಲ್.ಎಂ ಯೋಜನೆಯಡಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ “ಮಿಷನ್@35” ಅಡಿಯಲ್ಲಿ ಸಂಜೀವಿನಿ ಎನ್.ಆರ್.ಎಲ್.ಎಂ ಯೋಜನೆಯೂ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಿಂದ ಜಿಲ್ಲೆಯ ಪ್ರತಿ ತಾಲ್ಲೂಕಿನ 5 ವಿಭಿನ್ನ ಚಟುವಟಿಕೆಗಳನ್ನು ಅನುಷ್ಠಾನ ಮಾಡಲು ಯೋಜನೆ ರೂಪಿಸಲಾಗಿತ್ತು.  ಅದರಂತೆ ಕೊಪ್ಪಳ ತಾಲ್ಲೂಕಿನ 5 ವಿಭಿನ್ನ ಚಟುವಟಿಕೆಗಳಲ್ಲಿ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ “ಶ್ರೀ ಕನ್ಯಾಕುಮಾರಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ (ರಿ)”ದ ವತಿಯಿಂದ 5 ಜನ ಸ್ವ-ಸಹಾಯ ಸಂಘದ ಮಹಿಳೆಯರಿಂದ “ಸಂಜೀವಿನಿ ಸ್ಯಾನಿಟರಿ ಪ್ಯಾಡ್ ಉತ್ಪಾದನಾ ಘಟಕ” ಪ್ರಾರಂಭಿಸಲಾಗಿದ್ದು, ನಂತರ ಸರ್ಕಾರಿ ಪೌಢ್ರ ಶಾಲೆಯ 9 ಮತ್ತು 10ನೇ ತರಗತಿಯ ಎಲ್ಲಾ ಹೆಣ್ಣು ಮಕ್ಕಳಿಗೆ ಸಂಜೀವಿನಿ ಸ್ಯಾನಿಟರಿ ಪ್ಯಾಡ್ ಅನ್ನು ಉಚಿತವಾಗಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೊಪ್ಪಳ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಮಲ್ಲಿಕಾರ್ಜುನ, ತಾ.ಪಂ. ಸಹಾಯಕ ನಿರ್ದೇಶಕಿ ಕೆ.ಸೌಮ್ಯ ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರು, ತಾಲ್ಲೂಕು ಸಂಜೀವಿನಿ ಯೋಜನೆಯ ಸಿಬ್ಬಂದಿಗಳು, ಕನ್ಯಾಕುಮಾರಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

====================

Enjoyed this article? Stay informed by joining our newsletter!

Comments

You must be logged in to post a comment.

About Author

ನ್ಯೂಸ್