ಅರ್ಸಿಬಿ ವಿರುದ್ದ ರಾಜಸ್ತಾನ್ ರಾಯಲ್ಸ್ ಇಂದು ಯಾರು ವಿಜಯ ಸಾಧಿಸುತ್ತಾರೆ? ಪಿಚ್ ರಿಪೋರ್ಟ್ , ಟೀಮ್ ನ್ಯೂಸ್

ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ 54 ರನ್ನಗಳ ರೋಚಕ ಗೆಲುವು ಸಾಧಿಸಿ ಒಟ್ಟು ಆಡಿರುವ 10 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದಂತಾಗಿದೆ. 6 ಪಂದ್ಯಗಳ ಗೆಲುವಿನಂದ ಒಟ್ಟು 12 ಪಾಯಿಂಟ್ ಪಡೆದು ಪಾಯಿಂಟ್ಸ್ ಟೇಬಲ್ ನಲ್ಲಿ ಮೂರನೇ ಸ್ಥಾನದಲ್ಲಿದೆ. 

ರಾಜಸ್ತಾನ್ ರಾಯಲ್ಸ್ 2 ನೇ ಆವೃತ್ತಿಯಲ್ಲಿ ಆಡಿದ ಮೊದಲ ಮ್ಯಾಚ್ ಬಿಟ್ಟರೆ ಇನ್ನುಳಿದ ಎರಡು ಪಂದ್ಯದಲ್ಲಿ 33 ರನ್ ಮತ್ತು 7 ವಿಕೆಟ್ ಅಂತರದಿಂದ ಹೀನಾಯ ಸೋಲನ್ನು ಅನುಭವಿಸಿದ್ದಾರೆ, ಇದರಿಂದ ರಾಜಸ್ತಾನ್ ತಂಡ  ಪಾಯಿಂಟ್ಸ್ ಟೇಬಲ್ ನಲ್ಲಿ 7ನೇ ಸ್ಥಾನದಲ್ಲಿದೆ.

ಕೊನೆಯ ಪಂದ್ಯದಲ್ಲಿ ಆರ್ಸಿಬಿ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ ಗ್ಲೇನ್ ಮ್ಯಾಕ್ಸ್ವೆಲ್, ಹರ್ಷಲ್ ಪಟೇಲ್, ಯಜುವೇಂದ್ರ ಚಹಾಲ್, ವಿರಾಟ್ ಕೊಹ್ಲಿ ಟೀಮ್ ಗೆಲುವಿಗೆ ಮುಖ್ಯ ಕಾರಣರಾದರು. ಬ್ಯಾಟಿಂಗ್ ನಲ್ಲಿ ಸಾಲಿಡ್ ಪ್ರದರ್ಶನ ತೋರುತ್ತಿರುವ ಆರ್ಸಿಬಿ ತಂಡ ಮಿಡಲ್ ಆರ್ಡರ್ ನಲ್ಲಿ ಎಬಿಡಿ ಅವರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಡೆತ್ ಬೌಲಿಂಗ್ ನಲ್ಲಿ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಕಟ್ಟು ನಿಟ್ಟಿನ ಬೌಲಿಂಗ್ ನಿಂದ ಬೌಲಿಂಗ್ ವಿಭಾಗ ಭದ್ರತೆಯಿಂದ ಕೂಡಿದೆ. 

ರಾಜಸ್ತಾನ್ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮೇಲೆ ತೀವ್ರವಾಗಿ ಅವಲಂಬಿಸಿದ್ದು ಇತರ ಬ್ಯಾಟ್ಸ್ಮನ್ಗಳಿಂದ ಆರಂಭದಲ್ಲಿ ಮತ್ತು ಮಿಡಲ್ ಆರ್ಡರ್ ನಲ್ಲಿ ಉತ್ತಮ ಪ್ರದರ್ಶನದ ಅವಶ್ಯಕತೆಯಿದೆ. 

ಪಂದ್ಯದ ವಿವರ:

ರಾಯಲ್ ಚಾಲಂಜರ್ಸ್ ಬೆಂಗಳೂರು ವಿರುದ್ದ ರಾಜಸ್ತಾನ್ ರಾಯಲ್ಸ್ 

ಯಾವಾಗ: ಸೆಪ್ಟಂಬರ್ 29, 7:30pm (19:30 IST) 

ಸ್ಥಳ: ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ. 

ಪಿಚ್ ರಿಪೋರ್ಟ್:  ದುಬೈ ಪಿಚ್ ಬ್ಯಾಟಿಂಗ್ ಗೆ ಹೆಚ್ಚು ಸಹಕರಿಸುವ ಪಿಚ್ ಆಗಿದ್ದು ಪೇಸ್ ಬೌಲರುಗಳು ವಿಕೇಟ್ ಪಡೆಯುವ ಸಾಧ್ಯತಗಳಿವೆ. 

ಟೀಮ್ ನ್ಯೂಸ್: 

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಕೊನೆಯ ಪಂದ್ಯದಲ್ಲಿ ಎಲ್ಲ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿದ ಕಾರಣದಿಂದ  ಈ ಪಂದ್ಯಕ್ಕೆ ಯಾವುದೇ ಹೊಸ ಬದಲಾವಣೆ ತರುವ ಸಾದ್ಯತೆ ಇಲ್ಲ. ಹರ್ಷಲ್ ಪಟೇಲ್ ಅವರು ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ಆಡಿದ 5 ಪಂದ್ಯಗಳಲ್ಲಿ 9 ವಿಕೆಟ್ಗಳನ್ನು ತೆಗೆದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಅವರು ರಾಜಸ್ತಾನ್ ವಿರುದ್ದ ಆಡಿದ ಕೊನೆಯ 3 ಪಂದ್ಯಗಳಲ್ಲಿ 73*, 43 ಮತ್ತು 72* ಅಜೇಯ ಆಟದಿಂದ ಹೆಚ್ಚು ರನ್ ಬಾರಿಸಿದ್ದಾರೆ.

ರಾಜಸ್ತಾನ್ ರಾಯಲ್ಸ್:  ರಾಜಸ್ತಾನ್ ತಂಡ ವಿರಾಟ್ ಕೊಹ್ಲಿ ವಿರುದ್ದ ಒಳ್ಳೆಯ ಗೇಮ್ ಪ್ಲಾನ್ ಮಾಡಿ ಬರಬೇಕಾಗಿದೆ. ಕಳೆದ ಪಂದ್ಯದಲ್ಲಿ ಆಡಿದ ಆಟಗಾರರಲ್ಲಿ ಯಾವುದೇ ಇಂಜೂರಿ ಸಮಸ್ಯೆ ಇಲ್ಲದಿದ್ದರೂ ಇವತ್ತಿನ ಮ್ಯಾಚ್ ಗೆ ಬದಲಾವಣೆ ತರುವ ಸಾದ್ಯತೆಯಿದೆ. ವಿರಾಟ್ ಮತ್ತು ಎಬಿಡಿ ಅವರನ್ನು 7 ಬಾರಿ ಔಟ್ ಮಾಡಿರುವ ಶ್ರೇಯಸ್ ಗೋಪಾಲ್ ಅವರನ್ನೂ ತಂಡದಲ್ಲಿ ಆಡಿಸುವ ಸಾಧ್ಯತೆಯಿದೆ, ಇವರನ್ನೂ ಬಿಟ್ಟು ತಬ್ರೈಜ್ ಶಂಶಿ ಅವರಿಗೆ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಯಿದೆ. 

 

 

Enjoyed this article? Stay informed by joining our newsletter!

Comments

You must be logged in to post a comment.

About Author