Featured Image Source : Explorebees
ಕರ್ನಾಟಕದಲ್ಲಿ ಅದೆಷ್ಟೋ ಪ್ರಸಿದ್ಧ ದೇವಸ್ಥಾನಗಳು, ನದಿಗಳು, ಬೆಟ್ಟಗಳಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಇಲಾಖೆ ಪರಿಗಣಿಸಿರುವ ಹಲವು ತಾಣಗಳಿವೆ. ಪ್ರತಿನಿತ್ಯ ಸಾವಿರಾರು ಮಂದಿ ಈ ಸ್ಥಳಗಳಿಗೆ ಭೇಟಿ ನೀಡಿ ಖುಷಿ ಪಡುತ್ತಾರೆ. ಆಯಾ ಜಿಲ್ಲೆಗಳಲ್ಲಿ ತನ್ನದೇ ಆದ ಐತಿಹ್ಯವಿರುವ, ಪೌರಾಣಿಕ ಹಿನ್ನಲೆಯಿರುವ ಸ್ಥಳಗಳಿವೆ. ತಮ್ಮದೇ ಆದ ಸ್ಥಳ ಪುರಾಣದಿಂದ ಸ್ಥಳಗಳು ಪ್ರಸಿದ್ಧಿ ಹೊಂದಿರುತ್ತವೆ. ಇದು ಅಂಥಹದ್ದೇ ಒಂದು ಪ್ರದೇಶ. ಈ ಸ್ಥಳ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿದೆ. ಇಲ್ಲಿನ ದೇವರಾಯನದುರ್ಗದ ಸಮೀಪವಿರುವ ಒಂದು ಪ್ರೇಕ್ಷಣೀಯ ಸ್ಥಳ.
ತುಮಕೂರನ್ನು ಕಲ್ಪತರು ನಾಡು ಎಂದು ಸಹ ಕರೆಯುತ್ತಾರೆ. ತುಮಕೂರು ಜಿಲ್ಲೆಯಲ್ಲಿ ಹಲವಾರು ಪ್ರಸಿದ್ಧ ತಾಣಗಳಿವೆ. ಇಲ್ಲಿ ಸಾಕಷ್ಟು ನದಿ, ಬೆಟ್ಟ, ಗುಡ್ಡ, ಪ್ರಸಿದ್ಧ ದೇವಾಲಯಗಳು ಸಹ ಇವೆ. ತುಮಕೂರಿನ ಬೆಟ್ಟ ಗುಡ್ಡಗಳ ನಡುವೆ ಒಂದು ನೈಸರ್ಗಿಕ ಚಿಲುಮೆಯೊಂದಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ಚಿಲುಮೆಯನ್ನು ನಾಮದ ಚಿಲುಮೆ ಎಂಬ ಹೆಸರಿನಿಂದ ಕರೆಯುತ್ತಾರೆ. ಆದರೆ, ಈ ನೀರು ಹರಿಯುವ ಮೂಲವು ಇಂದಿನವರೆಗೂ ತಿಳಿದಿಲ್ಲ.ಈ ಚಿಲುಮೆಗೂ ರಾಮನಿಗೂ ಗಾಢ ನಂಟಿದೆ ಎಂದು ಹೇಳುತ್ತಾರೆ.
ನಾಮದ ಚಿಲುಮೆಯ ವಿಶೇಷತೆಯೇನು..? ಇದು ತುಮಕೂರಿನಿಂದ ಎಷ್ಟು ದೂರದಲ್ಲಿದೆ..? ಈ ಸ್ಥಳಕ್ಕೆ ನಾಮದ ಚಿಲುಮೆ ಎಂಬ ಹೆಸರ್ಯಾಕೆ ಬಂತು..? ಈ ಚಿಲುಮೆಗೂ ರಾಮನಿಗೂ ಇರುವ ಗಾಢ ನಂಟೇನು..ಮೊದಲಾದ ವಿಚಾರಗಳ ಕುರಿತು ವಿವರವಾಗಿ ತಿಳಿಯೋಣ..
ಸೀತೆ ನೀರು ಕುಡಿದಿದ್ದ ನೀರಿನ ಚಿಲುಮೆ
Image Source : Tourism in karnataka
ನಾಮದ ಚಿಲುಮೆ..ಹೆಸರು ಕೇಳಿದ ಕೂಡಲೇ ನೀರಿರುವ ಸ್ಥಳಕ್ಕೆ ಇಂಥಹಾ ಹೆಸರು ಯಾಕೆ ಬಂತು ಎಂಬುದಾಗಿ ಅಚ್ಚರಿಯಾಗಬಹುದು. ನೀರು ಮತ್ತು ನಾಮಕ್ಕೇನು ಸಂಬಂಧ ಎಂಬ ಪ್ರಶ್ನೆ ಮೂಡಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ.
ನಾಮದ ಚಿಲುಮೆಗೂ ರಾಮ, ಲಕ್ಷ್ಮಣ, ಸೀತೆಗೂ ಅವಿನಾವಭಾವ ಸಂಬಂಧವಿದೆ ಎಂದು ಹೇಳುತ್ತಾರೆ. ಯಾಕೆಂದರೆ. ರಾಮ, ಸೀತೆ, ಲಕ್ಷ್ಮಣರಯ ವನವಾಸದ ಸಂದರ್ಭದಲ್ಲಿ ಇಲ್ಲಿಯೇ ಇದ್ದರು ಎಂದು ಪುರಾಣದಲ್ಲಿ ತಿಳಿಸಲಾಗಿದೆ. ಇಲ್ಲಿ ಕಾಡಿನಲ್ಲಿದ್ದ ಸಂದರ್ಭ ರಾಮನು ಹಣೆಗೆ ತಿಲಕವನ್ನಿಡಲು ನೀರನ್ನು ಹುಡುಕಿದನು. ಆದರೆ ಸುತ್ತ ಎಷ್ಟು ದೂರದವರೆಗೆ ಹುಡುಕಿದರೂ ನೀರಿನ ಸೆಲೆ ಎಲ್ಲೂ ಕಾಣಿಸಲ್ಲಿಲ್ಲ. ಆಗ ರಾಮನು ಬಂಡೆಗೆ ಬಾಣ ಹೂಡಿದನು. ಶ್ರೀರಾಮನ ಶಕ್ತಿಯಿಂದಾಗಿ ಬಂಡೆಯಲ್ಲಿ ರಂಧ್ರವಾಗಿ ನೀರು ಚಿಮ್ಮಿತು. ಹೀಗಾಗಿ ಈ ಸ್ಥಳವನ್ನು ನಾಮದ ಚಿಲುಮೆ ಎನ್ನುತ್ತಾರೆ.
ರಾಮ, ಸೀತೆ, ಲಕ್ಷ್ಮಣರು ಇಲ್ಲಿ ವಾಸಿಸುತ್ತಿದ್ದರು ಎಂಬ ಪುರಾಣದ ಐತಿಹ್ಯಕ್ಕೆ ಪುರಾವೆಯೆಂಬಂತೆ ಈ ಚಿಲುಮೆಯ ಬಳಿ ರಾಮನ ಪಾದದ ಗುರುತುನ್ನು ನೋಡಬಹುದು. ಹೀಗಾಗಿ ಇಲ್ಲಿ ಪ್ರವಾಸಿಗರು ಯಾವುದೇ ರೀತಿಯ ಹಾನಿ ಮಾಡದಂತೆ ಬೇಲಿಯನ್ನು ನಿರ್ಮಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಈ ಸ್ಥಳವನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದೆ.
ಬರಗಾಲದಲ್ಲೂ ಬತ್ತಿ ಹೋಗದ ನೀರಿನ ಚಿಲುಮೆ..!
Image Source : Namma Tumkur
ನಾಮದ ಚಿಲುಮೆ ಒಂದು ಸಣ್ಣ ನೀರಿನ ಹರಿವನ್ನು ಹೊಂದಿರುವ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ತ್ರೇತಾ ಯುಗದಿಂದಲೂ ಈ ನೀರಿನ ಹರಿವು ಹರಿಯುತ್ತಿದೆ ಎಂದು ಹೇಳಲಾಗುತ್ತದೆ, ರಾಮ-ಸೀತಾ ವನವಾಸದ ಸಮಯದಲ್ಲಿ, ಸೀತಾ ತನ್ನ ಬಾಯಾರಿಕೆಯನ್ನು ನೀಗಿಸಲು ಇಲ್ಲಿ ನೀರನ್ನು ಕುಡಿದಿದ್ದಳು ಎಂಬ ಪ್ರತೀತಿಯೂ ಇದೆ. ಆಶ್ವರ್ಯ ಚಕಿತಗೊಳಿಸುವ ವಿಚಾರವೆಂದರೆ, ಎಂಥಹಾ ಬರಗಾಲದ ಸಮಯದಲ್ಲಿ ಈ ನೀರಿನ ಬುಗ್ಗೆಯಲ್ಲಿ ನೀರು ಬತ್ತಿ ಹೋಗುವುದಿಲ್ಲ. ನೀರು ಹರಿದು ಹೋಗುತ್ತಲೇ ಇರುತ್ತದೆ.
ಈ ನಾಮದ ಚಿಲುಮೆಯಿಂದ ಬರುವ ನೀರನ್ನು ಪವಿತ್ರ ನೀರೆಂದು ಪರಿಗಣಿಸಲಾಗುತ್ತದೆ. ಇಲ್ಲಿಗೆ ಬರುವ ಭಕ್ತರು ಇದನ್ನು ತೀರ್ಥವೆಂದು ಪರಿಗಣಿಸಿ ಭಕ್ತಿಯಿಂದ ಕುಡಿಯುತ್ತಾರೆ. ಇಲ್ಲಿ ವರ್ಷವಿಡೀ ಸಣ್ಣ ರಂಧ್ರದಿಂದ ನೀರು ಹೊರಬರುತ್ತದೆ ಮತ್ತು ಎಂದಿಗೂ ಬರಿದಾವುದಿಲ್ಲ. ನಾಮದ ಚಿಲುಮೆಯ ಸುತ್ತಮುತ್ತಲ ಪ್ರದೇಶವನ್ನು ತಂಪಾದ ವಾತಾವರಣದಿಂದ ಕೂಡಿದ್ದು, ಮನಸ್ಸಿಗೆ ಮುದ ನೀಡುತ್ತದೆ. ಪ್ರವಾಸಿಗರು ಖುಷಿಯಿಂದ ಒಂದು ದಿನವನ್ನು ನಾಮದ ಚಿಲುಮೆಯಿರುವ ಪ್ರದೇಶದಲ್ಲಿ ಕಳೆಯಬಹುದಾಗಿದೆ.
ನಾಮದ ಚಿಲುಮೆಯಿರುವ ಸ್ಥಳ ದಟ್ಟವಾದ ಕಾಡು ಮತ್ತು ಸುಂದರವಾದ ಜಿಂಕೆ ಸಫಾರಿಗಳನ್ನು ಹೊಂದಿದೆ. ಜಿಂಕೆ ಸಫಾರಿ ಮಾತ್ರವಲ್ಲದೆ, ನಾಮದ ಚಿಲುಮೆಯಲ್ಲಿ ಅರಣ್ಯ ಇಲಾಖೆ ಕೆಲವೊಂದು ಔಷಧೀಯ ಸಸ್ಯಗಳ ಪೋಷಣೆಗೆ ನರ್ಸರಿಯನ್ನು ಸಹ ನಿರ್ಮಿಸಿದೆ. ಸುಮಾರು 300 ಬಗೆಯ ಅಪರೂಪದ ಔಷಧೀಯ ಸಸ್ಯಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಅಲ್ಲದೆ ಸುಂದರವಾದ ಟ್ರಾವೆಲರ್ಸ್ ಬಂಗ್ಲೋವನ್ನು ಸಹ ಹೊಂದಿದೆ.
ನಾಮದ ಚಿಲುಮೆ ಸ್ಥಳವು ತುಮಕೂರಿನಿಂದ ಸುಮಾರು 14 ಕಿ.ಮೀ ಮತ್ತು ಬೆಂಗಳೂರಿನಿಂದ 80 ಕಿ.ಮೀ ದೂರದಲ್ಲಿದೆ. ಈ ಸ್ಥಳವು ದೇವರಾಯನದುರ್ಗಕ್ಕೆ ಹೋಗುವ ದಾರಿಯಲ್ಲಿ ಬರುತ್ತದೆ. ಹಲವಾರು ಬಸ್ಸುಗಳು ಈ ದಾರಿಯಲ್ಲಿ ಹೋಗುವ ಕಾರಣ ಇಲ್ಲಿಗೆ ತಲುಪುವುದು ಕಷ್ಟದ ಕೆಲಸವೇನಲ್ಲ. ತುಮಕೂರು ನಗರವನ್ನು ತಲುಪಿದರೆ ಆಟೋ, ಟ್ಯಾಕ್ಸಿ ಪಡೆದು ಸಹ ನಾಮದ ಚಿಲುಮೆ ಪ್ರದೇಶಕ್ಕೆ ತಲುಪಬಹುದು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
You must be logged in to post a comment.