ಪ್ರಾಚೀನ ಭಾರತವನ್ನು ಆಳಿದ ಶ್ರೇಷ್ಠ ಆಡಳಿತಗಾರರು ಯಾರೆಲ್ಲಾ..?

 kings and dynastys of indiaFeatured Image source : Pinterest

ಭಾರತ ದೇಶವನ್ನು, ಹಿಂದೆ ಭರತ ಉಪಖಂಡವಾಗಿದ್ದ ಭೂಮಿಯನ್ನು ಅನೇಕ ರಾಜ ಮನೆತನಗಳು ಆಳ್ವಿಕೆ ನಡೆಸಿವೆ. ಅದೆಷ್ಟೋ ರಾಜರು ಶತ್ರುಗಳ ವಿರುದ್ಧ ಹೋರಾಡಿ ಪ್ರಜೆಗಳ ಸಂರಕ್ಷಣೆಯನ್ನು ಮಾಡಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ. ರಾಜರು ಬರೀ ಯುದ್ದಗಳಿಂದ ಮಾತ್ರ ಪ್ರಸಿದ್ಧಿನ್ನು ಪಡೆದಿಲ್ಲ. ಅವರು ಮಾಡಿದಂತಹ ಉತ್ತಮ ಕೆಲಸಗಳು ನೆನಪು ಮಾಡಿಕೊಳ್ಳುವಂತೆ ಮಾಡಿದೆ. ಹಲವು ರಾಜರು ತಮ್ಮ ಆಳ್ವಿಕೆಯ ಕಾಲದಲ್ಲಿ ಭವ್ಯ ದೇವಾಲಯಗಳನ್ನು, ಸ್ಮಾರಕಗಳನ್ನು ಕಟ್ಟಿಸಿದ್ದಾರೆ. ಇಂಥಹಾ ಕೆಲವು ರಾಜರ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತ ಕಂಡ ಶ್ರೇಷ್ಠ ರಾಜರು ಹಲವರಿದ್ದಾರೆ. ಸಮುದ್ರಗುಪ್ತ, ಚಂದ್ರಗುಪ್ತ ಮೌರ್ಯ, ಅಶೋಕ, ರಾಜೇಂದ್ರ ಚೋಳ, ಮಹಾರಾಣಾ ಪ್ರತಾಪ್, ಅಕ್ಬರ್ ಹೀಗೆ ಹಲವು ರಾಜರು ಉತ್ತಮ ಆಳ್ವಿಕೆ ನಡೆಸಿದ್ದಾರೆ. ಅವರ ಬಗ್ಗೆ ಸವಿಸ್ತಾರವಾಗಿ ತಿಳಿಯೋಣ..

ಗುಪ್ತ ಸಾಮ್ರಾಜ್ಯದ ದೊರೆ ಸಮುದ್ರಗುಪ್ತ  

The Forgotten Maharajadhiraja SamudraguptaImage Credits : Neuronerdz

ಸಮುದ್ರಗುಪ್ತ, ಗುಪ್ತ ಸಾಮ್ರಾಜ್ಯದ ಪ್ರಮುಖ ದೊರೆಯೆಂದು ಕರೆಯಲ್ಪಡುತ್ತಾನೆ. ಇವನ ಕಾಲವನ್ನು ಭಾರತದ ಸುವರ್ಣ ಯುಗ ಎಂದು ಪರಿಗಣಿಸಲಾಗಿದೆ. ಗುಪ್ತ ವಂಶದ ಮೂರನೇ ಮಹಾನ್ ದೊರೆ ಸಮುದ್ರ ಗುಪ್ತ. ಈತನ ದಿಗ್ವಿಜಯದ ಬಗ್ಗೆ ಹರಿಸೇನನ ಅಲಹಬಾದ್ ಸ್ಥಂಭ ಶಾಸನದಲ್ಲಿ ವಿವರವಾಗಿ ತಿಳಿಸಲಾಗಿದೆ. ಭಾರತೀಯ ಇತಿಹಾಸದ ಅಪ್ರತಿಮ ಗಣಿ ಎಂದು ಈತನನ್ನು ಗುರುತಿಸಲಾಗುತ್ತದೆ. ಸಮುದ್ರಗುಪ್ತ ಒಬ್ಬ ಉಪಕಾರ ಬುದ್ದಿಯ ಆಡಳಿತಗಾರನಾಗಿ, ಮಹಾನ್ ಯೋಧನಾಗಿ ಮತ್ತು ಕಲೆಗಳ ಪೋಷಕನಾಗಿದ್ದನು.

ಇದನ್ನು ಓದಿ : ರಾಮನೂ, ರಾವಣನೂ ಇಬ್ಬರೂ ಸಹ ಮಹಾನ್‍ ಶಿವಭಕ್ತರಾಗಿದ್ದರು..!

ಗುಪ್ತ ಸಾಮ್ರಾಜ್ಯ ಕ್ರಿ.ಶ. 280ರಿಂದ 550ರ ವರೆಗೆ ಉತ್ತರ ಭಾರತವನ್ನು ಆವರಿಸಿದ್ದ ಒಂದು ಪ್ರಾಚೀನ ಸಾಮ್ರಾಜ್ಯ. ಇದನ್ನು ಶ್ರೀ ಗುಪ್ತ ಸ್ಥಾಪಿಸಿದನು. ಪಾಟಲಿಪುತ್ರ ಇದರ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯ ಸರಿಸುಮಾರು ಕ್ರಿ.ಶ. 320ರಿಂದ 550ರ ವರೆಗೆ ಉತ್ತುಂಗದಲ್ಲಿತ್ತು ಮತ್ತು ಭಾರತೀಯ ಉಪಖಂಡದ ಬಹಳಷ್ಟನ್ನು ಆವರಿಸಿತ್ತು. ಸಮುದ್ರಗುಪ್ತನ ಸಹೋದರರು ಮತ್ತು ತಂದೆಯ ಆಯ್ಕೆಯ ಮೇರೆಗೆ ಗುಪ್ತ ಸಾಮ್ರಾಜ್ಯದ ಉತ್ತರಾದಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಂಡನು. ಈತನಿಗೆ ರಾಜಾ ಚಕ್ರವರ್ತಿ ಅಥವಾ ಮಹಾನ್ ಚಕ್ರವರ್ತಿ, ನಿರ್ವಿವಾದ ರಾಜ ಎಂಬ ಬಿರುದುಗಳೂ ಇದ್ದವು..

ಸಾಮ್ರಾಜ್ಯದ ಹೆಮ್ಮೆ ಚಂದ್ರಗುಪ್ತ ಮೌರ್ಯ

chandragupta maurya history in kannadaImage Source : shabd.in

ಭಾರತೀಯ ಸಂಸ್ಕೃತಿಯ, ಸಾಮ್ರಾಜ್ಯದ ಹೆಮ್ಮೆಯ ಪ್ರತೀಕವಾಗಿ, ರಾಜರುಗಳಿಗೆ ರಾಜನಾಗಿ ಬೆಳೆದು ಅಖಂಡ ಭರತ ಸಾಮ್ರಾಜ್ಯವನ್ನು ಕಟ್ಟಿದ ಶ್ರೇಯ ಚಂದ್ರಗುಪ್ತ ಮೌರ್ಯನಿಗೆ ಸಲ್ಲುತ್ತದೆ. ಈತನ ಗುರುವಾಗಿ ಮಾರ್ಗದರ್ಶಕನಾಗಿ ಒಳಿತು ಕೆಡುಕುಗಳ ಆಧಾರವಾಗಿ ಚಾಣುಕ್ಯ ನಿಲ್ಲುತ್ತಾನೆ. ಕ್ರಿ.ಪೂ. 340ರಲ್ಲಿ ಹುಟ್ಟಿ ಮೌರ್ಯ ಸಾಮ್ರಾಜ್ಯದ ಸ್ಥಾಪಕನಾಗಿ ಬೆಳೆದ ದೊರೆ ಚಂದ್ರಗುಪ್ತ ಮೌರ್ಯ. ಕೇವಲ 20 ವರ್ಷದವನಿದ್ದಾಗಲೇ ಸಣ್ಣ-ಪುಟ್ಟ ರಾಜ್ಯಗಳನ್ನು ಜೊತೆಗೆ, ನಂದ ಸಾಮ್ರಾಜ್ಯವನ್ನು ವಶಪಡಿಸಿಕೊಂಡ ದೀರ ಸೈನಿಕ. ಇವನ ಆಡಳಿತವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹವುಗಳು. 

ಅವಮಾನಕ್ಕೆ ಒಳಗಾಗಿ ಸಾಮ್ರಾಜ್ಯವನ್ನು ಕಟ್ಟಿ. ಅನೇಕ ಯುದ್ದಗಳನ್ನು ಗೆದ್ದು ಸಾರ್ವಭೌಮನಾಗಿ ಮೆರೆದ ಚಂದ್ರಗುಪ್ತ ಮೌರ್ಯನು ಕೊನೆಗೆ ಜೈನ ಧರ್ಮಕ್ಕೆ ಮತಾಂತರಗೊಂಡು ಕರ್ನಾಟಕದ ಶ್ರವಣಬೆಳಗೊಳಕ್ಕೆ ಬಂದು ಕೊನೆಯ ದಿನಗಳನ್ನು ಕಳೆದನು ಎನ್ನಲಾಗುತ್ತದೆ.

ಸಾಮ್ರಾಟ್ ಅಶೋಕ ಚಕ್ರವರ್ತಿ

how did emperer ashoka dieImage Source : DNAIndia.com

ಸಾಮ್ರಾಟ್ ಅಶೋಕ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ. ಪ್ರಾಚೀನ ಭಾರತದಲ್ಲಿ ಅತ್ಯಂತ ದೊಡ್ಡ ರಾಜ್ಯವನ್ನಾಳಿದ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿ ಬರುತ್ತದೆ ಅಶೋಕನು ಮೌರ್ಯ ಸಾಮ್ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಚಕ್ರವರ್ತಿ ಕ್ರಿ.ಪೂ 273ರಿಂದ ಕ್ರಿ.ಪೂ 232ರ ವರೆಗೆ ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ದಾಖಲಾಗಿದೆ. ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂಬ ಬಿರುದುಗಳಿಂದ ಖ್ಯಾತನಾಗಿದ್ದಾನೆ.

ಇದನ್ನು ಓದಿ : ಕುಮರಿ ಖಂಡಂ..ಹಿಂದೂ ಮಹಾಸಾಗರದಲ್ಲಿ ಮುಳುಗಿ ಹೋದ ಖಂಡ..!

ಕಳಿಂಗ ಯುದ್ಧದ ಬಳಿಕ ಬೌದ್ಧ ಮತವನ್ನು ಪ್ರಚಾರಗೊಳಿಸುವುದರಲ್ಲಿ ತೊಡಗಿಕೊಂಡ ಸಾಮ್ರಾಟ್ ಅಶೋಕ. ವಿಶ್ವದೆಲ್ಲೆಡೆ ಬೌದ್ಧ ಮತ ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದವನು. ಭಾರತೀಯ ಇತಿಹಾಸದಲ್ಲಿ ಅಶೋಕನ ಸ್ಥಾನ ಬಹು ಎತ್ತರಕ್ಕೆ ನಿಲ್ಲುತ್ತೆ. ಮೌರ್ಯ ಸಾಮ್ರಾಜ್ಯದ ಸುಪ್ರಸಿದ್ದ ದೊರೆ ಅನೇಕ ದಂಡೆಯಾತ್ರೆಯ ಮೂಲಕ ಅಖಂಡ ಸಾಮ್ರಾಜ್ಯವನ್ನು ಸ್ಥಾಪಿಸಿದ. ಇವನು ಉಪಯೋಗಿಸಿದ ಚಕ್ರವನ್ನು ಅಶೋಕ ಚಕ್ರವಾಗಿ ಭಾರತದ ರಾಷ್ಟ್ರಧ್ವಜದಲ್ಲಿ ಬಳಸಲಾಗುತ್ತಿದೆ. ಅಶೋಕ ಭಾರತದ ಇತಿಹಾಸದಲ್ಲಿ ಸಾಮ್ರಾಟನಾಗಿ ನಿಲ್ಲುತ್ತಾನೆ.

ದಕ್ಷಿಣ ಭಾರತದ ರಾಜವಂಶದ ರಾಜೇಂದ್ರ ಚೋಳ

Rajendra chola raja of chola dynastyImage Source : twitter.com/bharattemples

ದಕ್ಷಿಣ ಭಾರತದ ಕೆಲವು ಭಾಗಗಳನ್ನು ಧೀರ್ಘಕಾಲ ಆಳಿದ ರಾಜವಂಶಗಳಲ್ಲಿ ಚೋಳರ ವಂಶವು ಪ್ರಮುಖವಾಗಿದೆ. ಚೋಳರನ್ನು ಕರ್ನಾಟಕದ ಇತಿಹಾಸಕಾರ ಪ್ರಕಾರ,ಸಾಮಂತ ಕ್ಷತ್ರಿಯರು ಎಂದು ಬಣ್ಣಿಸಲಾಗಿದೆ. ಚೋಳರು ತಮ್ಮ ಅಧಿಕಾರದ ಬಹುಪಾಲು ಭಾಗವನ್ನು ಪ್ರಮುಖವಾಗಿ 9ನೇ ಶತಮಾನದ ಅರ್ಧದಿಂದ 13ನೆ ಶತಮಾನದ ಪ್ರಾರಂಭದವರೆಗೂ ಆಳಿದರು. ತುಂಗಭದ್ರಾದ ಇಡೀ ದಕ್ಷಿಣಭಾಗವನ್ನು ಒಂದಾಗಿಸಿ ಒಂದು ರಾಜ್ಯವನ್ನಾಗಿ ಮಾಡಿ ಸುಮಾರು ಎರಡು ಶತಮಾನಗಳಿಗಿಂತಲೂ ಹೆಚ್ಚು ಕಾಲ ಆಡಳಿತ ನಡೆಸಿದರು.

ರಾಜರಾಜ ಚೋಳ I ಮತ್ತು ಅವನ ಮಗನಾದ ಮೊದಲ ರಾಜೇಂದ್ರಚೋಳನ ಕಾಲದಲ್ಲಿ ಈ ವಂಶವು ದಕ್ಷಿಣ ಏಷ್ಯಾದ ಮತ್ತು ಆಗ್ನೇಯ ಏಷ್ಯಿಯಾದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತನ್ನ ಅಧಿಕಾರವನ್ನು ಸ್ಥಾಪಿಸಿತು. ಪೂರ್ವಭಾಗದಲ್ಲಿ ಆಗ ತಾನೇ ಉದಯವಾಗುತ್ತಿದ್ದ ಗಂಗರ ಸಾಮ್ರಾಜ್ಯದ ಅಧಿಕಾರವನ್ನು ಮೊದಲನೇ ರಾಜೇಂದ್ರ ಚೋಳ ಕಸಿದುಕೊಂಡನು ಮತ್ತು ಚೀನಾದ ಪುನರಾವರ್ತಿತ ದಾಳಿ ಹಾಗೂ ಶ್ರೀವಿಜಯನ, ಸಮುದ್ರ ಕದನವು ಆ ಸಮ್ರಾಜ್ಯದ ಮೇಲೆ ಪ್ರಭಾವ ಬೀರಿದವು

ಇದನ್ನು ಓದಿ : ಉದ್ಭವ ಲಿಂಗದ ದೇಗುಲ ಕಾಡು ಮಲ್ಲೇಶ್ವರ ದೇವಾಲಯ

ಸೂರ್ಯವಂಶಿ ಮಹಾರಾಣಾ ಪ್ರತಾಪ್

maharana pratap history in kannadaImage Source : english.jagran.com

ಮಹಾರಾಣಾ ಪ್ರತಾಪ್ ಅಥವಾ ಮೇವಾರದ ಪ್ರತಾಪ್ ಸಿಂಗ್ ವಾಯುವ್ಯ ಭಾರತದ ರಾಜ್ಯವಾದ ಮೇವಾಡವನ್ನು ಆಳುತ್ತಿದ್ದ ಹಿಂದೂ ದೊರೆ. ಇವನು ಸೂರ್ಯವಂಶಿ ರಜಪೂತರ ಸಿಸೋದಿಯಾ ವಂಶಕ್ಕೆ ಸೇರಿದವನು. ಪ್ರತಾಪ್ ಕುಂಭಲ್‌ಘಡ್‌ಯಲ್ಲಿ ಎರಡನೇ ಮಹಾರಾಣಾ ಉದಯಯ್ ಸಿಂಗ್ ಮತ್ತು ಮಹಾರಾಣಿ ಜಾಂವಂತ ಬಾಯಿ ಸೊಂಗಾರರ ಮಗನಾಗಿ ಹುಟ್ಟಿದನು. ರಾಣ ಪ್ರತಾಪ್ ಸಿಂಗ್ ತನ್ನ ಚಾಣಾಕ್ಷತನ ಮತ್ತು ಯುದ್ದ ನೀತಿಗಳಿಂದ ಹೆಚ್ಚು ಪ್ರಸಿದ್ದಿಯನ್ನು ಪಡೆದ ರಾಜ.

ರಜಪೂತರ ಹೆಮ್ಮೆ ಮತ್ತು ಆತ್ಮಗೌರವದ ಸಾಕಾರ ರೂಪವಾಗಿದ್ದ ಪ್ರತಾಪ್ ಶತಮಾನಗಳ ವರೆಗೆ ರಜಪೂತರ ಮಹತ್ವಾಕಾಂಕ್ಷೆಯ ಗುಣಗಳಿಗೆ ದೃಷ್ಟಾಂತವಾಗಿದ್ದನು. ಈತನು 90 ಕಿಲೋ ಗ್ರಾಮ್ ತೂಕದ ಖಡ್ಗವನ್ನು ಬಳಸುತ್ತಿದ್ದ. ಮತ್ತು ಯುದ್ದದಲ್ಲಿ ಎದುರಾಳಿಯ ಕೈಯಲ್ಲಿ ಶಸ್ತ್ರವಿಲ್ಲದಿದ್ದಲ್ಲಿ ಅವರಿಗೆ ತನ್ನದೊಂದು ಖಡ್ಗವನ್ನು ನೀಡಿ ಯುದ್ದವನ್ನು ಮಾಡುತ್ತಿದ್ದ. ಇವನು ತನ್ನ ಶಕ್ತಿ ಸಾಮರ್ಥ್ಯದಿಂದ ಹೆಚ್ಚು ಹೆಸರುವಾಸಿಯಾದ ದೊರೆ.

ಇದನ್ನು ಓದಿ : ತಮಿಳುನಾಡಿನಲ್ಲಿದೆ ಮಾನವ ದೇಹದ ಆಕಾರದ ಚಿದಂಬರಂ ನಟರಾಜ ದೇವಾಲಯ

ಮೊಘಲ್ ರಾಜ ಅಕ್ಬರ್‍

Akbar the greatImage Source : GKIndiatoday.com

ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್ ಹುಮಾಯೂನ್‌ನ ಮಗನಾಗಿ ಮೊಘಲ್ ಸಾಮ್ರಾಜ್ಯದ ದೊರೆಯಾಗಿ 1556ರಿಂದ 1605 ರ ವರೆಗೆ ಆಳಿದನು. ಅಕ್ಬರ್ ಸಿಂಹಾಸನವೇರಿದಾಗ ಕೇವಲ 13 ವರ್ಷ ವಯಸ್ಸು ಮೊಘಲ್ ಸಾಮ್ರಾಜ್ಯದ ಸರ್ವಶ್ರೇಷ್ಠ ದೊರೆಯಾಗಿ ಪರಿಣಿತನಾಗಿದ್ದಾನೆ. ಅಕ್ಬರನು 1556ರಲ್ಲಿ ಸಿಕಂದರ್ ಷಾನೊಂದಿಗೆ ಯುದ್ಧದ ಮಧ್ಯದಲ್ಲಿ ಸಿಂಹಾಸನವನ್ನೇರಿ ಷಹನ್ ಷಾ ಎಂಬ ಬಿರುದನ್ನು ಪಡೆದನು.

ಅಕ್ಬರನು ಸಾಮ್ರಾಜ್ಯ ವಿಸ್ತರಣೆಯ ದೃಷ್ಠಿಯಿಂದ ಅನೇಕ ಯುದ್ದಗಳನ್ನು ಮಾಡಿದನು. ಅದರಲ್ಲಿ ಹಿಂದೂ ದೊರೆ ಹೇಮುವನ್ನು ಕೊಂದು ರಾಜ್ಯ ವಿಸ್ತರಣೆ ಮಾಡಿದುದು ವಿಶೇಷ. ಇನ್ನೂ ಅಕ್ಬರ್ ಧರ್ಮ ಸಹಿಷ್ಣುವಾಗಿ ಹಿಂದೂ, ಕ್ರೈಸ್ತ ಮತ್ತು ಮುಸ್ಲಿಂ ದೊರೆಗಳನ್ನು ತನ್ನ ಆಡಳಿತದ ಅಧಿಕಾರಿಗಳಾಗಿ ನೇಮಿಸಿಕೊಂಡು ಜನಪ್ರಿಯವಾಗಿದ್ದನು.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

About Author