ವೀಸಾ ಸಿಗದಿದ್ದರೆ ಈ ದೇವಾಲಯಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ..!, ಭಾರತದ ಪ್ರಸಿದ್ಧ ವೀಸಾ ದೇವಾಲಯಗಳಿವು

ವೀಸಾ ಸಿಗದಿದ್ದರೆ ಈ ದೇವಾಲಯಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ..!, ಭಾರತದ ಪ್ರಸಿದ್ಧ ವೀಸಾ ದೇವಾಲಯಗಳಿವು

 

ದೇಶ ಸುತ್ತಿ ನೋಡು..ಕೋಶ ಓದು ಅಂತಾರೆ. ಆದರೆ ಭಾರತೀಯರಿಗೆ ಎಲ್ಲಕ್ಕಿಂತ ಹೆಚ್ಚಾಗಿ ವಿದೇಶ ವ್ಯಾಮೋಹವೇ ಹೆಚ್ಚು. ಸ್ವದೇಶದಲ್ಲಿ ಅದೆಷ್ಟೇ ಉತ್ತಮ ಉದ್ಯೋಗ, ಅನುಕೂಲ ಇದ್ದರೂ ವಿದೇಶದ ವ್ಯಾಮೋಹ. ವಿದ್ಯಾಭ್ಯಾಸ, ಉದ್ಯೋಗ ಹೀಗೆ ಹಲವು ನೆಪದಲ್ಲಿ ವಿದೇಶಕ್ಕೆ ಹೋಗಬೇಕೆಂದು ಬಯಸುತ್ತಾರೆ. ವಿದೇಶದಲ್ಲೇ ವಿದ್ಯಾಭ್ಯಾಸ ಪೂರೈಸಬೇಕು, ವಿದೇಶದಲ್ಲಿ ಅಂತಾರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡಬೇಕು ಅನ್ನೋದು ಹಲವರ ಕನಸು. ಹೀಗೆ ಹಲವು ಮಂದಿಗೆ ಫ್ಲೈಟ್ ಹತ್ತಿ ವಿದೇಶದಲ್ಲಿ ಲ್ಯಾಂಡ್ ಆಗುವ ಕನಸಿದ್ದರೂ ವೀಸಾ ಸಿಗುವುದೇ ಸಮಸ್ಯೆಯಾಗುತ್ತದೆ.

 

ವಿದೇಶಕ್ಕೆ ಹೋಗಲು ವೀಸಾ ದೊರೆಯಲೆಂದೇ ಅನೇಕ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸುವವರೂ ಇದ್ದಾರೆ. ಆದರೆ ನಿಮಗೆ ಗೊತ್ತಾ, ಭಾರತದಲ್ಲಿ ವೀಸಾ ದೊರೆಯಲಿ ಎಂದು ಪ್ರಾರ್ಥಿಸಲೆಂದೇ ವಿಶೇಷ ದೇವಾಲಯಗಳಿವೆ. ಹೌದು, ಇದು ಅಚ್ಚರಿ ಎನಿಸಿದರೂ ನಿಜ. ದೇಶದಲ್ಲಿ ಹಲವು ದೇವಾಲಯಗಳಲ್ಲಿ ವೀಸಾ ಸಿಗಲಿ ಎಂದು ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇವುಗಳನ್ನು ವೀಸಾ ದೇವಾಲಯವೆಂದೇ ಕರೆಯಲಾಗುತ್ತದೆ. ಈ ದೇವಾಲಯಕ್ಕೆ ಹೋಗಿ ಭಕ್ತಿಯಿಂದ ವೀಸಾ ಸಿಗಲಿ ಎಂದು ಪ್ರಾರ್ಥಿಸಿದರೆ ಯಾವುದೇ ತೊಂದರೆಯಿಲ್ಲದೆ ವೀಸಾ ನಮ್ಮ ಕೈ ಸೇರುತ್ತದೆ ಎಂಬ ನಂಬಿಕೆಯಿದೆ. ಹಾಗಾದ್ರೆ ಬನ್ನಿ ಆ ದೇವಾಲಯಗಳು ಯಾವುವು ನೋಡೋಣ.

 

ಹೈದರಾಬಾದ್‌ನಲ್ಲಿರುವ ಚಿಲ್ಕೂರು ಬಾಲಾಜಿ ದೇವಸ್ಥಾನ, ದೆಹಲಿಯ ಭಜರಂಗಬಲಿ ದೇವಾಲಯ, ಪಂಜಾಬ್‌ನಲ್ಲಿರುವ ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರ, ಅಹ್ಮದಾಬಾದ್‌ನ ವೀಸಾ ಹನುಮಾನ್ ದೇವಾಲಯ ವೀಸಾ ದೇವಾಲಯವೆಂದೇ ಪ್ರಸಿದ್ಧಿಯಾಗಿದೆ. ಈ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರೆ ಎಂಥಹಾ ಅಡೆತಡೆಗಳಿದ್ದರೂ ದೂರವಾಗಿ ಸುಲಭವಾಗಿ ವೀಸಾ ದೊರೆಯುತ್ತದೆ ಅನ್ನೋದು ಭಕ್ತರ ನಂಬಿಕೆ.

 

ಹೈದರಾಬಾದ್‌ನಲ್ಲಿರುವ ಚಿಲ್ಕೂರು ಬಾಲಾಜಿ ದೇವಸ್ಥಾನ

chilkur balaji temple hyderabadImage Credits : Holidify

ಹೈದರಾಬಾದ್‌ನಲ್ಲಿರುವ ಚಿಲ್ಕೂರು ಬಾಲಾಜಿ ದೇವಸ್ಥಾನ, ವೀಸಾ ಬಾಲಾಜಿ ದೇವಾಲಯ ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿ ಸಾವಿರಾರು ಮಂದಿ ಭಕ್ತರು ಬೇಡಿಕೆ ಸಲ್ಲಿಸಿ ತಮ್ಮ ವೀಸಾ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ. ಈ ದೇವಾಲಯದ ಇನ್ನೊಂದು ವಿಶೇಷತೆಯೆಂದು, ಇದು ಯುಎಸ್ ಗೆ ವೀಸಾ ಸಮಸ್ಯೆಗಳನ್ನು ಬಗೆಹರಿಸುವ ವಿಷಯದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ಈ ದೇವಾಲಯದಲ್ಲಿ ಹೈದರಾಬಾದ್‌ನ ಹಲವಾರು ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಉದ್ಯೋಗಿಗಳು ಯುಎಸ್‌ಎ ವೀಸಾದ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ.

 

ಹೈದರಾಬಾದಿನ ಹೊರವಲಯದಲ್ಲಿರುವ ಚಿಲ್ಕೂರಿನ ಉಸ್ಮಾನ್ ಸಾಗರದ ತೀರದಲ್ಲಿ ನೆಲೆನಿಂತಿದ್ದಾನೆ ಈ ವೀಸಾ ವೆಂಕಟೇಶ್ವರ. ಇಷ್ಟಕ್ಕೂ ಈ ತಿಮ್ಮಪ್ಪನಿಗೆ ಈ ಹೆಸರು ಬರಲು ಒಂದು ವಿಶೇಷವಾದ ಕಾರಣವಿದೆ. ಹೈದರಾಬಾದಿನ ಬಹಳಷ್ಟು ವಿದ್ಯಾರ್ಥಿಗಳು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಸೀಟು ಸಿಗಲಿ ಎಂದು ಹರಕೆ ಹೊರುತ್ತಿದ್ದರು. ಬಹಳಷ್ಟು ಮಂದಿಗೆ ವೆಂಕಟೇಶ್ವರ ಅಭಯಹಸ್ತ ನೀಡಿದ ಮೇಲೆ ದೇವಾಲಯ ಇನ್ನಷ್ಟು ಜನಪ್ರಿಯವಾಯಿತು. ದೇವರಿಗೆ ವೀಸಾ ವೆಂಕಟೇಶ್ವರ ಎಂಬ ಹಸರು ಬಂತು. ಇಲ್ಲಿನ ವಿಶೇಷತೆಯೆಂದರೆ  ಈ ದೇವಾಲಯದಲ್ಲಿ ಯಾವುದೇ ಕಾಣಿಕೆ ಹುಂಡಿ ಇಲ್ಲ.

 

 ಈ ದೇವಸ್ಥಾನದ ವಿಶೇ‍ಷತೆಯೆಂದರೆ ಈ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ತಮ್ಮ ಬೇಡಿಕೆಯನ್ನು ದೇವರ ಮುಂದಿಟ್ಟು ದೇವಸ್ಥಾನಕ್ಕೆ 11 ಸುತ್ತು ಬರಬೇಕು. ತಮ್ಮ ಬೇಡಿಕೆ ಈಡೇರಿದ ನಂತರ ಮರಳಿ ಬಂದು ಮತ್ತೊಮ್ಮೆ ದೇವಾಲಯಕ್ಕೆ 108 ಸುತ್ತು ಸುತ್ತಬೇಕು. ವೀಸಾ ದೊರಕಲೆಂದು ಬೇಡಿಕೆ ಸಲ್ಲಿಸಲು ಸಾಕಷ್ಟು ಮಂದಿ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ವೀಸಾ ಸಮಸ್ಯೆಯಿಂದ  ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ ಪ್ರತಿಯೊಬ್ಬರ ಸಮಸ್ಯೆಯೂ ದೇವಾಲಯದ ಭೇಟಿಯ ನಂತರ ಸರಿಹೋಗಿದೆ. ಪ್ರತಿದಿನ ದೇವಸ್ಥಾನವು ಭಕ್ತರಿಂದ ತುಂಬಿರುತ್ತದೆ. ವೀಸಾ ಗಾಡ್ ಗೆ ಬೇಡಿಕೆ ಸಲ್ಲಿಸಲು ಒಂದು ವರ್ಷದಲ್ಲಿ ಲಕ್ಷಾಂತರ ಮಂದಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

 

ಪಂಜಾಬ್‌ನಲ್ಲಿರುವ ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರ

talhan shaib temple gurudwarImage Credits : mapio.net

150 ವರ್ಷಗಳಿಗಿಂತಲೂ ಹೆಚ್ಚು ಹಳೆಯದಾದ ಗುರುದ್ವಾರವಾಗಿದೆ, ಪಂಜಾಬ್‌ನಲ್ಲಿರುವ ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರ. ಇದು ಪಂಜಾಬಿಗಳ ಪವಿತ್ರ ಕ್ಷೇತ್ರವಾಗಿದೆ. ಪಂಜಾಬ್‌ನ ತಾಹನ್ ಎಂಬ ಗ್ರಾಮದಲ್ಲಿರುವ ಈ ಗುರುದ್ವಾರಕ್ಕೆ ಆಗಮಿಸಿದರೆ ವೀಸಾ ಸಮಸ್ಯೆ ಬಗೆಹರಿಯುತ್ತದೆ ಅನ್ನೋದು ಭಕ್ತರ ನಂಬಿಕೆ. ಹಾಗಾಗಿ ದೇಶದ ಹಲವೆಡೆಯಿಂದ ಭಕ್ತರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.

 

ಅಹ್ಮದಾಬಾದ್‌ನ ವೀಸಾ ಹನುಮಾನ್ ದೇವಾಲಯ

hanuman ji mandir ahmedabadImage credits : Trawell.in

ಅಹ್ಮದಾಬಾದ್‌ನ ವೀಸಾ ಹನುಮಾನ್ ದೇವಾಲಯ ಇಲ್ಲಿಗೆ ಬರುವ ಭಕ್ತರು ಸಲ್ಲಿಸುವ ವಿಶಿಷ್ಟ ಹರಕೆಗೇ ಪ್ರಸಿದ್ಧಿ ಹೊಂದಿದೆ. ವಿದೇಶಕ್ಕೆ ಹೋಗ ಬಯಸುವವರು ಇಲ್ಲಿನ ದೇವರಿಗೆ ಆಟಿಕೆ ವಿಮಾನಗಳನ್ನು ಸಲ್ಲಿಸುತ್ತಾರೆ. ಹೀಗೆ ಆಟಿಕೆ ವಿಮಾನವನ್ನು ಅರ್ಪಿಸುವುದರಿಂದ ವಿದೇಶ ಪ್ರಯಾಣದ ಕನಸು ನನಸಾಗುತ್ತದೆ ಎಂಬುದು ಭಕ್ತರ ನಂಬಿಕೆ. ಹಾಗಾಗಿ ಈ ದೇವಾಲಯದಲ್ಲಿ ವಿಮಾನದ ರಾಶಿಯನ್ನೇ ನೋಡಬಹುದು. ವೀಸಾ ಸಮಸ್ಯೆಗಳೇನೇ ಇದ್ದರೂ ಇಲ್ಲಿಗೆ ಬಂದು ಪ್ರಾರ್ಥಿಸಿದರೆ ಸಮಸ್ಯೆ ಪರಿಹಾರವಾಗುತ್ತದಂತೆ ಎಂದು ಹೇಳಲಾಗುತ್ತದೆ.

 

ವೀಸಾ ಹನುಮಾನ್ ಎಂದು ಕರೆಯಲ್ಪಡುವ ಅಹ್ಮದಾಬಾದ್‌ನ ಖದಿಯ ಹನುಮಾನ್ ದೇವಸ್ಥಾನವು ವೀಸಾ ಸಮಸ್ಯೆಯನ್ನು ಬಗೆಹರಿಸುವ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಪ್ರಾರ್ಥನೆ ಮಾಡಿದ್ರೆ ವೀಸಾ ಸಮಸ್ಯೆ ಸರಿಪಡಿಸಬಹುದು. ಇಲ್ಲಿ ಪ್ರತೀ ಶನಿವಾರ ವೀಸಾ ಸಂಬಂಧಿ ಕೌನ್ಸೆಲಿಂಗ್‌ ನಡೆಯುತ್ತದೆ. ಇದರಲ್ಲಿ ಭಾಗವಹಿಸಲು ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

 

ದೆಹಲಿಯ ಭಜರಂಗಬಲಿ ದೇವಾಲಯ

chamatkari visa wale mandir delhiImage Credits : Facebook

ನವದೆಹಲಿಯಲ್ಲಿರುವ ಭಜರಂಗಬಲಿ ದೇವಾಲಯ, ವೀಸಾ ದೇವಾಲಯವೆಂದೇ ಹೆಚ್ಚು ಪ್ರಸಿದ್ಧಿ ಹೊಂದಿದೆ. ಇಲ್ಲಿನ ನೆಬ್ ಸರೈ ಏರಿಯಾದಲ್ಲಿ ಈ ದೇವಾಲಯವಿದ್ದು, ಮಂದಿರಲ್ಲಿ ಹನುಮಾನ್ ನನ್ನು ಆರಾಧಿಸಲಾಗುತ್ತಿದೆ. ಈ ದೇವಾಲಯಕ್ಕೆ ಬಂದು ಹನುಮನನ್ನು ಬೇಡಿಕೊಂಡರೆ ವೀಸಾ ದೊರೆಯುತ್ತದೆ ಅನ್ನುವುದು ಜನರ ನಂಬಿಕೆ. ಈ ದೇವಾಲಯವನ್ನು 2007ರಲ್ಲಿ ನಿರ್ಮಾಣ ಮಾಡಲಾಯಿತು. ದೇವಾಲಯಕ್ಕೆ ಬಂದು ಹೋಗುವ ಭಕ್ತರಿಗಾಗಿ ದೇವಸ್ಥಾನದ ಆಡಳಿತ ಮಂಡಳಿ ರಿಜಿಸ್ಟರ್ ಬುಕ್ ನ್ನು ಸಹ ಇಟ್ಟುಕೊಂಡಿದೆ. ಈ ದೇವಾಲಯಕ್ಕೆ ಬರುವ ಭಕ್ತರು ಬಿಳಿ ಪೇಪರ್‌ನಲ್ಲಿ ತಮ್ಮ ಬೇಡಿಕೆಗಳನ್ನು ಬರೆದು ದೇವರಿಗೆ ಸಲ್ಲಿಸುತ್ತಾರೆ. ತಮ್ಮ ಬೇಡಿಕೆ ಈಡೇರಿದ ನಂತರ ಮತ್ತೆ ಹಿಂತಿರುಗಿ ದೇವಾಲಯಕ್ಕೆ ಬಂದು ರಿಜಿಸ್ಟರ್‌ನಲ್ಲಿ ಥ್ಯಾಂಕ್ಯೂ ಎಂದು ಬರೆಯುತ್ತಾರೆ.

 

ಪ್ರಾಚೀನ್ ಹನುಮಾನ್ ಮಂದಿರ

Pracheen Hanuman mandir delhi conacoughtImage Credits : The Divine India

ದೆಹಲಿಯ ಕೋನೋಟ್ ಪ್ರದೇಶದಲ್ಲಿರುವ ಪ್ರಾಚೀನ್ ಹನುಮಾನ್ ಮಂದಿರಕ್ಕೂ ವೀಸಾ ದೊರೆಯಲೆಂದು ಬೇಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೆಹಲಿಯ ಅತ್ಯಂತ ಪುರಾತನ ದೇವಾಲಯಗಳಲ್ಲಿ ಇದು ಒಂದಾಗಿದೆ. ವೀಸಾ ಪಡೆಯಲು ಜನರು ನಿಲ್ಲುವ ಸಾಲಿಗಿಂತಲೂ ಹೆಚ್ಚು ಉದ್ದದ ಸಾಲು ಈ ದೇವಸ್ಥಾನದ ಎದುರು ಕಂಡು ಬರುತ್ತದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author