ಚಮೋಲಿಯ ರೂಪ್’ಕುಂಡ್‍ನಲ್ಲಿದೆ ಅಸ್ಥಿಪಂಜರಗಳ ಕೆರೆ

 ಬೆಚ್ಚಿ ಬೀಳಿಸುತ್ತೆ ಇದರ ಭಯಾನಕ ಕಥೆ..!

roopkund chamoli uttarakund

 Image Credits : rajyasameeksha.com

ಭಾರತ ದೇಶದಲ್ಲಿ ಅದೆಷ್ಟೋ ನಿಗೂಢ ಸ್ಥಳಗಳಿವೆ. ಇಂಥಹಾ ಸ್ಥಳಗಳು ಭೂ ಶಾಸ್ತ್ರಜ್ಞರಿಗೂ, ವಿಜ್ಞಾನಿಗಳು ಸವಾಲಾಗಿ ಪರಿಣಮಿಸಿವೆ. ಅಂಥಹಾ ಸ್ಥಳಗಳ ರಹಸ್ಯ ತಿಳಿದುಕೊಳ್ಳಲಾಗದೆ ಅದೆಷ್ಟೋ ಮಂದಿ ಅವುಗಳ ಬಗ್ಗೆ ಅದೆಷ್ಟೋ ಕಥೆಗಳನ್ನು ಕಟ್ಟಿ ಮಾತನಾಡುತ್ತಲೇ ಇರುತ್ತಾರೆ. ಆದರೆ ಆ ಸ್ಥಳಗಳು ಇಂದಿಗೂ ಎಲ್ಲರ ಪಾಲಿಗೆ ಪ್ರಶ್ನಾರ್ಥಕವಾಗಿ ಉಳಿದುಕೊಂಡಿವೆ. ಅಂಥಹಾ ಪ್ರದೇಶಗಳಲ್ಲಿ ಒಂದು ಉತ್ತರಾಖಂಡ್ ರಾಜ್ಯದ ಚಮೋಲಿಯಲ್ಲಿರುವ ರೂಪ್‍ಕುಂಡ್‍.

ಉತ್ತರಾಖಂಡ್ ರಾಜ್ಯದ ತ್ರಿಶೂಲ್ ಶೃಂಗಶ್ರೇಣಿಗಳಲ್ಲಿ ಈ ಹಿಮ ಸರೋವರವು ಕಂಡುಬರುತ್ತದೆ. ಅಚ್ಚರಿ ವಿಷಯವೆಂದರೆ ರೂಪ್‍ಕುಂಡ್‍ ಹೆಸರಿನ ಈ ಕೆರೆಯಲ್ಲಿರುವುದು ಮೀನುಗಳು, ಇತರ ಚಲಚರಗಳಲ್ಲ. ತಾವರೆಯಂತಹಾ ಸುಮಧುರ ಹೂಗಳೂ ಅಲ್ಲ. ಬದಲಾಗಿ ರಾಶಿ ರಾಶಿ ಅಸ್ಥಿಪಂಜರಗಳು. ಇವು ಎಲ್ಲಿಂದ ಬಂದವು, ಯಾಕಾಗಿ ಬಂದವು ಎಂದು ತಿಳಿಯದಿದ್ದರೂ ಇವುಗಳ ಚಿತ್ರಣ ಎಲ್ಲರಲ್ಲೂ ಭಯ ಹುಟ್ಟಿಸುವಂತಿದೆ. ಸ್ಥಳೀಯವಾಗಿ ರೂಪ್‍ಕುಂಡ್‍ ರಹಸ್ಯ ಕೆರೆ, ಅಸ್ಥಿಪಂಜರದ ಕೆರೆ ಎಂದು ಸಹ ಕರೆಯಲ್ಪಡುತ್ತದೆ.

ಇದನ್ನು ಓದಿ : ಇದು ಇಲಿಗಳನ್ನು ಪೂಜಿಸುವ ದೇವಸ್ಥಾನ..ಇಲಿ ತಿಂದ ಆಹಾರವೇ ಭಕ್ತರಿಗೆ ಪ್ರಸಾದ..!

ಅಸ್ಥಿಪಂಜರಗಳ ಕೆರೆ ವಿರೂಪ್ಕುಂಡ್

lake of skeleton roopkund

Image Credits : Andhrawishesh

ಹಿಮಾಲಯದಿಂದ 16,500 ಅಡಿಗಳಷ್ಟು ಎತ್ತರದಲ್ಲಿ ಈ ರೂಪ್‍ಕುಂಡ್‍ ಇದೆ. ಹೀಗಾಗಿ ಇದೊಂದು ಜನಪ್ರಿಯ ಚಾರಣ ತಾಣವಾಗಿದೆ. ಕೌತುಕಮಯ ಸಂಗತಿಯೆಂದರೆ ಕಾಲಕ್ಕೆ ತಕ್ಕಂತೆ ಸರೋವರದ ಗಾತ್ರವು ಗಣನೀಯವಾಗಿ ಬದಲಾಗುತ್ತಲೇ ಇರುತ್ತದೆ. ಆದರೆ ಇದು ವಿರಳವಾಗಿ 40 ಮೀಟರ್‌ಗಿಂತ ಹೆಚ್ಚು ವ್ಯಾಸವನ್ನು ಹೊಂದಿರುತ್ತದೆ. ಚಳಿಗಾಲದಲ್ಲಿ ಈ ಕೆರೆ ಸಂಪೂರ್ಣವಾಗಿ ಹಿಮದಿಂದ ಹೆಪ್ಪುಗಟ್ಟುತ್ತದೆ.

ವರ್ಷದ ಒಂದು ನಿರ್ದಿಷ್ಟ ತಿಂಗಳಿನಲ್ಲಿ ಹಿಮದಲ್ಲಿ ಘನಿರ್ಭವಿಸಿದ ಈ ಕೆರೆಯು ಕರಗಿದಾಗ ಸ್ವಚ್ಛವಾದ ಆ ನೀರಿನಲ್ಲಿ ಅಸ್ಥಿಪಂಜರಗಳನ್ನು ಗಮನಿಸಬಹುದು. ಹಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗಿದ್ದು ದೊರೆತಿರುವ ಅಸ್ಥಿಪಂಜರಗಳು ಹಲವಾರು ಶತಮಾನಗಳಷ್ಟು ಹಳೆಯದು ಎಂದು ಹೇಳಲಾಗಿದೆ.

ಪ್ರತಿ ವರ್ಷ ಈ ನಿಗೂಢ ಸ್ಥಳದಲ್ಲಿ ಹಿಮ ಕರಗಿದಾಗ ಹೆಪ್ಪುಗಟ್ಟಿದ ರೂಪ್‌ಕುಂಡ್ ಸರೋವರದ ಮೇಲ್ಮೈ ಕೆಳಗೆ 300-600 ಅಸ್ಥಿಪಂಜರಗಳನ್ನು ಕಾಣಬಹುದು. ನೋಡುವಾಗಲೇ ಈ ದೃಶ್ಯ ಭಯ ಹುಟ್ಟಿಸುವಂತಿರುತ್ತದೆ. ರೇಡಿಯೊ ಕಾರ್ಬನ್ ಪರೀಕ್ಷೆಗಳು ಮತ್ತು ವಿಧಿವಿಜ್ಞಾನಗಳು ಪರೀಕ್ಷೆಗಳು ಈ ಅಸ್ಥಿಪಂಜರವು ಕ್ರಿ.ಶ 15ನೇ ಶತಮಾನಕ್ಕೆ ಸೇರಿದ್ದು ಎಂದು ತಿಳಿಸಿದೆ. ಈ ಊರಿನ ಸ್ಥಳೀಯರು ಈ ಅಸ್ಥಿಪಂಜರಗಳು ಹಿಂದಿನ ಕಾಲದ ರಾಜ ಮತ್ತು ರಾಣಿಗೆ ಸೇರಿವೆ ಎಂದು ನಂಬುತ್ತಾರೆ. ಅವರು ತೀರ್ಥಯಾತ್ರೆಗೆ ಹೋಗುತ್ತಿದ್ದರು ಆದರೆ ತೀವ್ರವಾದ ಆಲಿಕಲ್ಲು ಮಳೆಯಿಂದಾಗಿ ಎಲ್ಲರೂ ಸರೋವರದಲ್ಲಿ ಮುಳುಗಿ ಮೃತಪಟ್ಟರು ಎಂದು ಹೇಳುತ್ತಾರೆ.

ಇದನ್ನು ಓದಿ : ಸೀತಾ ಮಾತೆ ಹೆಸರಿನಲ್ಲಿದೆ ಭವ್ಯ ದೇಗುಲ!ನೇಪಾಳದ ಜಾನಕಿ ಮಂದಿರದ ವಿಶೇಷತೆ ಗೊತ್ತಾ?

ರೂಪ್‍ಕುಂಡ್‍ನಲ್ಲಿದ್ದೆ ರಾಶಿ ರಾಶಿ ಸ್ಕೆಲಿಟನ್ಸ್‍..!

roopkund skeleton pond

Image Credits : Reddit

ಹೆಚ್.ಕೆ ಮಧ್ವಾಲ್ ಎಂಬ ವನಪಾಲಕ 1942 ರಲ್ಲಿ ಈ ಕೆರೆಯಲ್ಲಿ ಅಸ್ಥಿಪಂಜರಗಳಿರುವುದನ್ನು ಪತ್ತೆ ಹಚ್ಚಿದ. ನಂತರ ಇಲ್ಲಿ ಬಹು ಸಂಖ್ಯೆಯಲ್ಲಿ ಅಸ್ಥಿಪಂಜರಗಳಿರುವದನ್ನು ಶೋಧಿಸಲಾಯಿತು. ಮೊದಲಿಗೆ, ಅಸ್ಥಿಪಂಜರಗಳು ಗುಪ್ತ ಜಪಾನಿನ ಆಕ್ರಮಣ ಪಡೆಯ ಅಪಘಾತಗಳನ್ನು ಪ್ರತಿನಿಧಿಸುತ್ತವೆ ಎಂದು ಬ್ರಿಟಿಷ್ ಅಧಿಕಾರಿಗಳು ಭಯಪಟ್ಟರು. ಆದರೆ ಆ ಬಳಿಕ ಸಂಶೋಧನೆಯಲ್ಲಿ ಅಸ್ಥಿಪಂಜರಗಳು ಜಪಾನಿನ ಸೈನಿಕರ ಕಾಲಕ್ಕಿಂತ ತುಂಬಾ ಹಳೆಯವು ಎಂದು ತಿಳಿದುಬಂತು.

ಹಿಮ ಕರಗಿದಾಗ ಈ ರೂಪ್‍ಕುಂಡ್ ಕೆರೆಯಲ್ಲಿ ರಾಶಿ ರಾಶಿ ಅಸ್ಥಿಪಂಜರಗಳು ಕಾಣಸಿಗುತ್ತವೆ. ಮಾತ್ರವಲ್ಲ, ಅಸ್ಥಿಪಂಜರಗಳ ಜೊತೆಗೆ, ಮರದ ಕಲಾಕೃತಿಗಳು, ಕಬ್ಬಿಣದ ಸ್ಪಿಯರ್‌ಹೆಡ್‌ಗಳು, ಚರ್ಮದ ಚಪ್ಪಲಿಗಳು, ಮತ್ತು ಉಂಗುರಗಳು ಸಹ ಕಾಣುತ್ತವೆ. ನ್ಯಾಷನಲ್ ಜಿಯಾಗ್ರಫಿಕ್ ತಂಡವು 2003ರಲ್ಲಿ ಸುಮಾರು 30 ಅಸ್ಥಿಪಂಜರಗಳನ್ನು ಪರಿಶೀಲಿಸಿತ್ತು. ಆ ಸಂದರ್ಭದಲ್ಲಿ ಕೆಲವು ಅಸ್ಥಿಪಂಜರದಲ್ಲಿ ಇನ್ನೂ ಮಾಂಸಗಳು ಹಾಗೆಯೇ ತಗುಲಿರುವುದು ಕಂಡು ಬಂದಿತ್ತು.

ಸಂಶೋಧನೆಯ ಪ್ರಕಾರ, ಈ ಮೂಳೆಗಳು, ಅಸ್ಥಿಪಂಜರಗಳು ವರ್ಷಗಳ ಹಿಂದೆ ಸತ್ತ ರಾಜವಂಶದ್ದಾಗಿದೆ ಎಂದು ತಿಳಿದುಬಂದಿದೆ. ಜನರಲ್ ಜೊರಾವರ್ ಸಿಂಗ್ ಕಹ್ಲೂರಿಯಾ ಅವರ 250 ಅಥವಾ ಅದಕ್ಕಿಂತ ಹೆಚ್ಚು ಹುತಾತ್ಮ ಸೈನಿಕರು ಟಿಬೆಟ್‌ನಿಂದ ಹಿಂದಿರುಗುತ್ತಿದ್ದರು. ಇದು ಅವರದ್ದಾಗಿ ಎಂದು ಹೇಳಲಾಗಿದೆ.

ಇದನ್ನು ಓದಿ : ವಿಘ್ನ ವಿನಾಯಕನ ಪೂಜೆಗೆ ತುಳಸಿ ನಿಷಿದ್ಧ ಯಾಕೆ ಗೊತ್ತಾ..?

ಇನ್ನೊಂದು ಮೂಲದ ಪ್ರಕಾರ ಕನೌಜ್ ರಾಜ, ಮತ್ತವನ ಗರ್ಭಿಣಿ ಪತ್ನಿ ರಾಣಿ ಬಾಲಂಪಾ, ಅವರ ಸೇವಕರು, ನೃತ್ಯ ತಂಡ ಮತ್ತು ಇತರರೊಂದಿಗೆ ನಂದಾ ದೇವಿ ದೇಗುಲಕ್ಕೆ ತೀರ್ಥಯಾತ್ರೆಗೆ ಹೋಗುತ್ತಿದ್ದರು. ಅವರ ತಂಡ ರೂಪ್‍ಕುಂಡ್ ಸಮೀಪ ಹೋಗುತ್ತಿದ್ದಾಗ ಆಲಿಕಲ್ಲುಗಳ ದೊಡ್ಡ ಚಂಡಮಾರುತ ಎದುರಾಯಿತು. ಇದರಿಂದ ರಾಜ ಹಾಗೂ ರಾಜನ ಪರಿವಾರ, ಸೈನಿಕರ ತಂಡ ರೂಪ್‌ಕುಂಡ್ ಸರೋವರದ ಬಳಿ ನಾಶವಾಯಿತು ಎಂದು ಹೇಳಲಾಗಿದೆ.

ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾ 1950 ರ ದಶಕದಲ್ಲಿ ಅಸ್ಥಿಪಂಜರಗಳ ಬಗ್ಗೆ ಅಧ್ಯಯನ ನಡೆಸಿ ಕೆಲವು ಮಾದರಿಗಳನ್ನು ಡೆಹ್ರಾಡೂನ್‌ನ ಮಾನವಶಾಸ್ತ್ರೀಯ ಸಮೀಕ್ಷೆ ಆಫ್ ಇಂಡಿಯಾ ಮ್ಯೂಸಿಯಂನಲ್ಲಿ ಪ್ರದರ್ಶಿಸಿದೆ. ಪರೀಕ್ಷೆಗೆ ಒಳಪಡಿಸಿದಾ ಅಸ್ಥಿಪಂಜರಗಳ ತಲೆಯ ಮೇಲೆ ಗಾಯಗಳಾಗಿರುವುದು ತಿಳಿದುಬಂದಿತ್ತು. ದುಂಡಗಿನ ವಸ್ತುಗಳು ಸಾವಿಗೆ ಕಾರಣ ಎಂದು ತಿಳಿಸಲಾಗಿತ್ತು. ಸ್ಥಳೀಯ ದಂತಕಥೆಗಳು ಮತ್ತು ಹಾಡುಗಳಲ್ಲಿ ವಿವರಿಸಿದಂತೆ ಆಲಿಕಲ್ಲಿನ ಮಳೆ ಸುರಿದು ಮೃತಪಟ್ಟವರ ಅಸ್ಥಿಪಂಜರ ಇದಾಗಿದೆ ಎಂದು ಹೇಳಲಾಗಿದೆ.

Featured Image Credits : Live Travel India

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author