ಉದ್ಭವ ಲಿಂಗದ ದೇಗುಲ ಕಾಡು ಮಲ್ಲೇಶ್ವರ ದೇವಾಲಯ

ಇಲ್ಲಿನ ನಂದಿ ತೀರ್ಥದ ನೀರು ಕುಡಿದರೆ ರೋಗ ನಿವಾರಣೆ

ಮಹಾನಗರಿ ಬೆಂಗಳೂರು ಈಗ ಐಟಿಬಿಟಿ ಸಿಟಿ, ಗಾರ್ಡನ್ ಸಿಟಿ ಎಂದೆಲ್ಲಾ ಕರೆಸಿಕೊಳ್ಳುತ್ತಿದೆ. ಆದರೆ ಹಲವು ಶತಮಾನಗಳ ಹಿಂದೆ ಬೆಂಗಳೂರು ಕಾಂಕ್ರೀಟ್ ನಗರವಾಗಿರದೆ, ಹಲವು ಸುಂದರ ದೇವಾಲಯಗಳ ನೆಲೆವೀಡಾಗಿತ್ತು. ಹಲವು ಪುರಾತನ ದೇವಾಲಯಗಳು ಬೆಂಗಳೂರಿನಲ್ಲಿವೆ. ಅಲ್ಲಿ ಇಂದಿಗೂ ಪ್ರತಿನಿತ್ಯ ಪೂಜೆ ನಡೆಯುತ್ತದೆ. ದೇವರ ದರ್ಶನ ಪಡೆಯಲು ದೂರ ದೂರದ ಊರಿನಿಂದ ಭಕ್ತಾಧಿಗಳು ಬರುತ್ತಾರೆ. ಗವಿ ಗಂಗಾಧರೇಶ್ವರ ದೇವಾಲಯ, ದೊಡ್ಡ ಗಣಪತಿ ದೇವಾಲಯ, ರಾಗಿ ಗುಡ್ಡ ಆಂಜನೇಯ ದೇವಸ್ಥಾನ ಹೀಗೆ ಹಲವು ಪುರಾತನ ದೇವಾಲಯಗಳು ಬೆಂಗಳೂರಿನಲ್ಲಿವೆ.

ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಾಲಯ ಬೆಂಗಳೂರಿನ ಪ್ರಮುಖ ಪುರಾತನ ದೇವಾಲಯಗಳಲ್ಲಿ ಒಂದು. ಇದನ್ನು ಸುಮಾರು ಕ್ರಿ.ಶ ಹದಿನಾರನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಾಡು ಮಲ್ಲೇಶ್ವರ ಎಂದೇ ಪ್ರಸಿದ್ಧ. ಇದು ಉದ್ಭವ ಲಿಂಗ. ಇಲ್ಲಿ ಗಣಪತಿ, ಕಾಶಿ ವಿಶ್ವನಾಥ, ಮಹಾ ವಿಷ್ಣು, ಸೂರ್ಯನಾರಾಯಣ, ಆಂಜನೇಯ, ಕಾಲಭೈರವ, ಅರುಣಾಚಲೇಶ್ವರ, ಪಾರ್ವತಿ, ದಕ್ಷಿಣಾಮೂರ್ತಿ, ನವಗ್ರಹ, ಸುಬ್ರಹ್ಮಣ್ಯೇಶ್ವರ, ದುರ್ಗಾ ದೇವತೆಯ ಮೂರ್ತಿಗಳೂ ಇವೆ.

ಇದನ್ನು ಓದಿ : ತಮಿಳುನಾಡಿನಲ್ಲಿದೆ ಶಿವನ ಅದ್ಭುತ ದೇಗುಲಗಂಗೈಕೊಂಡ ಚೋಳಪುರಂ ದೇವಾಲಯ

ಕಾಡಿನ ಮಧ್ಯೆಯಿದ್ದ ಕಾರಣ ಕಾಡು ಮಲ್ಲೇಶ್ವರ ದೇವಾಲಯ

kadu malleshwara temple mystery

Image Credits : Templefolks

ಹಿಂದೆ ದೇವಾಲಯವಿದ್ದ ಈ ಪ್ರದೇಶದಲ್ಲಿ ಕಾಡು ಇತ್ತು. ಹೀಗಾಗಿ ಕಾಡಿನ ಮಧ್ಯೆ ಇದ್ದ ಈ ದೇವಾಲಯ ಕಾಡುಮಲ್ಲೇಶ್ವರವೆಂದೇ ಪ್ರಸಿದ್ಧವಾಯಿತು. ಈ ದೇವಸ್ಥಾನವನ್ನು ಶಿಲೆಗಳಿಂದ ನಿರ್ಮಿಸಲಾಗಿದೆ. ದೇಗುದ ಮೇಲೆ ಆಕರ್ಷಕ ವಿಮಾನ ಗೋಪುರ ಹಾಗೂ ಮುಂಭಾಗದಲ್ಲಿ ಧ್ವಜ ಸ್ತಂಭವಿದೆ. ದೇವಸ್ಥಾನದ ಪರಿಸರದಲ್ಲಿ ಬಿಲ್ವ ಪತ್ರೆ, ಪಾರಿಜಾತ, ಶ್ರೀಗಂಧ, ಬೇವು ಸೇರಿದಂತೆ ಹಲವು ಜಾತಿಯ ಮರಗಿಡಗಳನ್ನು ಬೆಳೆಸಿ ದೇವಸ್ಥಾನದ ಪರಿಸರವನ್ನು ಸುಂದರಗೊಳಿಸಲಾಗಿದೆ.

ಕ್ರಿ.ಶ 1668ರಲ್ಲಿ ಷಹಾಜಿಯ ಮಗ ಏಕೋಜಿಯು ಈ ದೇವಾಲಯಕ್ಕೆ ನೀಡಿದ್ದ ದಾನವನ್ನು ತಿಳಿಸುವ ಕನ್ನಡದ ಶಾಸನ ಇಲ್ಲಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಿರುವ ಈ ದೇವಾಲಯವು ಮೊದಲು ಚಿಕ್ಕದಾದ, ಹೆಚ್ಚು ಎತ್ತರವಲ್ಲದ ಗರ್ಭಗೃಹ ಮತ್ತು ಇಬ್ಬದಿಯಲ್ಲಿ ಚಿಕ್ಕದಾದ ಅಂಕಣಗಳನ್ನು, ಮುಂದೆ ಅಂತರಾಳವನ್ನು ಮಾತ್ರ ಹೊಂದಿತ್ತು. ಪ್ರಧಾನ ಗರ್ಭಗೃಹದಲ್ಲಿ ಪೀಠದ ಭಾಗವು ನೆಲದೊಳಗೆ ಸೇರಿ ಹೋಗಿರುವಂತಿದೆ. ಮಲ್ಲೇಶ್ವರ ಲಿಂಗದ ಬಲಗಡೆ ಅಂಕಣದಲ್ಲಿ ಗಣಪತಿ ಮತ್ತು ಎಡಭಾಗದ ಅಂಕಣದಲ್ಲಿ ಭ್ರಮರಾಂಬಾದೇವಿಯ ಶಿಲ್ಪವಿದೆ.

ಅನಂತರದ ಕಾಲದಲ್ಲಿ ಈ ದೇವಾಲಯ ವಿಸ್ತಾರಗೊಂಡಿದ್ದು, ಎರಡೂ ಭಾಗಗಳಲ್ಲಿ ಗರ್ಭ ಗೃಹಗಳನ್ನು ನಿರ್ಮಿಸಲಾಯಿತು. ಬಲಭಾಗದ ಗರ್ಭಗೃಹದಲ್ಲಿ ಕಾಶಿಯಿಂದ ತಂದು ಸ್ಥಾಪಿಸಿರುವ ಕಾಶಿ ವಿಶ್ವೇಶ್ವರ ಲಿಂಗವೂ ಮತ್ತು ಎಡಭಾಗದ ಕೊನೆಯ ಭಾಗದಲ್ಲಿ ನಾರಾಯಣನ ಶಿಲ್ಪವನ್ನೂ ಸ್ಥಾಪಿಸಿದ್ದಾರೆ. ದೇವಾಲಯವು 1993ರಲ್ಲಿ ಜೀರ್ಣೋದ್ಧಾರಗೊಂಡಿದೆ.

ಇದನ್ನು ಓದಿ : 6 ಬಾರಿ ಮುಸ್ಲಿಮರಿಂದ ದಾಳಿಗೊಳಗಾದ್ರೂ ಎದ್ದುನಿಂತ ಸೋಮನಾಥ ಜೋರ್ತಿಲಿಂಗ ದೇವಾಲಯ

ದೇವಾಲಯ ನಿರ್ಮಾಣವಾಗಿದ್ದು ಹೇಗೆ ಗೊತ್ತಾ..?

kadu malleshwara temple address

Image Credits : LBB.in

ಈ ದೇವಸ್ಥಾನ ನಿರ್ಮಾಣವಾದುದರ ಹಿಂದೆ ಒಂದು ಕಥೆಯೂ ಇದೆ. ವರ್ಷಗಳ ಹಿಂದೆ ವೀಳ್ಯದೆಲೆ ವ್ಯಾಪಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಮಲ್ಲಪ್ಪ ಶೆಟ್ಟಿ ಎಂಬ ವ್ಯಾಪಾರಿ ಈಗಿನ ಮಲ್ಲೇಶ್ವರ ದೇವಸ್ಥಾನ ಇರುವ ಸ್ಥಳದಲ್ಲಿ ತಂಗಿದ್ದರು. ಅಲ್ಲಿ ಎರಡು ಕಲ್ಲುಗಳನ್ನು ಹೂಡಿ ಅನ್ನ ಮಾಡುತ್ತಿದ್ದರು. ಆಗ ಅನ್ನ ರಕ್ತದ ಬಣ್ಣಕ್ಕೆ ತಿರುಗಿತು. ಅದನ್ನು ಕಂಡು ಹೆದರಿದ ಮಲ್ಲಪ್ಪ ಶೆಟ್ಟರು ಪ್ರಜ್ಞೆ ತಪ್ಪಿ ಬಿದ್ದರು. ಒಲೆಗೆ ಬಳಸಿದ್ದ ಕಲ್ಲುಗಳಲ್ಲಿ ಒಂದು ಕಲ್ಲು ಶಿವ ಲಿಂಗದ ಆಕಾರ ಪಡೆದುಕೊಂಡಿತ್ತು. ತಮ್ಮ ತಪ್ಪಿನ ಅರಿವಾದ ನಂತರ ಪರಿಹಾರವಾಗಿ ಶೆಟ್ಟರು ಅಲ್ಲಿಯೇ ದೇವಸ್ಥಾನ ನಿರ್ಮಿಸಿದರು ಎಂಬ ಐತಿಹ್ಯವಿದೆ. ಪುರಾಣ ಕಾಲದಲ್ಲಿ ಗೌತಮ ಋಷಿಗೆ ಶಿವ ಪ್ರತ್ಯಕ್ಷನಾಗಿ ದರ್ಶನ ನೀಡಿದ ಸ್ಥಳ ಇದೇ ಎಂದು ಹೇಳಲಾಗುತ್ತದೆ. ಈ ಪ್ರದೇಶ ಹಿಂದೆ ಕಾಡಾಗಿತ್ತು.

ನಂದಿ ತೀರ್ಥದ ನೀರು ಕುಡಿದರೆ ರೋಗ ನಿವಾರಣೆ

kadu malleshwara temple

Featured Image Credits : lbb.in

ಶಿವನನ್ನು ಆರಾಧಿಸುವ ಈ ದೇಗುಲದಲ್ಲಿ ನಂದೀಶ್ವರ ತೀರ್ಥವೂ ಒಂದು ಪ್ರಮುಖ ಆಕರ್ಷಣೆ. ಇಲ್ಲಿ ಬಸವ ವಿಗ್ರಹದ ಬಾಯಿಂದ ಸದಾ ಕಾಲ ನೀರು ಹರಿಯುತ್ತದೆ. ಇದು ವೃಷಭಾವತಿ ನದಿ ನೀರು. ಕೆಲ ಮಾಹಿತಿಗಳ ಪ್ರಕಾರ ಈ ದೇವಸ್ಥಾನ 400 ವರ್ಷಗಳ ಹಳೆಯದು ಎಂದು ಹೇಳಿದ್ರೆ, ಮತ್ತೆ ಕೆಲ ಮಾಹಿತಿಗಳ ಪ್ರಕಾರ 7000 ವರ್ಷಗಳ ಹಳೆಯದು ಎಂದು ಹೇಳಲಾಗುತ್ತದೆ. ಇನ್ನು ಯಾವಾಗಲು ನಂದಿಯ ಬಾಯಿಯಿಂದ ಬರುತ್ತಿರುವ ನೀರು, ಶಿವಲಿಂಗದ ಮೇಲೆ ಬೀಳುತ್ತಿದ್ದು, ಆ ನೀರು ಎಲ್ಲಿಂದ ಬರುತ್ತಿದೆ ಎಂದು ಇಲ್ಲಿಯವರೆಗೂ ಯಾರಿಗೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ.

ಈ ದೇಗುಲಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು ನಂದಿಯಿಂದ ಬರುವ ನೀರನ್ನ ತೀರ್ಥವೆಂದು, ಇದರಲ್ಲಿ ಹಲವಾರು ರೋಗಗಳನ್ನ ನಿವಾರಿಸುವ ಶಕ್ತಿ ಇದೆಯೆಂದು ಹೇಳಲಾಗುತ್ತದೆ.ಇನ್ನು ಭಕ್ತರು ಹಲವಾರು ಶುಭಕಾರ್ಯಗಳಿಗೆ ಉಪಯೋಗಿಸಲು ನಂದಿಯ ತೀರ್ಥವನ್ನ ಮನೆಗೆ ತೆಗೆದುಕೊಂಡು ಹೋಗುತ್ತಾರೆ.

ಇದನ್ನು ಓದಿ : ಲೋಕ ಕಲ್ಯಾಣಕ್ಕಾಗಿ ಪ್ರತಿ ವರ್ಷ ಭೂಮಿಗೆ ಬರುತ್ತಾರೆ ‘ಸ್ವಾಮಿ ನಾರಾಯಣ’ರು..

ಶಿವರಾತ್ರಿಯಂದು ಇಲ್ಲಿ ರುದ್ರಾಭಿಷೇಕ, ಮಹಾಮಂಗಳಾರತಿ, ಜಲಾಭಿಷೇಕ, ರುದ್ರ ಪಾರಾಯಣ ನಡೆಯುತ್ತದೆ. ಮಹಾ ಶಿವರಾತ್ರಿ ಹಬ್ಬದಂದು ಸಾವಿರಾರು ಜನರು ಮಲ್ಲೇಶ್ವರ ಸ್ವಾಮಿ ದರ್ಶನಕ್ಕೆ ಬರುತ್ತಾರೆ.ಶಿವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ಬ್ರಹ್ಮರಥೋತ್ಸವ ಇತ್ಯಾದಿಗಳು ಹತ್ತು ದಿನಗಳ ಕಾಲ ನಡೆಯುತ್ತವೆ. ಕಾರ್ತಿಕ ಮಾಸದಲ್ಲಿ ದೀಪೋತ್ಸವ ನಡೆಯುತ್ತದೆ.

ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಇತ್ಯಾದಿಗಳು ನಡೆಯುತ್ತವೆ. ಕನ್ನಡ ಚಲನಚಿತ್ರಗಳ ಮಹೂರ್ತ ಸಮಾರಂಭಗಳು ಇಲ್ಲಿ ನಡೆಯುತ್ತವೆ. ಅನೇಕ ಚಿತ್ರ ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆಗೆ ಮೊದಲು ಇಲ್ಲಿ ಪೂಜೆ ಸಲ್ಲಿಸುವ ಪರಿಪಾಠವಿದೆ. ಈ ದೇವಸ್ಥಾನ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author