IND vs NAM- ಹ್ಯಾಟ್ರಿಕ್ ಗೆಲುವಿನ ಸಿಹಿಯೊಂದಿಗೆ ಟಿ20 ವಿಶ್ವಕಪ್ ಮುಗಿಸಿದ ಟೀಮ್ ಇಂಡಿಯಾ

IND vs NAM- ಹ್ಯಾಟ್ರಿಕ್ ಗೆಲುವಿನ ಸಿಹಿಯೊಂದಿಗೆ ಟಿ20 ವಿಶ್ವಕಪ್ ಮುಗಿಸಿದ ಟೀಮ್ ಇಂಡಿಯಾ

T20 World Cup: ದುಬೈನಲ್ಲಿ ನಡೆದ ಗ್ರೂಪ್ ಹಂತದ ಕೊತ್ತಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಭಾರತ 9 ವಿಕೆಟ್​ಗಳಿಂದ ಭರ್ಜರಿ ಗೆಲುವು ಪಡೆಯಿತು. ಸೆಮಿಫೈನಲ್ ರೇಸ್​ನಿಂದ ಮೊದಲೇ ಹೊರಬಿದ್ದಿದ್ದ ಭಾರತಕ್ಕೆ ಹ್ಯಾಟ್ರಿಕ್ ಗೆಲುವಿನ ಸಿಹಿ ಮಾತ್ರ ಸಿಕ್ಕಿದೆ.

 

India vs Nambia

ದುಬೈ, ನ. 8: ಟಿ20 ವಿಶ್ವಕಪ್​ನ ಸೆಮಿಫೈನಲ್ ರೇಸ್​​ನಿಂದ ಈಗಾಗಲೇ ಹೊರಬಿದ್ದಿರುವ ಟೀಮ್ ಇಂಡಿಯಾ ಇಂದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಸೋಲಿಸಿ ಪಂದ್ಯಾವಳಿಯ ಪಯಣ ಮುಗಿಸಿದೆ. ಇಂದು ನಡೆದ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಭಾರತ 9 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿತು. ಗೆಲ್ಲಲು ಸಾಧಾರಣ 133 ರನ್​ಗಳ ಗುರಿ ಪಡೆದ ಭಾರತ ಐದಾರು ಓವರ್ ಬಾಕಿ ಇರುವಂತೆಯೇ ಚೇಸ್ ಮಾಡಿ ಗೆದ್ದಿತು.

ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ಆಟ ಭಾರತದ ಚೇಸಿಂಗ್​ನ ಹೈಲೈಟ್ ಎನಿಸಿತು. ಇಬ್ಬರೂ ಅರ್ಧಶತಕಗಳನ್ನ ಭಾರಿಸಿದರು. ಕೆಎಲ್ ರಾಹುಲ್ ಕೇವಲ 37 ಬಾಲ್​ನಲ್ಲಿ 56 ರನ್ ಗಳಿಸಿ ಔಟಾದರೆ ಕೆಎಲ್ ರಾಹುಲ್ ಅಜೇಯರಾಗಿ ಉಳಿದರು. ಸೂರ್ಯಕುಮಾರ್ ಯಾದವ್ ಕೂಡ ಕೆಎಲ್ ರಾಹುಲ್ ಜೊತೆ ಸೇರಿ ಟೀಮ್ ಇಂಡಿಯಾವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು.

ಭಾರತ ಈ ಪಂದ್ಯಾವಳಿಯಲ್ಲಿ ಎರಡನೇ ಬಾರಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ನಮೀಬಿಯಾ ಹಾಗೂ ಹೀಗೂ ರನ್ ಗಳಿಸುತ್ತಾ 132 ರನ್ ಕಲೆಹಾಕಿತು. ಮೊದಲ ವಿಕೆಟ್​ಗೆ 33 ರನ್ ಹಾಗೂ ನಾಯಕ ಜೆರಾರ್ಡ್ ಎರಾಸ್ಮಸ್ ಮತ್ತು ಡೇವಿಡ್ ವಿಯೆಸ್ ಮಧ್ಯೆ 5ನೇ ವಿಕೆಟ್​ಗೆ 25 ರನ್ ಜೊತೆಯಾಟ ಬಂದದ್ದು ನಮೀಬಿಯಾಗೆ ಡಿಫೆಂಡ್ ಮಾಡಿಕೊಳ್ಳಲು ಒಂದಷ್ಟು ಸ್ಕೋರ್ ಸಿಕ್ಕಿತು.

ಭಾರತದ ಸ್ಪಿನ್ನರ್​ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಇಬ್ಬರೂ ತಲಾ 3 ವಿಕೆಟ್ ಪಡೆದು ಗಮನ ಸೆಳೆದರು. ವರುಣ್ ಚಕ್ರವರ್ತಿ ಬದಲು ಸ್ಥಾನ ಪಡೆದಿದ್ದ ರಾಹುಲ್ ಚಾಹರ್ ಅವರಿಗೆ ಒಂದೂ ವಿಕೆಟ್ ದಕ್ಕದೆ ನಿರಾಸೆ ಆಯಿತು.

ಸ್ಕೋರು ವಿವರ:
 
 

ನಮೀಬಿಯಾ 20 ಓವರ್ 132/8
(ಡೇವಿಡ್ ವಿಯೆಸ್ 26, ಸ್ಟೀಫನ್ ಬಾರ್ಡ್ 21, ಮೈಕೇಲ್ ವಾನ್ ಲಿಂಜೆನ್ 14, ಜೇ ಫ್ರೈಲಿಂಕ್ ಅಜೇಯ 15, ರೂಬೆನ್ ಟ್ರಂಪಲ್ಮನ್ ಅಜೇಯ 13 ರನ್ – ರವೀಂದ್ರ ಜಡೇಜಾ 16/3, ಆರ್ ಅಶ್ವಿನ್ 20/3, ಜಸ್​ಪ್ರೀತ್ ಬೂಮ್ರಾ 19/2)

ಭಾರತ 15.2 ಓವರ್ 136/1
(ರೋಹಿತ್ ಶರ್ಮಾ 56, ಕೆಎಲ್ ರಾಹುಲ್ ಅಜೇಯ 54, ಸೂರ್ಯಕುಮಾರ್ ಯಾದವ್ ಅಜೇಯ 25 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author