'ಲವ್‌ ಜಿಹಾದ್' ವಿರುದ್ಧ ರಾಷ್ಟ್ರವ್ಯಾಪಿ ಕಾನೂನನ್ನು ಜಾರಿಗೊಳಿಸಿ! - ಮಹಂತ್‌ ಯತಿ ಮಾಂ ಚೇತನಾನಂದ ಸರಸ್ವತಿ

ಹಿಂದೂ ಯುವತಿಯರು ಮತ್ತು ಮಹಿಳೆಯರ ವಿರುದ್ಧ ಕಳೆದ 1400 ವರ್ಷಗಳಿಂದ ಜಿಹಾದ್‌ ನಡೆಸಲಾಗುತ್ತಿದೆ. ಹಿಂದೂ ಯುವತಿಯರನ್ನು ಮೋಡಿ ಮಾಡಿ 'ಲವ್‌ ಜಿಹಾದ್' ಬಲೆಗೆ ಬೀಳಿಸಲಾಗುತ್ತಿದೆ. ಅವರನ್ನು ಮದುವೆಯಾದ ನಂತರ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಈಗಂತೂ ಇದು ಮಿತಿ ಮೀರಿದೆ. 'ಲವ್‌ ಜಿಹಾದ್' ಅಡಿಯಲ್ಲಿ ಇತ್ತೀಚೆಗೆ ನಡೆದ ನಿಕಿತಾ ತೋಮರ್‌ ಮತ್ತು ತನಿಷ್ಕಾ ಶರ್ಮಾ ಹತ್ಯೆಗಳು ಜಿಹಾದಿಗಳ ಮನೋಧೈರ್ಯವನ್ನು ಹೆಚ್ಚಿಸುತ್ತಿವೆ. ಹಿಂದೂ ಯುವತಿಯರು ಮತ್ತು ಮಹಿಳೆಯರ ವಿಷಯದಲ್ಲಿ, 'ಲವ್‌ ಜಿಹಾದ್' ಕೇವಲ, ಒಂದು ರಾಜ್ಯದ ಸಮಸ್ಯೆಯಾಗಿರದೆ ರಾಷ್ಟ್ರೀಯ ಸಮಸ್ಯೆಯಾಗಿದೆ. ಹೀಗಾಗಿ ದೇಶಾದ್ಯಂತ 'ಲವ್‌ ಜಿಹಾದ್' ವಿರುದ್ಧ ಕಾನೂನು ಜಾರಿಯಾಗಬೇಕು ಎಂದು ಗಾಜಿಯಾಬಾದ್‌ ನ ಡಾಸನಾ ದೇವಿ ದೇವಸ್ಥಾನದ ಮಹಂತ್‌ ಯತಿ ಮಾಂ ಚೇತನಾನಂದ ಸರಸ್ವತಿಯವರು ಆಗ್ರಹಿಸಿದ್ದಾರೆ. ಅವರು 'ಲವ್‌ ಜಿಹಾದ್: ಹಿಂದೂ ಸೊಸೆ ಬೇಕು, ಆದರೆ ಹಿಂದೂ ಅಳಿಯ ಬೇಡ' ಎಂಬ ವಿಷಯದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ 'ಆನ್‌ ಲೈನ್' ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಮಹಂತ್‌ ಯತಿ ಮಾಂ ಚೇತನಾನಂದ ಸರಸ್ವತಿಯವರು ಮಾತನಾಡುತ್ತಾ, 'ಹಿಂದೂ ಪೋಷಕರು ತಮ್ಮ ಮಕ್ಕಳಿಗೆ 'ವಿವಾಹ' ಮತ್ತು 'ನಿಕಾಹ' ನಡುವಿನ ವ್ಯತ್ಯಾಸವನ್ನು ಕಲಿಸಿಲ್ಲ. ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾಗಿ ಹತ್ಯೆಗೀಡಾದ ಘಟನೆಗಳು ಸಾಕಷ್ಟು ನಡೆದಿವೆ. ಈಗ ಹಿಂದೂಗಳು ಕೇವಲ ರಕ್ಷಣಾತ್ಮಕ ನಿಲುವನ್ನು ತಾಳಿ ಇರುವುದನ್ನು ಬಿಟ್ಟು ತಮ್ಮ ಯುವತಿಯರ ಪ್ರತ್ಯಕ್ಷ ರಕ್ಷಣೆ ಮಾಡಲು ಪ್ರಯತ್ನಿಸಬೇಕಾಗಿದೆ', ಎಂದರು.

ಸನಾತನ ಸಂಸ್ಥೆಯ ವಕ್ತಾರರಾದ ಕು. ಕೃತಿಕಾ ಖತ್ರಿಯವರು ಮಾತನಾಡುತ್ತಾ, 'ಹಿಂದೂ ಸಂಪ್ರದಾಯದಲ್ಲಿ ಮದುವೆಯ ನಂತರ ಹಿಂದೂ ಮಹಿಳೆಯರಿಗೆ 'ಅರ್ಧಾಂಗಿನಿ'ಯ ಸ್ಥಾನಮಾನ ನೀಡಲಾಗುತ್ತದೆ. 'ಲವ್‌ ಜಿಹಾದ್' ಒಂದು ಷಡ್ಯಂತ್ರವಾಗಿದ್ದು, ಹಿಂದೂ ಯುವತಿಯರನ್ನು ಇದರಿಂದ ರಕ್ಷಿಸಬೇಕಾಗಿದೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ತಮ್ಮ ಹೆಣ್ಣು ಮಕ್ಕಳಿಗೆ ಧರ್ಮಶಿಕ್ಷಣ ನೀಡಿ ಸರಿಯಾದ ಸಂಸ್ಕಾರ ನೀಡಬೇಕು. ಕಳೆದು ಹೋದ ನಮ್ಮ ಸಮತೋಲನವನ್ನು ಸಾಧನೆಯಿಂದ ಮರಳಿ ಪಡೆಯಬಹುದು. ಹಿಂದೂ ಯುವತಿಯರಿಗೆ ನಮ್ಮ ಹಿಂದೂ ಧರ್ಮದ ಬಗ್ಗೆ ಕಲಿಸದಿದ್ದರೆ ಧರ್ಮಾಭಿಮಾನಶೂನ್ಯ ಹಿಂದೂ ಯುವತಿಯರನ್ನು ಮೋಡಿ ಮಾಡಿ ಯಾರು ಬೇಕಾದರೂ ಒಡಿಸಿಕೊಂಡು ಹೋಗುವರು. 'ಇಸ್ಲಾಂ' ಎಂದರೇನು? ಅದರಲ್ಲಿ ಮಹಿಳೆಯರಿಗೆ ಯಾವ ಸ್ಥಾನಮಾನವಿದೆ ?' ಇದನ್ನೂ ಇದನ್ನು ಸಹ ನಮ್ಮ ಯುವತಿಯರಿಗೆ ಹೇಳಬೇಕಾಗಿದೆ, ಎಂದರು.
'ಲವ್‌ ಜಿಹಾದ್' ಭಾರತದ ಜನಗಣತಿಯ ಸಮತೋಲನವನ್ನು ಹಾಳು ಮಾಡುತ್ತಿದೆ ! - ಶ್ರೀ. ಸಮೀರ ಚಾಕು
'ಲವ್‌ ಜಿಹಾದ್' ಎಂದರೆ ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸಲು ಒಂದು ಸಮುದಾಯದ ಸಂಚು. ಈ ಷಡ್ಯಂತ್ರದಲ್ಲಿ ಮುಸ್ಲಿಮ್‌ ಯುವಕರು ಹಿಂದೂ ಯುವಕರಂತೆ ನಟಿಸಿ ಹಿಂದೂ ಯುವತಿಯರನ್ನು ವಂಚಿಸುತ್ತಿದ್ದಾರೆ. ಹಿಂದೂ ಹುಡುಗಿಯು ಷರಿಯಾ ಕಾನೂನಿನ ಪ್ರಕಾರ ಮುಸ್ಲಿಂ ಯುವಕನೊಂದಿಗೆ 'ನಿಕಾಹ' ಮಾಡಿಕೊಳ್ಳಲೇಬೇಕಾಗುತ್ತದೆ. ಈ 'ನಿಕಾಹಾ'ದ ನಂತರ ಆ ಮಹಿಳೆಗೆ ಯಾವುದೇ ಆಸ್ತಿ ಅಥವಾ ಇತರ ಹಕ್ಕುಗಳು ಸಿಗುವುದಿಲ್ಲ ಎಂಬುದನ್ನು ಗಮನಿಸಬೇಕು. ಹಿಂದೂ ಯುವತಿಯರೊಂದಿಗೆ 'ನಿಕಾಹ' ಮಾಡಿಕೊಂಡ ನಂತರ ಅವರಿಗೆ ಚಿತ್ರಹಿಂಸೆ ನೀಡಿ ಅವರನ್ನು ಹತ್ಯೆ ಮಾಡಲಾಗುತ್ತದೆ, ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ, ಇಂತಹ ಹಲವು ಘಟನೆಗಳು ಬೆಳಕಿಗೆ ಬಂದಿವೆ. 'ಲವ್‌ ಜಿಹಾದ್' ಭಾರತದ ಜನಗಣತಿಯ ಸಮತೋಲನವನ್ನು ಹಾಳು ಮಾಡುತ್ತಿದೆ ಎಂದು 'ದ ಲೀಗಲ್‌ ಹಿಂದೂ' ಇದರ ಸಹಸಂಸ್ಥಾಪಕರು ಹಾಗೂ ರಾಷ್ಟ್ರೀಯ ಸಮನ್ವಯಕರಾದ ಶ್ರೀ. ಸಮೀರ ಚಾಕು ಈ ವೇಳೆ ಹೇಳಿದರು.

ತಮ್ಮ ಸವಿನಯ
ಶ್ರೀ. ರಮೇಶ ಶಿಂದೆ,
ರಾಷ್ಟ್ರೀಯ ವಕ್ತಾರರು,ಹಿಂದೂ ಜನಜಾಗೃತಿ ಸಮಿತಿ (ಸಂ : 99879 66666)

Enjoyed this article? Stay informed by joining our newsletter!

Comments

You must be logged in to post a comment.

Related Articles
About Author