ತಾಜ್ ಮಹಲ್’ನಲ್ಲಿ ಮುಮ್ತಾಜ್ ಸಮಾಧಿಯಿಲ್ಲ..! ; ಪ್ರೇಮಸೌಧದ ಬಗ್ಗೆ ನೀವು ತಿಳಿದಿರದ ವಿಷಯಗಳಿವು

ತಾಜ್ ಮಹಲ್’ನಲ್ಲಿ ಮುಮ್ತಾಜ್ ಸಮಾಧಿಯಿಲ್ಲ..! ; ಪ್ರೇಮಸೌಧದ ಬಗ್ಗೆ ನೀವು ತಿಳಿದಿರದ ವಿಷಯಗಳಿವು

Taj mahalFeatured Image Credits : topyaps.com

ಪ್ರೀತಿ, ಲವ್, ಪ್ರೇಮ, ಇಷ್ಟಂ, ಕಾದಲ್, ಇಷ್ಕ್..ಪ್ರೀತಿಯೆಂಬ ಭಾವನೆಗೆ ಎಷ್ಟೊಂದು ಹೆಸರುಗಳಲ್ವಾ ? ಎಷ್ಟೊಂದು ನಾಮಗಳು. ಪ್ರೀತಿ ಕಾರಣವಿಲ್ಲದೆ ಹಾಗೇ ಆಗಿ ಹೋಗುವ ಒಂದು ಸುಂದರ ಭಾವನೆ. ಹಾಗೆಯೇ ಪ್ರೀತಿ ಎಂದಾಗ ತಟ್ಟನೆ ನೆನಪಾಗೋದು ತಾಜ್‌ಮಹಲ್. ಮುಮ್ತಾಜ್‌ಗಾಗಿ ಷಹಜಹಾನ್ ಕಟ್ಟಿದ ವೈಟ್ ಮಾರ್ಬಲ್‌ನ ಭವ್ಯ ಸ್ಮಾರಕ. ತಾಜ್ ಮಹಲ್ ಕಟ್ಟಿ ನೂರಾರು ವರ್ಷಗಳಾದರೂ ಅದು ಕಳೆಗುಂದಿಲ್ಲ. ಪ್ರತಿಯೊಬ್ಬ ಪ್ರೇಮಿಯೂ ಪ್ರೀತಿಯಲ್ಲಿ ಬಿದ್ದಾಗ ತಾಜ್ ಕುರಿತು ಒಮ್ಮೆಯಾದರೂ ನೆನೆಯುತ್ತಾರೆ. ಎಷ್ಟೋ ಜೋಡಿಗಳು ಅಲ್ಲೇ ತಮ್ಮ ಪ್ರೇಮೋತ್ಸವವನ್ನು ಆಚರಿಸುತ್ತಾರೆ.

ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್ ಸೌಂದರ್ಯ ವರ್ಣಿಸಲು ಅಸಾಧ್ಯ. ಇಂಥ ಐತಿಹಾಸಿಕ ಕಟ್ಟಡದ ಬಗ್ಗೆ ಪ್ರೀತಿ, ಸ್ಮಾರಕ, ಮುಮ್ತಾಜ್‌, ಷಹಜಹಾನ್ ಬಿಟ್ಟು ಬಹಳಷ್ಟು ವಿಚಾರಗಳು ಬಹಳಷ್ಟು ಜನಕ್ಕೆ ತಿಳಿದೇ ಇಲ್ಲ.ಅದೇನು..ಆ ಕುತೂಹಲಕಾರಿ ವಿಷಯವನ್ನು ನಾವು ತಿಳಿಸ್ತೀವಿ.

 

ಖುತಾಬ್ ಮಿನಾರ್‌ಗಿಂತಲೂ ಎತ್ತರ

Taj mahal vs Qutub minarImage Credits : RVCJ Media

ತಾಜ್‌ಮಹಲ್ ಖುತಾಬ್ ಮಿನಾರ್‌ಗಿಂತಲೂ 5 ಅಡಿ ಎತ್ತರವಿದೆ ಎಂಬುದು ನಿಮಗೆ ಗೊತ್ತಾ ? ಅದೆಷ್ಟು ಅಂದವಾಗಿ ಈ ಸ್ಮಾರಕವನ್ನು ವಾಸ್ತುಶಿಲ್ಪಿಗಳು ನಿರ್ಮಿಸಿದ್ದಾರೆಂದರೆ, ಅಷ್ಟು ಎತ್ತರವಿದೆ ಎಂದು ಅನಿಸುವುದೇ ಇಲ್ಲ.ತಾಜ್ ಮಹಲ್ ಪ್ರವೇಶಿಸುವಾಗ ಮುಖ್ಯ ದ್ವಾರದಿಂದ ನೋಡಿದರೆ, ಸ್ಮಾರಕ ತುಂಬಾ ಹತ್ತಿರದಲ್ಲಿದೆಯೇನೋ ಎಂದೇ ಭಾಸವಾಗುತ್ತದೆ. ಹತ್ತಿರ ಹೋದಾಗ, ಅದರ ಗಾತ್ರ ಸಣ್ಣದಾಗುತ್ತದೆ. ಅದರ ಸುತ್ತವಿರುವ ಪಿಲ್ಲರ್‌ಗಳು ನೇರವಿದ್ದಂತೆ ಭಾಸವಾಗುತ್ತದೆ, ಆದರೆ ವಾಸ್ತವದಲ್ಲಿ ಅವು ತುಸು ವಾಲಿವೆ.

 

ತಾಜ್ ಕಟ್ಟಿದ ಕಲಾವಿದರ ಕೈ ಕತ್ತರಿಸಿದ್ದ ಷಹಜಹಾನ್

Shah Jahan imagesImage Credits : Famous People

ತಾಜ್‍ ಮಹಲ್ ಅತ್ಯದ್ಭುತವಾಗಿ ನಿರ್ಮಾಣವಾಗಿ ಎಲ್ಲರ ಮನಸೂರೆಗೊಂಡಿತ್ತು. ಹೀಗಾಗಿ ಮತ್ತೊಂದು ತಾಜ್ ನಿರ್ಮಾಣವಾಗಬಾರದೆಂದು ಬಯಸಿದ್ದ ಷಹಜಹಾನ್ ಕ್ರೂರಿಯಾಗಿ ವರ್ತಿಸಿದ್ದ. ಈ ಪ್ರೀತಿಯ ದ್ಯೋತಕವಾದ ತಾಜ್ ಮಾದರಿ ಮತ್ತೆಲ್ಲೂ ನಿರ್ಮಾಣವಾಗಬಾರದು ಎಂಬ ಕಾರಣಕ್ಕೆ ಷಹಜಹಾನ್ ಕಲಾವಿದರು ಹಾಗೂ ಕಾರ್ಮಿಕರ ಕೈ ಬೆರಳು ಕತ್ತರಿಸಿದ್ದನಂತೆ.

 

ಸಮಾಧಿಯಲ್ಲಿ ಮಮ್ತಾಜ್ ಇಲ್ಲ..!

Shah jahan and mumtazImage Credits : topyaps.com

ಕಥೆಗಳ ಪ್ರಕಾರ ತಾಜ್ ಮಹಲ್‌ನಲ್ಲಿ ಮಮ್ತಾಜ್ ಮತ್ತು ಶಹಜಹಾನ್ ಸಮಾಧಿಯಿದೆ. ಅದರೆ ಅಲ್ಲಿ ಯಾವುದೇ ಸಮಾಧಿಯೂ ಇಲ್ಲ. ಅಲ್ಲೊಂದು ಅಮೂಲ್ಯವಾದ ಕಲ್ಲಿದೆ ಎಂದು ಹೇಳಲಾಗುತ್ತದೆ. ಅದನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸಮಾಧಿ ಇದೆ ಎಂದು ಹೇಳಿ, ಯಾರಿಗೂ ಹತ್ತಿರ ಸುಳಿಯಲು ಬಿಡುವುದಿಲ್ಲ. ಆದರೆ ಬಹಳಷ್ಟು ಜನರು ಅಲ್ಲಿ ಮುಮ್ತಾಜ್‌ ಸಮಾಧಿ ಇದೆ ಎಂದೇ ನಂಬಿದ್ದಾರೆ.

ತಾಜ್ ಮಹಲ್ ಅನ್ನು 1631ರಲ್ಲಿ ಷಹಜಹಾನ್ ಪತ್ನಿ ಮುಮ್ತಾಜ್ ಸ್ಮರಣಾರ್ಥ ನಿರ್ಮಿಸಲು ನಿರ್ಧರಿಸಿದ್ದ. ಅದೇ ವರ್ಷ ಜೂನ್ 17ರಂದು ಮುಮ್ತಾಜ್ ನಿಧನಳಾದಳು. ಅವರ 14 ನೇ ಮಗು ಗೌಹರಾ ಬೇಗಂಗೆ ಜನ್ಮ ನೀಡಿದ್ದಳಾಕೆ. ಭವ್ಯಸ್ಮಾರಕದ ನಿರ್ಮಾಣವು 1632ರಲ್ಲಿ ಪ್ರಾರಂಭವಾಗಿ, 1648ರಲ್ಲಿ ಪೂರ್ಣಗೊಂಡಿತು. ಆದರೆ ಸುತ್ತಮುತ್ತಲಿನ ಕಟ್ಟಡಗಳು ಮತ್ತು ಉದ್ಯಾನವನ್ನು ಐದು ವರ್ಷಗಳ ನಂತರ ಪೂರ್ಣಗೊಳಿಸಲಾಯಿತು. ಅದರ ನಿರ್ಮಾಣದ ಸಂದರ್ಭ ತಾಜ್ ಮಹಲ್ ಒಂದು ಅದ್ಭುತ ಪ್ರವಾಸಿ ತಾಣ, ಜಗತ್ತಿನ ಅಧ್ಬುತಗಳಲ್ಲಿ ಒಂದಾಗಲಿದೆ ಎಂದು ಯಾರೊಬ್ಬರೂ ಯೋಚಿಸಿರಲಿಲ್ಲ.

ಅಬ್ದುಲ್ ಹಮೀದ್ ಲಹೌರಿ, 1636 ರ ಪಾಡ್ಶಾಹ್ನಮಾದ ತನ್ನ ಪುಸ್ತಕದಲ್ಲಿ, ತಾಜ್ ಮಹಲ್ ಅನ್ನು ರೌಜಾ-ಐ ಮುನಾವ್ವಾರಾ ಎಂದು ಉಲ್ಲೇಖಿಸುತ್ತಾನೆ. ಇದರ ಅರ್ಥ ಪ್ರಕಾಶಮಾನವಾದ ಅಥವಾ ಪ್ರಸಿದ್ಧವಾದ ಸಮಾಧಿ ಎಂದು. ಅರ್ಥದಂತೆಯೇ ಇದು ಜಗತ್ತಿನ ಅತ್ಯಂತ ಪ್ರಸಿದ್ಧ ಸಮಾಧಿ ಎಂಬ ಪ್ರಶಂಸೆಯನ್ನೂ ಪಡೆಯಿತು.

 

20,000 ಕುಶಲಕರ್ಮಿಗಳಿಂದ ತಾಜ್ ನಿರ್ಮಾಣದ ಕೆಲಸ

Construction of Taj mahalImage Credits : Pinterest

ತಾಜ್ ಮಹಲ್ ಸಂಕೀರ್ಣವು 1653ರಲ್ಲಿ ಪೂರ್ಣಗೊಂಡಿದೆ ಎಂದು ನಂಬಲಾಗಿದೆ. ಆ ಸಮಯದಲ್ಲಿ ತಾಜ್‌ಮಹಲ್ ರಚನೆಗೆ ಅಂದಾಜು 32 ಮಿಲಿಯನ್ ರೂಪಾಯಿ ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ. ಈಗಿನ ಕಟ್ಟದ ಬೆಲೆಯನ್ನು ಊಹಿಸೋದು ಕಷ್ಟ ಅಲ್ಲವೇ..ಹೌದು. ಅಂದಿನ 32 ಮಿಲಿಯನ್ ಎಂದರೆ 2020 ರಲ್ಲಿ ಸುಮಾರು 70 ಬಿಲಿಯನ್ ರೂಪಾಯಿಗಳು (ಸುಮಾರು $ 6 956 ಮಿಲಿಯನ್) ಆಗಿರುತ್ತದೆ. ನಿರ್ಮಾಣಕ್ಕಾಗಿ ಈ ಯೋಜನೆಗೆ ಸುಮಾರು 20,000 ಕುಶಲಕರ್ಮಿಗಳನ್ನು ಚಕ್ರವರ್ತಿ ಉಸ್ತಾದ್ ಅಹ್ಮದ್ ಲಹೌರಿ ನೇಮಿಸಿಕೊಂಡಿದ್ದರು.

ತಾಜ್ ಮಹಲ್ ಅನ್ನು 1983ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿತು. ಇದನ್ನು ಮೊಘಲ್ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆ ಎಂದು ಪರಿಗಣಿಸಲಾಗಿದೆ. ಇದನ್ನು ಭಾರತದ ಶ್ರೀಮಂತ ಇತಿಹಾಸದ ಸಂಕೇತವೆಂದು ಹೇಳುತ್ತಾರೆ. ತಾಜ್ ಮಹಲ್‌ಗೆ ವರ್ಷಕ್ಕೆ 7–8 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದರು. 2007ರಲ್ಲಿ, ಇದನ್ನು ನ್ಯೂ 7 ವಂಡರ್ಸ್ ಆಫ್ ದಿ ವರ್ಲ್ಡ್ (2000–2007) ಎಂದು ಘೋಷಿಸಲಾಯಿತು.

 

ಬಣ್ಣ ಬದಲಾಯಿಸಿ ಬೆಳಗೋ ಸ್ಮಾರಕ

Taj MahalImage Credits : istock

ಸೂರ್ಯನ ಕಿರಣಗಳಿಗೆ ತಕ್ಕಂತೆ ತಾಜ್ ಮಹಲ್ ತನ್ನ ಬಣ್ಣ ಬದಲಿಸುತ್ತದೆ. ಈ ವಿಶೇಷ ದೃಶ್ಯ ನೋಡಲೆಂದೇ ಜನರು ಕಾಯುತ್ತಾ ಕುಳಿತಿರುತ್ತಾರೆ. ಬೆಳಗ್ಗೆ ಪಿಂಕ್ ಅಥವಾ ಬೂದು ಬಣ್ಣ, ಮಧ್ಯಾಹ್ನ ಅಚ್ಚ ಬಿಳಿ ಹಾಗೂ ಸಂಜೆ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಅದರಲ್ಲಿಯೂ ಗ್ರಹಣ ಮತ್ತು ಹುಣ್ಣಿಮೆ ದಿನವಂತೂ ತಾಜ್‍ ಸೌಂದರ್ಯವನ್ನು ಸವಿದವರೇ ಬಲ್ಲರು. ಅದಕ್ಕಾಗಿಯೋ ಈ ದಿನಗಳಲ್ಲಿ ತಾಜ್ ಟಿಕೆಟ್ ಎಂಟ್ರಿ ಟಿಕೆಟ್ ಬೆಲೆ ಅಧಿಕವಾಗಿರುತ್ತದೆ.

ತಾಜ್ ಮಹಲ್ ಎಂಬುದು ಮುಗಿಯದ ಪುಸ್ತಕ. ಅಲ್ಲಿ ಹುಡುಕಿದಷ್ಟೂ ಸತ್ಯಗಳು, ಮುಗಿಯದಷ್ಟು ಅಚ್ಚರಿಗಳು, ಅದ್ಭುತಗಳ ಗೂಡು. ಇಂತಹ ತಾಜ್‌ಮಹಲ್‌ನಲ್ಲಿ ಅದೆಷ್ಟು ಸಿನಿಮಾ ಶೂಟಿಂಗ್‍ ಗಳಾದವೋ, ಅದೆಷ್ಟು ಜೋಡಿಗಳ ಫೊಟೋ ಶೂಟ್‌ಗಳಾದವೋ, ಅದೆಷ್ಟು ಜನರು ಪರಸ್ಪರ ಪ್ರೀತಿ ಹೇಳಿಕೊಂಡರೋ, ಎಷ್ಟೊಂದು ಮನಸುಗಳು ಹಗುರಾಗಿ ಪ್ರೀತಿಯ ಸಹಾನುಭೂತಿ ಪಡೆದವೋ ಆ ಸುಂದರ ಸ್ಮಾರಕಕ್ಕಷ್ಟೇ ಗೊತ್ತು. ಇಂದಿಗೂ ಅಲ್ಲಿಗೆ ಬರುವ ಸಿನಿ ಚಿತ್ರತಂಡಗಳ ಸಂಖ್ಯೆ ಕಮ್ಮಿಯಾಗಿಲ್ಲ. ಕಳೆದ ವರ್ಷವಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಅಟ್ರಾಂಗಿ ರೇ ಚಿತ್ರತಂಡ ಅಲ್ಲಿ ಶೂಟಿಂಗ್ ಮಾಡಿತ್ತು.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author