ಚಾಕೋಲೇಟ್ ಪ್ರಿಯ ಷಣ್ಮುಖನ, ಮಂಚ್ ಮುರುಗನ್ ದೇವಸ್ಥಾನ

Munch murugan templeFeatured Image source : Lifeberrys.com

ಭಾರತ ದೇಶದ ವಿಶಿಷ್ಟತೆಯೂ ಅಂಥಹದ್ದು, ಇಲ್ಲಿ ಹಲವಾರು ರೀತಿಯ ದೇವಾಲಯಗಳಿವೆ. ಭಿನ್ನ-ವಿಭಿನ್ನ ಪದ್ಧತಿ, ಆಚರಣೆಗಳನ್ನು ಸಹ ವಿವಿಧ ದೇಗುಲಗಳಲ್ಲಿ ನೋಡಬಹುದು. ದೇಗುಲಗಳಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದ ರೀತಿ, ಭಕ್ತರಿಗೆ ನೀಡುವ ಪ್ರಸಾದ ಹೀಗೆ ಎಲ್ಲಾ ವಿಚಾರದಲ್ಲೂ ವಿಶಿಷ್ಟತೆಯನ್ನು ಕಾಣಬಹುದು. ದಕ್ಷಿಣಭಾರತದ ಹಲವು ದೇವಸ್ಥಾನಗಳಲ್ಲಿ ಹೆಚ್ಚಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಇರುತ್ತದೆ. ಕೆಲವೊಂದು ದೇವಾಲಯದಲ್ಲಿ ಅನ್ನ, ನೈವೇದ್ಯ, ಕಾಳುಗಳು, ಪಂಚಕಜ್ಜಾಯವನ್ನು ನೀಡಲಾಗುತ್ತದೆ. ಮತ್ತೆ ಕೆಲವು ದೇಗುಲಗಳಲ್ಲಿ ಕುಂಕುಮ ಹಾಗೂ ತೀರ್ಥವನ್ನಷ್ಟೇ ನೀಡಲಾಗುತ್ತದೆ.

ಅದಲ್ಲದೆಯೂ ಭಾರತದಲ್ಲಿ ಭಕ್ತರಿಗೆ ನೀಡುವ ಪ್ರಸಾದದಲ್ಲೇ ವೈವಿಧ್ಯತೆ ತೋರಿರುವ ಇನ್ನೂ ಕೆಲವು ವಿಶಿಷ್ಟ ದೇವಾಲಯಗಳಿವೆ. ವಿಭಿನ್ನ ರೀತಿಯ ಪದಾರ್ಥಗಳನ್ನು ಈ ದೇವಾಲಯಗಳಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಇದು ಅಂಥಹದ್ದೇ ಒಂದು ದೇವಸ್ಥಾನ. ಚಾಕೋಲೇಟ್ ಪ್ರಿಯ ಷಣ್ಮುಖನ ದೇವಾಲಯ.

ಇದನ್ನು ಓದಿ : ಈ ದೇವಾಲಯಗಳಲ್ಲಿ ನೂಡಲ್ಸ್, ಫ್ರೈಡ್ ರೈಸ್, ಚಾಕೋಲೇಟ್ ಗಳೇ ಪ್ರಸಾದ

ಚಾಕೋಲೇಟ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಎಲ್ಲರೂ ಇಷ್ಟಪಟ್ಟು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಈ ದೇವಸ್ಥಾನದಲ್ಲಿ ದೇವರಿಗೂ ಚಾಕೋಲೇಟ್‍ ಸಲ್ಲಿಸಲಾಗುತ್ತದೆ. ಹೌದು ಅಚ್ಚರಿ ಎನಿಸಿದರೂ ಇದು ನಿಜ. ತೆಕ್ಕನ್‌ ಪಳನಿ ಬಾಲಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯಲ್ಲಿ ಚಾಕೊಲೇಟ್‌ ತುಂಡುಗಳನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತಿದೆ. ಕೇರಳದ ಆಲಪ್ಪುಳ ಎನ್ನುವ ಪ್ರದೇಶದಲ್ಲಿ ನಾವು ಈ ದೇವಾಲಯವನ್ನು ನೋಡಬಹುದಾಗಿದೆ. ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರು ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ದೇವರಿಗೆ ಹೂವು, ಶ್ರೀಗಂಧ, ಹಣ್ಣು-ಹಂಪಲುಗಳನ್ನು ಅರ್ಪಿಸಿದರೆ, ಇಲ್ಲಿ ಚಾಕೋಲೇಟ್‍ ಗಳನ್ನು ಅರ್ಪಿಸುತ್ತಾರೆ.

munch chocolate offered as prasad in munch murugan templeImage Source : InUth.com

ಆಲಪ್ಪುಳ ನಗರದ ಹೊರವಲಯದ ಸುಬ್ರಹ್ಮಣ್ಯಪುರಂನಲ್ಲಿರುವ ಈ ದೇವಸ್ಥಾನದ ದೇವರು ಸ್ಥಳೀಯವಾಗಿ 'ಮಂಚ್‌ ಮುರುಗನ್‌ ಎಂದೇ ಖ್ಯಾತನಾಗಿದ್ದಾನೆ. ಮಂಚ್ ಚಾಕೋಲೇಟ್‍ ನ್ನು ದೇವರಿಗೆ ಅರ್ಪಿಸಿದ ಬಳಿಕ ಭಕ್ತರಿಗೆ ಅವುಗಳನ್ನೇ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಯಾವುದೇ ಜಾತಿ, ಧರ್ಮ, ಅಂತಸ್ತುಗಳ ಭೇದವಿಲ್ಲದೆ ಜನರು ಈ ದೇವಾಲಯಕ್ಕೆ ಆಗಮಿಸಿ ಮುರುಗನಿಗೆ ಚಾಕೊಲೇಟ್‌ಗಳನ್ನೇ ಅರ್ಪಿಸುತ್ತಾರೆ. ವಾರ್ಷಿಕ ಪರೀಕ್ಷೆಗಳು ನಡೆಯುತ್ತಿರುವ ಕಾಲದಲ್ಲಿ ವಿದ್ಯಾಥಿಗಳೇ ಹೆಚ್ಚಾಗಿ ಆಗಮಿಸಿ ದೇವರಿಗೆ ಚಾಕೋಲೇಟ್ ಅರ್ಪಿಸುತ್ತಾರೆ.

ತುಲಾಭಾರದಂತಹ ಸಾಂಪ್ರದಾಯಿಕ ಸೇವೆಗಳಿಗೂ ಇಲ್ಲಿ ಹೂವು, ಬೆಲ್ಲ ಇತ್ಯಾದಿಗಳ ಜತೆಗೆ ಚಾಕೊಲೇಟ್‌ಗಳನ್ನೂ ಬಳಸಲಾಗುತ್ತದೆ. ಮೊದಮೊದಲು ಮಕ್ಕಳು ಮಾತ್ರ ಚಾಕೊಲೇಟ್‌ ಸೇವೆ ನಡೆಸುತ್ತಿದ್ದರು. ಆದರೆ ಈಗೀಗ ಎಲ್ಲ ವಯೋಮಾನದವರೂ ಬಾಲಮುರುಗನಿಗೆ ಚಾಕೊಲೇಟ್‌ಗಳನ್ನೇ ಸಮರ್ಪಿಸುತ್ತಾರೆ. ಅರ್ಚನೆ ನಡೆಸಿದ ಬಳಿಕ ಭಕ್ತರಿಗೆ ಪ್ರಸಾದ ರೂಪದಲ್ಲಿ ಹೂಗಳನ್ನು ನೀಡುವಂತೆ, ಇಲ್ಲಿ ಚಾಕೊಲೇಟ್‌ ಪ್ರಸಾದ ನೀಡಲಾಗುತ್ತದೆ. ಇಲ್ಲಿಗೆ ಇತರ ರಾಜ್ಯಗಳು ಮತ್ತು ವಿದೇಶಗಳಿಂದ ಬರುವ ಭಕ್ತರೂ ದೊಡ್ಡ ದೊಡ್ಡ ಚಾಕೊಲೇಟ್‌ ಬಾಕ್ಸ್‌ಗಳನ್ನೇ ಹಿಡಿದುಕೊಂಡು ಬರುತ್ತಾರೆ.

ಇದನ್ನು ಓದಿ : ಮುಂಜಾನೆ ಸೂರ್ಯನಿಗೆ ನೀರು ಅರ್ಪಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..? 

ಅನೂಪ್ ಎ.ಚೆಮ್ಮೋತ್, ಎಂಬವರ ಕುಟುಂಬವು ದೇವಾಲಯವನ್ನು ನಿರ್ವಹಿಸುತ್ತಿದೆ. ಬಾಲ ಮುರುಗನಿಗೆ ಚಾಕೋಲೇಟ್ ನೀಡುವ ಅಭ್ಯಾಸವು ದೇವಾಲಯದಲ್ಲಿ ಆರು ವರ್ಷಗಳ ಹಿಂದೆ ಆರಂಭವಾಯಿತು ಎಂದು ಅವರು ತಿಳಿಸಿದ್ದಾರೆ. ದೇವಾಲಯದ ಬಳಿ ವಾಸಿಸುತ್ತಿದ್ದ ಪುಟ್ಟ ಮುಸ್ಲಿಂ ಹುಡುಗನು ದೇವರಿಗೆ ಮಂಚ್ ಹೊರತುಪಡಿಸಿ ಬೇರೆ ಏನನ್ನೂ ನೀಡಲು ನಿರಾಕರಿಸಿದನು. ಅದರಂತೆ ಮಂಚ್ ಚಾಕೋಲೇಟ್‍ನ್ನು ದೇವರಿಗೆ ಸಮರ್ಪಿಸಲಾಯಿತು. ಅಲ್ಲಿಂದ ಈ ದೇವಸ್ಥಾನಕ್ಕೆ ಮಂಚ್ ಮುರುಗನ್ ಎಂಬ ಹೆಸರು ಬಂತು ಎಂದು ಅವರು ಹೇಳಿದ್ದಾರೆ.

munch murugan temple alappuzhaImage Source : Historyindia.com

ಮುಸ್ಲಿಂ ಕುಟುಂಬಕ್ಕೆ ಸೇರಿದ ಬಾಲಕನು ಆಟವಾಡುತ್ತಾ ದೇವಾಲಯದ ಗಂಟೆಯನ್ನು ಬಾರಿಸಿದ್ದನು. ಅದಕ್ಕೆ ಆತನ ಪೋಷಕರು ಬೈಯ್ದಿದ್ದರು. ದೇವಸ್ಥಾನದ ಗಂಟೆಯಲ್ಲಿ ಆ ರೀತಿ ಆಟವಾಡಬೇಡವೆಂದು ಬುದ್ಧಿ ಹೇಳಿದರು. ಆ ದಿನ ಪೂರ್ತಿ ಬಾಲಕನು ಜ್ವರ ಬಂದು ಮುರುಗನ್ ಎಂದು ಕನವರಿಸುತ್ತಿದ್ದನು. ಮರುದಿನ ಆ ಮುಸ್ಲಿಂ ಬಾಲಕನ ಪೋಷಕರು ಹುಷಾರು ತಪ್ಪಿದ್ದ ಆತನನ್ನು ದೇವಾಲಯಕ್ಕೆ ಕರೆದುಕೊಂಡು ಬಂದರು. ಈ ಸಂದರ್ಭದಲ್ಲಿ ದೇವಾಲಯದ ಪೂಜಾರಿ ಪೋಷಕರಲ್ಲಿ ದೇವರಿಗೆ ಏನನ್ನಾದರೂ ಅರ್ಪಿಸುವಂತೆ ಕೇಳಿಕೊಂಡರು.

ಹುಡುಗನ ಪೋಷಕರು ದೇವರಿಗೆ ಎಣ್ಣೆ ಮತ್ತು ಹೂವುಗಳನ್ನು ಅರ್ಪಿಸಿದರೆ, ಹುಡುಗ ಮಾತ್ರ ಯಾರ ಮಾತನ್ನೂ ಕೇಳದೆ ದೇವರಿಗೆ ಮಂಚ್ ಚಾಕೋಲೇಟ್‍ ನ್ನು ಅರ್ಪಿಸಿದನು. ಬಾಲ ಮುರುಗನಿಗೆ ಮಂಚ್ ನೀಡಿದ ನಂತರ ಹುಷಾರು ತಪ್ಪಿದ್ದ ಬಾಲಕ ಗುಣಮುಖನಾದನು. ಹೀಗಾಗಿ ಬಾಲ ಮುರುಗ ಈ ರೀತಿ ಬಾಲಕನ ಮೂಲಕ ಚಾಕೋಲೇಟ್‍ಗೆ ಬೇಡಿಕೆಯಿಟ್ಟರು ಎಂಬ ಮಾತು ಇಲ್ಲಿ ಪ್ರಸಿದ್ಧಿ ಹೊಂದಿತು.

ಇದನ್ನು ಓದಿ : ದೇಶದ ಈ ದೇವಾಲಯಗಳಿಗೆ ಪುರುಷರಿಗೆ ಪ್ರವೇಶ ನಿಷೇಧ 

ದೇವಾಲಯ ನಿರ್ಮಾಣದ ಎಂಟನೇ ವಾರ್ಷಿಕೋತ್ಸವದಂದು ಕೇರಳದ ವಿವಿಧ ಭಾಗಗಳ ಭಕ್ತರು ಮಂಚ್ ಚಾಕೋಲೇಟ್‌ಗಳ ಬಾಕ್ಸ್‍ಗಳನ್ನು ತೆಗೆದುಕೊಂಡು ಇಲ್ಲಿಗೆ ಭೇಟಿ ನೀಡುತ್ತಾರೆ. ಅಷ್ಟೇ ಅಲ್ಲ, ಮಂಚ್‍ ಪರಾ, ಮಂಚ್‍ ತುಲಾಭಾರ ಎಂಬ ವಿಶೇಷ ಸೇವೆಯನ್ನು ಈ ದೇವಾಲಯದಲ್ಲಿ ನಡೆಸಲಾಗುತ್ತಿದೆ. ಮಂಚ್ ಪರಾ ಎಂದರೆ ದೊಡ್ಡ ಪಾತ್ರೆಯ ತುಂಬಾ ಮಂಚ್ ಚಾಕೋಲೇಟ್‍ ಗಳನ್ನು ನೀಡುವುದಾಗಿದೆ. ಮಂಚ್‍ ತುಲಾಭಾರ ಎಂದರೆ ವ್ಯಕ್ತಿ ತಮ್ಮ ತೂಕದಷ್ಟೇ ಚಾಕೋಲೇಟ್ ತುಲಾಭಾರವನ್ನು ನೀಡುವ ಸೇವೆಯಾಗಿದೆ.

ಇತ್ತೀಚಿಗೆ ಈ ಮಂಚ್ ಮುರುಗನ್ ದೇವಸ್ಥಾನದಲ್ಲಿ ಮಂಚ್ ಚಾಕೋಲೇಟ್ ಜತೆಗೆ ಇತರ ಚಾಕೋಟೇಟ್ ಗಳನ್ನು ಸಹ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಪುಟ್ಟ ಪುಟ್ಟ ಮಕ್ಕಳು ಸಹ ದೇವಾಲಯಕ್ಕೆ ಬಂದು ಮುರುಗನಿಗೆ ಮಂಚ್ ಸರ್ಮಪಿಸುವುದು ನೋಡುವುದೇ ಚಂದ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author