ಮಿಜೋರಾಂನಲ್ಲಿ ತಳಮಟ್ಟದ ಫುಟ್ಬಾಲ್ಗಾಗಿ ಸ್ಪರ್ಧಾತ್ಮಕ ಹಾದಿಯನ್ನು ನಿರ್ಮಿಸಲು ರಿಲಯನ್ಸ್ ಫೌಂಡೇಷನ್ ಮತ್ತು ಮಿಜೋರಾಮ್ ಫುಟ್ಬಾಲ್ ಅಸೋಸಿಯೇಷನ್ ಕೈಜೋಡಿಸುತ್ತಿದೆ
ಐಜ್ವಾಲ್, ಅಕ್ಟೋಬರ್ 31, 2022: ರಿಲಯನ್ಸ್ ಫೌಂಡೇಷನ್ ಯಂಗ್ ಚಾಂಪ್ಸ್ (ಆರ್ಎಫ್ವೈಸಿ) ನೌಪಾಂಗ್ (ಮಕ್ಕಳ) ಲೀಗ್ ಮೂಲಕ ರಾಜ್ಯದಲ್ಲಿ ಸಂಪೂರ್ಣ ಹೈಪರ್-- ಸ್ಥಳೀಯ ಮಾರ್ಗ ಮತ್ತು ವಿಕೇಂದ್ರಿಕೃತ ವಿಧಾನವನ್ನು ರಚಿಸಲು, ವಿಸ್ತರಿಸಲು ಮತ್ತು ಪರಿವರ್ತಿಸಲು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ (ಆರ್ಐಎಲ್) ಸಿಎಸ್ಆರ್ ಆರ್ಮ್ ರಿಲಯನ್ಸ್ ಫೌಂಡೇಷನ್ ಮತ್ತು ಮಿಜೋರಾಂ ಫುಟ್ಬಾಲ್ ಅಸೋಸಿಯೇಷನ್ ಕೈಜೋಡಿಸಿವೆ.
ನೌಪಾಂಗ್ ಲೀಗ್ ಸ್ಥಳೀಯ ಪರಿಸರ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ಮತ್ತು 5 ವರ್ಷ ವಯಸ್ಸಿನ ಹುಡುಗರು ಮತ್ತು ಹುಡುಗಿಯರು ಸ್ಪರ್ಧಾತ್ಮಕ ಮತ್ತು ಅಭ್ಯಾಸದ ಮಾನ್ಯತೆಗಳನ್ನು ಪಡೆಯಲು ಸ್ಪರ್ಧಾತ್ಮಕ ಮತ್ತು ಅಭ್ಯಾಸದ ಅವಕಾಶಗಳನ್ನು ಪಡೆಯಲು ಮಹಾತ್ವಾಕಾಂಕ್ಷೆಯ ಮತ್ತು ಪ್ರತಿಭಾನ್ವಿತ ಫುಟ್ಬಾಲ್ ಆಟಗಾರರನ್ನು ರೂಪಿಸುವ ಗುರಿಯನ್ನು ಹೊಂದಿದೆ.
ಮಿಜೋರಾಂನಲ್ಲಿ ಫುಟ್ಬಾಲ್ ಆಟ ಬದುಕಿನ ಒಂದು ರೀತಿ ಆಗಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿಯೂ ಅದರ ಭಾಗವಾಗಿದೆ. ಆರ್ಎಫ್ ಯಂಗ್ ಚಾಂಪ್ಸ್ ಮತ್ತು ಮಿಜೋರಾಂ ಫುಟ್ಬಾಲ್ ಅಸೋಸಿಯೇಷನ್ ನಡುವಿನ ಈ ಒಪ್ಪಂದವು ಪ್ರತಿಭಾನ್ವಿತ ಯುವ ಬಾಲಕ ಮತ್ತು ಬಾಲಕಿಯರಿಗೆ ಉನ್ನತ ಗುಣಮಟ್ಟದ ತರಬೇತಿಯನ್ನು ಒದಗಿಸಲಿದೆ. ಇದರಿಂದ ಉದಯೋನ್ಮುಖ ಫುಟ್ಬಾಲ್ ಆಟಗಾರರಿಗೆ ಸಣ್ಣ ವಯಸ್ಸಿನಿಂದಲೇ ಅಂದರೆ 5ನೇ ವಯಸ್ಸಿನಿಂದಲೇ ಸ್ಪರ್ಧಾತ್ಮಕ ಅವಕಾಶಗಳನ್ನು ಮತ್ತು ವರ್ಧಿತ ಆಟದ ಸಮಯವನ್ನೂ ಒದಗಿಸಲಿದೆ. ಫುಟ್ಬಾಲ್ನಲ್ಲಿ ಸಾಕಷ್ಟು ಹೂಡಿಕೆ ಹೊಂದಿರುವ ಮೀಜೋರಾಂನ ಮಕ್ಕಳಿಗೆ ಒದಗಿಸಲಾಗುವ ಈ ಅಪೂರ್ವ ಅವಕಾಶ ನನ್ನನ್ನು ಅತ್ಯಂತ ಉತ್ಸುಕಳನ್ನಾಗಿಸಿದೆ. ಭಾರತದೆಲ್ಲೆಡೆಯ ತಳಮಟ್ಟದ ಫುಟ್ಬಾಲ್ ಸಾಮರ್ಥ್ಯವನ್ನು ಬೆಳಕಿಗೆ ತರಲು ಮತ್ತು ಮಹತ್ವಾಕಾಂಕ್ಷೆಯ ಫುಟ್ಬಾಲ್ ಆಟಗಾರರಿಗೆ ಅವರ ಪೂರ್ಣ ಸಾಮರ್ಥ್ಯಕ್ಕೆ ತಕ್ಕ ಸಾಧನೆ ತೋರಲು ನೆರವಾಗಲು ಆರ್ಎಫ್ವೈಸಿ ಬದ್ಧವಾಗಿದೆ ಎಂದು ರಿಲಯನ್ಸ್ ಫೌಂಡೇಷನ್ನ ಸಂಸ್ಥಾಪಕ ಮುಖ್ಯಸ್ಥೆ ಶ್ರೀಮತಿ ನೀತಾ ಎಂ. ಅಂಬಾನಿ ಹೇಳಿದ್ದಾರೆ.
ಮಿಜೋರಾಂ ಫುಟ್ಬಾಲ್ ಅಸೋಸಿಯೇಷನ್ ಮತ್ತು ರಿಲಯನ್ಸ್ ಫೌಂಡೇಷನ್ ನಡುವಿನ ಪಾಲುದಾರಿಕೆಯಿಂದ ನಾವು ತುಂಬಾ ಸಂತೋಷಗೊಂಡಿದ್ದೇವೆ ಮತ್ತು ಈ ಯೋಜನೆಯು ಮಿಜೋರಾಂ ಮತ್ತು ಭಾರತೀಯ ಫುಟ್ಬಾಲ್ಗೆ ಗೇಮ್ ಚೇಂಜರ್ ಆಗಬಲ್ಲದು. ನೌಪಾಂಗ್ ಲೀಗ್ನಲ್ಲಿ ಸಮುದಾಯದ ಭಾಗವಹಿಸುವಿಕೆಯು ಸ್ಪರ್ಧೆಗೆ ವಿಭಿನ್ನ ಆಯಾಮವನ್ನು ನೀಡುತ್ತದೆ. ಏಕೆಂದರೆ ಇದು ಮಕ್ಕಳು, ಪೋಷಕರು ಮತ್ತು ಸ್ಥಳೀಯ ಸಮುದಾಯದ ಸಮೂಹಿಕ ಭಾಗವಹಿಸುವಿಕೆಯೂ ಆಗಿರುತ್ತದೆ ಎಂದು ಮಿಜೋರಾಂ ಫುಟ್ಬಾಲ್ ಅಸೋಸಿಯೇಷನ್ನ ಗೌರವ ಕಾರ್ಯದರ್ಶಿ ಹಾಗೂ ಎಐಎಫ್ಎಫ್ನ ಕಾರ್ಯಕಾರಿ ಸಮಿತಿ ಸದಸ್ಯರಾದ ಲಾಲ್ಘಿಂಗ್ಲೊವಾ ಹ್ಮಾರ್ ಟೆಟಿಯಾ ಹ್ಮಾರ್ ಹೇಳಿದ್ದಾರೆ.
ಆರ್ಎಫ್ವೈಸಿ ನೌಪಾಂಗ್ (ಮಕ್ಕಳ) ಲೀಗ್ಅನ್ನು ಮಿಜೋರಾಂನ 4 ಸ್ಥಳಗಳಲ್ಲಿ, ಲೀಗ್ ಸ್ವರೂಪದ 2 ಮಾದರಿಗಳಲ್ಲಿ ಆಯೋಜಿಸಲಾಗುತ್ತದೆ. ಮಿಜೋರಾಂ ಎಫ್ಎ ಮತ್ತು ಡಿಸ್ಟ್ರಿಕ್ಟ್ ಎಫ್ಎಗಳು ಲುಂಗ್ಲಿ ಮತ್ತು ಆರ್ಎಫ್ವೈಸಿನಿಂದ ಸಕ್ರಿಯಗೊಂಡಿರುವ ಕೊಲಸಿಬ್ ನಲ್ಲಿ ಲೀಗ್ಗೆ ಆತಿಥ್ಯ ವಹಿಸಲಿವೆ. ಇನ್ನು ಐಜ್ವಾಲ್ ಮತ್ತು ಚಾಂಪೈನಲ್ಲಿನ 2 ಲೀಗ್ಗಳಿಗೆ ರಿಲಯನ್ಸ್ ಫೌಂಡೇಷನ್ ಯಂಗ್ ಚಾಂಪ್ಸ್ ಒಡೆತನ ಮತ್ತು ಕಾರ್ಯನಿರ್ವಹಣೆಯನ್ನು ಹೊಂದಿರಲಿವೆ. 6 ವಯೋಮಿತಿಯಿಂದ 13 ವಯೋಮಿತಿವರೆಗೆ ವಯಸ್ಸಿನ ವಿಭಾಗಗಳು ಇರಲಿವೆ. ಇದಲ್ಲದೆ ಹಲವು ರೀತಿ ಕ್ರೀಡಾ ಸ್ವರೂಪಗಳು ಇರಲಿವೆ. ಮಕ್ಕಳು ಕನಿಷ್ಠ 30 ಪಂದ್ಯಗಳನ್ನು ಆಡಲಿದ್ದಾರೆ. ಅರ್ಹ ಆಟಗಾರರಿಗೆ ಹೆಚ್ಚುವರಿ ಆಟಗಳನ್ನು ಮತ್ತು ಸ್ಪರ್ಧಾತ್ಮಕ ಅವಕಾಶಗಳನ್ನು ಒದಗಿಸಿಕೊಡಲು ಆರ್ಎಫ್ ಯಂಗ್ ಚಾಂಪ್ಸ್ ಈ ಪ್ರದೇಶದಲ್ಲಿ ಆರ್ಎಫ್ ಯೂತ್ ಸ್ಪೋರ್ಟ್ಸ್ನೊಂದಿಗೆ ಮತ್ತಷ್ಟು ಸಂಯೋಜನೆಗೊಳ್ಳುತ್ತಿದೆ.
ಮಿಜೋರಾಂ ಫುಟ್ಬಾಲ್ ಪರಿಸರ ವ್ಯವಸ್ಥೆಯು ರಿಲಯನ್ಸ್ ಫೌಂಡೇಷನ್ ಯಂಗ್ ಚಾಂಪ್ಸ್ನಿಂದ ಅಗಾಧವಾಗಿ ಪ್ರಯೋಜನ ಪಡೆಯಲಿದೆ. ಏಕೆಂದರೆ ಅದರ ಕಾರ್ಯಕ್ರಮಗಳು ಕೋಚ್ ಶಿಕ್ಷಣ ಮತ್ತು ಅಭಿವೃದ್ಧಿಯನ್ನು ಒಳಗೊಂಡಿದೆ. ರೆಫ್ರಿ ಅಭಿವೃದ್ಧಿ, ಮಕ್ಕಳಿಗಾಗಿ ಸಾಪ್ತಾಹಿಕ ತರಬೇತಿ ಕಾರ್ಯಕ್ರಮ, ಉದಯೋನ್ಮುಖ ಆಟಗಾರಿಗಾಗಿ ತ್ರೈಮಾಸಿಕ ಶಿಬಿರಗಳು (ಸ್ಥಳೀಯ), ಅಂತರ ಜಿಲ್ಲಾ ಚಾಂಪಿಯನ್ಷಿಪ್ನ ಆಯೋಜನೆ ಮತ್ತು ರಿಲಯನ್ಸ್ ಫೌಂಡೇಷನ್ ಯಂಗ್ ಚಾಂಪ್ಸ್ ಶಿಬಿರಗಳನ್ನು ಮುಂಬೈನಲ್ಲಿ ನಡೆಸುವ ಮೂಲಕ ಪಂದ್ಯದ ದಿನದ ಕಾರ್ಯನಿರ್ವಹಣೆಯನ್ನು ಅತ್ಯುತ್ತಮವಾಗಿ ತಿಳಿಸಿಕೊಡಲಾಗುತ್ತಿದೆ. ಆರ್ಎಫ್ವೈಸಿ ಮಿಜೋರಾಂ ಫುಟ್ಬಾಲ್ ಅಸೋಸಿಯೇಷನ್ಗೆ ಆಂಬ್ಯುಲೆನ್ಸ್ ಅನ್ನು ಸಹ ಕೊಡುಗೆಯಾಗಿ ನೀಡಿದೆ.
You must be logged in to post a comment.