*ಲೆಜೆಂಡ್ಸ್ ಲೀಗ್ ಕ್ರಿಕೆಟ್*
*ಟೇಲರ್, ಜಾನ್ಸನ್ ಅಬ್ಬರ, ಇಂಡಿಯಾ ಕ್ಯಾಪಿಟಲ್ಸ್ಗೆ ಚಾಂಪಿಯನ್ ಪಟ್ಟ*
ಜೈಪುರ, 2022ರ ಅಕ್ಟೋಬರ್ 5: ಭಾರತದಲ್ಲಿಮೊದಲ ಬಾರಿಗೆ ನಡೆಯುತ್ತಿರುವ ಎಸ್ಕೆವೈ 247.ನೆಟ್ (SKY247.net ) ಲೆಜೆಂಡ್ಸ್ ಲೀಗ್ ಕ್ರಿಕೆಟ್ನಲ್ಲಿಇಂಡಿಯಾ ಕ್ಯಾಪಿಟಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇಲ್ಲಿನ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿನಡೆದ ಮನರಂಜನಾ ಫೈನಲ್ ಪಂದ್ಯದಲ್ಲಿಗೌತಮ್ ಗಂಭೀರ್ ನೇತೃತ್ವದ ತಂಡವು 104 ರನ್ಗಳಿಂದ ಭಿಲ್ವಾರಾ ಕಿಂಗ್ಸ್ ತಂಡವನ್ನು ಮಣಿಸಿ ಟ್ರೋಫಿ ಎತ್ತಿಹಿಡಿಯಿತು.
ಮೊದಲು ಬ್ಯಾಟ್ ಮಾಡಿದ ಭಾರತ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ7 ವಿಕೆಟ್ಗೆ ನಷ್ಟಕ್ಕೆ 211 ರನ್ ಗಳಿಸಿತು. ಆರಂಭದಲ್ಲಿ ಎಡವಿದರೂ ನಂತರ ಚೇತರಿಸಿಕೊಂಡು ಎದುರಾಳಿ ತಂಡಕ್ಕೆ ಕಠಿಣ ಸವಾಲು ನೀಡಿತು. ಬಳಿಕ ಗುರಿ ಬೆನ್ನಟ್ಟಿದ ಭಿಲ್ವಾರಾ ಕಿಂಗ್ಸ್ 18.2 ಓವರ್ಗಳಲ್ಲಿಕೇವಲ 107 ರನ್ಗಳಿಗೆ ಆಲ್ಔಟಾಯಿತು. ರಾಸ್ ಟೇಲರ್ (82 ರನ್, 41 ಎಸೆತ) ಮತ್ತು ಮಿಚೆಲ್ ಜಾನ್ಸನ್ (62 ರನ್, 35 ಎಸೆತ) ಕ್ಯಾಪಿಟಲ್ಸ್ ತಂಡದ ಗೆಲುವಿನ ರೂವಾರಿಯಾಗುವುದರ ಜತೆಗೆ ಐದನೇ ವಿಕೆಟ್ಗೆ 126 ರನ್ಗಳ ಜೊತೆಯಾಟವನ್ನು ನಿರ್ವಹಿಸಿ ಗಮನ ಸೆಳೆದರು.
ಮೊರ್ನೆ ವ್ಯಾನ್ ವೈಕ್ (5) ಮತ್ತು ವಿಲಿಯಂ ಪೋರ್ಟರ್ ಫೀಲ್ಡ… (12) ಮೊದಲ ನಾಲ್ಕು ಓವರ್ಗಳಲ್ಲಿವಿಕೆಟ್ ಒಪ್ಪಿಸಿದರು. ಯೂಸುಫ್ ಪಠಾಣ್ (6) ಮೇಲೆ ಸಾಕಷ್ಟು ನಿರೀಕ್ಷೆ ಇರಿಸಲಾಗಿತ್ತು. ಆದರೆ ಅವರು ಹೆಚ್ಚು ಕಾಲ ಉಳಿಯಲಿಲ್ಲ. ಶೇನ್ ವ್ಯಾಟ್ಸನ್ (27) ದುರದೃಷ್ಟಕರ ರನ್ಔಟ್ ಬಲೆಗೆ ಬಿದ್ದರೆ, ಜೆಸಾಲ್ ಕರಿಯಾ (22) ಕೆಲವೊತ್ತು ಭರವಸೆ ಮೂಡಿಸಿದರೂ ಹೆಚ್ಚು ಹೊತ್ತು ಮುಂದುವರಿಯಲು ವಿಫಲಗೊಂಡರು. ಇಂಡಿಯಾ ಕ್ಯಾಪಿಟಲ್ಸ್ ಪರ ಪವನ್ ಸುಯಾಲ್ (27ಕ್ಕೆ 2), ಪಂಕಜ್ ಸಿಂಗ್ (14ಕ್ಕೆ 2) ಮತ್ತು ಪ್ರವೀಣ್ ತಾಂಬೆ (19ಕ್ಕೆ 2) ತಲಾ ಎರಡು ವಿಕೆಟ್ ಪಡೆದರು. ಬ್ಯಾಟಿಂಗ್ ಬಳಿಕ ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿಯೂ ಸಂಘಟಿತ ಪ್ರದರ್ಶನ ನೀಡಿದ ಕಾರಣ ಕ್ಯಾಪಿಟಲ್ಸ್ಗೆ ಸುಲಭ ಗೆಲುವು ದಕ್ಕಿತು.
ಆದರೆ, ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಂತರ ಭಿಲ್ವಾರಾ ಕಿಂಗ್ಸ್ ನಿಜವಾಗಿಯೂ ಉತ್ತಮ ಆರಂಭ ಪಡೆಯಿತು. ಎರಡೂ ತುದಿಗಳಿಂದ ಸ್ಪಿನ್ನರ್ಗಳೊಂದಿಗೆ ಪ್ರಾರಂಭಿಸಿದ ಇರ್ಫಾನ್ ಅವರ ತಂತ್ರವು ಲಾಭವನ್ನು ನೀಡಿತು. ಏಕೆಂದರೆ, ಕ್ಯಾಪಿಟಲ್ಸ್ ಐದನೇ ಓವರ್ ವೇಳೆಗೆ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟ ಎದುರಿಸಬೇಕಾಯಿತು. ಮಾಂಟಿ ಪನೇಸರ್ ಮತ್ತು ರಾಹುಲ್ ಶರ್ಮಾ, ಕ್ಯಾಪಿಟಲ್ಸ್ ತಂಡವನ್ನು 21ಕ್ಕೆ 4 ವಿಕೆಟ್ ಪಡೆದು ತಮ್ಮ ಸ್ಪಿನ್ ಜಾಲವನ್ನು ಪ್ರದರ್ಶಿಸಿದರು. ಆದರೆ ನಂತರ ತಿರುಗೇಟು ನೀಡಿದ ಕ್ಯಾಪಿಟಲ್ಸ್ನ ಟೇಲರ್ ಮತ್ತು ಜಾನ್ಸನ್ ಜೋಡಿ, ಕಿಂಗ್ಸ್ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದರು.
ಪಂದ್ಯದ 9ನೇ ಓವರ್ ಕ್ಯಾಪಿಟಲ್ಸ್ ಇನಿಂಗ್ಸ್ನನ ಟರ್ನಿಂಗ್ ಪಾಯಿಂಟ್ ಆಗಿತ್ತು. ನ್ಯೂಜಿಲೆಂಡ್ನ ಮಾಜಿ ನಾಯಕ ಟೇಲರ್ ಯೂಸುಫ್ ಅವರ ಸ್ಪಿನ್ ಬೌಲಿಂಗ್ನಲ್ಲಿ30 ರನ್ ಗಳಿಸಿ ಪ್ರೇಕ್ಷ ಕರ ಹೃದಯ ಗೆದ್ದರು. ಅವರು ಆ ಓವರ್ನಲ್ಲಿನಾಲ್ಕು ಸಿಕ್ಸರ್ಗಳು ಮತ್ತು ಒಂದು ಬೌಂಡರಿ ಗಳಿಸಿದರು. 17ನೇ ಓವರ್ನಲ್ಲಿ ಟೇಲರ್ ಔಟಾದರೆ, ಆ್ಯಶ್ಲೇ ನರ್ಸ್ (19 ಎಸೆತಗಳಲ್ಲಿ42 ರನ್) ನಂತರ ಡೆತ್ ಓವರ್ಗಳಲ್ಲಿ ಉತ್ತಮ ಆಟವಾಡಿ ಕ್ಯಾಪಿಟಲ್ಸ್ ತಂಡವನ್ನು 200ರ ಗಡಿ ದಾಟಿಸಿದರು. ಇದು ತಂಡದ ಗೆಲುವಿಗೆ ನೆರವಾಯಿತು.
You must be logged in to post a comment.