ದೇವಾಲಯಗಳಲ್ಲಿ ರಾಕ್ಷಸನ ಮುಖವಾಡ ಇರುವುದು ಯಾಕೆ..? ಅದರ ಹಿಂದಿರುವ ಕಾರಣವೇನು..?

ದೇವಾಲಯಗಳಲ್ಲಿ ರಾಕ್ಷಸನ ಮುಖವಾಡ ಇರುವುದು ಯಾಕೆ..? ಅದರ ಹಿಂದಿರುವ ಕಾರಣವೇನು..?

kirtimukha in templeFeatured Image credits : Kala kshethram tumblr

ಭಾರತದಲ್ಲಿ ಅಸಂಖ್ಯಾತ ಪುರಾತನ ದೇವಾಲಯಗಳಿವೆ. ಭಾರತದ ಶ್ರೀಮಂತ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರವನ್ನು ಈ ದೇವಾಲಯಗಳು ಪ್ರತಿನಿಧಿಸುತ್ತವೆ. ಅತ್ಯಪೂರ್ವ ಕೆತ್ತನೆ ಕೆಲಸ ಮಾಡಿರುವ ಕಂಬಗಳು, ಮಂಟಪಗಳು, ಅದ್ಭುತ ಶೈಲಿಯ ಗೋಪುರಗಳು ನಿಬ್ಬೆರಗಾಗಿಸುತ್ತವೆ. ದೇಶದ ಯಾವುದೇ ಮೂಲೆಯಲ್ಲಿದ್ದರೂ ಎಲ್ಲಾ ಹಿಂದೂ ದೇವಾಲಯಗಳು ಕೆಲವೊಂದು ನಿಯಮವನ್ನು ಹಾಗೆಯೇ ಪಾಲಿಸುತ್ತವೆ. ಆಯಾ ದೇವರಿಗೆ ಗರ್ಭಗುಡಿಯ ನಿರ್ಮಾಣ, ಮಂಟಪ ರಚನೆಯ ರೀತಿ, ಪೂಜೆ ಮಾಡುವ ವಿಧಾನ ಹೀಗೆ ಹಲವಾರು ವಿಚಾರಗಳನ್ನು ಏಕರೂಪದಲ್ಲಿ ಅನುಸರಿಸಲಾಗುತ್ತದೆ.

 

ಅದರಲ್ಲಿ ಮುಖ್ಯವಾದುದು ಗರ್ಭಗುಡಿಯಲ್ಲಿ ದೇವರ ಹಿಂಬದಿಯ ಪ್ರಭಾವಳಿಯಲ್ಲಿರುವ ವಿಚಿತ್ರವಾದ ರಾಕ್ಷಸ ಮುಖ. ಹೌದು ದೇವರ ವಿಗ್ರಹದ ಹಿಂಬದಿಯಲ್ಲಿ ನೀವು ಈ ರಾಕ್ಷಸ ಮುಖವನ್ನು ಕಾಣಬಹುದು. ಗರ್ಭಗುಡಿಗಳಲ್ಲಿ ಮಾತ್ರವಲ್ಲ, ಕೆಲವು ಪ್ರಾಚೀನ ದೇವಾಲಯಗಳ ವಾಸ್ತು ಹಾಗೂ ಶಿಲ್ಪಶಾಸ್ತ್ರದ ಭಾಗವಾಗಿ ಗೋಪುರಗಳಲ್ಲಿ ಈ ರಾಕ್ಷಸ ಮುಖವನ್ನು ಅಲಂಕಾರಿಕ ವಸ್ತುವಾಗಿ ಬಳಸುತ್ತಾರೆ. ಇದನ್ನು ಕೀರ್ತಿಮುಖ ಎಂದು ಸಹ ಕರೆಯುತ್ತಾರೆ. ಆದರೆ ನಿಮಗೆ ಗೊತ್ತಾ, ಗರ್ಭಗುಡಿಯಲ್ಲಿ ಈ ರೀತಿ ರಾಕ್ಷಸನ ಮುಖ ಅಳವಡಿಸುವುದಕ್ಕೆ ಬಲವಾದ ಕಾರಣವೂ ಇದೆ.

 

ರಕ್ಕಸನೊಬ್ಬನ ಮುಖ, ದೇಗುಲಗಳ ಗೋಡೆ ಹಾಗೂ ಗರ್ಭಗುಡಿಯ ಪ್ರಭಾವಳಿಯಲ್ಲಿ ಸ್ಥಾನ ಪಡೆದಿದ್ದರ ಹಿಂದೆ ಕುತೂಹಲಕಾರಿ ಕಥೆಯೊಂದಿದೆ. ಶಿವಪುರಾಣದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಆ ಬಗ್ಗೆ ತಿಳಿಯೋಣ

 

ಶಿವಪುರಾಣದ ಪ್ರಕಾರ ಪೌರಾಣಿಕ ಹಿನ್ನಲೆ

ದೇವಾಲಯಗಳಲ್ಲಿ ರಾಕ್ಷಸನ ಮುಖವಾಡ ಇರುವುದು ಯಾಕೆ..? The reason behind kirtimukha in templesImage Credits : Hindu Blog

ಶಿವಪುರಾಣದಲ್ಲಿ ಬರುವ ಅಸುರರ ರಾಜ ಜಲಂಧರ, ರಾಕ್ಷಸರ ಗುರು ಶುಕ್ರಾಚಾರ್ಯರ ಪರಮ ಶಿಷ್ಯನಾಗಿದ್ದ. ದುರ್ಗುಣಗಳೇ ತುಂಬಿದ ಜಲಂಧರ, ಪಾರ್ವತಿಯನ್ನೇ ಮೋಹಿಸಲು ಮುಂದಾಗಿದ್ದ. ಅಷ್ಟೇ ಅಲ್ಲ, ಶಿವನ ತಲೆಯ ಮೇಲೆ ಸದಾ ತಂಪು ಸೂಸುವ ಚಂದ್ರ ಮೇಲೆ ಜಲಂಧರ ಕಣ್ಣು ಹಾಕುತ್ತಾನೆ. ಸದಾಶಿವನ ಶಿರದ ಮೇಲಿರುವ ಚಂದ್ರನನ್ನೇ ಕಿತ್ತು ತರುವಂತೆ ತನ್ನ ಗೆಳೆಯ ರಾಹುವಿಗೆ ಆದೇಶಿಸುತ್ತಾನೆ. ಜಲಂಧರನ ಆಜ್ಞೆಯಂತೆ ಚಂದ್ರನನ್ನು ತರಲು ಕೈಲಾಸಕ್ಕೆ ಹೊರಟ ರಾಹು, ಅದೇ ಚಂದ್ರನ ಬೆಳಕಿನಲ್ಲಿ ಧ್ಯಾನಸ್ಥನಾಗಿದ್ದ ಪರಶಿವನನ್ನು ನೋಡುತ್ತಾನೆ.

 

ಶಿವನನ್ನು ಸಮೀಪಿಸಿದ ರಾಹು, ಶಿವನ ತಲೆಯ ಮೇಲಿರುವ ಚಂದ್ರನನ್ನು ಕಿತ್ತುಕೊಳ್ಳಲು ಯತ್ನಿಸುತ್ತಾನೆ, ಇದರಿಂದ ಧ್ಯಾನದಲ್ಲಿದ್ದ ಶಿವನು ಎಚ್ಚರಗೊಳ್ಳುತ್ತಾನೆ. ತನ್ನ ತಪೋಭಂಗಗೊಳಿಸಿದ ರಾಹುವಿನ ಕುಚೇಷ್ಟೆಗಳಿಂದ ಕುಪಿತನಾದ ಶಿವ, ತನ್ನ ಮೂರನೇ ಕಣ್ಣನ್ನು ತೆರೆದು ಅಗ್ನಿಜ್ವಾಲೆಗಳನ್ನು ಬಿಡುತ್ತಾನೆ. ಆ ಅಗ್ನಿಜ್ವಾಲೆಗಳಿಂದ ಸಿಂಹಮುಖಿ ಎಂಬ ಭಯಾನಕ ರಾಕ್ಷಸನೊಬ್ಬ ಹುಟ್ಟಿಕೊಳ್ಳುತ್ತಾನೆ. ಈ ಸಿಂಹಮುಖಿ ರಾಕ್ಷಸನಿಗೆ ಶಿವ, ತನ್ನ ತಪಸ್ಸಿಗೆ ಭಂಗ ತಂದ ರಾಹುವನ್ನು ನುಂಗಿಹಾಕುವಂತೆ ಆದೇಶಿಸುತ್ತಾನೆ.

 

ಮುಕ್ಕಣ್ಣನ ಸಿಟ್ಟಿನಿಂದ ಭಯಭೀತಗೊಂಡ ರಾಹು, ತನ್ನಿಂದಾದ ತಪ್ಪಿಗೆ ಕ್ಷಮೆ ಕೇಳುತ್ತಾನೆ. ಶಿವನಿಂದ ಸೃಷ್ಟಿಯಾದ ಆ ಸಿಂಹಮುಖಿ ರಕ್ಕಸನಿಂದ ತನ್ನನ್ನು ರಕ್ಷಿಸುವಂತೆ ಕೇಳಿಕೊಳ್ಳುತ್ತಾನೆ. ರಾಹುವಿನ ಕ್ಷಮಾಯಾಚನೆಯಿಂದ ತಣ್ಣಗಾದ ಶಿವ, ಆತನನ್ನು ಬಿಟ್ಟುಬಿಡುವಂತೆ ಸಿಂಹಮುಖಿಗೆ ಹೇಳುತ್ತಾನೆ. ಆದರೆ ಆ ಹೊತ್ತಿಗಾಗಲೇ ಭಯಾನಕ ಹಸಿವಿನಿಂದ ಕುದ್ದುಹೋಗಿದ್ದ ಆ ಸಿಂಹಮುಖಿ, ತನ್ನ ಹಸಿವು ನೀಗಿಸಿದರೆ ಮಾತ್ರ ರಾಹುವನ್ನು ಬಿಡುವುದಾಗಿ ಹೇಳುತ್ತಾನೆ. ಆಗ ಪರಶಿವ, ನಿನ್ನನ್ನೇ ನೀನು ತಿಂದು ಹಸಿವು ನೀಗಿಸಿಕೋ ಎಂದು ಸೂಚನೆ ನೀಡುತ್ತಾನೆ.

 

ರಾಕ್ಷ ಸ ಜೀವಿ ಶಿವನ ಆಜ್ಞೆಯನ್ನು ಪಾಲಿಸತೊಡಗುತ್ತದೆ. ತನ್ನನ್ನೇ ತಾನು ಉಂಗುಷ್ಟದಿಂದ ಹಿಡಿದು ಕುತ್ತಿಗೆಯ ವರೆಗೂ ತಿನ್ನತೊಡಗುತ್ತದೆ. ಎಲ್ಲಾ ತಿಂದು ರುಂಡ ಮತ್ತು ಎರಡು ಕೈಗಳು ಮಾತ್ರ ಉಳಿದಿದ್ದ ಹಂತದಲ್ಲಿ ಶಿವ ಈ ಜೀವಿಯನ್ನು ಗಮನಿಸಿ ದಿಗ್ಭ್ರಮೆಗೊಳ್ಳುತ್ತಾನೆ. ತನ್ನದೇ ದೇಹ ಭಕ್ಷಿಸುತ್ತ ಸ್ವಯಂ ಭುಂಜಕನಾಗಿರುವ ಈ ರಾಕ್ಷಸ ಜೀವಿಯ ಮುಖದಲ್ಲಿ ವಿಚಿತ್ರ ಕಳೆ ಶೋಭಿಸುತ್ತಿರುವುದನ್ನುಕಂಡುಕೊಳ್ಳುತ್ತಾನೆ. ಶಿವ, ಆ ರಕ್ಕಸನಿಗೆ ತಿನ್ನೋದನ್ನು ನಿಲ್ಲಿಸುವಂತೆ ಸೂಚಿಸುತ್ತಾನೆ. ಕೊನೆಗೆ ತಿನ್ನದೇ ಉಳಿದಿದ್ದು ಸಿಂಹಮುಖಿ ರಕ್ಕಸನ ಮುಖ ಮಾತ್ರ. ಆ ಸಿಂಹಮುಖಿ ತಿನ್ನದೇ ಉಳಿಸಿದ ಆತನದ್ದೇ ಮುಖಕ್ಕೆ ಪರಶಿವ  ಕೀರ್ತಿಮುಖ ಅನ್ನೋ ಹೆಸರನ್ನು ನೀಡುತ್ತಾನೆ. ತನ್ನನ್ನು ತಾನು ಇಲ್ಲವಾಗಿಸಿಕೊಂಡ ಈ ರಕ್ಕಸನ ಮುಖ ದೇಗುಲಗಳಲ್ಲಿ ವಿರಾಜಿಸಲಿ ಎಂದು ಆರ್ಶೀವಾದ ನೀಡುತ್ತಾನೆ.

ಇದನ್ನು ಓದಿ : ಮೆಟ್ಟಿಲಿನ ಮೇಲೆ ತಟ್ಟಿದರೆ ಸಂಗೀತದ ಸ್ವರಗಳು ಕೇಳಿಸುವ ಐರಾವತೇಶ್ವರ ದೇವಾಲಯ

ದೇಗುಲಗಳ ವಾಸ್ತುವಿನ್ಯಾಸದಲ್ಲಿ ಕೀರ್ತಿಮುಖ ಬಳಕೆ

ದೇಗುಲಗಳ ವಾಸ್ತುವಿನ್ಯಾಸದಲ್ಲಿ ಕೀರ್ತಿಮುಖ ಬಳಕೆImage Credits : Deccanviews.wordpress

ಹಾಗೆ ಕಣ್ಣು ಹಿಗ್ಗಿಸಿ, ನಾಲಿಗೆ ಹೊರಚಾಚಿ, ಎರಡು ಕೈಗಳನ್ನಷ್ಟೇ ಹೊಂದಿರುವ ಕೀರ್ತಿಮುಖಗಳನ್ನು ದೇವಸ್ಥಾನದ ಆವರಣದಲ್ಲಿ ನೋಡಬಹುದು. ದೇಗುಲಗಳ ವಾಸ್ತುವಿನ್ಯಾಸದ ಒಂದು ಭಾಗವಾಗಿ ಕೀರ್ತಿಮುಖ ಬಳಕೆಯಾಗುತ್ತಿದೆ. ದೇವಾಲಯಗಳಲ್ಲಿ ಈ ರಕ್ಕಸನ ಮುಖವನ್ನು ಕೇವಲ ಅಲಂಕಾರಕ್ಕಾಗಿ ಮಾಡಿದ್ದಲ್ಲ ಇದರ ಮೂಲಕ ಹಿರಿಯರು ಜೀವನ ಪಾಠವನ್ನು ಹೇಳಿದ್ದರು. ಅಸುರ ತನ್ನ ದೇಹ ತಿಂದು ಮುಗಿಸಿದಂತೆ, ಮನುಷ್ಯ ತನ್ನೊಳಗೆ ಇರುವ ಅಹಂ ಇಲ್ಲವಾಗಿಸಿಕೊಳ್ಳಬೇಕು. ಆಗ ಮಾತ್ರ ಆತ್ಮೋನ್ನತಿ ಸಾಧ್ಯ ಎಂಬ ಸಂದೇಶ ಸಾರಲಾಗಿದೆ.

ಇದನ್ನು ಓದಿ : ಬ್ರಹ್ಮನನ್ನು ಯಾಕೆ ಪೂಜಿಸುವುದಿಲ್ಲ ಗೊತ್ತಾ..? ಇಲ್ಲಿದೆ ನೀವು ತಿಳಿದಿರದ ಅಚ್ಚರಿಯ ಮಾಹಿತಿ

ಈ ಕೀರ್ತಿಮುಖವನ್ನ ಕಲ್ಯಾಣಿ ಚಾಲುಕ್ಯರು ತಾವು ನಿರ್ಮಿಸಿದ ದೇಗುಲಗಳಲ್ಲಿ ವಾಸ್ತು ಹಾಗೂ ಅಲಂಕಾರಿಕ ಭಾಗವಾಗಿ ಬಳಸೋದಕ್ಕೆ ಆರಂಭಿಸಿದರು. ಗರ್ಭಗುಡಿಯ ಪ್ರಭಾವಳಿಯಲ್ಲಿ ಸಾವಿರಾರು ವರ್ಷಗಳ ಹಿಂದಿನ ಎಲ್ಲ ಶೈವ ದೇವಾಲಯಗಳ ಗೋಪುರಗಳಲ್ಲಿ ಇವತ್ತಿಗೂ ಕಾಣಬಹುದು. ಅದು ದುಷ್ಟಶಕ್ತಿಗಳನ್ನು ದೇಗುಲಗಳ ಪ್ರವೇಶ ದ್ವಾರದಲ್ಲೇ ತಡೆಯುತ್ತವೆ ಅನ್ನೋ ನಂಬಿಕೆಯಿದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author