ಪ್ರಸಿದ್ಧ ತೀರ್ಥಕ್ಷೇತ್ರ ಪುರಿ ಜಗನ್ನಾಥ ದೇವಾಲಯ; ಗಾಳಿಯ ವಿರುದ್ಧ ದಿಕ್ಕಿಗೆ ಹಾರುತ್ತದೆ ದೇವಾಲಯದ ಮೇಲಿರುವ ಧ್ವಜ..!

ಪ್ರಸಿದ್ಧ ತೀರ್ಥಕ್ಷೇತ್ರ ಪುರಿ ಜಗನ್ನಾಥ ದೇವಾಲಯ; ಗಾಳಿಯ ವಿರುದ್ಧ ದಿಕ್ಕಿಗೆ ಹಾರುತ್ತದೆ ದೇವಾಲಯದ ಮೇಲಿರುವ ಧ್ವಜ..!

puri jagannath temple

Featured Image Credits : Orissa Post

ಭಾರತ ದೇಶವು ಪ್ರಸಿದ್ಧ ತೀರ್ಥಕ್ಷೇತ್ರಗಳಿಂದಲೇ ವಿಶ್ವದ ಹಲವೆಡೆ ಹೆಸರುವಾಸಿಯಾಗಿದೆ. ಇಲ್ಲಿರುವ ದೇವಾಲಯಗಳು ವಿಭಿನ್ನ ವಾಸ್ತುಶಿಲ್ಪಗಳು, ಕೆತ್ತನೆಗಳು ಅದ್ಭುತವಾಗಿದ್ದು, ಪ್ರವಾಸಿಗರಲ್ಲಿ ಬೆರಗು ಮೂಡಿಸುತ್ತವೆ. ಅದ್ಭುತ ಹಿನ್ನೆಲೆಯನ್ನು ಪಡೆದುಕೊಂಡಿರುವ ದೇವಾಲಯಗಳಲ್ಲಿ ಒರಿಸ್ಸಾದ ಪುರಿಯ ಜಗನ್ನಾಥ ದೇವಾಲಯವೂ ಒಂದು. ಪುರಿಯ ಶ್ರೀ ಜಗನ್ನಾಥ ದೇವಾಲಯವು ಒಡಿಶಾ ರಾಜ್ಯದ ಪುರಿಯಲ್ಲಿರುವ ವಿಷ್ಣುವಿನ ಒಂದು ರೂಪವಾದ ಜಗನ್ನಾಥನಿಗೆ ಸಮರ್ಪಿತವಾದ ಪ್ರಮುಖ ಹಿಂದೂ ದೇವಾಲಯವಾಗಿದೆ.

ಪ್ರಸ್ತುತ ದೇವಾಲಯವನ್ನು 10ನೇ ಶತಮಾನದಿಂದ ಹಿಂದಿನ ದೇವಾಲಯದ ಸ್ಥಳದಲ್ಲಿ ಪುನರ್ ನಿರ್ಮಿಸಲಾಯಿತು. ಪೂರ್ವ ಗಂಗಾ ರಾಜವಂಶದ ಮೊದಲನೆಯ ರಾಜ ಅನಂತವರ್ಮನ್ ಚೋಡಗಂಗ ದೇವನಿಂದ ಈ ದೇವಾಲಯದ ನಿರ್ಮಾಣ ಕಾರ್ಯ ಆರಂಭವಾಯಿತು. ಮರದಿಂದಲೇ ನಿರ್ಮಿಸಲಾಗಿರುವ ಈ ಅದ್ಭುತ ದೇವಾಲಯವು ಭಾರತದ ಚಾರ್‌ಧಾಮ್ ತೀರ್ಥಯಾತ್ರೆಯ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ನಡೆಯುವ ವಾರ್ಷಿಕ ರಥೋತ್ಸವ ಹಾಗೂ ರಥಯಾತ್ರೆ ಹೆಸರುವಾಸಿಯಾಗಿದೆ.

ಇದನ್ನು ಓದಿ : ಯುರೋಪ್‍ನ ಮೊತ್ತ ಮೊದಲ ಹಿಂದೂ ದೇವಾಲಯ, ಲಂಡನ್‍ನ ಶ್ರೀ ಸ್ವಾಮಿ ನಾರಾಯಣ ಮಂದಿರ

ಪೌರಾಣಿಕ ಹಿನ್ನಲೆ

puri jagannath temple mystery

Image Credits : Facebook 

ಪುರಾಣದ ಪ್ರಕಾರ ಇಂದ್ರದ್ಯುಮ್ನ ಎಂಬ ರಾಜನಿಗೆ ಕನಸಿನಲ್ಲಿ ವಿಷ್ಣು ಕಾಣಿಸಿಕೊಂಡ ತರುವಾಯ ಇಂದ್ರದ್ಯುಮ್ನನು ಈ ದೇವಾಲಯವನ್ನು ಕಟ್ಟಿಸಿದ ಎನ್ನಲಾಗುತ್ತದೆ. ಒಮ್ಮೆ ಇಂದ್ರದ್ಯುಮ್ನ ರಾಜನು ಸಮೀಪದಲ್ಲಿರುವ ಪವಿತ್ರವಾದ ನದಿಯ ಜಲವನ್ನು ಪ್ರೋಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ಕಬ್ಬಿಣದ ಸಲಾಕೆಯೊಂದು ತೇಲುತ್ತಿರುವುದನ್ನು ಕಂಡನು. ಆ ಸಲಾಕೆಯು ತನ್ನ ಹೃದಯ, ಅದು ಭೂಮಿಯ ಮೇಲೆ ಶಾಶ್ವತವಾಗಿ ಉಳಿಯುವಂತೆ ಮಾಡು ಎಂದು ವಿಷ್ಣು ಪಿಸುಮಾತಿನಲ್ಲಿ ನುಡಿದಂತೆ ರಾಜನಿಗೆ ಭಾಸವಾಯಿತು. ನಂತರ ಜಗನ್ನಾಥ ದೇವರ ಬಳಿ ಓಡಿ ಹೋಗಿ, ಎಚ್ಚರಿಕೆಯಿಂದ ಅದನ್ನು ಅಲ್ಲಿ ಇರಿಸಿದನು.

ಇನ್ನೊಂದು ಕಥೆಯ ಪ್ರಕಾರ ಪಾಂಡವರು ಮಹಾಭಾರತ ಯುದ್ಧಾನಂತರ ಯಮರಾಜನ ತೀರ್ಥಯಾತ್ರೆಯನ್ನು ಪ್ರಾರಂಭಿಸಿದರು. ಆಗ ಸಪ್ತ ಋಷಿಗಳು ಮೋಕ್ಷ ಪ್ರಾಪ್ತಿಯಾಗಬೇಕೆಂದರೆ ಮೊದಲು ಚಾರ್ ಧಾಮ್‌ಗಳಿಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು. ಆ ಸಂದರ್ಭದಲ್ಲಿ ಚಾರ್ ಧಾಮಗಳಲ್ಲಿ ಒಂದಾದ ಪುರಿಯ ಜಗನ್ನಾಥ್ ದೇವಾಲಯಕ್ಕೂ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತದೆ.

ಗಾಳಿಯ ವಿರುದ್ಧ ದಿಕ್ಕಿಗೆ ಹಾರುವ ಧ್ವಜ..!

ಪುರಿ ಜಗನ್ನಾದ ದೇವಾಲಯದಲ್ಲಿ ಎಲ್ಲಕ್ಕಿಂತಲೂ ಹೆಚ್ಚು ಅಚ್ಚರಿಗೆ ಕಾರಣವಾಗುವಂಥದ್ದು ದೇವಾಲಯದ ಮೇಲಿರುವ ಧ್ವಜ. ಈ ಪವಿತ್ರ ದೇವಾಲಯದ ಮೇಲೆ ಪುರಾತನ ಕಾಲದಿಂದಲೂ ಧ್ವಜವೊಂದಿದೆ. ಈ ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿಗೆ ಹಾರುವುದೇ ಇಲ್ಲಿನ ವಿಶೇಷ. ವೈಜ್ಞಾನಿಕ ಸಂಗತಿಗಳಿಗೆ ಸವಾಲನ್ನು ಒಡ್ಡುವ ಈ ವಿಚಾರ ಇದುವರೆಗೂ ಯಾರಿಗೂ ಅರ್ಥವಾಗದೆ ಅಚ್ಚರಿಯಾಗಿಯೇ ಉಳಿದಿದೆ.

ಇದನ್ನು ಓದಿ : ಲಕ್ಷ್ಮೀ ಮಾತೆ ಯಾಕೆ ಸದಾ ಶ್ರೀಹರಿಯ ಪಾದಗಳನ್ನು ಒತ್ತುತ್ತಿರುವಳು..?

20 ಅಡಿ ಎತ್ತರದ ದೈವೀಶಕ್ತಿಯ ಸುದರ್ಶನ ಚಕ್ರ

puri jagannath temple idol story

Image Credits : Temple Diary

ಇನ್ನು, ದೇವಸ್ಥಾನದಲ್ಲಿ ಇರುವ ಸುದರ್ಶನ ಚಕ್ರವು 20 ಅಡಿ ಎತ್ತರ ಮತ್ತು ಒಂದು ಟನ್ ತೂಕವನ್ನು ಹೊಂದಿದೆ. ಇದನ್ನು ದೇವಾಲಯದ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಈ ಚಕ್ರದ ವಿಶೇಷ ಎಂದರೆ, ಪುರಿ ನಗರದ ಯಾವುದೇ ಭಾಗದಲ್ಲಿ ನಿಂತು ನೋಡಿದರೂ ಈ ಚಕ್ರವನ್ನು ನೋಡಬಹುದು. ಅಲ್ಲದೆ, ಈ ಚಕ್ರದ ಇನ್ನೊಂದು ವಿಶೇಷತೆಯೆಂದರೆ, ದೇವಾಲಯದ ಸುತ್ತಮುತ್ತ ಎಲ್ಲಿ ನಿಂತು ನೋಡಿದರೂ ಚಕ್ರ ನಿಮಗೆ ಅಭಿಮುಖವಾಗಿ ಇದ್ದಂತೆ ಕಾಣುವುದು. ವಿಶಿಷ್ಟ ರಚನೆ ಹಾಗೂ ಶಕ್ತಿಯನ್ನು ಹೊಂದಿರುವ ಈ ಸುದರ್ಶನ ಚಕ್ರದ ಮೇಲೆ ಯಾವುದೇ ಪಕ್ಷಿಗಳು, ಕೀಟಗಳು ಹಾಗೂ ವಿಮಾನಗಳು ಹಾರುವುದಿಲ್ಲ. ಅದು ಚಕ್ರದ ಒಂದು ದೈವ ಶಕ್ತಿಯ ಪ್ರಭಾವ ಎಂದು ಪರಿಗಣಿಸಲಾಗಿದೆ.

ನೆರಳು ಬೀಳದೇ ಇರುವುದು ಇಲ್ಲಿನ ವಿಶೇಷ

ಪುರಿ ಜಗನ್ನಾಥ ದೇವಾಲಯದ ಇನ್ನೊಂದು ವಿಶೇಷ ಎಂದರೆ ಇಲ್ಲಿ ನೆರಳು ಬೀಳದೇ ಇರುವುದು. ಈ ದೇವಾಲಯದ ಒಳಗೆ ಹಾಗೂ ಹೊರಗೆ ಯಾವುದೇ ಸಮಯದಲ್ಲಿ ನೆರಳು ಬೀಳುವುದಿಲ್ಲ. ಇದೊಂದು ಪ್ರಕೃತಿಯ ಪವಾಡ ಹಾಗೂ ದೈವ ಶಕ್ತಿ ಎಂದೇ ಜನರು ಮಾತನಾಡಿಕೊಳ್ಳುತ್ತಾರೆ. ಈ ದೇವಾಲಯದ ಒಳ ಪ್ರವೇಶಿಸಲು ನಾಲ್ಕು ಪ್ರಮುಖ ದ್ವಾರಗಳಿವೆ. ಇದರ ಮುಖ್ಯ ದ್ವಾರಕ್ಕೆ ಸಿಂಗದ್ವಾರ ಎಂದು ಕರೆಯುತ್ತಾರೆ. ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಸಂಗೀತಗಳ ತರಂಗ ಕೇಳಿಬರುತ್ತದೆ. ಇಲ್ಲಿಂದ ಒಳಗೆ ದೇವರ ದರ್ಶನಕ್ಕೆ ತೆರಳುವಾಗ ಶಬ್ದಗಳ ತರಂಗಗಳು ಅಥವಾ ಧ್ವನಿಯು ಕೇಳುತ್ತವೆ. ಅದೇ  ದ್ವಾರದ ಮೂಲಕ ಹಿಂತಿರುಗಿ ಬರುವಾಗ ಮಾತ್ರ ಈ ಧ್ವನಿಯು ಕೇಳುವುದಿಲ್ಲ.

ಪ್ರಪಂಚದ ಯಾವುದೇ ಸಮುದ್ರ ಪ್ರದೇಶಗಳಿಗೆ ಹೋದರೆ, ಸಾಮಾನ್ಯವಾಗಿ ಹಗಲಿನ ವೇಳೆಯಲ್ಲಿ ಗಾಳಿಗಳು ಸಮುದ್ರದಿಂದ ಭೂಮಿಯೆಡೆಗೆ ಬೀಸುತ್ತವೆ. ಅಂತೆಯೇ ಸಂಜೆಯ ಹೊತ್ತಾದಂತೆ ಭೂಮಿಯಿಂದ ಸಮುದ್ರದ ಕಡೆಗೆ ಗಾಳಿ ಬೀಸುವುದು. ಆದರೆ ಈ ಪ್ರಕೃತಿಯ ನಿಯಮಗಳು ಪುರಿ ಜಗನ್ನಾಥ ದೇವಾಲಯದ ಬಳಿ ಇರುವ ಸಮುದ್ರದಲ್ಲಿ ತದ್ವಿರುದ್ಧವಾಗಿದೆ.

ಇದನ್ನು ಓದಿ : 6 ಬಾರಿ ಮುಸ್ಲಿಮರಿಂದ ದಾಳಿಗೊಳಗಾದ್ರೂ ಎದ್ದುನಿಂತ ಸೋಮನಾಥ ಜೋರ್ತಿಲಿಂಗ ದೇವಾಲಯ

 

1800 ವರ್ಷಗಳ ಹಳೆಯ ಆಚರಣೆ

puri jagannath temple images

Image Credits : Outlook India

ಪುರಿ ಜಗನ್ನಾಥ ದೇವಾಲಯದಲ್ಲಿ ಪ್ರತಿದಿನ ಅರ್ಚಕರು 45 ಮಹಡಿಯನ್ನು ಹೊಂದಿರುವ ಸುಮಾರು 1000 ಅಡಿ ಎತ್ತರದಲ್ಲಿರುವ ಗೋಪುರಗಳನ್ನು ಹತ್ತಿ, ಬಾವುಟಗಳನ್ನು ಬದಲಿಸುತ್ತಾರೆ. ಈ ಆಚರಣೆಯು ಸುಮಾರು 1800 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಈ ಆಚರಣೆಯು ಅನಿರೀಕ್ಷಿತವಾಗಿ ತಪ್ಪಿದರೆ ಮುಂದಿನ 18 ವರ್ಷಗಳ ಕಾಲ ದೇವಾಲಯವನ್ನು ಮುಚ್ಚಲ್ಪಡುತ್ತದೆ ಎಂದು ಹೇಳಲಾಗುತ್ತದೆ.

ಪುರಿಯ ಜಗನ್ನಾಥ ದೇವಾಲಯವನ್ನು ಹದಿನೆಂಟು ಬಾರಿ ಆಕ್ರಮಿಸಿ ಲೂಟಿ ಮಾಡಲಾಗಿದೆ ಎಂದು ದೇವಾಲಯದ ದಾಖಲೆಗಳು ಹೇಳುತ್ತವೆ. 1692ರಲ್ಲಿ, ಮೊಘಲ್ ಚಕ್ರವರ್ತಿ ಔರಂಗಜೇಬ್‍ನು ದೇವಾಲಯವನ್ನು ತಾನು ಮತ್ತೆ ತೆರೆಯಲು ಬಯಸುವವರೆಗೂ ಅದನ್ನು ಮುಚ್ಚುವಂತೆ ಆದೇಶಿಸಿದನು, 1707ರಲ್ಲಿ ಔರಂಗಜೇಬನ ಮರಣದ ನಂತರವೇ ಅದನ್ನು ಪುನಃ ತೆರೆಯಲಾಯಿತು. ಪುರಿ ದೇವಾಲಯವು ವಾರ್ಷಿಕ ರಥಯಾತ್ರೆ ಅಥವಾ ರಥ ಉತ್ಸವಕ್ಕೆ ಹೆಸರುವಾಸಿಯಾಗಿದೆ, ಇದರಲ್ಲಿ ಮೂರು ಪ್ರಮುಖ ದೇವತೆಗಳನ್ನು ಬೃಹತ್ ಮತ್ತು ವಿಸ್ತಾರವಾಗಿ ಅಲಂಕರಿಸಿದ ದೇವಾಲಯದ ರಥಗಳ ಮೇಲೆ ಎಳೆಯಲಾಗುತ್ತದೆ.

Featured Image Credits : Pinterest

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author