ಶಾಲ್ಮಲಾ ನದಿ ನೀರಿನ ಮಧ್ಯೆಯಿದೆ ಸಹಸ್ರಲಿಂಗ..!

shalmala river sahasralinga

Featured Image Source : metrosaga.com

ಭಾರತದಲ್ಲಿ ಶಿವನನ್ನು ಆರಾಧಿಸುವ ಸಾವಿರಾರು ದೇವಾಲಯಗಳಿವೆ. ದೇಶದ ಹಲವು ರಾಜ್ಯಗಳಲ್ಲಿ ಮಹಾದೇವನನ್ನು ಪೂಜಿಸುವ ಮಂದಿರಗಳಿವೆ. ಶಿವನ ದೇವಸ್ಥಾನಗಳಲ್ಲಿ ಮುಖ್ಯವಾಗಿ ಶಿವಲಿಂಗಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ವಿಶೇಷ ಪೂಜೆ ಸಲ್ಲಿಸಲಾಗುತ್ತದ. ಕೋಲಾರದಲ್ಲಿರುವ ಕೋಟಿ ಲಿಂಗಗಳ ಬಗ್ಗೆ ನೀವು ಕೇಳಿರಬಹುದು. ಇದು ಅಂಥಹದ್ದೇ ಒಂದು ಪ್ರದೇಶ. ಇದು ಕರ್ನಾಟಕದಲ್ಲೇ ಇರುವುದು ವಿಶೇಷ. ಇಲ್ಲಿರುವ ನದಿ ನೀರಿನಲ್ಲಿ ಕೆತ್ತಿರುವ ಸಾವಿರಾರು ಶಿವಲಿಂಗಗಳಿರುವುದು ಇಲ್ಲಿನ ವೈಶಿಷ್ಟ್ಯತೆ.

ಸಹಸ್ರ ಶಿವಲಿಂಗಗಳಿರುವ ಈ ದೇವಸ್ಥಾನದ ವಿಶೇಷತೆಯೇನು..?ಈ ಸಹಸ್ರಲಿಂಗಗಳಿರುವ ನದಿಯಿರುವುದು ಎಲ್ಲಿ..? ಮೊದಲಾದ ವಿಚಾರಗಳನ್ನು ತಿಳಿದುಕೊಳ್ಳೋಣ..

ಕರ್ನಾಟಕದಲ್ಲಿ ಶಿರಸಿ ಪಟ್ಟಣದ ಶಾಲ್ಮಲ ನದಿಯ ಮಧ್ಯದಲ್ಲಿ ಈ ಶಿವಲಿಂಗಗಳಿವೆ. ಈ ಸ್ಥಳವು 1000 ಶಿವಲಿಂಗಗಳಿಗೆ ಹೆಸರುವಾಸಿಯಾಗಿದ್ದು, ಸಹಸ್ರ ಶಿವಲಿಂಗಗಳೆಂದೇ ಕರೆಯಲ್ಪಡುತ್ತವೆ. ಇದನ್ನು ಶಾಲ್ಮಲ ದಡದಲ್ಲಿರುವ ಬಂಡೆಗಳ ಮೇಲೆ ಕೆತ್ತಲಾಗಿದೆ. ಇತಿಹಾಸದ ಮಟ್ಟಿಗೆ ಹೇಳುವುದಾದರೆ, 1678 ಮತ್ತು 1718ರ ನಡುವೆ ವಿಜಯನಗರ ಸಾಮ್ರಾಜ್ಯದ ಆಡಳಿತಗಾರ ಸದಾಶಿವರಾಯರು 1000 ಲಿಂಗಗಳನ್ನು ಸ್ಥಾಪಿಸಿದರು ಎನ್ನಲಾಗುತ್ತದೆ.

ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಮುಖ್ಯರಸ್ತೆಯಿಂದ 1.5 ಕಿ.ಮೀ ದೂರದಲ್ಲಿರುವ ಶಾಲ್ಮಲಾ ನದಿಯ ಹರಿವಿನಲ್ಲಿ ಕಲ್ಲು ಬಂಡೆಗಳ ಮೇಲೆ ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಲಾಗಿದೆ. ಇಲ್ಲಿ ಸಾವಿರಾರು ಲಿಂಗಗಳಿರುವ ಕಾರಣ ಇದನ್ನು ಸಹಸ್ರಲಿಂಗವೆಂದೂ ಕರೆಯುತ್ತಾರೆ. ಪ್ರತಿವರ್ಷ ನೂರಾರು ಜನರು ಇಲ್ಲಿಗೆ ಭೇಟಿ ನೀಡಿ ಸಹಸ್ರಲಿಂಗದ ದರ್ಶನ ಪಡೆಯುತ್ತಾರೆ. ಅಲ್ಲದೆ, ಪ್ರತಿವರ್ಷ, ಮಹಾ ಶಿವರಾತ್ರಿಯ ಸಮಯದಲ್ಲಿ ದೇಶದ ವಿವಿಧೆಡೆಯಿಂದ ಭಕ್ತರು ಶಿವ ಪೂಜೆ ನಡೆಸಲು ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಸಂತಾನಭಾಗ್ಯ ದೊರಕಲು ಶಿವಲಿಂಗ ನಿರ್ಮಿಸುವ ಹರಕೆ..!

mystery of sahasralinga in shalmala

Image Source : Patrika

ಎಲ್ಲಾ ಕ್ಷೇತ್ರಗಳಿಗೆ ಇರುವಂತೆಯೇ ಈ ಸಹಸ್ರಲಿಂಗಕ್ಕೂ ಐತಿಹಾಸಿಕ ಹಿನ್ನಲೆಯಿದೆ. 1678 ಮತ್ತು 1718 ವರೆಗೆ ಸೋದೆಯ ಮೊದಲ ದೊರೆ ಅರಸಪ್ಪ ನಾಯ್ಕ ಇಲ್ಲಿ ಆಳ್ವಿಕೆ ನಡೆಸಿದ್ದರು. ಆದರೆ ಎಷ್ಟು ವರ್ಷಗಳಾದರೂ ಅವರಿಗೆ ಮಕ್ಕಳಾಗಿರಲ್ಲಿಲ್ಲ. ಹೀಗಾಗಿ ಮಗುವನ್ನು ಪಡೆಯಲು ಅರಸಪ್ಪ ನಾಯ್ಕರು ಹರಕೆ ಹೊತ್ತುಕೊಂಡರು. ತಮಗೆ ಸಂತಾನಭಾಗ್ಯ ಕರುಣಿಸಿದರೆ ಶಾಲ್ಮಲಾ ನದಿಯಲ್ಲಿ ಶಿವಲಿಂಗ ನಿರ್ಮಿಸುತ್ತೇನೆ ಎಂದು ಕೇಳಿಕೊಂಡರು. ಇದೇ ಕಾರಣಕ್ಕಾಗಿ ಒಂದೆರಡು ಶಿವಲಿಂಗವನ್ನು ನದಿಯಲ್ಲಿ ಕೆತ್ತಿಸಿದರು ಎಂದು ಹೇಳಲಾಗುತ್ತದೆ.

ಆ ನಂತರ ಆಡಳಿತಕ್ಕೆ ಬಂದ ಆಡಳಿತಗಾರ ಸದಾಶಿವರಾಯರು 1000 ಲಿಂಗಗಳನ್ನು ಸ್ಥಾಪಿಸಿದರು. ವೈಶಾಖ ಮಾಸಗಳಲ್ಲಿ ಸಹಸ್ರಲಿಂಗಗಳನ್ನು ಕೆತ್ತಿಸಿ ಪೂಜೆ ಸಲ್ಲಿಸುತ್ತಾ ಬಂದರು ಎಂದು ಶಾಸನದಲ್ಲಿ ತಿಳಿಸಲಾಗಿದೆ. ಆ ಬಳಿಕ ಇಲ್ಲಿಗೆ ಭಕ್ತರು ವಿವಿಧೆಡೆಯಿಂದ ಆಗಮಿಸಿ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಇಲ್ಲಿ ಬಂದು ಪೂಜೆ ಸಲ್ಲಿಸಿದ ನಂತರ ಹಲವರಿಗೆ ಮಕ್ಕಳಾಗಿವೆ ಅಂತಾರೆ ಸ್ಥಳೀಯರು. ಇನ್ನೊಂದು ಹಿನ್ನಲೆಯ ಪ್ರಕಾರ, ಶಾಲ್ಮಲಾ ನದಿ ತೀರವು ಶಿಲ್ಪಕಲಾ ತರಬೇತಿ ಕೇಂದ್ರವಾಗಿತ್ತು ಎಂಬ ಪ್ರತೀತಿ ಸಹ ಇದೆ.

ಜುಳುಜುಳು ಎಂದು ಹಿತವಾಗಿ ಹರಿಯುವ ಶಾಲ್ಮಲಾ ನದಿಯ ಒಡಲಿನಲ್ಲಿ ಸಾವಿರಾರು ವಿಭಿನ್ನ ಗಾತ್ರದ ಶಿವಲಿಂಗಗಳನ್ನು ನೋಡಬಹುದು. ಕಲ್ಲಿನ ಮೇಲೆ ಕಾಲಿಟ್ಟು ಸಾಗುತ್ತಾ ಹೋದರೆ ತುಂಬಾ ದೂರದ ವರೆಗೂ ಶಿವಲಿಂಗಗಳನ್ನು ನೋಡಬಹುದು. ಅದರ ಜತೆಯಲ್ಲಿಯೇ, ನದಿಯ ಮಧ್ಯದಲ್ಲಿಯೇ ಇರುವ ನಂದಿ ವಿಗ್ರಹವು ಎಲ್ಲರ ಗಮನ ಸೆಳೆಯುತ್ತದೆ. ನದಿಯ ನೀರಿನ ರಭಸಕ್ಕೆ ಕೆಲವೊಂದು ಲಿಂಗಗಳು ಹಾನಿಗೊಂಡಿವೆ ಮತ್ತು ಇನ್ನು ಕೆಲವು ವಿರೂಪಗೊಂಡಿವೆ.

ಇನ್ನು ಶಾಲ್ಮಲಾ ನದಿಯ ಸಮೀಪದಲ್ಲೇ ಪಾಂಡವರು ಬಳಸುತ್ತಿದ್ದರು ಎಂದು ಹೇಳಲಾಗುವ ಒರಳು ಕಲ್ಲು ಸಹ ಅಲ್ಲಲ್ಲಿ ಕಾಣಸಿಗುತ್ತದೆ. ನದಿಗೆ ಅಡ್ಡಲಾಗಿ ಒಂದು ಸೇತುವೆಯನ್ನು ಸಹ ಕಟ್ಟಲಾಗಿದೆ. ಸೇತುವೆ ಮೇಲಿನಿಂದ ಶಾಲ್ಮಲಾ ಹಾಗೂ ಸುತ್ತಮುತ್ತಲಿನ ಪ್ರದೇಶ ಅದ್ಭುತವಾಗಿ ಕಾಣಿಸುತ್ತದೆ.

ಶಾಲ್ಮಲಾ ನದಿಯಲ್ಲಿ ಸ್ನಾನ ಮಾಡಿದರೆ ಎಲ್ಲಾ ರೋಗವೂ ಮಾಯ..!

sahasralinga in shalmala river

Image Source : Tripadvisor

ಶಾಲ್ಮಲಾ ನದಿಯ ಇನ್ನೊಂದು ವಿಶೇಷತೆಯೆಂದರೆ ನದಿಯಲ್ಲಿ ಸ್ನಾನ ಮಾಡಿದರೆ ಎಂಥಾ ಕಾಯಿಲೆ ಇದ್ದರೂ ಗುಣವಾಗುತ್ತದೆ ಎಂದು ನಂಬಲಾಗುತ್ತದೆ. ಹಾಗಾಗಿಯೇ ವಿವಿಧ ಚರ್ಮ ರೋಗ, ಅಲರ್ಜಿ ಮೊದಲಾದ ಸಮಸ್ಯೆಯಿರುವವರು ನದಿಯಲ್ಲಿ ಸ್ನಾನ ಮಾಡಿ ರೋಗದಿಂದ ಮುಕ್ತಿ ಪಡೆಯುತ್ತಾರೆ.

ಇನ್ನೊಂದು ವಿಶಿಷ್ಟತೆಯೆಂದರೆ, ಶಾಲ್ಮಲಾ ಕಣಿವೆಗೆ ಬಂದು ಪೂಜೆ ಸಲ್ಲಿಸಿದವರು ನದಿಯ ಬಳಿಗೆ ಬಂದು ಶಿವಲಿಂಗದ ಬಳಿ ಒಂದರ ಮೇಲೊಂದರಂತೆ ಚಿಕ್ಕ ಕಲ್ಲುಗಳನ್ನು ಹೊಂದಿಸಿಡುವುದನ್ನು ನೋಡಬಹುದು. ಇಲ್ಲಿನ ಸ್ಥಳಿಯರು ಪ್ರಕಾರ ಈ ರೀತಿ ಭಕ್ತಿಪೂರ್ವಕವಾಗಿ ಕಲ್ಲುಗಳನ್ನು ಜೋಡಿಸಿಟ್ಟರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ನಂಬಲಾಗಿದೆ. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರು, ಭಕ್ತರು ನದಿಯಲ್ಲಿ ಕಲ್ಲುಗಳನ್ನು ಜೋಡಿಸಿಡುತ್ತಾರೆ. ಆದರೆ ವೈಜ್ಞಾನಿಕವಾಗಿ ಹೀಗೆ ಮಾಡುವುದರ ಹಿಂದೆ ಯಾವುದಾದರೂ ಕಾರಣಗಳಿವೆಯಾ ಎಂಬುದು ತಿಳಿದುಬಂದಿಲ್ಲ.

ಸಹಸ್ರಲಿಂಗಗಳ ದರ್ಶನಕ್ಕೆ ಹೋಗುವವರು ಮಳೆಗಾಲವನ್ನು ಬಿಟ್ಟು ಬೇಸಗೆಕಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ಯಾಕೆಂದರೆ, ಶಾಲ್ಮಲಾ ನದಿಯಲ್ಲಿ ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗಿರುತ್ತದೆ. ಹೀಗಾಗಿ ಶಿವಲಿಂಗಗಳು ಸಹ ನೀರಿನಲ್ಲಿ ಮುಚ್ಚಿಹೋಗಿರುತ್ತದೆ. ಕಲ್ಲುಬಂಡೆಗಳು ಸಹ ಹಾವಸೆಯಿಂದ ಜಾರುತ್ತಿರುತ್ತವೆ. ಹೀಗಾಗಿ ಈ ಸಂದರ್ಭದಲ್ಲಿ ನದಿಗಿಳಿಯುವುದರಿಂದ ಅಪಾಯವೇ ಹೆಚ್ಚು. ಹೀಗಾಗಿ ಮಳೆಗಾಲದ ಸಮಯದಲ್ಲಿ ಇಲ್ಲಿಗೆ ತೆರಳುವುದು ಸೂಕ್ತವಲ್ಲ. ಬದಲಾಗಿ ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಅತ್ಯುತ್ತಮ ಆಯ್ಕೆ. ಈ ಸಂದರ್ಭದಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಶಿವಲಿಂಗಗಳು ಸ್ಪಷ್ಟವಾಗಿ ಕಾಣುತ್ತವೆ. ಸಹಸ್ರಲಿಂಗಗಳನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments
Praveen Kumar N - 26,ಸೆಪ್ಟೆಂ,2021, ಭಾನು,7:25 ಅಪರಾಹ್ನ - Add Reply

Very good content

You must be logged in to post a comment.

You must be logged in to post a comment.

About Author