" ಆತ್ಮಾವಲೋಕನ ಸತ್ಯಾಗ್ರಹ "

Satyagraha

Featured Image Source: DK Findout

" ಆತ್ಮಾವಲೋಕನ ಸತ್ಯಾಗ್ರಹ ‌"

                          ಒಂದು ಪ್ರೀತಿಯ ಆಗ್ರಹ....

 

ಟೆಲಿವಿಷನ್ ಸುದ್ದಿ ಮಾಧ್ಯಮಗಳ ವಿವೇಚನಾ ಶಕ್ತಿಯನ್ನು ಮತ್ತಷ್ಟು ಜವಾಬ್ದಾರಿಯುತವಾಗಿಸಲು ಮತ್ತು ಮಾನವೀಯಗೊಳಿಸಲು....

 

" ಆತ್ಮಾವಲೋಕನ ಸತ್ಯಾಗ್ರಹ " 

ಒಂದು ಪ್ರೀತಿಯ ಆಗ್ರಹ......

 

ಮಾಧ್ಯಮ ಕ್ಷೇತ್ರದ ಶುದ್ದೀಕರಣಕ್ಕಾಗಿ.......

 

ಗುಲಾಬಿ ಹೂವು ಮತ್ತು ಸಂವಿಧಾನ ಪುಸ್ತಕ ನೀಡುವ‌ ಮೂಲಕ.....

 

ಸಾಂಕೇತಿಕವಾಗಿ ‌4 ವಾಹಿನಿಗಳು ಮಾತ್ರ. ಆದರೆ ಇದು ಎಲ್ಲಾ ವಾಹಿನಿಗಳಿಗು ಸಮನಾಗಿ ಅನ್ವಯ. ಉಳಿದ ಈ ಟಿವಿ, ದ್ವಿಗಿಜಯ ಟಿವಿ, ಪವರ್ ಟಿವಿ, ಟಿವಿ 5, ರಾಜ್ ಟಿವಿ, ಕಸ್ತೂರಿ ಟಿವಿ, ನ್ಯೂಸ್ ಫಸ್ಟ್ ಟಿವಿ, ಜನಶ್ರೀ ಟಿವಿ‌ ಇನ್ನೂ ಮುಂತಾದ ವಾಹಿನಿಗಳಿಗೆ ಮುಂದಿನ ದಿನ ನಾವು ಕೆಲವರು ಇದನ್ನು ತಲುಪಿಸುತ್ತೇವೆ.

 

ದಿನಾಂಕ ‌11/05/2022 - ಬುಧವಾರ.

 

ಸ್ಥಳ        : ಪಬ್ಲಿಕ್ ಟಿವಿ.

ಸಮಯ : ಬೆಳಗ್ಗೆ 9/30 ರಿಂದ 11  ಗಂಟೆ

 

ಸ್ಥಳ ‌‌‌‌‌       : ಸುವರ್ಣ ಟಿವಿ.

ಸಮಯ : ಬೆಳಗ್ಗೆ 11/30 ರಿಂದ 1 ಗಂಟೆ

 

ಸ್ಥಳ          : ಬಿಟಿವಿ.

ಸಮಯ.  : ಮಧ್ಯಾಹ್ನ  2  ರಿಂದ 3/30 ಗಂಟೆ

 

ಸ್ಥಳ          : ಟಿವಿ 9

ಸಮಯ.   : ಸಂಜೆ  4  ರಿಂದ 5/30 ಗಂಟೆ

 

ದಿಕ್ಕಾರವಿರುವುದಿಲ್ಲ - ಪ್ರತಿಭಟನೆ ಇರುವುದಿಲ್ಲ - ಆಕ್ರೋಶವಿರುವುದಿಲ್ಲ - ಕೂಗಾಟ ಇರುವುದಿಲ್ಲ.

ಕೇವಲ ಪ್ರೀತಿಯ ಮತ್ತು ವಿನಯ ಪೂರ್ವಕ ಸತ್ಯಾಗ್ರಹ ಮಾತ್ರ......

 

ಮಾಧ್ಯಮ ಲೋಕದ ಮಹತ್ವ ಮತ್ತು ಜವಾಬ್ದಾರಿ ನೆನಪಿಸುವ ಒಂದು ಪ್ರಯತ್ನ......

 

ಸತ್ಯಾಗ್ರಹದ ಸಮಯದಲ್ಲಿ ಮಾಧ್ಯಮ ಲೋಕದ ಸ್ವಾತಂತ್ರ್ಯ - ಮಹತ್ವ - ಮಾಧ್ಯಮದಿಂದ ನಮ್ಮ ನಿರೀಕ್ಷೆಯ ಭಿತ್ತಿಚಿತ್ರಗಳ ಅನಾವರಣ ಮಾಡಲಾಗುವುದು....

 

ಮಾಧ್ಯಮ ಇದನ್ನು ಹೇಗೆ ಸ್ವೀಕರಿಸಬಹುದು ಎಂಬ ಕುತೂಹಲದಲ್ಲಿ.....

 

ಇದು ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ನಮ್ಮ ಸ್ಪಂದನೆ....

 

ದಯವಿಟ್ಟು ಭಾಗವಹಿಸಿ.

 

ನಿಮಗೆ ಆತ್ಮೀಯ ಸ್ವಾಗತ....

 

ಮಾಧ್ಯಮದ ಅಪರಿಮಿತ ಸ್ವಾತಂತ್ರ್ಯವನ್ನು ಗೌರವಿಸುತ್ತಾ, ಪ್ರೋತ್ಸಾಹಿಸುತ್ತಾ......

 

ಆದರೆ ಇಂದು ಸ್ಪರ್ಧೆ ಮತ್ತು ವೇಗದ ಹುಚ್ಚು ಕುದುರೆಯ ಹಿಂದೆ ಬಿದ್ದು ಸಮಾಜದ ವಿರುದ್ಧ ಮೌಲ್ಯಗಳಿಗೆ ಮಾನ್ಯತೆ ನೀಡುತ್ತಿರುವ ಮಾಧ್ಯಮಗಳ ಆತ್ಮಾವಲೋಕನ ಅವಶ್ಯಕತೆಗಾಗಿ.......

 

ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ,

ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರ ಇಂದು ಒಡೆಯನೊಂದಿಗೆ ಸರಸ ಸಲ್ಲಾಪದಲ್ಲಿ ಮುಳುಗಿ ಅವನ ತಪ್ಪುಗಳನ್ನು ಕಣ್ಣು ಮುಚ್ಚಿ ಪ್ರೋತ್ಸಾಹಿಸುತ್ತಿರುವ ಮೈಮರೆತ ಸನ್ನಿವೇಶದಲ್ಲಿ.....

 

ಸಂವಿಧಾನದ ಮೂಲ ಆಶಯವಾದ ವೈಚಾರಿಕ ವೈಜ್ಞಾನಿಕ ಮನೋಭಾವ ಬೆಳೆಸುವ ಜಾಗದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮೂಢನಂಬಿಕೆಯ ಭಯೋತ್ಪಾದನೆ ಸೃಷ್ಟಿ ಮಾಡುತ್ತಿರುವಾಗ.....

 

ವಿವೇಕ - ವಿವೇಚನೆ ಇಲ್ಲದೇ, ಯಾರಿಗೆ ಯಾವುದಕ್ಕೆ ಏತಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂಬುದನ್ನು ಯೋಚಿಸಲು ಸಾಧ್ಯವಾಗದೆ ತುಗುಡು ದನದಂತೆ ಮುನ್ನುಗ್ಗುತ್ತಿರುವಾಗ........

 

ರಾಜಕಾರಣಿಗಳು, ಧಾರ್ಮಿಕ ನಾಯಕರು, ಹೋರಾಟಗಾರರು, ಸಮಾಜ ಸುಧಾರಕರು, ಬುದ್ದಿ ಜೀವಿಗಳು, ದೇಶ ಭಕ್ತರು ಮುಂತಾದವರು ಅದನ್ನು ಖಂಡಿಸದೇ ಪ್ರಚಾರದ ಅಮಲಿನಲ್ಲಿ ತೇಲುತ್ತಿರುವಾಗ.......

 

ಮಾಧ್ಯಮ ಮಿತ್ರರ ಆತ್ಮಾವಲೋಕನಕ್ಕೆ ಒಂದು ಪ್ರೀತಿಯ ಸತ್ಯಾಗ್ರಹದ ಅವಶ್ಯಕತೆ ಅರಿತು ಈ ಕಾರ್ಯಕ್ರಮ....

 

ದಯವಿಟ್ಟು ದಯವಿಟ್ಟು ಸಮಯ ಹೊಂದಿಸಿಕೊಂಡು ನಮ್ಮೊಂದಿಗೆ ಭಾಗವಹಿಸಿ. ಇದನ್ನೇ ಒಂದು ವೈಯಕ್ತಿಕ ಪ್ರೀತಿಯ ಆಹ್ವಾನವೆಂದು ಪರಿಗಣಿಸಿ. ಇದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಎಂದು ಭಾವಿಸೋಣ.

 

ಯಾವುದೇ ಜಾತಿ ಧರ್ಮ ಪಕ್ಷ ಹಣ ಪ್ರಚಾರ ಸಿದ್ದಾಂತಗಳ ಹಂಗಿಗೆ ಒಳಗಾಗದೇ ಒಂದು ಪ್ರಾಮಾಣಿಕ ಪ್ರಯತ್ನ....

 

ಭವಿಷ್ಯದ ಉತ್ತಮ ಸಮಾಜಕ್ಕಾಗಿ ಇದು ನಮ್ಮ ನಿಮ್ಮ ಸಣ್ಣ ‌ಕೊಡುಗೆ.......

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

 

ಎಂ. ಯುವರಾಜ್ 

M . Yuvaraj.

+91 80508 02019

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author