ಭಾರತ - ಬಾಂಗ್ಲಾದೇಶ ನಡುವಿನ 50 ವರ್ಷಗಳ ಸ್ನೇಹದ ಅಡಿಪಾಯವನ್ನು ನಾವು ಜಂಟಿಯಾಗಿ ನೆನಪಿಸಿಕೊಳ್ಳುತ್ತೇವೆ ಹಾಗೂ ಆಚರಿಸುತ್ತೇವೆ ಎಂದು ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, “ಇಂದು ಭಾರತ - ಬಾಂಗ್ಲಾದೇಶ ಮೈತ್ರಿ ದಿನವನ್ನಾಗಿ ಆಚರಿಸುತ್ತಿದ್ದೇವೆ. ನಾವು ಸ್ನೇಹದ ತಳಪಾಯವನ್ನು ಜಂಟಿಯಾಗಿ ಸ್ಮರಿಸಿಕೊಳ್ಳುತ್ತೇವೆ ಮತ್ತು ಆಚರಿಸುತ್ತೇವೆ. ನಮ್ಮ ಬಾಂಧವ್ಯವನ್ನು ಮತ್ತಷ್ಟು ಆಳ ಹಾಗೂ ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಗೌರವಾನ್ವಿತ ಪ್ರಧಾನಿ ಶೇಖ‍್ ಹಸೀನಾ ಅವರೊಂದಿಗೆ ಕಾರ್ಯನಿರ್ವಹಿಸಲು ತಾವು ಎದುರುನೋಡುತ್ತಿರುವುದಾಗಿ ಹೇಳಿದ್ದಾರೆ”.
You must be logged in to post a comment.