ಬೆಳಗಾವಿ : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಐಇಸಿ ಚಟುವಟಿಕೆ ಕ್ರಿಯಾಯೋಜನೆ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳ ಬಣ್ಣ ಹಾಗೂ ಗೋಡೆ ಬರಹಗಳ ಕಾಮಗಾರಿಗಳಿಗೆ ವಂಚನೆ ಖಂಡಿಸಿ ಗೋಡೆ ಬರಹ ಕಲಾವಿದರು ಸೋಮವಾರ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆಯನ್ನು ನಡೆಸಿದರು. ಬಣ್ಣ ಹಾಗೂ ಗೋಡೆ ಬರಹ ಕಲಾವಿದರು ನಾವುಗಳು ಬೆಳಗಾವಿ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ನಿರ್ಮಿತಿ ಕೇಂದ್ರ ಬೆಳಗಾವಿ ಇರುವ ಕೆಲಸವನ್ನು ಕೊಟ್ಟಿದ್ದಾರೆ. ಪ್ರಾಥಮಿಕ ಶಾಲಾ ಕಟ್ಟಡಗಳ ಮೇಲೆ ನಾವುಗಳು ಬಣ್ಣ ಹಾಗೂ ಗೋಡೆ ಬರಹವನ್ನು ಬರೆದುಕೊಂಡು ನಮ್ಮ ಜೀವನವನ್ನು ನಡೆಸುತ್ತಿದ್ದೇವೆ. ಆದರೆ ಗೋಡೆ ಬರಹ ಕಾಮಗಾರಿಗೆ 4.48 ಲಕ್ಷ ರೂ ಅನುದಾನ ನಿರ್ಮಿತಿ ಕೇಂದ್ರವು ನೀಡಿ, ಕಲಾವಿದರಿಗೆ ಅತೀ ಕಡಿಮೆ ಹಣದಲ್ಲಿ ಕೆಲಸ ಕೊಟ್ಟು ಕಳಪೇ ಮಟ್ಟದ ಕಾಮಗಾರಿ ಮಾಡಿಸುತ್ತಿರುವುದನ್ನು ಪ್ರತಿಭಟನೆಯಲ್ಲಿ ಆರೋಪಿಸಿದರು. ಇದರಿಂದಾಗಿ ಕಲಾವಿದರಿಗೆ ಅನ್ಯಾಯ ವಾಗುತ್ತಿದೆ. ಈ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಮಾಡಿಕೊಂಡರು.
You must be logged in to post a comment.