ರಾಮನೂ, ರಾವಣನೂ ಇಬ್ಬರೂ ಸಹ ಮಹಾನ್‍ ಶಿವಭಕ್ತರಾಗಿದ್ದರು..!

Rama and RavanaFeatured Image Source : Astro Talk

ರಾಮಾಯಣಮಹಾಭಾರತಗಳಿಗೆ ಹಿಂದೂ ಧರ್ಮದಲ್ಲಿ ಪ್ರಮುಖವಾದ ಸ್ಥಾನವಿದೆರಾಮಾಯಣದಲ್ಲಿ ಬರುವ ಪ್ರಮುಖ ವ್ಯಕ್ತಿಗಳು ರಾಮಸೀತೆಲಕ್ಷ್ಮಣ ಹಾಗೂ ಹನುಮಹಾಗೆಯೇ ಈ ಪಾತ್ರಗಳು ಎಷ್ಟು ಮುಖ್ಯವೋ ಅಷ್ಟೇ ರಾವಣನ ಪಾತ್ರ ಕೂಡ ಪ್ರಮುಖವಾದುದಾಗಿದೆ. ರಾಮಾಯಣವೆಂಬ ಮಹಾಕಾವ್ಯದಲ್ಲಿ ರಾಮನ ನಿಷ್ಠೆಪ್ರೀತಿರಾಜಧರ್ಮದ ಬಗ್ಗೆ ತಿಳಿಸಲಾಗಿದೆಆದರೆ ರಾವಣನ ಬಗ್ಗೆ ಆತ ಕ್ರೂರಿಯಾಗಿದ್ದಪರಸ್ತ್ರೀ ಮೋಹಿಯಾಗಿದ್ದ ಎಂಬುದಾಗಿ ಹೇಳಲಾಗಿದೆಆದರೆ ರಾಮಾಯಣದಲ್ಲಿ ತಿಳಿಸಿರುವುದನ್ನೂ ಬಿಟ್ಟು ರಾಮರಾವಣರಲ್ಲಿ ಹಲವು ವಿಭಿನ್ನ ಗುಣಗಳಿದ್ದವು ಎಂಬುದು ಪುರಾಣದಲ್ಲಿ ತಿಳಿದುಬಂದಿದೆ.

ರಾವಣನಲ್ಲೂ ಸದ್ಗುಣಗಳಿದ್ದವು. ಹೌದುಸಾಕಷ್ಟು ಜನರಿಗೆ ರಾವಣನ ಗುಣಸ್ವಭಾವ ತಿಳಿದಿಲ್ಲ. ಆತನನ್ನು ಯಾವಾಗಲು ಕೆಟ್ಟವನೆಂದೇ ಸೂಚಿಸಲಾಗುತ್ತದೆ. ಆದರೆ ರಾವಣನಲ್ಲೂ ಒಳ್ಳೆಯ ಗುಣಗಳಿದ್ದವು.ಲಂಕಾಧಿಪತಿ ರಾವಣನನ್ನು ದಶಾನನ ಎಂದೂ ಕೂಡ ಕರೆಯಲಾಗುತ್ತದೆ. ರಾಮಾಯಣದಲ್ಲಿನ ರಾವಣನ ಬಗ್ಗೆ ಸಾಕಷ್ಟು ಆಸಕ್ತಿದಾಯಕ ಸಂಗತಿಗಳಿವೆ. ಅಚ್ಚರಿಯ ವಿಷಯವೆಂದರೆ ರಾಮನೂರಾವಣನೂ ಮಹಾನ್ ಶಿವಭಕ್ತರಾಗಿದ್ದರು.

ಇದನ್ನು ಓದಿ : ವಿವಾಹವಾದ ಮಹಿಳೆಯರು ಮಾಂಗಲ್ಯಧಾರಣೆ ಮಾಡುವುದು ಯಾಕೆ..?

ರಾಮರಾವಣರು ಮಹಾನ್ ಶಿವಭಕ್ತರು

rama ravana praying lord shivaImage Source : ritsin.com and Quora

ಲಂಕಾಧಿಪತಿ ರಾವಣನು ಮುನಿ ವಿಶ್ರವ ಮತ್ತು ರಾಕ್ಷಸ ರಾಣಿ ಕೈಕೇಶಿಯ ಮಗನಾಗಿದ್ದನು. ಆದ್ದರಿಂದ ಅವನು ಅರ್ಧ ಬ್ರಾಹ್ಮಣ ಹಾಗೂ ಇನ್ನರ್ಧ ರಾಕ್ಷಸನಾಗಿದ್ದನು. ರಾಮಾಯಣದಲ್ಲಿನ ರಾಮನು ಕೂಡ ರಾವಣನನ್ನು ಮಹಾಬ್ರಾಹ್ಮಣನೆಂದು ಗುರುತಿಸಿದ್ದನು ಹಾಗೂ ರಾವಣನನ್ನು ಕೊಲ್ಲುವುದಕ್ಕಾಗಿ ರಾಮನು ದೊಡ್ಡ ಅಶ್ವಮೇಧ ಯಾಗವನ್ನೇ ಮಾಡಿದ್ದನು.

ರಾವಣನ ಅಜ್ಜನ ಹೆಸರು ಪ್ರಜಾಪತಿ ಪುಲಸ್ತ್ಯ. ಪುಲಸ್ತ್ಯರು ಬ್ರಹ್ಮ ದೇವರ ಹತ್ತು ಪುತ್ರರಲ್ಲಿ ಒಬ್ಬರಾಗಿದ್ದರು. ಈ ರೀತಿಯಾಗಿ ರಾವಣನು ಬ್ರಹ್ಮನ ಮೊಮ್ಮಗನಾಗಿ ಜನಿಸಬೇಕಾಯಿತು. ಆದರೆ ರಾಮಾಯಣದ ಕಥೆಯ ಪ್ರಕಾರರಾವಣನು ತನ್ನ ಅಜ್ಜನ ಮಾರ್ಗಗಳನ್ನು ಅನುಸರಿಸಿರಲಿಲ್ಲ. ರಾವಣನು ರಾಮಾಯಣದಲ್ಲಿ ರಾಮನ ಪತ್ನಿ ಸೀತೆಯನ್ನು ಅಪಹರಿಸುವ ಮೂಲಕ ಕೆಟ್ಟವನೆಂದು ಪರಿಗಣಿಸಬೇಕಾಯಿತು.

ಇದನ್ನು ಓದಿ : ಚಾಕೋಲೇಟ್ ಪ್ರಿಯ ಷಣ್ಮುಖನ, ಮಂಚ್ ಮುರುಗನ್ ದೇವಸ್ಥಾನ

ಆದರೆಅಚ್ಚರಿಯ ವಿಷಯವೆಂದರೆರಾಮರಾವಣರಿಬ್ಬರೂ ಮಹಾನ್ ಶಿವಭಕ್ತರಾಗಿದ್ದರುಆದರೆ ಇಬ್ಬರ ನಡುವಿನ ಭಕ್ತಿಯ ವ್ಯತ್ಯಾಸೇನೆಂದರೆ ರಾಮನಿಗೆ ಶಿವನ ಮೇಲಿರುವ ಭಕ್ತಿಯು ನಿಸ್ವಾರ್ಥದಿಂದ ಕೂಡಿತ್ತುರಾವಣನಿಗೆ ಶಿವನ ಮೇಲಿರುವ ಭಕ್ತಿಯು ಸ್ವಾರ್ಥದಿಂದ ಕೂಡಿತ್ತುರಾವಣನು ಶಿವನ ದಯೆಕರುಣೆಆರ್ಶೀವಾದ ತನಗೆ ಮಾತ್ರ ಬೇಕೆಂದು ಬಯಸಿದ್ದನು. ಆದ್ದರಿಂದ ಶಿವನು ತನ್ನೊಂದಿಗೆ ಶ್ರೀಲಂಕಾಕ್ಕೆ ಹೋಗಬೇಕೆಂದು ಮತ್ತು ತನ್ನೊಂದಿಗೆ ಶಾಶ್ವತವಾಗಿ ಇರಬೇಕೆಂದು ವಿನಂತಿಸಿದ್ದನು.

ಮಹಾದೇವನಿಗಾಗಿ 9 ತಲೆಗಳನ್ನು ತ್ಯಾಗ ಮಾಡಿದ್ದ ದಶಾನನ

Ravana giving head to lord shivaImage Source : Indiatimes.com

ರಾಮಾಯಣ ಕಾಲದ ಅತ್ಯಂತ ಶ್ರೇಷ್ಟ ವಿದ್ವಾಂಸನೆಂದು ರಾವಣನನ್ನು ಪರಿಗಣಿಸಲಾಗುತ್ತದೆ. ರಾವಣ ಕ್ರೂರಿಯಾಗಿದ್ದರೂ ಅಪಾರ ಜ್ಞಾನವನ್ನು ಹೊಂದಿದ್ದನುರಾವಣನು ತಾನು ಮರಣ ಹೊಂದುವ ಮೊದಲು ಭಗವಾನ್‌ ರಾಮ ಮತ್ತು ಲಕ್ಷ್ಮಣನ ಬಳಿ ತನ್ನೊಂದಿಗೆ ಸ್ವಲ್ಪ ಸಮಯ ಕುಳಿತುಕೊಳ್ಳಲು ಕೇಳಿಕೊಂಡನು. ರಾಮ ಮತ್ತು ಲಕ್ಷ್ಮಣರು ರಾವಣನ ಕೋರಿಕೆಯ ಮೇರೆಗೆ ರಾವಣನೊಂದಿಗೆ ಕುಳಿತುಕೊಂಡರು ಆಗ ರಾವಣನು ಅವರಿಬ್ಬರಿಗೆ ರಾಜತಾಂತ್ರಿಕ ಹಾಗೂ ಸಂಖ್ಯಾಶಾಸ್ತ್ರದ ಅಂಶಗಳನ್ನು ಕಲಿಸಿಕೊಟ್ಟನು.

ಅಷ್ಟೇ ಅಲ್ಲ ರಾವಣನು ಓರ್ವ ಮಹಾನ್‌ ಸಂಗೀತಗಾರನಾಗಿದ್ದನು. ಹಾಗೂ ಸ್ವತಃ ವೀಣಾ ವಾದಕನಾಗಿದ್ದನುಅಲ್ಲದೆ, ಜ್ಯೋತಿಷ್ಯದ ಪರಿಣಿತನಾಗಿದ್ದನುರಾವಣನ ಜ್ಞಾನದ ಕುರಿತಿರುವ ಇನ್ನೊಂದು ಅಚ್ಚರಿಯ ವಿಷಯವೇನೆಂದರೆ ಶಿವನನ್ನು ಸ್ತುತಿಸುವ ಸತ್ಯಮೂಲ್ಯ ಕೃತಿ ಎಂದು ಪರಿಗಣಿಸಲಾಗುವ ಶಿವ ತಾಂಡವವನ್ನು ಸಂಯೋಜನೆ ಮಾಡಿರುವುದು ಕೂಡ ರಾವಣನೇ ಆಗಿದ್ದಾನೆ. ರಾವಣನು ಮಹಾದೇವನನ್ನು ಅದೆಷ್ಟು ಆರಾಧಿಸುತ್ತಿದ್ದನೆಂದರೆ ತನ್ನ ತಲೆಗಳನ್ನು ಶಿವನಿಗೆ ಮೆಚ್ಚಿಸಲು ತ್ಯಾಗ ಮಾಡಿದನು. ರಾವಣನ ಭಕ್ತಿಗೆ ಮೆಚ್ಚಿದ ಶಿವನು ಬಯಸಿದಾಗಲೆಲ್ಲಾ ರಾವಣನಿಗೆ ದರ್ಶನ ಕೊಡುವುದಾಗಿ ಭರವಸೆ ನೀಡಿದನು.

ಇದನ್ನು ಓದಿ : ಕೇರಳದಲ್ಲಿದೆ ವಿಶ್ವದ ಅತಿ ದೊಡ್ಡ ಪಕ್ಷಿ ಶಿಲ್ಪ..!

ರಾಮನು ಶಿವನ ಆಶೀರ್ವಾದವ ಪಡೆದು ರಾವಣನನ್ನು ಕೊನೆಗಾಣಿಸಬೇಕೆಂದು ಬಯಸಿದನುಆದ್ದರಿಂದ ರಾಮನನು ಶಿವನನ್ನು ಪ್ರಾರ್ಥಿಸಿದನುರಾವಣನೊಂದಿಗಿನ ಯುದ್ಧದಲ್ಲಿ ಅವನಿಗೆ ಯಶಸ್ಸನ್ನು ಕೊಡಬೇಕೆಂದು ಬೇಡಿಕೊಂಡನು. ಅದರಂತೆ ರಾವಣ, ರಾಮನ ಪತ್ನಿ ಸೀತಾಳನ್ನು ಅಪಹರಿಸಿ ಪಾಪವನ್ನು ಮಾಡುವಂತಾಯಿತು. ಆ ತಪ್ಪಿಗೆ ರಾಮನು ರಾವಣನನ್ನು ವಧಿಸಿದನು.

ಅಸುರರುದೇವತೆಗಳು ಅಥವಾ ಮಾನವರು ಯಾರೇ ಆಗಿರಲಿ ಶಿವನು ಅವರು ಧರ್ಮದ ಪ್ರಕಾರ ಬದುಕುವ ದಿನದವರೆಗೆ ಅವರನ್ನು ರಕ್ಷಿಸುತ್ತಾನೆ. ಮಹಾನ್ ಭಕ್ತನಾದಾರೂ ರಾವಣನು ಅಧರ್ಮದಿಂದ ನಡೆದುಕೊಂಡ ಕಾರಣ ಪಾಪ ಮಾಡಿ ರಾಮನಿಂದ ಸಾಯಬೇಕಾಯಿತುರಾವಣನನ್ನು ಕೊಂದ ನಂತರಶಿವ ಭಕ್ತನಾದ ರಾಮನು ಬ್ರಾಹ್ಮಣನನ್ನು ಕೊಂದ ಪಾಪದಿಂದ ತನ್ನನ್ನು ದೋಷ ಮುಕ್ತ ಮಾಡುವಂತೆ ಬೇಡಿ ಶಿವಲಿಂಗವನ್ನು ಸ್ಥಾಪಿಸಿ ಪ್ರಾರ್ಥಿಸಿದನು.

ಸದ್ಗುಣದುರ್ಗುಣಗಳ ಹೊರತಾಗಿಯೂ ರಾಮರಾವಣರು ತಮ್ಮ ಅಪಾರ ಶಿವಭಕ್ತಿಯಿಂದ ಮಹಾದೇವನ ಪ್ರೀತಿಗೆ ಪಾತ್ರರಾಗಿದ್ದರುಇಂದಿಗೂ ಕೂಡ ದೇಶದ ಹಲವೆಡೆ ರಾವಣನನ್ನು ಪೂಜಿಸಲಾದರೆಇನ್ನು ಕೆಲವೆಡೆ ರಾವಣನನ್ನು ದ್ವೇಷಿಸಲಾಗುತ್ತದೆ. ರಾವಣ ಕೇವಲ ಕೆಟ್ಟ ಗುಣಗಳು ಮಾತ್ರವಲ್ಲಸದ್ಗುಣಗಳು ಕೂಡ ಅಡಕವಾಗಿದ್ದವು.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

About Author