ಸೃಷ್ಟಿ ತತ್ವದ ಅಸ್ಸಾಂನ ಕಾಮಾಕ್ಯ ಮಂದಿರ; ಆ ತಾಯಿ ಮುಟ್ಟಾದಾಗ ಬ್ರಹ್ಮಪುತ್ರ ನದಿ ಕೆಂಪಾಗುತ್ತದೆ..!

ಸೃಷ್ಟಿ ತತ್ವದ ಅಸ್ಸಾಂನ ಕಾಮಾಕ್ಯ ಮಂದಿರ; ಆ ತಾಯಿ ಮುಟ್ಟಾದಾಗ ಬ್ರಹ್ಮಪುತ್ರ ನದಿ ಕೆಂಪಾಗುತ್ತದೆ..!

 

 ಭಾರತ ದೇಶದ ಶ್ರೀಮಂತ ಸಂಸ್ಕೃತಿ, ಆಚಾರ-ವಿಚಾರ, ವಿಶೇಷತೆಯೇ ಅಂಥಹದ್ದು. ಇಲ್ಲಿ ಎಲ್ಲಾ ದೇವರುಗಳಿಗೆ ದೇವಾಲಯವಿದೆ. ಜನರನ್ನು ಸಂಕಷ್ಟದಿಂದ ಪಾರು ಮಾಡುವ ದೇವರಿಗೆ ಗುಡಿ ಕಟ್ಟಿ ಪೂಜಿಸಲಾಗುತ್ತದೆ. ದೇವಾನುದೇವತೆಗಳನ್ನು ಮಾತ್ರವಲ್ಲ ಎಲ್ಲಾ ಸೃಷ್ಟಿಯನ್ನು ಗೌರವಿಸಿ ಪೂಜಿಸುವುದು ಈ ದೇಶದ ಹಿರಿಮೆ. ಇದು ಅಂಥಹದ್ದೇ ಒಂದು ದೇವಾಲಯ. ಸೃಷ್ಟಿ ತತ್ವದ ಸಾರವನ್ನು ಸಾರುವ ಮಂದಿರ. ಪ್ರಕೃತಿಯೇ ಸೃಷ್ಟಿ ಸ್ವರೂಪಿನಿ ಯೋನಿ, ಪೃಥ್ವಿಯನ್ನು ಆದಿಮಾತೆ ಎಂದು ಕರೆಯಲಾಗಿದೆ, ಅವಳ ಆದಿ ಮಾತೃತ್ವಕ್ಕೆ ಪ್ರಾಧಾನ್ಯತೆಯನ್ನು ತಂದು ಕೊಡುವ ವಿಶೇಷ ದೇವಸ್ಥಾನವೊಂದು ಇಲ್ಲಿದೆ. ಯಾವುದು ಆ ದೇವಸ್ಥಾನ, ಅದರ ಮಹತ್ವವೇನು ತಿಳಿಯೋಣ..

 

ಇಂಥದೊಂದು ವಿಶಿಷ್ಠ ದೇವಾಲಯವಿರುವುದು ಅಸ್ಸಾಂನ ಗುವಾಹಟಿ ನಗರದ ಪಶ್ಚಿಮದಲ್ಲಿ. ಇಲ್ಲಿನ ಕಾಮಾಕ್ಯ ದೇವಿಯ ದೇವಾಲಯಕ್ಕೆ ವರ್ಷವಿಡೀ ತಾಯಿಯಾಗಲು ಹಂಬಲಿಸುವ ಸಾವಿರಾರು ಹಿಂದೂ ಮಹಿಳೆಯರು ಭೇಟಿ ನೀಡುತ್ತಾರೆ. ಇಲ್ಲಿ ಯೋನಿಪೂಜೆ ನೆರವೇರಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಅವರದು.  ಗರ್ಭಗುಡಿಯಲ್ಲಿರುವುದು ಶಕ್ತಿ ದೇವತೆಯ ಯೋನಿ. ಸತಿಯ ದೇಹ 51 ಭಾಗಗಳಾಗಿ ದೇಶದ ಉದ್ದಗಲದಲ್ಲೂ ಬಿದ್ದು ವಿವಿಧ ಶಕ್ತಿಪೀಠಗಳಾಗಿ ಹೊಮ್ಮಿದಾಗ, ಇಲ್ಲಿ ಆಕೆಯ ಗರ್ಭ ಬಿದ್ದಿತು ಎಂಬ ಕತೆಯಿದೆ.

 

 ಕಾಮಾಕ್ಯ ಮಂದಿರ

Kamakya temple GuhwatiImage Credits : The Sentinel Assam 

ಅಸ್ಸಾಂ ರಾಜ್ಯದ ರಾಜಧಾನಿ ಗುವಾಹಟಿಯಲ್ಲಿ ಕಾಮಾಕ್ಯ ಮಂದಿರ ಇದೆ. ಕಾಮಾಕ್ಯ ಮಂದಿರ ಸಮೂಹಗಳಲ್ಲಿ ಜಗಜ್ಜನನಿಯ 9 ವಿದ್ಯಾಧಿದೇವತಾ ರೂಪಗಳಿವೆ. ಎಲ್ಲವೂ ನೀರನ್ನು ಸಂಕೇತಿಸುತ್ತಿದ್ದು, ಆಳ ಗುಹೆಯಲ್ಲಿ ಇವೆ. ಈ ದೇವಿಯ ಉಪಾಸನೆಯ ಕೇಂದ್ರ ಸ್ಥಾನಗಳು ಸಾಧಿಯ, ನೊಮ್‍ಗಾಂಗ್, ಹಾಗೂ ಗುವಾಹಟಿಯ ನೀಲಾಚಲ. ಈ ಮಂದಿರವು 16ನೇ ಶತಮಾನದಲ್ಲಿ ದ್ವಂಸವಾಗಿತ್ತಂತೆ. 17ನೇ ಶತಮಾನದಲ್ಲಿ ನರನಾರಾಯಣ  ಎಂಬ ಅರಸ ಇದನ್ನು ಮರುನಿರ್ಮಿಸಿದ್ದ.

 

 ಅಸ್ಸಾಂ ಹಿಂದೆ ಕಾಮ ರೂಪ ಎಂಬ ಹೆಸರಿನಿಂದ ಗುರುತಿಸಿಕೊಂಡಿತ್ತು . ವಾಸ್ತವವಾಗಿ ಕಾಮ ರೂಪ ಎಂಬ ಹೆಸರು ಕಾಮಕ್ಕೆ ಸಂಬಂಧಿಸಿಲ್ಲವಾದರೂ ಸೃಷ್ಟಿಗೆ ಸಂಬಂಧಿಸಿದೆ. ಬ್ರಹ್ಮಪುತ್ರಾ ನದಿಯು ಪ್ರವಾಹದೊಂದಿಗೆ ತರುವ ಮೆಕ್ಕಲು ಮಣ್ಣನ್ನು ಅಸ್ಸಾಮಿ ಭಾಷೆಯಲ್ಲಿ ‘ಕಾಮರೂಬ್’ ಎನ್ನುತ್ತಾರೆ. ಹೀಗಾಗಿ ಹಿಂದೆ ಇಡೀ ಅಸ್ಸಾಂ ರಾಜ್ಯದ ಹೆಸರು ‘ಕಾಮರೂಪ’ ಎಂದಿತ್ತು ಎಂದು ತಿಳಿದುಬಂದಿದೆ. ಪ್ರಕೃತಿಯೇ ಸೃಷ್ಟಿಸ್ವರೂಪಿನಿ ಯೋನಿ. ಹೀಗಾಗಿ ಆದಿ ಮಾತೃತ್ವಕ್ಕೆ ಪ್ರಾಧಾನ್ಯತೆಯನ್ನು ತಂದು ಕೊಡುವ ಒಂದು ಜನಪದ ಸಂಪ್ರದಾಯವು ಇಲ್ಲಿ ಈಗಲೂ ಆಚರಣೆಯಲ್ಲಿದೆ.

 

 ಯೋನಿರೂಪಿ ದೇವಿಯ ಪೂಜೆ

Yoni pooja for kamakya deviImage Credits : Patrika

ಯೋನಿರೂಪಿ ದೇವಿಯ ಪೂಜೆಯು ಭಾರತೀಯ ಪರಂಪರೆಯಲ್ಲಿ ಸಿಂಧೂ ನಾಗರಿಕತೆಯಿಂದ ಆರಂಭಗೊಂಡಿದೆ. ಹರಪ್ಪನ ಕಾಲದಲ್ಲಿ ತಲೆಕೆಳಗಾಗಿ ಇರುವ ನಗ್ನ ಸ್ತ್ರೀ ಮೂರ್ತಿಯು ತನ್ನ ಗರ್ಭ-ಯೋನಿಯಿಂದ ಸಸ್ಯಕ್ಕೆ ಜನ್ಮ ನೀಡುತ್ತಿರುವುದನ್ನು ತೋರಿಸುತ್ತದೆ. ಗುಪ್ತರಕಾಲದ ಆವೆ ಮಣ್ಣಿನ ಸ್ತ್ರೀ ಶಿಲ್ಪವು ಯೋನಿ ಕಲ್ಪನೆಯಲ್ಲಿ ಮೂಡಿದ್ದು ಇಲ್ಲಿ ಭೂಮಿ ತಾಯಿಯ ದೇಹದ ಯಾವುದೇ ಭಾಗವು ಯೋನಿಯನ್ನಾಗಿ ಕಲ್ಪಿಸಿ ಚಿತ್ರಿಸಲಾಗಿದೆ. ಹೀಗೆಯೇ ಅಸ್ಸಾಂನ ಪರ್ವತ ಪ್ರದೇಶದ ಬೋಡೋ ಮತ್ತು ಇತರ ಜನರು ಯೋನಿ ಭೂಮಿಯನ್ನಾಗಿ ಅಸ್ಸಾಂನ ಫಲವತ್ತಾದ ಮಣ್ಣನ್ನು ಉಪಾಸಿಸುತ್ತಿರುವುದು ಕೂಡಾ ಇದೇ ಆಚರಣೆಯಿಂದ.

 

 ಮೂರು ದಿನ ಮುಟ್ಟಾಗುವ ತಾಯಿ

3 day periods god kamakya deviImage Credits : youngisthan.in

ಪ್ರತಿ ವರ್ಷ ಜೂನ್ ತಿಂಗಳು ಬಂದರೆ ಈ ತಾಯಿ ಮುಟ್ಟಾಗುತ್ತಾಳೆ. ಅದೇ ಕಾರಣಕ್ಕೆ ಹತ್ತಿರದಲ್ಲಿ ಹರಿವ ಬ್ರಹ್ಮಪುತ್ರ ನೀರು ಕೆಂಪಾಗುತ್ತದೆ ಎಂಬ ನಂಬಿಕೆ ಇದೆ. ಕಾಮಾಕ್ಯದ ದೇವಿ ರಜಸ್ವಲೆಯಾಗುವ  4 ದಿನ ಈ ಮಂದಿರವನ್ನು ಮುಚ್ಚಲಾಗುತ್ತದೆ

 

5ನೇಯ ದಿನ ಅವಳ ಯೋನಿಯ ಮೇಲೆ ಹಾಸಿದ್ದ ಬಿಳಿಯ ಬಟ್ಟೆಗೆ ಕೆಂಪು ಕಲೆಗಳಾಗಿ ರಕ್ತವರ್ಣದ ಬಟ್ಟೆಯ ಚೂರುಗಳನ್ನು ಭಕ್ತರಿಗೆ ಹಂಚಲಾಗುತ್ತದೆ. ಈ ಚೂರು ಬಟ್ಟೆಗಾಗಿ ಬಂಗಾಳ, ಒರಿಸ್ಸಾ, ಬಿಹಾರ, ಅಸ್ಸಾಮ್ ಹಾಗೂ ಪೂರ್ವ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯ ಭಕ್ತರು ಸೇರುತ್ತಾರೆ. ಮುಂದೆ ಬೀಳುವ ಮಳೆಗೆ ಸೃಷ್ಟಿಕ್ರಿಯೆ ನಡೆಯುವುದನ್ನು ಉತ್ಸಾಹದಿಂದ ಸ್ವಾಗತಿಸುವಂತೆ ಈ ಉತ್ಸವ ಸೂಚಿಸುತ್ತದೆ. ಅಸ್ಸಾಂನ ಬುಡಗಟ್ಟು ನಂಬಿಕೆಯಂತೆ ಇದು ಸೃಷ್ಟಿಯ ವಿಕಸನದ ಪೂಜೆ.

 

 ಪೌರಾಣಿಕ ಹಿನ್ನಲೆ

history of kamakya devi shakti peetha
Image credits : manutd.ru

ಪುರಾಣದಲ್ಲಿ ಈ ಕಾಮಾಕ್ಯ ಮಂದಿರದ ಬಗ್ಗೆ ಉಲ್ಲೇಖಿಸಲಾಗಿದೆ. ಶಿವ ಪುರಾಣ ಹಾಗೂ ವಿಷ್ಣು ಪುರಾಣಗಳಲ್ಲಿ ಸತಿಯ ಕತೆಯೊಂದಿದೆ. ಬ್ರಹ್ಮನ ಪುತ್ರ ದಕ್ಷ, ಶಕ್ತಿದೇವತೆ ತನ್ನ ಮಗಳಾಗಿ ಹುಟ್ಟಬೇಕೆಂದು ಯಜ್ಞ ಮಾಡುತ್ತಾನೆ. ಆಕೆಗೆ ಸತಿ ಎಂದು ಹೆಸರಿಸುತ್ತಾನೆ. ಸತಿ ವಯಸ್ಸಿಗೆ ಬಂದಾಗ ಆಕೆ ಶಿವನನ್ನು ಪ್ರೇಮಿಸುತ್ತಾಳೆ. ಆದರೆ, ಶಿವನ ಅಸಂಪ್ರದಾಯಿಕ ಜೀವನಶೈಲಿ, ಸಮಾಜದ ಕಟ್ಟಳೆಗೆ ವಿರುದ್ಧವಾಗಿ ಬದುಕುವ ರೀತಿಯಿಂದಾಗಿ ದಕ್ಷನಿಗೆ ಆತ ಇಷ್ಟವಿರುವುದಿಲ್ಲ. ಅದರಲ್ಲೂ ಒಮ್ಮೆ ಶಿವ ದಕ್ಷನನ್ನು ಕಡೆಗಣಿಸಿ ಆತನ ಮತ್ತಷ್ಟು ದ್ವೇಷಕ್ಕೆ ಗುರಿಯಾಗುತ್ತಾನೆ. ಹೀಗಿದ್ದರೂ ಸತಿ ಮಾತ್ರ ವಿವಾಹವಾದರೆ ಶಿವನನ್ನೇ ಎಂದು ದಕ್ಷನನ್ನು ಧಿಕ್ಕರಿಸಿ ಮದುವೆಯಾಗುತ್ತಾಳೆ. ಇದರಿಂದ ಕೋಪಗೊಂಡ ದಕ್ಷ ಶಿವ ಹಾಗೂ ಸತಿ ಇಬ್ಬರಿಗೂ ಶಿಕ್ಷೆ ನೀಡಲು ಯೋಜಿಸುತ್ತಾನೆ. 

 

 ದಕ್ಷ ಒಂದು ದೊಡ್ಡ ಯಜ್ಞ ಹಮ್ಮಿಕೊಂಡು ಅದಕ್ಕೆ ಶಿವ ಪಾರ್ವತಿ ಹೊರತು ಪಡಿಸಿ ಮತ್ತೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ.  ತನ್ನ ತಂದೆಯೇ ಆದ್ದರಿಂದ ಈ ಯಜ್ಞಕ್ಕೆ ಹೋಗೋಣವೆಂದು ಸತಿ ಶಿವನಿಗೆ ಕೇಳಿಕೊಳ್ಳುತ್ತಾಳೆ. ಆದರೆ ಶಿವ ಒಪ್ಪದಿದ್ದಾಗ ಸತಿಯೊಬ್ಬಳೇ ದಕ್ಷನ ಯಜ್ಞಕ್ಕೆ ಹೋಗುತ್ತಾಳೆ. ಅಲ್ಲಿ ಹೋದ ಬಳಿಕ ಸತಿಗೆ ದಕ್ಷ ತನ್ನನ್ನು ಹಾಗೂ ಶಿವನನ್ನು ಬೇಕೆಂದೇ ಆಹ್ವಾನಿಸಿಲ್ಲವೆಂಬುದು ಖಾತ್ರಿಯಾಗಿ ಬಹಳ ಅವಮಾನವಾಗುತ್ತದೆ.  ಅವಮಾನದಿಂದ ಸತಿ ಯಜ್ಞಕುಂಡಕ್ಕೆ ಹಾರಿ ಪ್ರಾಣ ಬಿಡುತ್ತಾಳೆ. ಶಿವನಿಗೆ ಎಷ್ಟು ದುಃಖವಾಗುತ್ತದೆಂದರೆ ಆತ ಸತಿಯ ದೇಹವನ್ನು 12 ವರ್ಷಗಳು ಕಾಪಿಡುತ್ತಾನೆ. ಕೊನೆಗೆ ಜಗತ್ತನ್ನೇ ಕೊನೆಗೊಳಿಸಲು ತಾಂಡವವಾಡುವ ನಿರ್ಧಾರಕ್ಕೆ ಬರುತ್ತಾನೆ. ಆಗ ವಿಷ್ಣುವು ಸುದರ್ಶನ ಚಕ್ರ ಬಳಸುತ್ತಾನೆ. ಅದು ಸತಿಯ ದೇಹವನ್ನು. 51 ಭಾಗವಾಗಿಸಿ ಭಾರತದ ವಿವಿಧೆಡೆ ಬೀಳುವಂತೆ ಮಾಡುತ್ತದೆ. ಈ ಸ್ಥಳಗಳನ್ನೆಲ್ಲ ಇಂದು ಶಕ್ತಿಪೀಠ ಎಂದು ಕರೆಸಿಕೊಂಡಿವೆ. ಅವುಗಳಲ್ಲೊಂದು ಶಕ್ತಿ ಪೀಠ ಕಾಮಾಕ್ಯ, ಇಲ್ಲಿಯೇ ಸತಿಯ  ಗರ್ಭ ಬಿದ್ದುದು ಎಂಬ ನಂಬಿಕೆಯಿದೆ...

 

ಇನ್ನೊಂದು ದಂತ ಕಥೆಯ ಪ್ರಕಾರ ನರಕಾಸುರ ಜಗಜ್ಜನನಿಯನ್ನು ವಿವಾಹವಾಗಲು ಕೋರುತ್ತಾನೆ. ಆಕೆ ರಾತ್ರಿ ಬೆಳಗುವುದರೊಳಗೆ ತನಗಾಗಿ ಮಂದಿರ ಕಟ್ಟಿದರೆ ತಾನು ವಿವಾಹವಾಗುವುದಾಗಿ ಹೇಳುತ್ತಾಳೆ. ನರಕಾಸುರ ಮಂದಿರ ಕಟ್ಟಿ ಮೆಟ್ಟಲು ಮುಗಿಸಲು ತೊಡಗುತ್ತಾನೆ. ಮಂದಿರದ ಕೆಲಸ ಪೂರ್ಣ ಆಗುವ ಮೊದಲು ಕಾಮಾಕ್ಯಳ ಕೋಳಿಯೊಂದನ್ನು ಕೂಗಿಸಿ ಬೆಳಕು ಹರಿಯಿತೆಂಬ ಸೂಚನೆ ನೀಡುತ್ತಾಳೆ. ಇದರಿಂದ ಸಿಟ್ಟಿಗೆದ್ದ ನರಾಕಸುರ ಕೋಳಿಯ ಗಂಟಲು ಹಿಸುಕಿ ಕೊಲ್ಲುತ್ತಾನೆ. ಈಗಿನ ಮಂದಿರ ಅದೇ ಎನ್ನುವುದು ಕೆಲವರ ನಂಬಿಕೆ.

 

 ಮತ್ತೊಂದು ನಂಬಿಕೆಯಂತೆ ಸೃಷ್ಟಿಕರ್ತ ಬ್ರಹ್ಮನಿಗೆ, ಜಗಜ್ಜನನಿಯು, ಬ್ರಹ್ಮನು ಯೋನಿಯ ಆಶೀರ್ವಾದದ ಮೂಲಕ ಸೃಷ್ಟಿಕ್ರಿಯೆ ನಡೆಸಬೆಕು ಎನ್ನುತ್ತಾಳೆ. ಕಠಿನ ತಪಸ್ಸಿನ ಮೂಲಕ ಬ್ರಹ್ಮನು ಸ್ವರ್ಗದಿಂದ ತಂದ ಪ್ರಜ್ವಲ ಜ್ಯೋತಿಯಿಂದ ಕಾಮಾಕ್ಯದ ಯೋನಿ ವೃತ್ತವನ್ನು ಬೆಳಗಿಸುತ್ತಾನೆ.

 

 ಪುರಾಣ ಕಥೆ ಏನೇ ಇರಲಿ ಇದು ಅವೈದಿಕ ಸಂಪ್ರದಾಯದ ಮಂದಿರ. ಯೋನಿ ರೂಪದ ಪ್ರಕೃತಿಯ, ಸೃಷ್ಟಿಯ ಪೂಜೆ ಲಜ್ಜಾಗೌರಿ ರೂಪದಲ್ಲಿ ದಕ್ಷಿಣ ಭಾರತದಲ್ಲಿ ಇದೆ. ಕರಾವಳಿಯ ತುಳುನಾಡಿನ ಮೂಲತಾಣಗಳಲ್ಲಿ ಭೂಮಿಯ ಸೃಷ್ಟಿ ತತ್ವವನ್ನು ಸಂಕೇತಿಸಿ ಉಪಾಸನೆಗೊಳ್ಳುತ್ತಿದೆ. ಹೀಗೆ ಸೃಷ್ಟಿ ತತ್ವದ ಮೇಲೆ ಕಾಮಾಕ್ಯದಲ್ಲಿ ಯೋನಿ ಪೂಜೆ ನಡೆಯುತ್ತದೆ. ಕಲ್ಲಿನ ಯೋನಿರೂಪವೇ ಕಾಮಾಕ್ಯದಲ್ಲಿ ಪೂಜೆಗೊಳ್ಳುತ್ತಿದೆ. ಇದು ತಾಂತ್ರಿಕಾಚರಣೆಯ ಭಾಗ ಕೂಡಾ. ಇಲ್ಲಿಗೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ವರ್ಷಕ್ಕೆ ಒಮ್ಮೆ ಕಾಮಾಕ್ಯ ಮಂದಿರದಲ್ಲಿ ಅಂಬುವಾಚಿ ಉತ್ಸವ ನಡೆಯುತ್ತದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author