ಅಲ್ಲಿ ಹಲವಾರು ವರ್ಷಗಳ ಹಿಂದೆ ‘ರಕ್ತದ ಮಳೆ’ ಸುರಿದಿತ್ತು..!

red rain

Featured Image Credits : Scoopwhoop

ಮಳೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..ಜಿಟಿಜಿಟಿಯಾಗಿ ಸುರಿದು ಇಳೆಯನ್ನು ತಂಪು ಮಾಡುವ ಮಳೆಯೆಂದರೆ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಹರಿದುಹೋಗುವ ನೀರಿನೊಂದಿಗೆ ತೆರಳಿ ಆಟವಾಡುತ್ತಾ ಖುಷಿಪಡುತ್ತಾರೆ. ಮನೆಯೊಳಗೇ ಬೆಚ್ಚಗೆ ಇದ್ದು ಬಿಸಿಬಿಸಿಯಾಗಿ ಟೀ, ಸ್ನಾಕ್ಸ್ ತಿನ್ನುತ್ತಾರೆ. ಕಿಟಿಕಿಯಿಂದ ಮಳೆಯನ್ನು ನೋಡುತ್ತಾ ಖುಷಿ ಪಡುತ್ತಾರೆ. ಆದರೆ ಅಲ್ಲಿ ಮಳೆ ಸುರಿದಾಗ ಹಾಗಾಗಲ್ಲಿಲ್ಲ. ಜನರು ಮಳೆ ಬರುವಾಗ ಖುಷಿ ಪಡುವ ಬದಲು ಬೆಚ್ಚಿಬಿದ್ದರು. ಕಿಟಿಕಿ ತೆರೆದಿಟ್ಟು ಮಳೆಯನ್ನು ಆಸ್ವಾದಿಸುವ ಬದಲು ಕಿಟಿಕಿ, ಬಾಗಿಲುಗಳನ್ನು ಮುಚ್ಚಿಕೊಂಡರು, ನೀರಲ್ಲಿ ಇಳಿದು ಆಟವಾಡುವ ಬದಲು ಭಯಭೀತಗೊಂಡರು..

ಅಷ್ಟಕ್ಕೂ ಮಳೆ ಬಂದಾಗ ಅಲ್ಲಿ ಆಗಿದ್ದೇನು..? ಜನರು ಭಯಭೀತರಾದದ್ದು ಯಾಕೆ..ಜನರು ಬೆಚ್ಚಿ ಬೀಳುವಂತಹಾ ಘಟನೆ ನಡೆದಿದ್ದೆಲ್ಲಿ..ತಿಳಿಯೋಣ ಬನ್ನಿ..

ಇದನ್ನು ಓದಿ : ಕುಮರಿ ಖಂಡಂ..ಹಿಂದೂ ಮಹಾಸಾಗರದಲ್ಲಿ ಮುಳುಗಿ ಹೋದ ಖಂಡ..!

ಸಾಮಾನ್ಯವಾಗಿ ಮಳೆ ಬಂದರೆ ಬಿಳಿಯ ಬಣ್ಣದಲ್ಲಿ ಆಕಾಶದಿಂದ ಭೂಮಿಗೆ ನೀರು ಸುರಿಯುತ್ತದೆ. ಆದರೆ ಅಲ್ಲಿ ಹಾಗಾಗಲ್ಲಿಲ್ಲ. ಜಿಟಿ ಜಿಟಿ ಅಂತ ಮಳೆ ಹನಿಯೋಕೆ ಶುರುವಾದಾಗಲೇ ಕೆಂಪು ಬಣ್ಣದ ನೀರಿನ ಹನಿಗಳು ಬೀಳೋಕೆ ಶುರುವಾದವು. ಇದೇನಾಶ್ಚರ್ಯ ಅಂತ ಜನರು ನೋಡ್ತಾ ಇರುವಾಗಲೇ ಬಿಳಿಯ ಬಣ್ಣದ ನೀರಿನ ಬದಲು ಕೆಂಪಾದ ರಕ್ತದ ಮಳೆಯೇ ಅಲ್ಲಿ ಸುರಿಯಿತು. ಮನೆಗಳ ಮೇಲೆ, ಟೆರೇಸಿನ ಮೇಲೆ, ರಸ್ತೆಯ ಮೇಲೆ, ಹಳ್ಳ-ಕೊಳ್ಳಗಳಲ್ಲಿ ಕೆಂಪು ಕೆಂಪಾದ ನೀರು ಹರಿದುಹೋಯಿತು. ಈ ಕೆಂಪು ಮಳೆ ಅಥವಾ ರಕ್ತದ ಮಳೆ ಸುರೀದಿರೋದು ಎಲ್ಲಿ. ಈ ರೀತಿಯ ಮಳೆ ಸುರಿಯೋದಿಕ್ಕೆ ಕಾರಣ ಏನು ಇಲ್ಲಿದೆ ಮಾಹಿತಿ.

ಕೆಂಪು ಮಳೆ ಸುರಿದಿದ್ದು ಎಲ್ಲಿ ಗೊತ್ತಾ..?

red rain in kerala

Image Credits : Patrika

ದೇವರನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲಿ ಈ ಬ್ಲಡ್ ರೈನ್ ಸುರಿಯಿತು. ಇಲ್ಲಿನ ಇಡುಕ್ಕಿ ಜಿಲ್ಲೆಯಲ್ಲಿ ಈ ಕೆಂಪು ಮಳೆ 2001ರ ಜುಲೈ 25ನೇ ತಾರೀಕಿನಿಂದ ಸೆಪ್ಟೆಂಬರ್ 23ನೇ ತಾರೀಕಿನವರೆಗೂ ಸುರಿಯಿತು. ಇದಕ್ಕಿಂತಲೂ ಹಿಂದೆ 1896ನಲ್ಲಿಯೂ ಈ ರೀತಿಯ ಸುರಿದಿತ್ತುಜನರು ಭಯಭೀತರಾದರು, ವಿಜ್ಞಾನಿಗಳು ಅಚ್ಚರಿಗೊಂಡರು. ಆದರೆ ಈ ಕೆಂಪು ಮಳೆಗೆ ಕಾರಣ ಏನು ಅನ್ನುವುದು ಮಾತ್ರ ರಹಸ್ಯವಾಗಿಯೇ ಉಳಿಯಿತು.

ಹಿಂದೂ ಧರ್ಮದ ಪ್ರಕಾರ ರಕ್ತದ ಮಳೆ ಸುರಿಯುವುದು ಯಾವುದೋ ಒಂದು ವಿನಾಶದ ಸೂಚನೆ ಎಂದು ಹೇಳಲಾಗಿದೆ. ಹೀಗಾಗಿ ಯಾವುದೋ ಪ್ರಾಕೃತಿಕ ದುರಂತ ನಡೆಯಲಿಕ್ಕಿದೆ ಎಂದೇ ಜನರು ಭಾವಿಸಿದರು. ಆದರೆ ವಿಜ್ಞಾನಿಗಳು, ಪ್ರಕ್ರತಿಯಲ್ಲಿ ಸಂಭವಿಸುವ ಕೆಲವು ವಿಶೇಷವಾದ ಬದಲಾವಣೆಗಳಿಂದ ಈ ರೀತಿಯಾಗಿ ಮಳೆ ಸುರಿದಿದೆ ಎಂದು ತಿಳಿಸಿದರು.

ಇದನ್ನು ಓದಿ : ಪೈಥಾಗೋರಸ್ ಸಿದ್ಧಾಂತ ಮೊದಲು ಕಂಡು ಹಿಡಿದಿದ್ದು ಗ್ರೀಕರಲ್ಲ..ಭಾರತೀಯರು..!

‘ರಕ್ತದ ಮಳೆ’ ಸುರಿಯಲು ಕಾರಣವೇನು..?

red rain in india

Image Credits : Pixabay

ಕೆಂಪು ಮಳೆಯ ಬಗ್ಗೆ ಸ್ಯಾಂಪಲ್‍ನ್ನು ತೆಗೆದುಕೊಂಡು ಪರೀಕ್ಷೆಯನ್ನು ಸಹ ನಡೆಸಲಾಯಿತು. ಮಳೆಯ ಹನಿಗಳ ಬಣ್ಣ ಕೆಂಪು ಬಣ್ಣದಲ್ಲಿರುವುದು ಏಕೆ ಎನ್ನುವುದನ್ನು ತಿಳಿಯಲು ಅನೇಕ ವಿಜ್ಞಾನಿಗಳು ನೀರನ್ನು ಪರೀಕ್ಷೆಗೆ ಒಳಪಡಿಸಿದರು. ತಜ್ಞರು ರಕ್ತದ ಮಳೆಯ ಪ್ರತಿ ಮಿಲಿಲೀಟರ್‍ನಲ್ಲಿ ಸುಮಾರು ದಶಲಕ್ಷ ಕೆಂಪು ಕಣಗಳು ಕಂಡು ಬಂದಿವೆ ಎನ್ನುವುದನ್ನು ಕಂಡುಕೊಂಡರು. 100 ಮಿ.ಗ್ರಾಂ. ಘನವನ್ನು ಹೊಂದಿರುತ್ತದೆ ಎಂದು ಅವರು ಮಾಹಿತಿ ನೀಡಿದರು. ಲೆಕ್ಕಾಚಾರದ ಆಧಾರದ ಮೇಲೆ ಒಟ್ಟು 50,000 ಕಿ.ಗ್ರಾಂ.ಗಳಷ್ಟು ಕೆಂಪು ಕಣಗಳು ಬಿದ್ದಿವೆ ಎಂದು ವಿಜ್ಞಾನಿಗಳು ತಿಳಿಸಿದ್ದರು. ಅಲ್ಲದೆ ಮಳೆ ಹನಿಯಲ್ಲಿ ಕಪ್ಪುಹಸಿರುಹಳದಿಕಂದು ಬಣ್ಣದ ಕಣಗಳು ಇದ್ದವು ಎನ್ನುವುದು ಪತ್ತೆಯಾಗಿತ್ತು.

 ಇನ್ನೊಂದು ವರದಿಯ ಪ್ರಕಾರ ಆ ಮಳೆಯ ನೀರಿನಲ್ಲಿ ಉಪ್ಪಿನ ಅಂಶ ಇಲ್ಲದೇ ಮಾಂಗನೀಸ್ಟೈಟಾನಿಯಂಕ್ರೊಮಿಯಂ ಮತ್ತು ಕಾಪರ್ ಅಂತಹ ಪದಾರ್ಥಗಳು ಇದ್ದವುಹೀಗಾಗಿ ನೀರು ಕೆಂಪು ಬಣ್ಣದಲ್ಲಿದೆ ಎಂದು ಸಂಶೋಧಕರು ತಿಳಿಸಿದರು.. ಇದೇ ಸಂಸ್ಥೆಯ ಕೆಲವರು ಇನ್ನೂ ಹಲವಾರು ಸಿದ್ಧಾಂತಗಳನ್ನು ಮಂಡಿಸಿದರು. ಅದೇನೆಂದರೆ ಭೂಮಿಯ ಮೇಲೆ ಬಿದ್ದ ವುಲ್ಕೆಗಳು ಒಡೆದು ಮೋಡಗಳಲ್ಲಿ ಸೇರಿ ರಾಸಾಯನಿಕ ಕ್ರಿಯೆ ನಡೆದು ಈ ತರಹದ ಮಳೆ ಸುರಿದಿದೆ ಎಂದು ಹೇಳಿದರು.

ಇದನ್ನು ಓದಿ : ಆರೋಗ್ಯಕ್ಕೆ ಖರ್ಜೂರದ ಸೇವನೆಯಿಂದ ಸಿಗುವ ಪ್ರಯೋಜನಗಳೇನು

ಇನ್ನೊಂದು ಸಂಸ್ಥೆ ಅಧ್ಯಯನ ನಡೆಸಿ, ಈ ಕೆಂಪು ಮಳೆ ಒಂದು ರೀತಿಯ ಫಂಗಸ್‍ನಿಂದ ಕೂಡಿರುವುದಾಗಿದೆ. ಈ ಫಂಗಸ್ ಹೆಚ್ಚಾಗಿ ಸಮುದ್ರದಲ್ಲಿ ಹಾಗೂ ನೀರಿನಲ್ಲಿ ಇರುವಂತಹ ಪ್ರದೇಶದಲ್ಲಿ ಇರುತ್ತದೆ ಎಂದು ತಿಳಿಸಿದರು. ಈ ರಹಸ್ಯಕರವಾದ ಮಳೆ ಸುರಿಯುವ ಮುಂಚೆ ಕೊಟ್ಟಾಯಂ ಮತ್ತು ಇಡುಕ್ಕಿಯಲ್ಲಿ ಪ್ರಕಾಶಮಾನವಾದ ಮಿಂಚುಗಳು ಹಾಗೂ ಗುಡುಗಿನ ಧ್ವನಿಯನ್ನು ಜನರು ಅನುಭವಿಸಿದ್ದರು. ಅದನ್ನು ಸೋನಿಕ್ ಬೂಮ್ ಎಂದು ಹೇಳಿದ್ದರು. ಈ ವಿದ್ಯಮಾನದಿಂದ ಮರಗಳು ಸುಕ್ಕು ಗಟ್ಟಿದಂತಾಗಿರುವುದುಎಲೆಗಳು ಸುಟ್ಟಂತಾಗಿರುವುದುಕೆಲವೆಡೆ ಬಾವಿಗಳ ಸೃಷ್ಟಿಇನ್ನೂ ಕೆಲವೆಡೆ ಬಾವಿಗಳು ಅದೃಶ್ಯವಾಗಿದ್ದವು ಎಂದು ವರದಿ ಮಾಡಲಾಗಿತ್ತು.

 ಆರಂಭದಲ್ಲಿ ಸೆಂಟರ್ ಫಾರ್ ಅರ್ಥ ಸೈನ್ಸ್ ಸ್ಟಡೀಸ್ ಸಂಸ್ಥೆ ಸ್ಫೋಟಿಸಿರುವ ಉಲ್ಕೆಯಿಂದ ಕೆಂಪು ಕಣಗಳು ಹೊರಹೊಮ್ಮಿದವು ಎಂದು ಹೇಳಿದರು. ನಂತರ ಕೆಲವೇ ದಿನಗಳಲ್ಲಿ ಕೆಳಕಂಡ ಆಧಾರದ ಮೇಲೆ ಸಿದ್ಧಾಂತವನ್ನು ತಿರಸ್ಕರಿಸಿದರು. ವಾಯು ಮಂಡಲದ ನಡೆದ ಸ್ಫೋಟದಿಂದ ಶೀಲಾಖಂಡಗಳ ರಾಶಿಗಳು ವಿವಿಧ ಸ್ಥಳಗಳಿಗೆ ಸಾಗಿತು. ಇದರಿಂದ ಕೆಂಪು ಮಳೆಯಾಗಿರಬಹುದು. ಮೂಲಭೂತವಾಗಿ ಉಲ್ಕೆಗಳ ಸ್ಫೋಟದಿಂದ ರಕ್ತ ಮಳೆಯಾದರೆ ದೇಶದ ವಿಭಿನ್ನ ಪ್ರದೇಶಗಳಲ್ಲೂ ಕೆಂಪು ಮಳೆ ಕಾಣಿಸಿಕೊಳ್ಳಬೇಕಿತ್ತು ಎಂದರು.

 ಭಾರತೀಯ ಹವಾಮಾನ ಇಲಾಖೆಯ ಹಿರಿಯ ವೈಜ್ಞಾನಿಕ ಸಹಾಯಕ ಕೆ.ಕೆ. ಶಶಿಧರನ್ ಪಿಳ್ಳೈ ಅವರು, ಫಿಲಿಪೈನ್ಸ್‍ ನ ಮೇಯೊನ್ ಜ್ವಾಲಾಮುಖಿ ಕೇರಳವು ರಕ್ತದ ಮಳೆ ಅನುಭವಿಸುತ್ತಿರುವಾಗಲೇ ಉಂಟಾಗಿದೆ ಎಂದು ತಿಳಿಸಿದರು. ಆದ್ದರಿಂದ ಅವರು ಮೇಯೊನ್ ಜ್ವಾಲಾಮುಖಿಯಿಂದ ಜ್ವಾಲಾಮುಖಿ ಆಮ್ಲೀಯ ವಸ್ತುವು ಕೇರಳಕ್ಕೆ ಈಕ್ವಟೋರಿಯಲ್ ಅಥವಾ ಈಸ್ಟರ್ನ್ ಜೆಟ್ ಸ್ಟ್ರೀಮ್ ಮೂಲಕ ಕೇವಲ 25 ರಿಂದ 36 ಗಂಟೆಗಳವರೆಗೆ ಸಾಗಿಸಲ್ಪಡುತ್ತವೆ ಎಂಬ ಸಿದ್ಧಾಂತವನ್ನು ಪ್ರಸ್ತಾಪಿಸಿದರು. ಹಲವು ಸಿದ್ಧಾಂತಗಳು ಮಂಡನೆಯಾದರೂ ಈ ಕೆಂಪು ಮಳೆ ಅಥವಾ ಬ್ಲಡ್ ರೈನ್‍ಗೆ ಕಾರಣ ಎನ್ನುವುದು ಮಾತ್ರ ಇವತ್ತಿಗೂ ಸಹ ನಿಗೂಢವಾಗಿದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

About Author