ನೆನಪಾಗುವ ಶಿವ...

ಶಿವ ಶಿವ ಶಿವ ಶಿವ ಶಿವ........

( ಅಲ್ಲಾ - ಯೇಸು - ರಾಮ ಮುಂತಾದ ಎಲ್ಲಾ ರೂಪಗಳಿಗೂ ಅನ್ವಯಿಸಿ........)

 

ನೆನಪಾಗುವೆ ನೀನು ಪ್ರತಿಕ್ಷಣವೂ...‌‌‌‌.....

ಶಿವ ಮುಂಜಾನೆ - ಶಿವ ಮಧ್ಯಾಹ್ನ - ಶಿವ ಸಂಜೆ - ಶಿವರಾತ್ರಿ.......‌‌

 

ರೈತನೊಬ್ಬ ಸಾಲದ ಸುಳಿಗೆ ಸಿಲುಕಿ ಉರುಳಿಗೆ ತಲೆಕೊಟ್ಟಾಗ.......‌,

 

ಗೃಹಿಣಿಯೊಬ್ಬಳು ವರದಕ್ಷಿಣೆಯ  ಬೆಂಕಿಗೆ ಆಹುತಿಯಾದಾಗ.........,

 

ಹಸುಳೆಯೊಂದು ಅತ್ಯಾಚಾರಕ್ಕೆ ಒಳಗಾದಾಗ.........,

 

ಜಾತಿ ವ್ಯವಸ್ಥೆಯ ಸುಳಿಗೆ ಸಿಲುಕಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಾಗ..........,

 

ಶಾಲಾ ಮಕ್ಕಳು ಅಪಘಾತಕ್ಕೆ ಒಳಗಾಗಿ ತೀರಿಕೊಂಡಾಗ............‌‌,

 

ವೃದ್ಧರನ್ನು ಅನಾಥಾಶ್ರಮದಲ್ಲಿ ಕಂಡಾಗ..................,

 

ವಂಚಕರು ವಿಧಾನಸೌಧ - ಪಾರ್ಲಿಮೆಂಟಿನಲ್ಲಿ ಕುಳಿತಿರುವಾಗ............,

 

ಸುಳ್ಳುಗಾರರು ಟಿವಿಯಲ್ಲಿ ಮಾತನಾಡುವಾಗ......‌..,

 

ಭ್ರಷ್ಟ ರು ಅಧಿಕಾರ ನಡೆಸುವಾಗ..........,

 

ಕಾಮಿಗಳು ಕಾವಿ ತೊಟ್ಟಿರುವಾಗ..........,

 

ಈ ನೆಲದ ಅನ್ನ ತಿಂದು ನೀರು ಕುಡಿದು ದೇಶದ್ರೋಹಿಗಳಾದಾಗ.......‌...‌,

 

ಅಸ್ಪೃಶ್ಯತೆಯ ಆಚರಣೆಯ ಭಾಗವಾಗಿ  ಮನುಷ್ಯನನ್ನು ಮುಟ್ಟಿಸಿಕೊಳ್ಳಲೇ ಅಸಹ್ಯ ಪಡುವವರಿರುವಾಗ.........,

 

ಕುಡಿಯುವ ನೀರಿಗೆ ಹೊಡೆದಾಡುತ್ತಿರುವಾಗ............,

 

ತಿನ್ನುವ ಆಹಾರವನ್ನು ಕಲಬೆರಕೆ ಮಾಡುತ್ತಿರುವಾಗ........,

 

ಸೈನಿಕರ ಪತ್ನಿಯರು ವಿಧವೆಯರಾಗುತ್ತಿರುವಾಗ............,

 

ಮೋಸಗಾರರು ಜ್ಯೋತಿರ್ಲಿಂಗಗಳನ್ನು ಸುತ್ತುತ್ತಿರುವಾಗ........,

 

ಕಪಟಿಗಳು ನಿನ್ನ ಹೆಸರಲ್ಲಿ ಉಪವಾಸ - ಜಾಗರಣೆ ಮಾಡುತ್ತಿರುವಾಗ.....‌,

 

ನೆನಪಾಗುವೆ ನೀನು ಶಿವ.......

 

ಆದರೆ,.............

 

ಶತಶತಮಾನಗಳಿಂದ ಬರುವೆಯೆಂದು ನಂಬಿಸಿ ಎಂದಿಗೂ ಬಾರದ ಮೋಸಗಾರ ನೀನೋ.....

ಅಥವಾ,

ನೀನು ಬರುವೆಯೆಂದು ಶತಶತಮಾನಗಳಿಂದ ಕಾಯುತ್ತಿರುವ ಮೂರ್ಖ ನಾನೋ..........

 

ಒಳ್ಳೆಯವರು ಒಳ್ಳೆಯವರಾಗಿ ಬದುಕುವುದೇ ಕಷ್ಟವಾಗುತ್ತಿರುವ ಸಂದರ್ಭದಲ್ಲಿ.......

 

ಒಂದಂತು ನಿಜ........

 

ನೀನು  ಪ್ರತ್ಯಕ್ಷವಾಗುವವರೆಗೂ,

ನಿನ್ನನ್ನು ನಂಬುವುದಿಲ್ಲ. 

ನೀನು ಎಷ್ಟೇ ದೊಡ್ಡವನಾಗಿರು,

ನೀನು ಎಷ್ಟೇ ಎತ್ತರದಲ್ಲಿರು,

ನೀನು ಎಷ್ಟೇ ಶಕ್ತಿವಂತನಾಗಿರು,

ನೀನು ಎಷ್ಟೇ ಬುದ್ದಿವಂತನಾಗಿರು,

ನನ್ನಂತ ಸಾಮಾನ್ಯನ ಕಷ್ಟ ಸುಖ ನೋವು ನಲಿವುಗಳಿಗೆ ಸ್ಪಂದಿಸಿ ಸರಳವಾಗಿ ಸಹಜವಾಗಿ ಮಾರ್ಗದರ್ಶನ ಮಾಡುವವರೆಗೂ ,

 

ನೀನೊಂದು ಭ್ರಮೆ,

ನೀನೊಂದು ಕಲ್ಪನೆ,

ನೀನೊಂದು ಶಿಲೆ,

ನೀನೊಂದು ಗೊಂಬೆ,

ನೀನೊಂದು ಭಾವ,

ನೀನೊಂದು ತರ್ಕ,

ನೀನೊಂದು ಸಂಕೇತ,

ನೀನೆಂದಿಗೂ ವಾಸ್ತವವಾಗಲಾರೆ.

ಎಚ್ಚರಿಕೆ...........

 

( ಇದು ಕೇವಲ ಶಿವನಿಗೆ ಮಾತ್ರವಲ್ಲ. ಎಲ್ಲಾ ಧರ್ಮಗಳ ಎಲ್ಲಾ  ದೇವರೆಂಬ ಭಾವಗಳಿಗೂ ಅನ್ವಯ.)

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ.......

ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನಂದ. ಹೆಚ್.ಕೆ.

9844013068..............

Enjoyed this article? Stay informed by joining our newsletter!

Comments

You must be logged in to post a comment.

About Author