ನವಿಲೂರಿನಲ್ಲಿ ರಕ್ತದೋಕುಳಿ

ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ನವಿಲೂರಿನಲ್ಲಿ ಕೊಲೆಪಾತಕನೊಬ್ಬ ಅಟ್ಟಹಾಸ ಮೆರೆದಿದ್ದಾನೆ.ಕೊಲೆಪಾತಕನ ಹುಚ್ಚಾಟಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.


ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಚ್ಚಿ ಕೊಲೆಗೈದ ಪಾತಕ ಬಿಡಿಸಲು ಬಂದ ನಾಲ್ವರ ಮೇಲೆ ಲಾಂಗ್ ಬೀಸಿದ್ದಾನೆ.ಕೈನಲ್ಲಿ ಲಾಂಗ್ ಹಿಡಿದು ಸಿಕ್ಕಸಿಕ್ಕವರ ಮೇಲೆ ಬೀಸಿದ್ದಾನೆ.ಈರಯ್ಯ @ ಕುಂಡ ಎಂಬಾತನಿಂದ ಕೃತ್ಯ ನಡೆದಿದೆ.ಜೈಲಿನಿಂದ ಹೊರ ಬಂದಿದ್ದ ಕೊಲೆಗಡುಕನ ಅಟ್ಡಹಾಸಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.


ಕುಡಿದ ಅಮಲಿನಲ್ಲಿದ್ದ ಈರಯ್ಯ 2ನೇ ಪತ್ನಿಯನ್ನು ಕೊಚ್ಚಿ ಕೊಲೆಗೈದಿದ್ದಾನೆ.


ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದ ನಾಲ್ವರ ಮೇಲೂ ಲಾಂಗ್ ಬೀಸಿದ್ದಾನೆ.10 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಕೊಲೆಗೈದು ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದ ಕೊಲೆಪಾತಕಿ
ಇಂದು ಕುಡಿದ ಅಮಲಿನಲ್ಲಿ ಎರಡನೆಯ ಪತ್ನಿ ನಿಂಗಮ್ಮಳನ್ನ ದಾರುಣವಾಗಿ ಕೊಚ್ಚಿಹಾಕಿದ್ದಾನೆ. ನಿಂಗಮ್ಮ 7ತಿಂಗಳ ಗರ್ಭಿಣಿಯಾಗಿದ್ದಾಳೆ. ನಿಂಗಮ್ಮಳ ತಾಯಿ ಮತ್ತು ತಂದೆ ಮೇಲೂ ಗಂಭೀರ ಹಲ್ಲೆ ನಡೆಸಿರುವ ಕಟುಕನನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ.ಹಲ್ಲೆಗೊಳಗಾದ ನಾಲ್ವರ ಸ್ಥಿತಿ ಚಿಂತಾಜನಕ ಎನ್ನಲಾಗಿದೆ. ಉದ್ವಿಗ್ನ ಸ್ಥಿತಿಯಲ್ಲಿರುವ ನವಿಲೂರಿನಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.
ಗಾಯಾಳುಗಳನ್ನ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ…

Enjoyed this article? Stay informed by joining our newsletter!

Comments

You must be logged in to post a comment.

About Author