ನೀರಾವರಿಗೆ ಶ್ರಮವಹಿಸಿದ್ದೇನೆ ಎಂದು ಭಾವುಕರಾದ ಸಚಿವ ಜೆ ಸಿ ಮಾಧುಸ್ವಾಮಿ

ನೀರಾವರಿಗೆ ಶ್ರಮವಹಿಸಿದ್ದೇನೆ ಎಂದು ಭಾವುಕರಾದ ಸಚಿವ ಜೆ ಸಿ ಮಾಧುಸ್ವಾಮಿ.

 

 

ಚಿಕ್ಕನಾಯಕನಹಳ್ಳಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆ ಕನಸು ಸಾಕಾರಗೊಂಡ ಹಿನ್ನೆಲೆಯಲ್ಲಿ ಸಚಿವ ಮಾಧುಸ್ವಾಮಿ ಧನ್ಯತಾಭಾವದಿಂದ ಕಣ್ಣೀರು ಹಾಕಿ ಗದ್ಗದಿತರಾದ ಘಟನೆಗೆ ಚಿಕ್ಕನಾಯಕನಹಳ್ಳಿ ಸಾಕ್ಷಿಯಾಗಿದೆ.

 

 

ಚಿಕ್ಕನಾಯಕನಹಳ್ಳಿ ತಾಲೂಕಿನ ಜೆ.ಸಿಪುರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 250 ಕೋಟಿ ರೂಪಾಯಿ ವೆಚ್ಚದಲ್ಲಿ ತಾಲೂಕಿನ 121 ಕೆರೆಗಳಿಗೆ ಎತ್ತಿನಹೊಳೆ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

 

 

 

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಮೊನ್ನೆ ದಿನ ದಾರಿಯಲ್ಲಿ ಒಂದು ಅಜ್ಜಿ ಸಿಕ್ಕಿ ಏನಪ್ಪಾ ನಿನ್ನ ಬಾಯಲ್ಲಿ ಎಲ್ಲಾ ಕೆರೆ ತುಂಬಿ ಸ್ತೀನಿ ಅಂತ ಮಾತು ಬಂದಿತ್ತು. ಮಳೆನೇ ಬಂದು ಎಲ್ಲಾ ಕೆರೆ ತುಂಬಿ ಹೋಯಿತು ಅಂದಳು ಆ ಮಹಾತಾಯಿ ಹಾರೈಕೆ ಕಂಡು ನನ್ನ ಮನಸ್ಸು ತುಂಬಿ ಬಂತು ನನ್ನ ಕ್ಷೇತ್ರದ ಜನತೆಗೆ ಕೊಟ್ಟ ಮಾತನ್ನು ನೆರವೇರಿಸಿ ನಾಲಿಗೆ ಉಳಿಸಿಕೊಳ್ಳಬೇಕು ಎಂದರೆ ಎತ್ತಿನಹೊಳೆಯಿಂದ ಕೆರೆಗಳಿಗೆ ನೀರನ್ನು ಹರಿಸಬೇಕು ಎಂದಿದ್ದೆ.

 

 

ಆ ಕನಸು ಇಂದು ನೆರವೇರಿಸಿದೆ ಎಂದು ನೆನಪಿಸಿಕೊಂಡ ಮಾಧುಸ್ವಾಮಿ ಭಾವುಕರಾದರು. ಮುಂದಿನ ಒಂದು ವರ್ಷದೊಳಗೆ ಯೋಜನೆ ಪೂರ್ಣಗೊಂಡು ನೀರು ಹರಿಸುವ ವಿಶ್ವಾಸವನ್ನು ಸಚಿವ ಮಾಧುಸ್ವಾಮಿ ವ್ಯಕ್ತಪಡಿಸಿದ್ದಾರೆ.

 

 

 

ಆದರೆ ಸಚಿವ ಜೆ ಸಿ ಮಧುಸ್ವಾಮಿ ರವರು ಪ್ರತಿ ವಿಚಾರದಲ್ಲೂ ಕಡಕ್ ನೇರ ನಿಷ್ಠುರವಾದಿ ಆದರೂ ಸಹ ಅವರಲ್ಲು ಸಹ ಕೆಲ ಭಾವನಾತ್ಮಕ ಸಂಬಂಧಗಳು ಕಣ್ಣೀರಿನ ಮೂಲಕ ಹೊರಬಂದಿದ್ದು ಅವರು ಕೂಡ ಮೃದು ಸ್ವಭಾವದ ವ್ಯಕ್ತಿ ಎಂದು ನಮಗೂ ಸಹ ಈಗಲೇ ಗೊತ್ತಾಯಿತು ಎಂದು ತಾಲೂಕು ಹಾಗೂ ಜಿಲ್ಲೆಯ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ

 

 

ವರದಿ_ ಮಾರುತಿ ಪ್ರಸಾದ್ ತುಮಕೂರು

Enjoyed this article? Stay informed by joining our newsletter!

Comments

You must be logged in to post a comment.

About Author