ವಿವಾಹಕ್ಕೆ ಪೋಷಕರು ಹಾಕಿದ ಕಂಡೀಷನ್ ಗೆ ಬೇಸತ್ತ ಪ್ರೇಮಿಗಳು ಲಾಡ್ಜ್ ಒಂದರಲ್ಲಿ ನೇಣಿಗೆ ಶರಣಾಗಿದ್ದಾರೆ.ಮೈಸೂರಿನ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್ ನಲ್ಲಿ ಘಟನೆ ನಡೆದಿದೆ.ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ
ಬಿಜಿ.ಸತೀಶ್ (21), ಬಿಜಿ.ವರಲಕ್ಷ್ಮಿ (20 )ಮೃತ ಪ್ರೇಮಿಗಳು.
ಲಾಡ್ಜ್ನಲ್ಲಿ ಸೀಲಿಂಗ್ ಕೊಕ್ಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 4 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ಜೋಡಿ ದುರಂತ ಅಂತ್ಯ ಕಂಡಿದೆ. ಸರ್ಕಾರಿ ಕೆಲಸದ ದೊರೆತ ನಂತರ ಮದುವೆ ಮಾಡುವುದಾಗಿ ಹುಡುಗಿ ಮನೆಯವರು ಭರವಸೆ ಕೊಟ್ಟಿದ್ದರೆಂದು ಹೇಳಲಾಗಿದೆ.
ಬಿಎ ಓದಿದ್ದ ಸತೀಶ್, ಪೊಲೀಸ್ ಕೆಲಸಕ್ಕೆ ಯತ್ನ ಮಾಡುತ್ತಿದ್ದ. ನರ್ಸಿಂಗ್ ಓದುತ್ತಿದ್ದ ವರಲಕ್ಷ್ಮೀ ಪರಸ್ಪರ ಪ್ರೀತಿಸುತ್ತಿದ್ದರು. ಕೆಲಸದ ನಂತರ ಮದುವೆ ಮಾಡುವುದಾಗಿ ಹುಡುಗಿ ತಂದೆ ಸಿದ್ದಲಿಂಗ ನಾಯ್ಕ ಕಂಡೀಷನ್ ಹಾಕಿದ್ದರು. ಪೊಲೀಷಕರ ನಡೆಗೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment.