ಜಪಾನ್ ಭಾಷಾ ಕಲಿಕೆಗೆ ಹೆಚ್ಚು ಬೇಡಿಕೆ : ಎಂ.ಎಸ್.ಪಾಟೀಲ್

ತುಮಕೂರು: ಜಪಾನ್ ದೇಶವು ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿ ಭಾರತದೊಡನೆ ಅತ್ಯುತ್ತಮ ಮಿತ್ರರಾಷ್ಟ್ರವಾಗಿದೆ. ಜಪಾನ್ ಜನಸಂಖ್ಯೆಯಲ್ಲಿ ಶೇ.೩೫ರಷ್ಟು ವೃದ್ದರಾಗಿರುತ್ತಾರೆ. ಹಾಗಾಗಿ ಅವರಿಗೆ ನರ್ಸಿಂಗ್ ಸೇವಾ ಸೌಲಭ್ಯಗಳು ತುಂಬಾ ಉಪಯುಕ್ತವಾಗಿದೆ. ಅರೆ ವೈದ್ಯಕೀಯ ಸಿಬ್ಬಂದಿಗಳ ಬೇಡಿಕೆ, ನುರಿತ ತಂತ್ರಜ್ಞರ ಹಾಗೂ ಪರಿಣಿತರ ವೈದ್ಯರ ಅವಶ್ಯಕತೆ ಇಂದಿಂತಹ ಹೆಚ್ಚಾಗಿದೆ. ಅದಕ್ಕಾಗಿ ಜಪಾನ್ ಸರ್ಕಾರವು ಪ್ರತ್ಯೇಕ ವೀಸಾ 5 ವರ್ಷದವರೆಗೆ ವಿಸ್ತರಿಸಿದೆ. ಹಾಗೂ ಜಪಾನೀಯರು ಭಾರತೀಯರನ್ನು ಹೆಚ್ಚು ಪ್ರೀತಿಸುತ್ತಾರೆ. ಮತ್ತು ಅತ್ಯಂತ ವಿಶ್ವಾಸಹತೆಯಿಂದ ನೋಡುತ್ತಾರೆ. ಈ ದೃಷ್ಟಿಯಿಂದ ಜಪಾನ್ ಭಾಷೆ ಕಲಿಕೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದು ಸಕುರಾ ನಿಹಾಂಗೋ ನಿರ್ದೇಶಕರಾದ ಅನಂತಪದ್ಮನಾಭನ್‌ರವರು ತಿಳಿಸಿದರು.


ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಜಪಾನೀಸ್ ಭಾಷಾ ಕಲಿಕಾ ಕೇಂದ್ರದ ಕಾರ್ಯಾಗಾರದಲ್ಲಿ ಮಾತನಾಡುತ್ತಾ ಜಪಾನ್ ದೇಶವು ತನ್ನ ತಾಂತ್ರಿಕ ವಿಚಾರಗಳನ್ನು ಜಪಾನೀಸ್ ಭಾಷೆಯಲ್ಲಿ ಸ್ಪಷ್ಟವಾಗಿ ತಿಳಿಸಿ ನಂತರ ಇತರೆ ಭಾಷೆಗಳಿಗೆ ತರ್ಜುಮೆ ಮಾಡುವುದರಿಂದ ಜಪಾನೀಸ್ ಭಾಷೆಯನ್ನು ಇಂಜಿನಿಯರಿಂಗ್, ವೈದ್ಯಕೀಯ, ವಾಹನ ತಯಾರಿಕೆ, ದೂರಸಂಪರ್ಕ ಉಪಕರಣಗಳು, ಇತರೆ ಕ್ಷೇತ್ರಗಳಲ್ಲಿನ ವಿದ್ಯಾರ್ಥಿಗಳು ಮತ್ತು ನಿಪುಣರು ಕಲಿತರೆ ಇನ್ನೂ ಹೆಚ್ಚಿನ ಪರಿಣತಿ ಮತ್ತು ಆರ್ಥಿಕ ಅವಕಾಶಗಳ ಬಾಗಿಲು ತೆರೆದಂತಾಗುತ್ತದೆಯೆಂದರು ಈ ನಿಟ್ಟಿನಲ್ಲಿ ಜಪಾನೀಸ್ ಭಾಷಾ ಕಲಿಕೆಗೆ ಅವಕಾಶ ಮತ್ತು ಉತ್ತೇಜನ ನೀಡಲು ಬೆಂಗಳೂರಿನ ಜಪಾನೀಸ್ ಭಾಷಾ ಶಿಕ್ಷಣ ನೀಡಬಲ್ಲ ೨೧ ವರ್ಷಗಳ ಪರಿಣಿತ ಅನುಭವಿ ಸಂಸ್ಥೆಯಾದ ಸಕುರಾ ನಿಹಾಂಗೋ ರಿಸೋರ್ಸ್ ಸೆಂಟರ್ (Sakuraa Nihango Resoure centre –SNRC) ಜೊತೆ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಜಪಾನ್ ದೇಶದ ಸಂಸ್ಥೆಯೊಂದಿಗೆ ಪರಸ್ಪರ ಒಡಂಬಡಿಕೆ ಒಪ್ಪಂದ ಮಾಡಿಕೊಂಡಿದ್ದಾರೆ.


ಈ ಸಂದರ್ಭದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ.ಎಂ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಎಂ ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಟ್ರಸ್ಟಿಯಾದ ಅಂಬಿಕಾ ಎಂ ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಮತ್ತು ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಉದ್ಯೋಗ ಹಾಗೂ ತರಬೇತಿ ವಿಭಾಗದ ಅಧಿಕಾರಿ ಹಾಗೂ ಜಪಾನ್ ಭಾಷಾ ಕಲಿಕಾ ಕೇಂದ್ರದ ಮುಖ್ಯ ಸಂಯೋಜಕರಾದ ಪ್ರೊ.ಎಂ.ಅಂಜನಮೂರ್ತಿ ಈ ಕಾರ್ಯಕ್ರಮ ಸಂಯೋಜಿಸಿದ್ದರು. ಶ್ರೀದೇವಿ ಸಂಸ್ಥೆಯ ಆಡಳಿತಾಧಿಕಾರಿಯಾದ ಟಿ.ವಿ.ಬ್ರಹ್ಮದೇವಯ್ಯ, ಇದೇ ಸಂದರ್ಭದಲ್ಲಿ ಶ್ರೀದೇವಿ ಸಮೂಹ ಶಿಕ್ಷಣದ ಪ್ರಾಂಶುಪಾಲರುಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಪಾನೀಸ್ ಭಾಷಾ ಕಲಿಕೆಯ ಅವಕಾಶಗಳನ್ನು ಶ್ರೀದೇವಿ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗಷ್ಟೆ ಅಲ್ಲದೆ ಇತರೆ ಸಾರ್ವಜನಿಕ ಕಲಿಕಾಸಕ್ತರಿಗೂ ವಿಸ್ತರಿಸಲಾಗುವುದು ಮತ್ತು ಈ ಸಂಬಂಧದ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಗೆ 9448118627 ಕರೆ ಮಾಡಿ ಮಾಹಿತಿ ಪಡೆಯಬಹುದೆಂದು ಮಾನವ ಸಂಪನ್ಮೂಲ ನಿರ್ದೇಶಕರಾದ ಎಂ.ಎಸ್.ಪಾಟೀಲ್‌ರವರು ತಿಳಿಸಿದರು.

Enjoyed this article? Stay informed by joining our newsletter!

Comments

You must be logged in to post a comment.

About Author