ಸಂವಿದಾನ ಶಿಲ್ಪಿ.. ಭಾರತ ಭಾಗ್ಯ ವಿಧಾತ ಡಾ. ಬಿ.ಆರ್. ಅಂಬೇಡ್ಕರ್ ಹೇಳಿರುವಂತೆ "ಶಿಕ್ಷಣ ಎಂಬುವದು ಹುಲಿ ಹಾಲಿದ್ದಂತೆ ಅದನ್ನ ಕುಡಿದವರು ಘರ್ಜಿಸಲೇಬೇಕು"
ಈ ಮಾತಿಗೆ ಸೂಕ್ತ ಎಂಬಂತೆ ಕಡು ಬಡತನದಲ್ಲೇ ಬೆಂದು ನೊಂದು ಸಾಧನೆ ಮಾಡಿರುವ ಈ ಅವಳಿ ಸಹೋದರ ಸಾಧನೆ ಮಾತ್ರ ಸ್ಫೂರ್ತಿದಾಯಕ.. ಹಾಗಾದ್ರೆ ಏನೂ ಈ ಸಾಧನೆ ಅಂತೀರಾ ಈ ಸ್ಟೋರಿ ನೋಡಿ.
ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಇಟ್ನಳ ಎನ್ನುವ ಒಂದು ಪುಟ್ಟ ಗ್ರಾಮವಿದು, ಈ ಗ್ರಾಮದ ಅಶೋಕ್ ಬಸಲಿಂಗಪ್ಪ ಬೆನ್ನಳ್ಳಿ ಒಬ್ಬ ಬಡ ರೈತ, ತಮಗಿರುವ 6 ಎಕರೆ ಜಮೀನಿನಲ್ಲಿ ಅಶೋಕ ತಮ್ಮ ಮೂವರು ಸಹೋದರರ ಜೊತೆ ಕೃಷಿ ಮಾಡುತ್ತಾ ಕಷ್ಟದಲ್ಲೇ ಬೆಂದು ನೊಂದು ತನ್ನ ಮಕ್ಕಳಾದ
1)ಶಿವಾನಂದ ಅಶೋಕ್ ಬೆನ್ನಳ್ಳಿ
2)ಪ್ರಶಾಂತ್ ಅಶೋಕ್ ಬೆನ್ನಳ್ಳಿ ಇವರಿಗೆ ಕಷ್ಟ ಪಟ್ಟು ಓದಿಸಿ ನೆಟ್ಟಿಗರು ಹುಬ್ಬು ಹಾರಿಸುವಂತೆ ಮಾಡಿದ್ದಾರೆ
ಹೌದು ಮೊನ್ನೆ ನಡೆದ ಪಿಎಸ್ಐ ಪರೀಕ್ಷೆಯಲ್ಲಿ ಈ ಇಬ್ಬರು ಸಹೋದರರು ಮೊದಲ ಪ್ರಯತ್ನದಲ್ಲೆ ಪಿಎಸ್ಐ ಹುದ್ದೆಗೆ ಆಯ್ಕೆಯಾಗುವದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ
You must be logged in to post a comment.