ಇಳಿಜಾರಿನಲ್ಲೇ ಸ್ಥಿರವಾಗಿ ನಿಂತಿದೆ ಬೃಹತ್ ಬಂಡೆ..!

ಮಹಾಬಲಿಪುರಂನಲ್ಲಿದೆ ಕೃಷ್ಣನ ಬಟರ್‍

ಪುರಾಣ, ಪೌರಾಣಿಕ ಅನ್ನೋದು ನಿಜಾನ..ದೇವರು, ದೇವಾನುದೇವತೆಗಳು ಎಲ್ಲರೂ ನಿಜವಾಗಿಯೂ ಇದ್ದರಾ..? ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದರಾ..? ಕುರೂಪಿ ರಾಕ್ಷಸು, ಜಗತ್ ಸುಂದರಿಯರು ಇದ್ದಿದ್ದು ನಿಜಾನ. ಹೀಗೆ ಪುರಾಣದ ಬಗ್ಗೆ ಹಲವು ಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ಪುರಾಣದ ಬಗ್ಗೆ ನಾವು ತಿಳಿದಿರುವ ಮಾಹಿತಿಗಳೆಲ್ಲವೂ ಮಾತಿನಿಂದಲೇ ಜನಜನಿತವಾದಂಥವು. ಇನ್ನು, ಕೆಲವು ಪ್ರಾಚೀನ ಗ್ರಂಥಗಳಲ್ಲಿ ದಾಖಲಿಸಲ್ಪಟ್ಟವು. ಪುರಾಣ ಕಥೆಗಳು, ಹಿನ್ನಲೆಯ ಬಗ್ಗೆ ಆಗಿಂದಾಗೆ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ.

ಪುರಾಣ ಕಾಲವೊಂದಿತ್ತು,.ನಾವು ಓದಿದ, ಕೇಳಿದ ಪಾತ್ರಗಳು ನಿಜವಾಗಿದ್ದವು ಎಂಬುದಕ್ಕೆ ಪುಷ್ಟಿ ನೀಡುವಂತೆ ಶಾಸನಗಳು, ಕುರುಹುಗಳು ದೊರೆಯುತ್ತಲೇ ಇರುತ್ತವೆ. ಭೂಗರ್ಭ ಶಾಸ್ತ್ರಜ್ಞರು ಈ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುತ್ತಲೇ ಇರುತ್ತಾರೆ. ಇದು ಅಂಥಹದ್ದೇ ಒಂದು ಕುರುಹು. ತಮಿಳುನಾಡಿನ ಮಹಾಬಲೀಪುರಂನಲ್ಲಿದೆ.

ಇಳಿಜಾರಿನಲ್ಲೇ ಸ್ಥಿರವಾಗಿ ನಿಂತಿದೆ ಬೃಹತ್ ಬಂಡೆ..!

krishnas butterballFeatured Image courtesy : Pinterest

ಹೌದು, ತಮಿಳುನಾಡಿನ ಮಹಾಬಲಿಪುರಂನಲ್ಲಿ 20 ಅಡಿ ಎತ್ತರ ಮತ್ತು 5 ಮೀಟರ್ ಅಗಲದ ಬೃಹತ್ ಬಂಡೆಯೊಂದಿದೆ. ಇದು ಬರೋಬ್ಬರಿ 250 ಟನ್‌ಗಳಷ್ಟು ಭಾರವನ್ನು ಹೊಂದಿದೆ. ಈ ಬಂಡೆಯು ಬೆಟ್ಟದ ಇಳಿಜಾರಿನಲ್ಲಿ 4 ಅಡಿಗಿಂತಲೂ ಕಡಿಮೆ ತಳದಲ್ಲಿದೆ. ಇದನ್ನು ಕೃಷ್ಣನ ಬಟರ್‌ಬಾಲ್ ಎಂದೇ ಕರೆಯುತ್ತಾರೆ. ಎಲ್ಲರೂ ತಿಳಿದಿರುವಂತೆ ನಾವು ಆಕಾಶದಲ್ಲಿ ಎಸೆಯುವ ಯಾವುದೇ ವಸ್ತುವಾದರೂ ಅದನ್ನು ಇಳಿಜಾರು ಪ್ರದೇಶದಲ್ಲಿ ಹಾಕಿದರೆ ಅದು ಸ್ವಾಭಾವಿಕವಾಗಿ ಕೆಳಗಿಳಿಯುತ್ತದೆ. ಇದು ಗುರುತ್ವಾಕರ್ಷಣೆಯ ಬಲದಿಂದಾಗಿಲೂ ಆಗಿರಬಹುದು. ಆದರೆ ಕೃಷ್ಣನ ಬಟರ್‍ಬಾಲ್ ಎಂದೇ ಜನರು ವರ್ಷಗಳಿಂದ ನಂಬಿಕೊಂಡು ಬರುತ್ತಿರುವ ಈ ಬಂಡೆ ಮಾತ್ರ ಇಳಿಜಾರಲ್ಲಿ ಸ್ಥಿರವಾಗಿ ನಿಂತಿದೆ.

ಈ ಬೃಹತ್ ಬಂಡೆಯನ್ನು ಕೃಷ್ಣನ ಬಟರ್‌ಬಾಲ್ ಎಂದು ಕರೆಯಲು ಹಲವು ಕಾರಣಗಳೂ ಸಹ ಇವೆ. ಬೆಣ್ಣೆ ಕೃಷ್ಣನ ನೆಚ್ಚಿನ ಆಹಾರವಾಗಿದೆ. ಮತ್ತು ಬಾಲಕೃಷ್ಣನಿಗೆ ಪ್ರಿಯವಾಗಿರುವ ಈ ಬೆಣ್ಣೆ ಸ್ವರ್ಗದಿಂದ ಬೀಳುತ್ತದೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಹೀಗಾಗಿ ಇದನ್ನು ತಮಿಳಿನಲ್ಲಿ ‘ವಾನಿರೈ ಕಲ್’ ಎಂದೂ ಕರೆಯುತ್ತಾರೆ, ಇದರರ್ಥ ‘ಆಕಾಶ ದೇವರ ಕಲ್ಲು’ ಎಂಬುದಾಗಿದೆ. 

 

ಇದನ್ನು ಓದಿ : ಏಕಶಿಲೆಯಲ್ಲಿ ಕೆತ್ತಿರುವ 15 ಅಡಿ ಎತ್ತರದ ನಂದಿ ವಿಗ್ರಹವಿರುವ ಬುಲ್ ಟೆಂಪಲ್..!

ಬಂಡೆಯು ನಿಂತಿರುವ ಸ್ಥಾನವು ಎಷ್ಟು ಆಶ್ಚರ್ಯಕರವಾಗಿದೆಯೆಂದರೆ ಅದು ಇಳಿಜಾರಿನ ಕೆಳಗೆ ಉರುಳುತ್ತಿದೆ ಎಂದೇ ಅನಿಸುತ್ತದೆ. ಆದರೆ, ಬಂಡೆ ಮಾತ್ರ ಇಳಿಜಾರಿನಲ್ಲಿಯೂ ದೃಢವಾಗಿ ನಿಂತಿದೆ. ದೇವಾಲಯಕ್ಕೆ ಆಗಮಿಸುವ ಪ್ರವಾಸಿಗರು ಬಂಡೆಯ ಅಡಿಯಲ್ಲಿಯೇ ವಿಶ್ರಾಂತಿ ಪಡೆಯುತ್ತಾರೆ. ಇದು 1200 ವರ್ಷಗಳಷ್ಟು ಹಳೆಯದಾಗಿದ್ದು, ಸುನಾಮಿ, ಭೂಕಂಪಗಳು ಅಥವಾ ಚಂಡಮಾರುತಗಳು ಬಂದರೂ ಕದಲದೆ ಗಟ್ಟಿಯಾಗಿ ನಿಂತಿದೆ.

ಹಿಂದೂ ಪುರಾಣಗಳ ಪ್ರಕಾರ, ಮಹಾನ್ ದೇವರು ಕೃಷ್ಣ ಮಗುವಾಗಿದ್ದಾಗ, ಬೆಣ್ಣೆಯನ್ನು ಕದಿಯಲು ಇಷ್ಟಪಡುತ್ತಿದ್ದನು. ಈ ಸಂಪ್ರದಾಯವನ್ನು ಅನುಸರಿಸಿ, ದೊಡ್ಡ ಕಿತ್ತಳೆ ಕಲ್ಲನ್ನು ದೇವರು ಭೂಮಿಗೆ ಹಾಕಿದನು. ಅದುವೇ ಕೃಷ್ಣನ ಬಟರ್‍ಬಾಲ್ ಎಂದು ಕರೆಯಲ್ಪಡುತ್ತದೆ ಎಂದು ತಿಳಿದುಬಂದಿದೆ. ಕೃಷ್ಣನ ಬೆಣ್ಣೆ ಚೆಂಡು ಇರುವ ಸ್ಥಳ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಜಾರು ಕಲ್ಲಿನ ಇಳಿಜಾರನ್ನು ಸ್ಥಳೀಯ ಮಕ್ಕಳು ಸ್ಲೈಡ್‌ನಂತೆ ಬಳಸುತ್ತಾರೆ. ಸೈಟ್‍ ಭೇಟಿ ನೀಡುವವರು ಕಲ್ಲಿನ ಹಿಂದೆ ಹೋಗಲು ಪ್ರಯತ್ನಿಸುತ್ತಾರೆ ಮತ್ತು ಅದನ್ನು ಬೆಟ್ಟದ ಕೆಳಗೆ ತಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಇಲ್ಲಿಯವರೆಗೆ ಯಾರಿಗೂ ಬೆಣ್ಣೆಯ ಬಂಡೆಯನ್ನು ಒಂದಿಂದೂ ಸರಿಸಲೂ ಸಾಧ್ಯವಾಗಿಲ್ಲ.

ನೈಸರ್ಗಿಕ ರಚನೆಯಿಂದ ರೂಪುಗೊಂಡ ಕಲ್ಲು

mahabalipuram butterballImage courtesy : Fine arts America ( Kiran Joshi )

ಮತ್ತೊಂದೆಡೆ ಭೂವಿಜ್ಞಾನಿಗಳು, ಕಲ್ಲು ಈ ರೀತಿ ಅಸಹಜ ಆಕಾರವನ್ನು ಉಂಟುಮಾಡುವ ಸಾಧ್ಯತೆಯಿಲ್ಲ ಎಂದು ವಾದಿಸುತ್ತಾರೆ, ಆದರೆ ವಿಜ್ಞಾನಿಗಳು ಬಂಡೆಯು ಕೇವಲ ನೈಸರ್ಗಿಕ ರಚನೆ ಎಂದು ಸಿದ್ಧಾಂತವನ್ನು ಹೊಂದಿದ್ದಾರೆ. ಘರ್ಷಣೆ ಮತ್ತು ಗುರುತ್ವಾಕರ್ಷಣೆಯ ಕೇಂದ್ರದಿಂದ ಹೀಗಾಗಿರಬಹುದು ಎಂದು ಕೆಲವರು ಹೇಳುತ್ತಾರೆ. ಘರ್ಷಣೆ ಬಂಡೆ ಅಥವಾ ಚೆಂಡನ್ನು ಕೆಳಕ್ಕೆ ಇಳಿಯದಂತೆ ತಡೆಯುತ್ತದೆ, ಇದರಿಂದಾಗಿ ನಾವು ಇಳಿಜಾರಿನ ನೆಲದ ಮೇಲೆ ನಿಲ್ಲಬಹುದು. ಆದರೆ ಗುರುತ್ವಾಕರ್ಷಣೆಯ ಕೇಂದ್ರವು ಅದನ್ನು ಸಣ್ಣ ಸಂಪರ್ಕ ಪ್ರದೇಶದಲ್ಲಿ ಸಮತೋಲನಗೊಳಿಸಲು ಅನುಮತಿಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ : 3000 ಅಡಿ ಎತ್ತರದ ಬೆಟ್ಟದ ಮೇಲಿದೆ ಧೋಲ್ಕಲ್ ಪ್ರಾಚೀನ ಗಣೇಶ ದೇವಾಲಯ

ತಂಜಾವೂರು ಗೊಂಬೆ ಎಂಬ ಪ್ರಸಿದ್ಧ ಮಣ್ಣಿನ ಗೊಂಬೆಗಳ ತಯಾರಿಗೂ ಬಟರ್‌ಬಾಲ್ ಸ್ಫೂರ್ತಿ ಎಂದು ಹೇಳಲಾಗುತ್ತದೆ. ರಾಜ ಚೋಳನು ಇಷ್ಟು ಸಣ್ಣ ತಳದಲ್ಲಿ ಬಂಡೆ ನಿಂತಿರುವ ರೀತಿಯನ್ನು ನೋಡಿ ಪ್ರಭಾವಿತನಾಗಿದ್ದನು. ಇದನ್ನು ನೋಡಿ, ಎಂದಿಗೂ ಕೆಳಗೆ ಬೀಳದ ಮಣ್ಣಿನ ಗೊಂಬೆಗಳನ್ನು ತಯಾರಿಸಲು ಸ್ಫೂರ್ತಿ ಪಡೆದುಕೊಂಡನು ಎಂದು ಹೇಳಲಾಗುತ್ತದೆ. ತಂಜಾವೂರು ಗೊಂಬೆಗಳನ್ನು ಅರ್ಧ-ಗೋಳಾಕಾರದ ತಳದಲ್ಲಿ ಮಾಡಲಾಗಿದ್ದು ಅದು ಓರೆಯಾಗಲು ಅನುವು ಮಾಡಿಕೊಡುತ್ತದೆ. ಆದರೆ ಎಂದಿಗೂ ಕೆಳಗೆ ಬೀಳುವುದಿಲ್ಲ.

ಅದೇನೆ ಇರ್ಲಿ, ಕೃಷ್ಣನ ಬಟರ್ ಬಾಲ್ ಅಥವಾ ಅಸಹಜ ಶಿಲೆ ಈಗ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ ಎಂದು ಹೇಳಬಹುದು, ಜನರು ಈ ಅದ್ಭುತ ನೈಸರ್ಗಿಕ ದೃಶ್ಯವನ್ನು ನೋಡಿ ಆನಂದಿಸುತ್ತಾರೆ ಮತ್ತು ಛಾಯಾಚಿತ್ರವನ್ನು ತೆಗೆದುಕೊಳ್ಳುತ್ತಾರೆ. ಸ್ಥಳೀಯ ಜನರಿಗೆ ಸಹ ಇದು ಪಿಕ್‍ನಿಕ್ ತಾಣವಾಗಿದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

About Author