12 ಮಹಾ ಶಕ್ತಿಪೀಠಗಳಲ್ಲಿ ಒಂದು ಮಲ್ಲಿಕಾರ್ಜುನ ಜ್ಯೋತಿರ್ಲಿಂಗ

12 ಮಹಾ ಶಕ್ತಿಪೀಠಗಳಲ್ಲಿ ಒಂದು ಮಲ್ಲಿಕಾರ್ಜುನ ಜ್ಯೋತಿರ್ಲಿಂಗ..

ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಇರೋದು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಶ್ರೀಶೈಲಂನಲ್ಲಿ.. ಇಲ್ಲಿರುವ ಶಿವನ ದೇವಾಲಯ 12 ಜ್ಯೋತಿರ್ಲಿಂಗಗಳ ಪೈಕಿ ಒಂದು. ಅಷ್ಟೇ ಅಲ್ಲ, 18 ಮಹಾ ಶಕ್ತಿಪೀಠಗಳ ಪೈಕಿಯೂ ಒಂದು ಎನಿಸಿಕೊಂಡಿದೆ. ಕಾರಣ, ಇಲ್ಲಿ ಪಾರ್ವತಿ ತಾಯಿಯು ಭ್ರಮರಾಂಭ ರೂಪದಲ್ಲಿ ನೆಲೆಸಿದ್ದಾಳೆ. ಭಾರತದಲ್ಲಿ ಮೂರೇ ಮೂರು ಸ್ಥಳಗಳಲ್ಲಿ ಮಾತ್ರ ಜ್ಯೋತಿರ್ಲಿಂಗ ಹಾಗೂ ಮಹಾ ಶಕ್ತಿಪೀಠ ಎರಡೂ ಇವೆ.

ನಲ್ಲಮಲ್ಲ ಅಥವಾ ದ್ರೋಣಾಚಲ ಬೆಟ್ಟಗಳ ಸಾಲಿನಲ್ಲಿರುವ ಶ್ರೀಶೈಲವು, ಶೈವರಿಗೂ ಕನ್ನಡ ನಾಡಿನ ವೀರಶೈವರಿಗೂ ಪ್ರಮುಖ ಯಾತ್ರಾ ಸ್ಥಳವಾಗಿದೆ.

ಶಿವ ಪಾವರ್ತಿಯರು ತಮ್ಮ ಮಕ್ಕಳಾದ ಗಣೇಶ ಹಾಗೂ ಸುಬ್ರಮಣ್ಯನಿಗೆ ಮದುವೆ ಮಾಡಲು ಸಿದ್ಧಿ, ಬುದ್ಧಿ ಹಾಗೂ ರಿದ್ಧಿ ಎಂಬ ವಧುಗಳನ್ನು ಹುಡುಕಿದ್ದರು. ಇವರನ್ನು ಯಾರಿಗೆ ಮದುವೆ ಮಾಡಿಸಬೇಕು ಎಂದು ನಿರ್ಧರಿಸಲು ಪರೀಕ್ಷೆಯೊಂದನ್ನು ನಡೆಸಲು ನಿರ್ಧರಿಸಿದ ಶಿವ ಪಾವರ್ತಿಯರು, ಗಣೇಶ ಹಾಗೂ ಸುಬ್ರಮಣ್ಯನಿಗೆ ಮೂರು ಲೋಕಗಳನ್ನು ಯಾರು ಮೊದಲು ಸುತ್ತಿ ಬರುತ್ತಾರೋ ಅವರಿಗೆ ಮದುವೆ ಮಾಡುವುದಾಗಿ ತಿಳಿಸಿದರು.

ತನ್ನ ವಾಹನ ನವಿಲನ್ನು ಏರಿ ಕಾರ್ತಿಕೇಯನು ಮೂರು ಲೋಕಗಳ ಸಂಚಾರಕ್ಕೆ ಹೊರಟನು. ಆದರೆ ಗಣೇಶನು ಶಿವ ಪಾವರ್ತಿಯರ ಸುತ್ತ ಸುತ್ತಿ, ತಂದೆ ತಾಯಿಗೆ ನಮಿಸಿದರೆ ಮೂರು ಲೋಕದ ಸುತ್ತಿದ ಹಾಗೆಯೇ ಎಂದು ಹೇಳಿದನು. ಶಿವನು, ವಧುಗಳನ್ನು ಗಣೇಶನಿಗೆ ಕೊಟ್ಟು ಮದುವೆ ಮಾಡಿಸಿದನು...

ಮೂರು ಲೋಕಗಳ ಸಂಚಾರ ಮುಗಿಸಿ ಬಂದ ಕಾರ್ತಿಕೇಯನಿಗೆ ಗಣೇಶನ ಮದುವೆ ವಿಚಾರ ತಿಳಿದು ಸಿಟ್ಟು ಬಂದಿತು. ಇದರಿಂದಾಗಿ ಅವರು ಕೈಲಾಸವನ್ನು ಬಿಟ್ಟು ಕೃವಂಗ ಪರ್ವತಕ್ಕೆ ಬಂದು ನೆಲೆಸಿದನು.

ಶಿವ ಪಾವರ್ತಿಯರು, ಕಾರ್ತಿಕೇಯನನ್ನು ಹಿಂಬಾಲಿಸಿಕೊಂಡು ಬಂದು ಅವನಿಗೆ ಸಮಾಧಾನ ಮಾಡಲು ಪ್ರಯತ್ನಿಸಿದರು. ಆದರೆ ಕಾರ್ತಿಕೇಯನು ಸಮಾಧಾನಗೊಳ್ಳದೆ ಬೇರೆ ಪರ್ವತಕ್ಕೆ ಹೋಗಲು ಹವಣಿಸಿದಾಗ ದೇವತೆಗಳು ಬಂದು ಮನವಿ ಮಾಡಿಕೊಂಡರು. ಆಗ ಹತ್ತಿರದಲ್ಲೇ ಕಾರ್ತಿಕೇಯನು, ಶಿವ ಪಾರ್ವತಿಯರೂ ಅಲ್ಲಿಯೇ ನೆಲೆಸಿದರು. ಇದರಿಂದಾಗಿ ಶ್ರೀಶೈಲ ಎನ್ನುವ ಹೆಸರು ಬಂದಿತು.

ಇನ್ನು ಮಹಾಶಕ್ತಿ ಪೀಠಗಳಲ್ಲಿ ಶ್ರೀಶೈಲವೂ ಒಂದಾಗಿದ್ದರ ಹಿಂದಿನ ಕಥೆಯೂ ರೋಚಕವಾಗಿದೆ. ದಕ್ಷ ಯಜ್ಞದ ಕಾಲದಲ್ಲಿ ಯಜ್ಞ ಕುಂಡಕ್ಕೆ     ಆಹುತಿಯಾದ ಸತೀ ದೇವಿಯು ನಂತರ ಪಾರ್ವತಿಯಾಗಿ ಹುಟ್ಟಿ ಶಿವನನ್ನು ಮದುವೆಯಾದ ಕಥೆ ಪ್ರಸಿದ್ಧವಾಗಿದೆ. ಸತೀ ದೇವಿಯು ಯಜ್ಞ ಕುಂಡವನ್ನು ಪ್ರವೇಶಿಸಿದ ಬಳಿಕ ಶಿವನು ಅವಳ ದೇಹವನ್ನು ಹೊತ್ತು ಸಂಚರಿಸುವಾಗ ಅವಳ ತುಟಿ ಶ್ರೀಶೈಲ ಪ್ರದೇಶದಲ್ಲಿ ಬಿದ್ದತೆಂದು ನಂಬಲಾಗಿದೆ. ಸತಿ ದೇವಿಯ ದೇಹದ ಭಾಗಗಳು 18 ಕಡೆಗಳಲ್ಲಿ ಬಿದ್ದವು ಹಾಗೂ ಆ 18 ಕ್ಷೇತ್ರಗಳು ಮಹಾ ಶಕ್ತಿ ಪೀಠಗಳಾಗಿ ರೂಪುಗೊಂಡಿವೆ ಎಂದು ನಂಬಲಾಗಿದೆ..

ಶ್ರೀಶೈಲದಲ್ಲಿರುವ ಜ್ಯೋತಿರ್ಲಿಂಗಕ್ಕೆ ಮಲ್ಲಿಗೆ ಅಥವಾ ಮಲ್ಲಿಕಾ ಹೂವುಗಳಿಂದ ಪೂಜೆ ಮಾಡಲಾಗುತ್ತದೆ. ಹೀಗಾಗಿ ಇಲ್ಲಿರುವ ಲಿಂಗಕ್ಕೆ ಮಲ್ಲಿಕಾರ್ಜುನ ಎಂಬ ಹೆಸರು ಬಂದಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ...

ಇಲ್ಲಿರುವ ದೇವಸ್ಥಾನವು 2ನೇ ಶತಮಾನದಿಂದಲೂ ಇದ್ದು, ಶಾತವಾಹನರ ಆಳ್ವಿಕೆಯ ಸಮಯದಲ್ಲಿ ಶಾಸನಬದ್ಧ ಪುರಾವೆಗಳು ದೊರೆತಿದ್ದವು ಎನ್ನಲಾಗಿದೆ.

ವಿಜಯನಗರ ಆಳ್ವಿಕೆಯ ಸಮಯದಲ್ಲಿ ಮೊದಲನೇ ಹರಿಹರನು ದೇವಾಲಯದಲ್ಲಿ ಹಲವು ಜೀರ್ಣೋದ್ಧಾರಗಳನ್ನು ಕೈಗೊಂಡನು ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಲ್ಲದೇ, ದೇವಾಲಯದಲ್ಲಿರುವ ವೀರಶಿರೋಮಂಟಪ ಹಾಗೂ ಪಾತಾಳಗಂಗೆ ಮೆಟ್ಟಿಲುಗಳನ್ನು ರೆಡ್ಡಿ ಸಾಮ್ರಾಜ್ಯದ ಸಮಯದಲ್ಲಿ ಕಟ್ಟಿಸಲಾಯಿತು ಎನ್ನಲಾಗಿದೆ.

ದೇವಾಲಯವು ಬರೋಬ್ಬರಿ 2 ಹೆಕ್ಟೇರ್ ಪ್ರದೇಶದಲ್ಲಿದ್ದು, 4 ಬೃಹತ್ ಗೋಪುರಗಳಿವೆ. ಇಲ್ಲಿ ಅನೇಕ ದೇವಾಲಯಗಳಿದ್ದರೂ ಮಲ್ಲಿಕಾರ್ಜುನ ಹಾಗೂ ಭ್ರಮರಾಂಭ ದೇವಾಲಯಗಳು ಪ್ರಮುಖವಾದ್ದದ್ದು.

ಶ್ರೀಶೈಲಕ್ಕೂ ಕನ್ನಡ ನಾಡಿಗೂ ಅವಿನಾಭಾವ ಸಂಬಂಧವಿದೆ... ಕನ್ನಡ ನಾಡಿನ ಶಿವಭಕ್ತೆಯೂ ಶರಣಳೂ, ವಚನಕಾರ್ತಿಯೂ ಆದ ಅಕ್ಕ ಮಹಾದೇವಿ ಸರ್ವಸಂಗ ಪರಿತ್ಯಾಗಿಯಾಗಿ ಚನ್ನಮಲ್ಲಿಕಾರ್ಜುನನನ್ನೇ ತನ್ನ ಪತಿಯಾಗಿ ಸ್ವೀಕರಿಸಿ ಅವನನ್ನು ಅರಿಸುತ್ತಾ ಶ್ರೀಶೈಲಕ್ಕೆ ಬಂದು, ಅಲ್ಲಿನ ಕದಳೀವನದಲ್ಲಿ ಶಿವನಲ್ಲಿ ಐಕ್ಯಳಾದಳು ಎಂದು ಇತಿಹಾಸ ಹೇಳುತ್ತದೆ. ದೇವಾಲಯದಿಂದ ಸ್ವಲ್ಪ ದೂರದಲ್ಲೇ ಅಕ್ಕಮಹಾದೇವಿಯ ಗುಹೆಯೂ ಇದೆ... ಇನ್ನು ಶರಣ ಶ್ರೇಷ್ಠರಾದ ಅಲ್ಲಮ ಪ್ರಭುಗಳು ಶ್ರೀಶೈಲದಲ್ಲಿ ಇದ್ದರು ಎಂದು ಹೇಳುತ್ತಾರೆ.

ಇಷ್ಟೆಲ್ಲಾ ಇತಿಹಾಸವಿರುವ, ರಮ್ಯ ರಮಣೀಯವಾಗಿರುವ ಶ್ರೀಶೈಲಕ್ಕೆ ನೀವೂ ಒಮ್ಮೆ ಹೋಗಿ ಮಲ್ಲಿಕಾರ್ಜುನ, ಭ್ರಮರಾಂಭರ ದರ್ಶನ ಪಡೆದು ಪುನೀತರಾಗಿ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada​

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author