ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಜನತಾ ಸಂಗಮ ಕಾರ್ಯಕ್ರಮ

ನಾನು ಶಾಸಕನಾದ ನಂತರ ತಾಲ್ಲೂಕಿನಾದ್ಯಂತ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪಕ್ಷದ ಕಾರ್ಯಕರ್ತರು ಮತದಾರರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದಲ್ಲಿ ನಡೆದ ಗ್ರಾಮ ಪಂಚಾಯಿತಿ  ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಜನತಾ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ನಾನು ಶಾಸಕನಾಗಿ ಆಯ್ಕೆಯಾಗಿ ಮೂರೂವರೆ ವರ್ಷ ಕಳೆದರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟ ಸಂದರ್ಭ ಕಾಂಗ್ರೆಸ್ ಪಕ್ಷದವರು ಇದು ನಮ್ಮ ಶಾಸಕರ ಅವಧಿಯಲ್ಲಿನ ಅನುದಾನ ಎಂದು ಸುಳ್ಳು ಹೇಳುತ್ತಿರುವುದು ಹಾಸ್ಯಾಸ್ಪದ, ಹಿಂದಿನ ಶಾಸಕರ ಅನುದಾನದ ಕೆಲಸಕ್ಕೆ ನಾನು ಚಾಲನೆ ನೀಡಿದ್ದು ಸಾಬೀತು ಮಾಡಿದರೆ ನನ್ನ ಶಾಸಕ ಸ್ಥಾನ ಇನ್ನೂ ಒಂದೂವರೆ ವರ್ಷ ಅವಧಿ ಇದ್ದರು ರಾಜೀನಾಮೆ ನೀಡುವೆ ಇಲ್ಲವಾದಲ್ಲಿ ಅದು ಸುಳ್ಳು ಎಂದು ಸಾಬೀತಾದರೆ ಕೆ.ವೆಂಕಟೇಶ್ ರಾಜಕೀಯವಾಗಿ ನಿವೃತ್ತಿ ಸ್ವೀಕರಿಸುತ್ತಾರಾ ಎಂದು ತಿರುಗೇಟು ನೀಡಿದರು,

ಬೆಟ್ಟದಪುರ ಗ್ರಾಮದ ಅಭಿವೃದ್ಧಿಗೆ ಸುಮಾರು ₹ 3 ಕೋಟಿ ರೂಗಳ ಅನುದಾನ ನೀಡಿದ್ದು ಅದರ ಕಾಮಗಾರಿಗಳ ಕೆಲಸವೂ ಕೂಡ ಆರಂಭವಾಗಿದೆ, ಅಲ್ಲದೆ ಪಶು ಆಸ್ಪತ್ರೆ, ಶಾಲಾ ಕಟ್ಟಡಗಳು, ಕಾಲೇಜು ಕಟ್ಟಡ ,ಐಟಿಐ ಕಾಲೇಜು ಹೀಗೆ ಕೋಟಿಗಟ್ಟಲೆ ಅನುದಾನವನ್ನು ಮಂಜೂರು ಮಾಡಿಸಿ ಗ್ರಾಮದ ಅಭಿವೃದ್ಧಿಗೆ ಶಕ್ತಿ  ಮೀರಿ ಕೆಲಸ ಮಾಡಿದ್ದೇನೆ .

 ತಾಲ್ಲೂಕಿನಾದ್ಯಂತ ಜೆಡಿಎಸ್ ಪಕ್ಷ ಸಂಘಟನೆ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನತಾ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕರ್ತರು ಸಂಘಟಿತರಾಗುವಂತೆ ಕೋರಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಸೌಮ್ಯ, ಸದಸ್ಯರಾದ ರಾಜಶೇಖರ್ ,ಅಯ್ಯರ್ ಗಿರಿ, ಗಿರಿಗೌಡ, ಮುಖಂಡರಾದ ಕೆ.ಎಸ್ ಮಂಜುನಾಥ್, ವಿದ್ಯಾಶಂಕರ್, ರಘು ರಾಯ, ಪಟೇಲ್ ನಟೇಶ್, ಧರಣೇಶ್,ಗಿರೀಶ್ ,ನಾಗೇಗೌಡ ,ಪ್ರೀತಿ ಅರಸ್ ಕೃಷ್ಣೇಗೌಡ ಸೇರಿದಂತೆ ಮುಖಂಡರು ಇದ್ದರು.

Enjoyed this article? Stay informed by joining our newsletter!

Comments

You must be logged in to post a comment.

About Author