ಹಿಂದುಗಳ ಪವಿತ್ರ ಯಾತ್ರಾ ಸ್ಥಳ 400 ವರ್ಷಗಳ ಐತಿಹ್ಯವುಳ್ಳ ಕೇದಾರನಾಥ ದೇವಾಲಯ

ಹಿಂದುಗಳ ಪವಿತ್ರ ಯಾತ್ರಾ ಸ್ಥಳ 400 ವರ್ಷಗಳ ಐತಿಹ್ಯವುಳ್ಳ ಕೇದಾರನಾಥ ದೇವಾಲಯ

Kedarnath templeFeatured Image Credits : Swarajya

ಕೇದಾರನಾಥ ಹಿಂದುಗಳ ಪವಿತ್ರ ಯಾತ್ರಾ ಸ್ಥಳ. 400 ವರ್ಷಗಳ ಐತಿಹ್ಯವುಳ್ಳ ಈ ದೇವಾಲಯದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಮಂದಾಕಿನಿ ನದಿಯ ದಂಡೆಯ ಮೇಲೆ ಈ ಶಿವನ ದೇವಸ್ಥಾನವಿದೆ. ಉತ್ತರಾಖಂಡರಾಜ್ಯದ ಚಮೋಲಿಯಲ್ಲಿ ಹಿಮಾಲಯದ ತಪ್ಪಲಿನಲ್ಲಿ ನೆಲೆಗೊಂಡಿರುವ ಕೇದಾರನಾಥ ದೇವಾಲಯವು ಭಾರತದಾದ್ಯಂತ ಇರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈ ದೇವಾಲಯಕ್ಕೆ ಭೇಟಿ ನೀಡಿದರೆ ಪಾಪಗಳೆಲ್ಲಾ ಕಳೆದು ಮೋಕ್ಷ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆಯಿದೆ. ಕೇದಾರನಾಥದಲ್ಲಿ ಮೂಲ ದೇವಾಲಯವು ಕಲ್ಲಿನ ಸುಂದರ ಶಿಲ್ಪವಾಗಿದೆ. ಇದನ್ನು ಸುಮಾರು 8ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.

ಕೇದಾರನಾಥ ದೇವಾಲಯ ಸಮುದ್ರ ಮಟ್ಟಕ್ಕಿಂತ ಸುಮಾರು 3,500 ಮೀಟರ್‌ ಎತ್ತರದಲ್ಲಿದೆ. ವರ್ಷದ ಬಹುಪಾಲು ದಿನ ಈ ದೇವಾಲಯವು ಹಿಮದಿಂದ ಕೂಡಿರುತ್ತದೆ. ಆದ್ದರಿಂದ ಎಪ್ರಿಲ್‌ ತಿಂಗಳಿನಿಂದ ನವೆಂಬರ್‌ ತಿಂಗಳ ವರೆಗೆ ಮಾತ್ರ ಭಕ್ತಾಧಿಗಳಿಗೆ ಇಲ್ಲಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಚಳಿಗಾಲದಲ್ಲಿ, ಕೇದಾರನಾಥ ದೇವಾಲಯದ ವಿಗ್ರಹಗಳನ್ನು ಉಖಿ ಮಠಕ್ಕೆ ತರಲಾಗುತ್ತದೆ ಮತ್ತು ಆರು ತಿಂಗಳು ಅಲ್ಲಿ ಪೂಜೆ ನಡೆಸಲಾಗುತ್ತದೆ. ಶಿವನನ್ನು ಭಗವಾನ್‌ ಕೇದಾರನಾಥ ಎಂದು ಪೂಜಿಸಲಾಗುತ್ತದೆ. ಈ ದೇವಸ್ಥಾನವನ್ನು ನೇರವಾಗಿ ರಸ್ತೆಯ ಮೂಲಕ ತಲುಪಲು ಸಾಧ್ಯವಿಲ್ಲ ಮತ್ತು ಗೌರಿಕುಂಡದಿಂದ ಸುಮಾರು 18 ಕಿಲೋಮೀಟರ್ ಎತ್ತರದ ಚಾರಣದಿಂದ ತಲುಪಬೇಕು.

ಚತುರ್ಧಾಮ ಯಾತ್ರೆಯಲ್ಲಿ ಕೇದಾರನಾಥ ದೇವಾಲಯ ಒಂದು ಮುಖ್ಯ ಯಾತ್ರಾ ಸ್ಥಳ. ಕೇದಾರನಾಥ ಯಾತ್ರೆಯು ಭಾರತ-ಚೀನಾ ಗಡಿಗೆ ಅಂಟಿಕೊಂಡಂತಿರುವ ಗೌರಿಕುಂಡವೆಂಬ ಪ್ರದೇಶದಿಂದ ಪ್ರಾರಂಭವಾಗುತ್ತದೆ. ಸಮತಟ್ಟಾದ ಪ್ರದೇಶವಾದ ಇಲ್ಲಿಂದ ಸುಮಾರು 14 ಕಿ.ಮೀ. ಕಾಲ್ನಡಿಗೆ, ಕುದುರೆಸವಾರಿ ಅಥವಾ ಡೋಲಿಯಲ್ಲಿ ದೇವಾಲಯಕ್ಕೆ ತೆರಳಬೇಕು,

ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಪಾಂಡವರ, ಕೃಷ್ಣ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ಈ ದೇವಾಲಯ ವಿಚಿತ್ರವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ಈ ದೇವಸ್ಥಾನದ ಹಿಂದೆಯೇ ಶಂಕರರ ಸಮಾಧಿ ಮಂದಿರವಿದೆ. ಗೌರಿಕುಂಡವು ಸಮುದ್ರಮಟ್ಟದಿಂದ 6500 ಅಡಿ ಎತ್ತರದಲ್ಲಿದೆ.

 

ಕೇದಾರನಾಥ ದೇವಾಲಯದ ಐತಿಹ್ಯ

kedarnath templeImage Credits : wikipedia

ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕೇದಾರನಾಥ ದೇವಾಲಯವಿದೆ. ಪೌರಾಣಿಕ ಹಿನ್ನಲೆಯಂತೆ ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಕೊಂದ ಪಾಂಡವರು ತಮ್ಮ ಪಾಪ ಪರಿಹಾರಕ್ಕಾಗಿ ಈಶ್ವರನ ದರ್ಶನ ಪಡೆಯಲು ವಾರಣಾಸಿ ಕ್ಷೇತ್ರಕ್ಕೆ ಬರುತ್ತಾರೆ. ಆದರೆ ಮಹಾಭಾರತ ಯುದ್ಧ ನಡೆದು ಅದೆಷ್ಟೋ ಅಮಾಯಕರು ಮೃತಪಟ್ಟದ್ದಕ್ಕಾಗಿ ಶಿವನು ಪಾಂಡವರ ಮೇಲೆ ಸಿಟ್ಟಾಗಿರುತ್ತಾನೆ. ಹಾಗಾಗಿ ಪಾಂಡವರಿಗೆ ಕಾಣ ಸಿಗದೆ ಪರಶಿವನು ಕೇದಾರಕ್ಕೆ ಬರುತ್ತಾನೆ. ಇದನ್ನು ಅರಿತ ಪಾಂಡವರೂ ಕೇದಾರಕ್ಕೆ ಬರುತ್ತಾರೆ.ಶಿವನು ಅವರಿಗೆ ಕಾಣದಂತೆ ಎತ್ತಿನ ರೂಪ ತಾಳಿ ಮೇಯುತ್ತಿರುತ್ತಾನೆ. ಇದನ್ನು ಗ್ರಹಿಸಿದ ಭೀಮನು ಶಿವನ ದರ್ಶನ ಪಡೆದೇ ತೀರುವ ಛಲದಿಂದ ಎರಡು ಪರ್ವತಗಳ ನಡುವೆ ಒಂದೊಂದು ಕಾಲಿಟ್ಟು ಹಸುಗಳು ಹೋಗುವ ದಾರಿಯಲ್ಲಿ ನಿಂತು ಬಿಡುತ್ತಾನೆ. ಎಲ್ಲಾ ಜಾನುವಾರುಗಳು ಅವನ ಕಾಲಿನಡಿ ನುಸುಳಿ ಹೋಗುತ್ತವೆ.

ಆದರೆ ಒಂದು ಎತ್ತು ಮಾತ್ರ ಹಾಗೇ ಹೋಗದೆ ನಿಂತು ಬಿಡುತ್ತದೆ. ಇದನ್ನು ಗಮನಿಸಿದ ಭೀಮ ಈತನೇ ಶಂಕರನೆಂದು ಖಚಿತವಾಗಿ ತಿಳಿದು ಅದನ್ನು ಹಿಡಿಯುತ್ತಾನೆ. ತಪ್ಪಿಸಿಕೊಳ್ಳುವ ಸಲುವಾಗಿ ಎತ್ತು ನೆಲದಲ್ಲಿ ಇಳಿದು ಬಿಡುತ್ತದೆ. ಆಗ ಎತ್ತಿನ ಡುಬ್ಬ ಮಾತ್ರ ಕೈಗೆ ಸಿಕ್ಕಿ ಅದನ್ನೇ ಹಿಡಿದು ಮೇಲಕ್ಕೆತ್ತುತ್ತಾನೆ. ಎತ್ತಿನ ಡುಬ್ಬ ಮಾತ್ರ ಕೇದಾರನಾಥದಲ್ಲಿ ಉಳಿದು ಬಿಡುತ್ತದೆ. ಶಿರೋ ಭಾಗ ರುದ್ರನಾಥ, ಮುಂಡ ಮಧ್ಯಮ ಮಹೇಶ್ವರದಲ್ಲಿ, ತೋಳುಗಳು ತುಂಗಾನಾಥದಲ್ಲಿ, ಹಾಗೂ ದೇಹದ ಉಳಿದ ಭಾಗ ನೇಪಾಳದ ಪಶುಪತಿನಾಥ ಮತ್ತು ಕರೈಶ್ವರದಲ್ಲಿ ಹಂಚಿ ಹೋಗುತ್ತದೆ. ಪ್ರಸನ್ನನಾದ ಶಿವ ಪ್ರತ್ಯಕ್ಷನಾಗಿ ಪಾಂಡವರನ್ನು ಆಶೀರ್ವದಿಸುತ್ತಾನೆ ಎಂಬ ಐತಿಹ್ಯವಿದೆ.

ಪಾಂಡವರಿಂದ ಕಾಶಿಯಿಂದ ತಪ್ಪಿಸಿಕೊಂಡು ಬಂದ ಪರಶಿವನು 5 ವಿಭಿನ್ನ ಸ್ಥಳಗಳಲ್ಲಿ, 5 ವಿಭಿನ್ನ ಭಾಗಗಳಾಗಿ ನೆಲೆಯೂರುತ್ತಾನೆ. ಶಿವನ ದೇಹದ ಭಾಗಗಳು ಬಿಡಿಯಾಗಿ ಬಿದ್ದ ಆ 5 ಸ್ಥಳಗಳಲ್ಲಿ ಕೇದಾರನಾಥ ಕೂಡ ಒಂದು. ಈ ಸ್ಥಳದಲ್ಲಿ ಶಿವನ ನಂದಿಯ ಡುಬ್ಬ ಬಿದ್ದಿದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಕೇದಾರನಾಥ ಹಾಗೂ ಮಹಾಭಾರತವು ಒಂದಕ್ಕೊಂದು ಸಂಬಂಧವನ್ನು ಹೊಂದಿದೆ.

ದೇವಾಲಯದ ಮುಂಭಾಗದಲ್ಲಿ ಸಣ್ಣ ಕಂಬದ ಕೋಣೆ ಇದೆ, ಅದು ಪಾರ್ವತಿಯ ಮತ್ತು ಐದು ಪಾಂಡವ ರಾಜಕುಮಾರರ ಚಿತ್ರಗಳನ್ನು ಹೊಂದಿದೆ. ಬದಾರಿ-ಕಿಯರ್, ಮಧ್ಯ ಮಹೇಶ್ವರ, ತುಂಗನಾಥ, ರುದ್ರನಾಥ ಮತ್ತು ಕಲ್ಲೇಶ್ವರ ಎಂಬ ಐದು ದೇವಾಲಯಗಳಿವೆ. ಕೇದಾರನಾಥ ದೇವಸ್ಥಾನದ ಒಳಗೆ ಮೊದಲ ಐದು ಪಾಂಡವ ಸಹೋದರರು, ಭಗವಾನ್ ಕೃಷ್ಣ, ನಂದಿ, ಶಿವನ ವಾಹನ ಮತ್ತು ಶಿವದೇವರಲ್ಲಿ ಒಬ್ಬರಾದ ವೀರಭದ್ರನ ಮೂರ್ತಿಗಳನ್ನು ಒಳಗೊಂಡಿದೆ..

ಸ್ಕಂದ ಪುರಾಣದಲ್ಲಿ ಶಿವನು ತನ್ನ ಕೆದರಿದ ಕೂದಲಿನಿಂದ ಕೇದಾರನಾಥದಲ್ಲಿ ಗಂಗೆಯೆಂಬ ಪವಿತ್ರ ನೀರನ್ನು ಹರಿಬಿಟ್ಟನೆಂದು ಹೇಳಲಾಗುತ್ತದೆ. 400 ವರ್ಷಗಳ ಐತಿಹ್ಯವನ್ನು ಹೊಂದಿರುವ ಕೇದಾರನಾಥವು ಪ್ರವಾಸಿಗರ ತೀರ್ಥಯಾತ್ರೆಯ ಪ್ರಮುಖ ಕೇಂದ್ರಬಿಂದುವಾಗಿದೆ. ಕೇದಾರನಾಥಕ್ಕೆ ಯಾತ್ರೆಯನ್ನು ಕೈಗೊಳ್ಳುವುದರಿಂದ ಪಾಪಗಳಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆಯಿದೆ.

2013ರಲ್ಲಿ ಉತ್ತರಾಖಂಡವು ದೊಡ್ಡ ಪ್ರವಾಹದಿಂದ ಮುಚ್ಚಿಹೋಗಿದ್ದರೂ ಕೇದಾರನಾಥ ದೇವಾಲಯಕ್ಕೆ ಒಂದಿಷ್ಟು ಹಾನಿಯಾಗಿರಲಿಲ್ಲ. ಪ್ರವಾಹದಿಂದ ಉತ್ತರಖಂಡದ ಜನಜೀವನ ಅಸ್ತವ್ಯಸ್ತಗೊಂಡಿದ್ದು ನಿಜ, ಪ್ರವಾಹದಲ್ಲಿ ಮನುಷ್ಯರು, ಆಸ್ತಿ, ಪಾಸ್ತಿ ಎಲ್ಲವೂ ಕೊಚ್ಚಿಹೋಗಿತ್ತು. ಆದರೆ ಕೇದಾರನಾಥಕ್ಕೆ ಮಾತ್ರ ಕಿಂಚಿತ್ತೂ ತೊಂದರೆಯಾಗಿರಲಿಲ್ಲ. ಇದನ್ನು ಕಂಡ ಭಕ್ತರು ದೇವಾಲಯವನ್ನು ಪ್ರವಾಹದಿಂದ ಕಾಪಾಡಲು ಶಿವನೇ ನಿಂತಿದ್ದಾನೆಂದು ನಂಬುತ್ತಾರೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author