ಮೇಕಪ್ ದುನಿಯಾದ ಹಿಂದಿರುವ ಕತ್ತಲೆ ಸತ್ಯ

ಮೇಕಪ್ ದುನಿಯಾದ ಹಿಂದಿರುವ ಕತ್ತಲೆ ಸತ್ಯ

makeup artist lifeFeatured Image Source : smithsonianmagazine

ಜನರು ಏನೇ ಹೇಳಲಿ ಆದರೆ ಬ್ಯೂಟಿ ಇಸ್ ಓನ್ಲಿ ಸ್ಕಿನ್ ಡೀಪ್ ಆಗಂದರೆ ಸೌಂದರ್ಯವು ಚರ್ಮದ ಚಂದಕ್ಕೆ ಮಾತ್ರ ಅದು ಬಿಟ್ಟು  ಮನಸ್ಸಿಗು ಚರ್ಮದ ಒಳಪಿಗು ಏನು ಸಂಬಂದ ಇಲ್ಲ ಎಂದು,ಆದರೆ ನಿಜ ಏನಂದರೆ,ನಮ್ಮ ಅಕ್ಕ-ಪಕ್ಕ ಯಾರಾದರು ಸುಂದರ ಹುಡುಗಿ-ಹುಡುಗ ಹೋದರೆ ನಮಗೆ ಗೊತ್ತಿದ್ದೊ, ಗೊತ್ತಿಲ್ಲದೆಯೊ ನಾವು ಅವರ ಕಡೆ ತಿರುಗಿ ನೋಡುತ್ತೇವಿ,ಹಾಗೆ ಒಂದು ರಿಸರ್ಚ್‍ನ ಪ್ರಕಾರ ಹೀಗು ಸಾಭೀತಾಗಿದೆ ಅದು ಏನಂದರೆ,ಕೆಲಸದ ಪ್ರಮೋಷನಿಗು,ಇಂಟರ್ಯೂಗು ಅಷ್ಟೇ ಅಲ್ಲ ಸ್ನೇಹಿತರನ್ನು ಮಾಡಿಕೊಳ್ಳೋದರಲ್ಲಿ ಕೂಡ ಬ್ಯೂಟಿ ತುಂಬ ಮಹತ್ವದ ಸ್ಥಾನ ಪಡೆಯುತ್ತದೆ,ಅಷ್ಟೇ ಅಲ್ಲದೆ ಸ್ವಂತ ತಂದೆ-ತಾಯಿಯರೆ ಕೆಲವು ಸಲ ತಮ್ಮ ಸುಂದರ ಮಗುವನ್ನು ತಮ್ಮ ಕಮ್ಮಿ ಸುಂದರ ಮಗುವಿಗಿಂತ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

 

ಸುಂದರವಾಗಿ ಕಾಣುವುದರಿಂದ ಇಷ್ಟೆಲ್ಲ ಪ್ರಯೋಜನ ಇದೆ ಅಂದರೆ ಅದು ಹೆಮ್ಮೆಯ ವಿಷಯವೆ,ನಾವೆಲ್ಲರು ಸುಂದರವಾಗಿ ಕಾಣಿಸಬೇಕೆಂದು ಕೊಳ್ಳುತ್ತೇವೆ,ಅದರಲ್ಲು ಈಗ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ತಾವು ಸುಂದರವಾಗಿ ಕಾಣ ಬೇಕೆಂದು ತುಂಬಾ ಹಣವನ್ನು ಖರ್ಚು ಮಾಡುತ್ತಾರೆ,ಆದರೆ ನೀವು ಈ ಮೇಕಪ್ ಪ್ರಾಡೆಕ್ಟ್‍ಗಳನ್ನು ಖರೀದಿಸುವಾಗ ಆದರ ಬೆಲೆಗಿಂತ ಅದರ ಇಂಗ್ರಿಡಿಯನ್ಸ್ ಅನ್ನು ಯಾವತ್ತಾದರು ಪರಿಶೀಲಿಸಿ ನೋಡಿದ್ದೀರ,ಒಂದು ವೇಳೆ ನೀವು ಅದನ್ನು ನೋಡುತ್ತಿಲ್ಲ ಅಂದರೆ ಇಂದಿನ ಈ ವೀಡಿಯೋವನ್ನು ನೀವು ಪೂರ್ತಿಯಾಗಿ ನೋಡಿ,ನಂತರ ತುಂಬಾ ಪಾಪುಲರ್ ಹಾಗು ನಿಮ್ಮ ಫೇವರೇಟ್ ಬ್ಯೂಟಿ ಪ್ರೋಡಕ್ಟ್ ಖರೀದಿಸುವ ಮುನ್ನ ನೂರು ಬಾರಿ ಯೋಚಿಸುತ್ತೀರ.

makeup items Image Source : BSBP

ನೀವು ಕೂಡ ಆ ದುಃಖಿತ ಪತಿ ಅಥವಾ ಬಾಯ್‍ಫ್ರೆಂಡ ಒಬ್ಬರೆ ಗಂಟೆಗಟ್ಟಲೆ ಸೋಫ ಮೇಲೆ ಕಾಯುತ ಕುಳಿತು ನಿಮ್ಮ ಹೆಂಡತಿ ಅಥವಾ ಗರ್ಲ್‍ಫ್ರೆಂಡ್‍ನ ಮೇಕಪ್‍ನ ರೋಟಿನ್ ಮುಗಿಯುವ ತನಕ ಕಾಯುತ್ತಿರುವವರೆ, ಆದರೆ ಸ್ನೇಹಿತರೆ ಈ ದುಃಖದ ವಿಷಯ ಏನಂದರೆ ಇದು ಈಗಿನಿಂದಲ್ಲ ಸಾವಿರಾರು ವರ್ಷಗಳಿಂದ ಗಂಡಸರಿಗೆ ಕಾಡುತ್ತಲೆ ಇದೆ,ಈಜಿಪ್ಟ್ ಅಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದಲೆ ಅಲ್ಲಿನ ಮಹಿಳೆಯರು ಸುಂದರವಾಗಿ ಕಾಣಲು ಮೇಕಪ್‍ಗಳನ್ನು ಬಳಸುತ್ತಿದ್ದರು, ಆದರೆ ಅವರ ಈ ಮೇಕಪ್  ಈಗಿನ ಕಾಲದಲ್ಲಿ ಸಿಗುವ ಅನೈಸರ್ಗಿಕ ಕೆಮಿಕಲ್ ಅಲ್ಲ ಬದಲಿಗೆ ನೈಸರ್ಗಿಕವಾಗಿ ಪ್ರಕೃತಿಯಲ್ಲಿ ಸಿಕ್ಕ ಗಿಡ ಮೂಲಿಕೆಗಳಿಂದ ಸಿದ್ದ ಪಡಿಸಿರುವುದು ಮತ್ತು ಅದನ್ನು ತಯಾರಿಸುವುದಕ್ಕೆ ಯಾವುದೇ ಅಮಾಯಕ ಮಕ್ಕಳುಗಳ ಶೋಷಣೆ ಆಗುತ್ತಿರಲಿಲ್ಲ.

ಇದನ್ನು ಓದಿ : ನೈಸರ್ಗಿಕವಾದ ನೈಲ್ ಪಾಲಿಶ್ ಸಿದ್ಧಪಡಿಸುವುದು ಹೇಗೆ ಗೊತ್ತಾ..?

ಇಂದು ಬ್ಯೂಟಿ ಇಂಡಸ್ಟ್ರಿ, ಒಂದು ಮಲ್ಟಿ ಮಿಲಿಯನ್ ಇಂಡಸ್ಟ್ರಿ ಆಗಿದೆ,ಅದು ಅದರ ಶೈನ್ ಹಾಗು ಬ್ಯೂಟಿಯ ಹಿಂದೆ ಒಂದು ಭಯಾನಕ ಸತ್ಯ ಮುಚ್ಚಿಟ್ಟಿದೆ,ಕ್ಲಾಸಿ ಲಿಪ್ಸ್ಟಿಕ್ ಇಂದ ಐ ಲೈನರ್‍ಗಳ ವರೆಗೆ ಈ ತರಹ ಹಲವು ಪ್ರಡಕ್ಟ್‍ಗಳಿವೆ,ಇದರಿಂದ ನೀವು ನಿಮ್ಮ ಚರ್ಮದ ಮೇಲೆ ಬಂಗಾರದಂತಹ ಚೆಲುವನ್ನು ಮೂಡಿಸ ಬಹುದು,ಆದರೆ ನೀವು ಯಾವತ್ತಾದರು ಯೋಚಿಸಿದ್ದೀರ ಈ ಮೇಕಪ್ ಪ್ರಡಕ್ಟ್ ಬಳಿಸಿದಾಗ ಬರುವ ಆ ಚೆಲುವು ಆ ಶೈನ್ ಹೇಗೆ ಬರುತ್ತದೆ ಎಂದು,ಸ್ನೇಹಿತರೆ ಈ ಪ್ರಶ್ನೆಗೆ ಉತ್ತರ "ಮೈಕ", ಮೈಕ ಒಂದು ನೈಸರ್ಗಿಕ ಖನಿಜ,ಇದು ಮೇಕಪ್ ಪ್ರಡಕ್ಟ್‍ಗಳಿಂದ ಹಿಡಿದು ಕಾರಿನ ಪೈಂಟ್‍ಗಳ ವರೆಗು ಇದನ್ನು ಬಳಸುಲಾಗುತ್ತದೆ.

 

ಪ್ರಪಂಚಕೆ ಅತೀ ಹೆಚ್ಚು ಮೈಕ ಪ್ರೊಡ್ಯೂಸ್ ಮಾಡುವ ದೇಶ ಭಾರತವಾಗಿದೆ,ಮತ್ತು ಕಾಸ್ಮೆಟಿಕ್ ಇಂಡಸ್ಟ್ರಿಗಳು ತಮ್ಮ ಮೇಕಪ್ ಪ್ರಡಕ್ಟ್‍ಗಳಿಗೆ ಅತೀ ಹೆಚ್ಚು ಮೈಕ ಖನಿಜಗಳನ್ನು ಭಾರತದಿಂದಲೆ ಆಮದು ಮಾಡಿಕೊಳ್ಳುತ್ತವೆ,ಭಾರತದ ಬಿಹಾರ,ರಾಜಸ್ಥಾನ,ಆಂಧ್ರಪ್ರದೇಶ ಮತ್ತು ಜಾರ್ಖಾಂಡ್‍ಗಳಲ್ಲಿ ಮೈಕ ಅತೀ ಹೆಚ್ಚಾಗಿ ದೊರಕುತ್ತದೆ, ಇನ್ನೂ ಹೇಳ ಬೇಕೆಂದರೆ ಇಡೀ ಪ್ರಪಂಚದಲ್ಲಿ ದೊರಕುವ ಮೈಕಗಳಲ್ಲಿ 60%ರಷ್ಟು ಭಾಗ ಮೈಕ ನಮ್ಮ ದೇಶದ ಕೇವಲ ಎರಡು ರಾಜ್ಯಗಳಿಂದ ದೊರಕ್ಕುತ್ತದೆ,ಆ ಎರಡು ರಾಜ್ಯಗಳು ಯಾವುದೆಂದರೆ ಬಿಹಾರ ಹಾಗು ಜಾರ್ಖಾಂಡ್,ಈ ಎರಡು ರಾಜ್ಯಗಳು ಇಡೀ ಪ್ರಪಂಚಕೆ ಅಷ್ಟರ ಮಟ್ಟಿನ ಮೈಕ ಖನಿಜಗಳನ್ನು ಸರಬರಾಜು ಮಾಡುತ್ತದೆ.ಮತ್ತು ಇದನ್ನು "ಮೈಕ ಬೆಲ್ಟ್" ಎಂದು ಕೂಡ ಕರೆಯುತ್ತಾರೆ,ಏಕೆ ಎಂದರೆ ಅತೀ ಹೆಚ್ಚು ಮೈಕ ಮೈನಿಂಗ್ ಈ ರಾಜ್ಯದಲ್ಲಿ ಮಾಡಲಾಗುತ್ತಿದೆ,ಮೈಕ ಕೇವಲ ಈಗಿನಿಂದಲ್ಲ ಸಾವಿರಾರು ವರ್ಷಗಳ ಹಿಂದೆ ಇಂದಲು ನಮ್ಮ ಪೂರ್ವಜರು ಆಯುರ್ವೇದ ಔಷಧಿಗಳಲ್ಲಿ ಇದನ್ನು ಬೆರೆಸಿ ಬಳಸುತ್ತಿದ್ದರು,ಆದರೆ ಇದರ ಮೈನಿಂಗ್ ಹಾಗೂ ಎಕ್ಸ್‍ಟ್ರಾಕ್ಷನ್ ಪ್ರೋಸಸ್ ಪರಿಸರಕ್ಕೆ ಹಾನಿಕರ ಆಗಿದೆ,ಅದಕ್ಕಾಗಿ ಭಾರತ ಸರ್ಕಾರ 1980ರಲ್ಲಿ ಇದರ ಮೈನಿಂಗ್ ಅನ್ನು ಅಕ್ರಮ ಎಂದು ಘೋಷಿಸಿ ಬ್ಯಾನ್ ಮಾಡಲಾಗಿದೆ,ಆದರೆ ಈಗಲೂ ಕೂಡ ನಮ್ಮ ದೇಶದ ಈ ಎರಡು ರಾಜ್ಯಗಳಲ್ಲಿ ಇರುವ ಕಡು ಬಡವರು ತಮ್ಮ ಹೋಟ್ಟೆ ಪಾಡಿಗಾಗಿ ಈ ಮೈಕ ಬೆಲ್ಟ್‍ಗಳಲ್ಲಿ ಮೈಕ ಮಾಫಿಯಾಗಳ ಜೊತೆಗೆ ಕೂಲಿ ಕೆಲಸ ಮಾಡುತ್ತಿದ್ದಾರೆ,ಇಲ್ಲಿನ ಜನರಿಗೆ ಈ ಉದ್ಯೋಗ ಬಿಟ್ಟು ಬೇರೆ ಯಾವುದಾದರು ಕೆಲಸ ಮಾಡೋಣ ಎಂದರೆ ಅಲ್ಲಿ ಯಾವ ಕಾರ್ಖಾನೆಗಳು ಮತ್ತು ಬೇರೆ ಯಾವ ಸವಲತ್ತುಗಳಿಲ್ಲ, ಆದ್ದರಿಂದ ತಮ್ಮ ಹೊಟ್ಟೆ ಪಾಡಿಗಾಗಿ ಈ ಕೆಲಸವನ್ನು ಮಾಡಲೇ ಬೇಕಾದ ಪರಿಸ್ಥಿತಿ ಅವರದು.

mica mining by childrenImage Source : Dressember

ಆದರೆ ಎಷ್ಟೋ ಜನರಿಗೆ ಈ ವಿಷಯದ ಬಗ್ಗೆ ತಿಳಿದಿಲ್ಲ,ಅದೇನಂದರೆ ಮೈಕ ಮೈನಿಂಗ್ ಪ್ರೊಸೆಸ್ಸಿಗೆ ಅತೀ ಹೆಚ್ಚಾಗಿ ಚಿಕ್ಕ ಮಕ್ಕಳನ್ನು ಬಳಸಿಕೊಳ್ಳಲಾಗುತ್ತದೆ,ಏಕೆಂದರೆ ಭೂಮಿಯ ಒಳಗೆ ಇರುವ ಈ ಮೈಕಗಳ ಗುಂಡಿಯಲ್ಲಿ ಚಿಕ್ಕ ಮಕ್ಕಳು ಸುಲಭವಾಗಿ ಒಳಗೆ ನುಸಳಿ ಹೆಚ್ಚು ಮೈಕ ಅದಿರುಗಳನ್ನು ತರ ಬಹುದಾಗಿದೆ,ಇದಕ್ಕಾಗಿ ಈ ಮೈಕ ಇಂಡಸ್ಟ್ರಿ ಬಾಲಕಾರ್ಮಿಕರ ಮೇಲೆ ಅವಲಂಭಿತವಾಗಿದೆ,ಈ ಚಿಕ್ಕ ಮಕ್ಕಳು ಒಂದು ಮಂಕ್ರಿ(ಬುತ್ತಿ) ಮತ್ತು ಚಪ್ಪಲಿ ಹಾಕಿಕೊಂಡು ಯಾವುದೆ ಸುರಕ್ಷಿತ ಕ್ರಮವನ್ನು ಬಳಸದೆ ಆ ಭಯಾನಕ ಗುಂಡಿಗಳ ಒಳಗೆ ತಮ್ಮ ಜೀವವನ್ನು ಪಣಕಿಟ್ಟು ಮೈಕಗಳನ್ನು ತರುತ್ತಾರೆ,ಮಕ್ಕಳ ಕಾನೂನಿನ ಪ್ರಕಾರ 14 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ತೆಗೆದು ಕೊಳ್ಳುವುದು ಕಾನೂನು ಪ್ರಕಾರ ಅಪರಾದವಾಗಿದೆ,ಆದರೆ ಇಲ್ಲಿ ಕೇವಲ ಐದು ವರ್ಷದ ಮಕ್ಕಳು ಕೂಡ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ತನಕ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಈ ಭಯಾನಕ ಗುಂಡಿಯ ಒಳಗೆ ಮೈಕ ಮೈನಿಂಗ್ ಕೆಲಸ ಮಾಡುತ್ತಾರೆ,ಅದು ಕೇವಲ 20-30 ರೂಪಾಯಿಗೆ.ಮೈಕ ಮೈನಿಂಗ್‍ನ ಪ್ರೊಸಸ್ ತುಂಬಾ ಅಪಾಯಕಾರಿ ಆಗಿದೆ,ಯಾಕೆಂದರೆ ಈ ಮೈಕ ಗಣಿಗಾರಿಕೆಯಲ್ಲಿ ಯಾವುದೇ ಮುಂಜಾಗೃತೆ ಕ್ರಮ ಕೈ ಗೊಳ್ಳದೆ ಮಕ್ಕಳನ್ನು ಆಳವಾದ ಗುಂಡಿಗಳಲ್ಲಿ ಇಳಿಸುತ್ತಾರೆ,ಆ ಗುಂಡಿಯ ಮಣ್ಣು ಹಾಗೂ ಕಲ್ಲುಗಳು ಯಾವಾಗ ಬೇಕಿದ್ದರು ಕುಸಿದು ಬಿದ್ದು ಈ ಮಕ್ಕಳ ಮೇಲೆ ಬೀಳ ಬಹುದು, ಆಗ ಜೀವ ಕೂಡ ಹೋಗ ಬಹುದು ಅಥವಾ ಒಂದು ಪಕ್ಷ ಜೀವ ಉಳಿದರು ಆ ಮಗು ಕೈ-ಕಾಲು ಕಳೆದು ಕೊಂಡು ವಿಕಲಚೇತನ ಆಗುವುದಂತು ಗ್ಯಾರಂಟಿ,ಇನ್ನೂ ಕೆಲವು ಮಕ್ಕಳು ಆಳವಾದ ಗುಂಡಿಯಲ್ಲಿ ಉಸಿರು ಎಳೆಯಲು ಸಾಧ್ಯವಾಗದೆ ಅಲ್ಲೆ ಕುಸಿದು ತಮ್ಮ ಪ್ರಾಣ ಬಿಡುತ್ತಾರೆ,ಮಕ್ಕಳ ಕೈಯಲ್ಲಿ ಗಣಿಗಾರಿಕೆಯ ಕೆಲಸ ಮಾಡಿಸುವುದು ಕಾನೂನು ಬಾಹಿರ ಆದ್ದರಿಂದ ಇಲ್ಲಿ ಯಾವುದೇ ಮಗು ಸತ್ತರು ಅದನ್ನು ಯಾರಿಗು ತಿಳಿಯದ ಹಾಗೆ ಮುಚ್ಚಿ ಬಿಡುತ್ತಾರೆ,ಮತ್ತು ಆ ಮಗುವಿನ ಪೋಷಕರಿಗೆ 20-30 ಸಾವಿರ ಕೊಟ್ಟು ಬಾಯಿ ಮುಚ್ಚಿಸುತ್ತಾರೆ ಮತ್ತು ಈ ಮೈಕ ಗಣಿಗಾರಿಕೆಯ ಸಮಯದಲ್ಲಿ ಬರುವ ಧೂಳಿನಿಂದ ಮಕ್ಕಳಿಗೆ ಶ್ವಾಶಕೋಶದ ಕ್ಯಾನ್ಸರ್ ಬರುತ್ತದೆ,ಹಾಗೆ ಈ ಧೂಳಿನಿಂದ ಮಕ್ಕಳ ಕಣ್ಣುಗಳಿಗು ತಂಬಾ ತೊಂದರೆ ಹಾಗಿ ಹಲವು ಮಕ್ಕಳು ಕಣ್ಣು ಕಳೆದು ಕೊಂಡಿದ್ದಾರೆ,ಇವರ ದೈನಂದಿನ ಜೀವನ ಬೆಳಗ್ಗಿನಿಂದ ಸಂಜೆಯ ವರೆಗು ಇಂತಹ ಅಪಾಯಕಾರಿ ಗಣಿಗಳಲ್ಲಿ ದುಡಿಯ ಬೇಕಾಗಿದೆ ಅದು ಕೂಡ ಅವರ ಹಸಿವು ಹಾರಿಸಲು,ಇವರ ಜೀವನ ಕಷ್ಟ ಮತ್ತು ದುಃಖದಿಂದ  ತುಂಬಿದೆ ಅದಕ್ಕೆ ಕಾರಣ ನಿಮ್ಮ ಆ ಲಿಪ್ಸ್‍ಟಿಕ್ ಪ್ರಡಕ್ಟ್‍ಗಳು.

ಇದನ್ನು ಓದಿ : ಲಿಪ್ ಸ್ಟಿಕ್ ಹಚ್ಚುವಾಗ ಈ ಮಿಸ್ಟೇಕ್‍ಗಳನ್ನು ಮಾಡಬೇಡಿ

ಈ ರಾ ಮೈಕ ನಮ್ಮ ಮೇಕಪ್ ಬ್ಯಾಗಿನ ಒಳಗೆ ಬರುವುದಕ್ಕಿಂತ ಮುಂಚೆ ಹಲವು ಹೋಲ್ ಸೇಲರ್ಸ್,ಮಿಡಲ್‍ಮೆನ್ ಮತ್ತು ಬಾರ್ಡರ್‍ಗಳನ್ನ ಕ್ರಾಸ್ ಮಾಡಿ ಬರುತ್ತದೆ,ಹೆಚ್ಚು ಮೈಕ ಎಕ್ಸ್‍ಪೋರ್ಟ್ ಕಂಪನಿಗಳು ಮೈಕವನ್ನು ಚೀನಾದ ಮೈಕ ಪ್ರೊಸೆಸ್ಸಿಂಗ್ ಫ್ಯಾಕ್ಟರಿಗಳಿಗೆ ಮಾರಿ ಬಿಡುತ್ತಾರೆ,ಮತ್ತು ಅದನ್ನು ಅಲ್ಲಿ ಫೈನ್ ಫಿನೀಷಿಂಗ್ ಕೊಟ್ಟ ನಂತರ ಕಾಸ್‍ಮೆಟಿಕ್ ಬ್ರಾಂಡ್‍ಗಳಿಗೆ ಮಾರಿಕೊಳ್ಳುತ್ತಾರೆ,ಮತ್ತೆ ಅದನ್ನು ಮೇಕಪ್ ಟೂಲ್ಸ್‍ಗಳಿಗೆ ಬಳಸಿ ಅದನ್ನು ಮಾರಿ ಕೋಟಿ ಕೋಟಿ ದುಡ್ಡನ್ನು ಸಂಪಾದಿಸುತ್ತಾರೆ.

raw mica mining Image Source : The Guardian

ಸರ್ಕಾರದ ಮಿನಿ ಭದ್ರತೆಯಿಂದ ಮಾಡುವ ಈ ಇಲ್ಲೀಗಲ್ ಮೈಕ ಗಣಿಗಾರಿಕ ದಂದೆ ಹೆಚ್ಚು ಕಡೆ ನಡೆಯುತ್ತದೆ,ಯಾವಾಗ ಕೆಲವು ಮೀಡಿಯಾಗಳು ಇದನ್ನು ಅಂತರಾಷ್ಟ್ರಿಯ ಮಟ್ಟದಲ್ಲಿ ಜನರಿಗೆ ತೋರಿಸಿದರು ಆಗ ಇಲ್ಲಿನ ಹೆಚ್ಚು ಮೇಕಪ್ ಕಂಪನಿಗಳು ಇದನ್ನು ನೋಡಿ ಇದಕ್ಕೆ ಪರಿಹಾರ ಕಂಡು ಹಿಡಿಯಲು ಮುಂದಾದರು ಹಾಗೆ ಕೆಲವು ಮಲ್ಟಿ ನ್ಯಾಷನಲ್ ಕಾಸ್‍ಮೆಟಿಕ್ ಕಂಪನಿಗಳು ಮೈಕ ದಂದೆಯ ಬೆನ್ನು ಮೂಳೆ ಮುರಿಯಲು ಮೇಕಪ್ ಪ್ರಡೆಕ್ಟ್‍ಗಳಲ್ಲಿ ನ್ಯಾಚುರಲ್ ಮೈಕ ಬಳಸುವ ಬದಲು ಇದರ ಸಬ್ಸಿಟ್ಯೂಟ್ ಸಿಂತೆಟಿಕ್ ಮೈಕಗಳನ್ನು ಬಳಸಲು ಪ್ರಾರಂಭಿಸಿದರು ಆದರೆ ಎಷ್ಟರ ಮಟ್ಟಿಗೆ ನಿಜ ಎಂದು ಯಾರಿಗು ತಿಳಿದಿಲ್ಲ.ಹಾಗೆಇದರಿಂದ ಎಷ್ಟರ ಮಟ್ಟಿಗೆ ಲಾಭದಾಯಕ ಎಂದು ಹೇಳಲು ತುಂಬಾ ಕಷ್ಟವಾಗಿದೆ ಏಕೆಂದರೆ ಒಂದು ಕಡೆ ಈ ಮಕ್ಕಳನ್ನು ಸಾವಿನ ಗುಂಡಿಗೆ ಹೋಗುವುದರಿಂದ ಕಾಪಾಡುತ್ತದೆ ಆದರು ಇನ್ನೊಂದು ಕಡೆ ಈ ಬಡ ಜನರನ್ನು ಹಸಿವು,ಉಪವಾಸದಿಂದ ಸಾಯಲು ಕೂಡ ಕಾರಣ ಆಗಿದೆ,ಹಲವು ಎನ್ ಜಿ ಒ ಗಳು ಈ ಮಕ್ಕಳ ಸಹಾಯಕ್ಕೆ ಬಂದಿದೆ ಆದರೆ ಇಲ್ಲಿನ ಜನ ಜೀವನಕ್ಕೆ ಯಾವುದೇ ಆರ್ಥಿಕ ನೆರವು ದೊರಕದೆ ಇರುವುದರಿಂದ ಇಲ್ಲಿನ ಜನ ನಿರಾಶ್ರಿತರಾಗಿ ಕುಸಿದು ಬಿದ್ದಿದ್ದಾರೆ.

ಇದನ್ನು ಓದಿ : ಉಗುರುಗಳ ಮೇಲೆ ಮೂಡುವ ಅರ್ಧ ಚಂದ್ರಾಕೃತಿಯ ಬಿಳಿಯ ಬಣ್ಣ ಏನನ್ನು ಸೂಚಿಸುತ್ತದೆ..?

ಸ್ನೇಹಿತರೆ ಇದು ಬ್ಯೂಟಿ ಪ್ರಾಡಕ್ಟ್‍ಗಳ ಕತ್ತಲೆ ಜಗತ್ತಿನ ಕೇವಲ ಒಂದು ನೈಜ ವಿಷಯ, ಇಂತಹ ಹಲವು ಟಾಪ್ ಸೀಕ್ರೇಟ್ ವಿಷಯಗಳು ಈ ದಂದೆಯಲ್ಲಿದೆ, ಆದರೆ ಈ ದೊಡ್ಡ ದೊಡ್ಡ ಕಂಪನಿಗಳು ಯಾವತ್ತು ಕೂಡ ಅದನ್ನು ಜನಸಾಮಾನ್ಯರಿಗೆ ತಿಳಿಸುವುದಿಲ್ಲ,ತಿಳಿಸಲು ಕೂಡ ಬಿಡುವುದಿಲ್ಲ,ಅವರ ಆಕರ್ಷಣಿಯ ಜಾಹೀರಾತು ಮಾರ್ಕೆಟಿಂಗ್ ಯಿಂದ ಗ್ರಾಹಕರಿಗೆ ಹೇಗೆ ಯಾಮಾರಿಸುತ್ತಿದಾರೆಂದರೆ ಅದು ಎಂದಿಗು ಗ್ರಾಹಕರಿಗೆ ಗೊತ್ತಾಗುವುದಿಲ್ಲ ಏಕೆಂದರೆ ಆತ ಜಾಹೀರಾತಿಗೆ ಮಾರಿ ಹೋಗಿದ್ದಾನೆಂದು,ಇಂತಹದೊಂದು ಆಕರ್ಷಣೆಯ ಮಾರ್ಕೆಟಿಂಗ್ ಸ್ಟಾಟರ್ಜಿ ತುಂಬ ವರ್ಷದ ಹಿಂದೆ ನಮ್ಮ ದೇಶದಲ್ಲಿ ತುಂಬಾ ಸಲೀಸಾಗಿ ಕೆಲಸ ಮಾಡಿತು,ಅದೇ ಫೇರ್ ಅಂಡ್ ಲವ್ಲಿ ಕ್ರೀಮ್,ಮೊದಲು ಭಾರತ ದೇಶದಲ್ಲಿ ವಿಕ್ಕೊ ದಂತ ಆಯುರ್ವೇದ ಕ್ರೀಮ್ಸ್‍ಗಳು ಹೆಚ್ಚು ಮಾರಾಟ ಆಗುತ್ತಿದ್ದವು, ಇದರಿಂದ ಸ್ಕಿನ್ ಗ್ಲೋ ಮತ್ತು ಆಯುರ್ವೇದ ಇಂಗ್ರೀಡಿಯನ್ಸ್‍ಗಳ ಮೇಲೆ ಫೋಕಸ್ ಮಾಡಲಾಗಿತ್ತು,ಆದರೆ 1975ರಲ್ಲಿ ಹಿಂದುಸ್ತಾನ್ ಯುನಿಲಿವರ್ ಕಂಪನಿ ಫೇರ್ ಅಂಡ್ ಲವ್ಲಿ ಕ್ರೀಮ್ ಲಾಂಚ್ ಮಾಡಿದ ನಂತರ ಬ್ಯೂಟಿ ಇಂಡಸ್ಟ್ರಿಯಲ್ಲಿ ದೊಡ್ಡ ಸಂಚಲನವೆ ಆಯಿತು, ಫೇರ್ ಆಂಡ್ ಲವ್ಲಿಗೆ ದೊಡ್ಡ ಸಕ್ಸಸ್ ಸಿಕ್ಕಿತು, ಅದಾಗಿ ಅದರಂತೆ ಇನ್ನು ಕೆಲವು ಕಾಸ್‍ಮೆಟಿಕ್ ಕ್ರೀಮ್‍ಗಳು ಬರ ತೊಡಗಿದವು, ಈ ಕ್ರೀಮ್ ಸ್ಪಾಟ್ ಟೆಂಪರವೆರಿ ಸೌಂದರ್ಯವನ್ನೇನೊ ಕೊಡುತ್ತಿತ್ತು ಆದರೆ ಆಯುರ್ವೇದ ಪ್ರೊಡಕ್ಟ್ ಗಳಲಿದ್ದ ಇಂಗ್ರಿಡಿಯನ್ಸ್ ಬಿಟ್ಟು ಈ ಪ್ರೊಡಕ್ಟ್ ಗಳಲ್ಲಿ ಮಿಕ್ಕಿದೆಲ್ಲವು ಇತ್ತು, ಅದರಿಂದ ನಮ್ಮ ಚರ್ಮಕ್ಕೆ ದುಷ್ಟ ಪರಿಣಾಮಗಳು ಬೀರುತ್ತಿದ್ದವು,ಬ್ಲೀಚ್‍ನ ಬಿಟ್ಟು ಮಕ್ರ್ಯೂರಿ,ನಿಕಲ್,ಕ್ರೋಮಿಯಮ್ ಹಾಗು ಹೈಡ್ರೋಕ್ಯೊನೋನ್ ತರಹದ ಹಲವು ಇಂಗ್ರೀಡಿಯನ್ಸ್ ಗಳಿದ್ದವು, ಇಂತಹ ಕೆಮಿಕಲ್‍ಗಳು ನಮ್ಮ ಚರ್ಮದ ಹತ್ತತ್ತಿರಾನು ತರುವಂತಿಲ್ಲ, ಅಂತಹ ಕೆಮಿಕಲ್‍ಗಳು ಇಂತಹ ಕ್ರೀಮ್‍ಗಳಲ್ಲಿ ಇರುತ್ತಿದ್ದವು, ಇಂತಹ ಕ್ರೀಮ್‍ಗಳನ್ನು ದಿನ ನಿತ್ಯ ಬಳಸಿದರೆ ಚರ್ಮವು ಬಾಗಿದಾಗೆ ಮುಸುಕಾಗುತ್ತದೆ ಹಾಗು ಕಪ್ಪು ಕಳೆಗಳು ಚರ್ಮದ ಮೇಲೆ ಕಂಡು ಬರುತ್ತದೆ, ಆದ್ದರಿಂದ ಇಂತಹ ಕ್ರೀಮ್‍ಗಳಿಂದ ಆದಷ್ಟು ದೂರ ಇರಬೇಕು ಮತ್ತು ಬಹಳ ಅವಮಾನಕರ ಸಂಗತಿ ಏನೆಂದರೆ ಕಪ್ಪು ಅಥವಾ ಕಂದು ಚರ್ಮಕ್ಕಿಂತ ಬಿಳಿ ಚರ್ಮ ತುಂಬಾ ಒಳ್ಳೆಯದು ಎಂದು ನಂಬುವ ಬ್ರಿಟೀಷರ ಮಾನಸಿಕ ನಂಬಿಕೆಯನ್ನು ನಮ್ಮ ದೇಶದವರು ಅದನ್ನು ವೇದ ವಾಕ್ಯ ಎಂಬಂತೆ ಅದನ್ನು ಬಾಚಿ ತಪ್ಪಿ ಚಾಚು ತಪ್ಪದೆ ಅನುಸರಿಸುತ್ತಿದ್ದಾರೆ ಇದಕ್ಕಿಂತ ಅವಮಾನ ಬೇಕೆ,ಅಷ್ಟೆ ಅಲ್ಲದೆ ಇಂತಹ ಕ್ರೀಮ್‍ಗಳ ಜಾಹೀರಾತುಗಳು ನೇರವಾಗಿ ವರ್ಣ ಭೇದ ತಂದು ಸ್ತ್ರೀಸಾಮಾನ್ಯರ ಮನ ನೋಯಿಸಿತು, ನಾವು ಯಾರನ್ನ ದೊಡ್ಡ ದೊಡ್ಡ ಸ್ಟಾರ್ ಗಳಾಗಿ ಮಾಡಿದ್ದೇವಿ ಅಂತಹವರು ಇಂತಹ ಕ್ರೀಮ್‍ಗಳ ಬ್ರಾಂಡ್ ಅಂಬಾಸಿಡರ್‍ಗಳಾಗಿ ಜನರನ್ನು ಇನ್ನು ಮೂರ್ಖರನ್ನಾಗಿಸುತ್ತಿದ್ದಾರೆ, ಹಾಗೆ ಇಂತಹ ಕ್ರೀಮ್‍ಗಳ ಜೊತೆಗೆ ಇನ್ನೂ ಹಲವು ತರಹದ ಪ್ರಡೆಕ್ಟ್‍ಗಳು ಮಾರ್ಕೆಟ್ ಅಲ್ಲಿ ಲಭ್ಯವಿದೆ, ಇವುಗಳನ್ನು ಬಳಸುವುದರಿಂದ ನಮ್ಮ ಚರ್ಮಕ್ಕೆ ಒಳ್ಳೆದಕ್ಕಿಂತ ಕೆಟ್ಟದೆ ಹೆಚ್ಚು, ಶೇವಿಂಗ್ ಕ್ರೀಮ್ ಅಲ್ಲಿ ಇರುವ ಪ್ರೊಪಿಲೆನೆ ಗ್ಲೈಕೊಲ್ ಎಂಬ ಇಂಗ್ರಿಡಿಯನ್ಸ್ ನಿಂದ ಅಸ್ಥಮ ಆಗುವ ಲಕ್ಷಣಗಳು ಹೆಚ್ಚು, 2012ರಲ್ಲಿ ಎಫ್ ಡಿ ಎ 400 ದೊಡ್ಡ ಕಾಸ್‍ಮೆಟಿಕ್ ಕಂಪನಿಯ ಲಿಪ್ಸ್‍ಟಿಕ್‍ಗಳಲ್ಲಿ ಲೀಡ್ ನ ಕಂಟೈನ್ ಇದೆ ಎಂದು ಸಾಭೀತು ಪಡಿಸುತ್ತು, ಅಷ್ಟೇ ಅಲ್ಲ ನೀವು ಸ್ನಾನ ಮಾಡಲು ಬಳಸುವ ಸೋಪಿನಿಂದ ಹಿಡಿದು ಮುಖ ತೊಳೆಯಲು ಬಳಸುವ ಫೇಸ್ ವಾಷ್‍ಗಳ ವರೆಗೆ ಇಂತಹ ಹಲವು ಇಂಗ್ರಿಡಿಯನ್ಸ್‍ಗಳಿವೆ, ಇದರಿಂದ ಚರ್ಮ ಹಾಗೂ ದೇಹ ಎರಡಕ್ಕು ತುಂಬಾ ಹಾನಿಕಾರಕ ಆಗಿದೆ, ಹಾಗೆ ಹಲವು ಶ ಆಯುರ್ವೇದ ಪ್ರಾಡಕ್ಟ್‍ಗಳಿವೆ ಅದರಿಂದ ಯಾವುದೇ ಸೈಡ್ ಎಫ್ಫೆಕ್ಟ್ಸ್‍ಗಳಿಲ್ಲ, ಅಲ್ಲದೆ ಇವು ಸೌಂದರ್ಯ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ, ಇದರಿಂದ ನಾವು ನಮ್ಮಶ ದುಡ್ಡನ್ನು ನಮಗೆ ಸರಿಯಾಗಿ ಕಾಣುವ ಸರಿಯಾದ ಪ್ರಾಡಕ್ಟ್ ಅನ್ನು ಖರೀದಿಸೋಣ ಮತ್ತು ಅಂತಹ ಒಳ್ಳೆಯ ಪ್ರಾಡಕ್ಟ್ ತಯಾರಿಕ ಕಂಪನಿಗಳಿಗೆ ಸಪೋರ್ಟ್ ಮಾಡೋಣ, ಇದಷ್ಟೆ ಅಲ್ಲದೆ 2020ರ ಒಂದು ಗ್ರೌಂಡ್ ರಿಪೋರ್ಟಿನ ಪ್ರಕಾರ ಕೆಲವು ಸತ್ಯಗಳನ್ನು ಹೊರ ಹಾಕಿದೆ ಅದೇನೆಂದರೆ ಅಮೆಜಾನ್ ಗಳಂತ ಆನ್‍ಲೈನ್ ಕಂಪನಿಗಳು ಮಾರುವ ಬ್ಯೂಟಿ ಪ್ರಾಡಕ್ಟ್‍ಗಳು ಅಸಲಿ ಅಲ್ಲ ಅಸಲಿಯ ನಕಲಿ ಕಾಪಿಗಳೆಂದು ಹೇಳಲಾಗಿದೆ, ಅದರಲ್ಲಿ ಯಾವ ಇಂಗ್ರಿಡಿಯನ್ಸ್ ಬಳಸಲಾಗಿದೆ ಎಂಬುದು ಯಾರಿಗು ತಿಳಿದಿಲ್ಲ, ಇಂತಹ ಕಪ್ಪು ದಂದೆಗಳು ಮಲ್ಟಿ ಬಿಲಿಯನ್ ಡಾಲರ್ಸ್ ಕಮಾಯಿಸುವ ಬ್ಯೂಟಿ ಪ್ಯಾಕ್ ಮಾರ್ಕೆಟ್‍ನ ಚಿಕ್ಕ ಭಾಗವಾಗಿದೆ, ಆನ್‍ಲೈನ್‍ಗಳಲ್ಲಿ ಮಾರ್ಕೆಟ್ ಬೆಲೆಗಿಂತ ತುಂಬಾ ಕಡಿಮೆ ಬೆಲೆಗೆ ಪ್ರಾಡಕ್ಟ್ ಸಿಗುತ್ತಿದೆ ಅಂದರೆ ಮುಂಜಾಗೃಕತೆ ಯಿಂದ ಹುಷಾರಾಗಿರಿ, ಈ ನಕಲಿ ಪ್ರಾಡಕ್ಟ್ ಬಳಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ಬದಲು ಆಳು ಮಾಡಿಕೊಂಡಂತಾಗುತ್ತದೆ,ಆಗಿದ್ದರೆ ಹುಷಾರಾಗಿರಿ,

 

ಇನ್ನೊಂದು ಡಾರ್ಕ್ ಸೀಕ್ರೇಟ್ ಅನ್ನು ಮೇಕಪ್ ಇಂಡಸ್ಟ್ರಿ ಯಾವತ್ತು ನಿಮಗೆ ಹೇಳುವುದಿಲ್ಲ ಅದೇನೆಂದರೆ ವಯಸ್ಸಾಗುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಹಾಗೆ ನಿಮ್ಮ ವಯಸ್ಸು ಹೆಚ್ಚಾದ ಹಾಗೆ ನಿಮ್ಮ ಚವರ್i ಮೋಕಾಗುತ್ತ ಮುಪ್ಪಾಗುತ್ತಲೆ ಇರುತ್ತದೆ, ಇದೇ ಜೀವನದ ಸತ್ಯಾಂಶ, ಆದರೆ ಇಂತಹ ಸತ್ಯವನ್ನು ಬಚ್ಚಿಡುತ್ತ ಬಂದಿರುವ ದೊಡ್ಡ ದೊಡ್ಡ ಕಾಸ್‍ಮೆಟಿಕ್ ಕಂಪನಿಗಳು 2015ರ ತನಕ 10ಲಕ್ಷ ಕೋಟಿ ಆದಾಯವನ್ನು ಸಂಪಾದಿಸಿತು ಮತ್ತು ಪ್ರಪಂಚದ ಮಾರುಕಟ್ಟೆಯಲ್ಲಿ ಬ್ಯೂಟಿ ಇಂಡಸ್ಟ್ರಿಯನ್ನು ದೊಡ್ಡ ಕಂಬದಂತೆ ನಿಲ್ಲಿಸಿತು, ಈ ಕಂಪನಿಗಳು 35 ರಿಂದ 70 ರ ಮಹಿಳೆಯರ ಇನ್ ಸೆಕ್ಯುರಿಟಿಯ ಲಾಭವನ್ನು ತೆಗೆದು ಕೊಂಡು ಟಿವಿ,ಹೆಲ್ತ್ ಹಾಗು ಫ್ಯಾಷನ್ ಮ್ಯಾಗಸಿನ್‍ಗಳ ಮೂಲಕ ಅವರೊಳಗೆ ಭಯವನ್ನು ಹುಟ್ಟಿ ಹಾಕಿ ಅದರಿಂದ ಪ್ರಾಡಕ್ಟ್ ಅನ್ನು ಖರೀದಿಸುವ ಜಾಲವನ್ನು ಕಂಡು ಕೊಂಡಿತ್ತು, ಇದಷ್ಟೆ ಅಲ್ಲದೆ ವೇಟ್ ಲಾಸ್ ಪ್ರಾಡಕ್ಟ್ಸ್, ಐ ಕ್ರೀಮ್, ಎಸ್ ಬಿ ಎಫ್ ನೈಲ್ ಪಾಲೀಷ್ ಇಂತಹ ಹಲವು ಪ್ರಾಡಕ್ಟ್ ಗಳನ್ನು ಮಾರುವ ಕಾಸ್ ಮೆಟಿಕ್ ಕಂಪನಿಗಳು ನಮ್ಮಲ್ಲಿವೆ, ಇವರು ನಮ್ಮನ್ನ  ಮೂರ್ಖರನ್ನಾಗಿಸುತ್ತ ಬರುತ್ತಿದ್ದಾರೆ, ಇದರಿಂದ ನೀವು ಹೇಗೆ ಕಾಣುತ್ತೀರ ಅನ್ನೋದಕ್ಕಿಂತ ನೀವು ಬೇರೆ ಅವರೊಂದಿಗೆ ಹೇಗೆ ನಡೆದು ಕೊಳ್ಳುತ್ತೀರ ಎಂಬುದರ ಬಗ್ಗೆ ಙನ ವಿಡಿ, ಏಕೆಂದರೆ ಸೌಂದರ್ಯ ಒಂದಿನ ಮುಪ್ಪಾಗಿ ಹೋಗುತ್ತದೆ ಆದರೆ ಹೃದಯದಿಂದ ಮಾಡಿದ ಸಂಭಂದ ಯಾವತ್ತು ಅಳಿಸಿ ಹೋಗಲ್ಲ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author