ಹಿಂದೂ ಆಚರಣೆಗಳಲ್ಲಿ ಅಡಗಿರುವ ಅದ್ಭುತವಾದ ವೈಜ್ಞಾನಿಕ ಸತ್ಯಗಳು

 

ಭಾರತದ ಅತ್ಯಂತ ಪ್ರಾಚೀನ ಹಾಗೂ ಪುರಾತನ ಧರ್ಮ ಹಿಂದೂ ಧರ್ಮ. ಹೀಗಾಗಿಯೇ ಹಳೇಕಾಲದ ಹಲವು ಆಚಾರ-ವಿಚಾರಗಳು, ಪದ್ಧತಿಗಳು, ಆಚರಣೆಗಳು ಇಂದಿಗೂ ಹಿಂದೂ ಧರ್ಮದಲ್ಲಿ ಅಳವಡಿಕೆಯಾಗಿದೆ. ಇಬ್ಬರು ವ್ಯಕ್ತಿಗಳು ಪರಸ್ಪರ ಎದುರಾದಾಗ ಕೈ ಮುಗಿಯುವುದು, ವಿವಾಹಿತ ಮಹಿಳೆ ಕರಿಮಣಿ ಸರ ಹಾಕುವುದು, ಕಾಲುಂಗುರ ಧರಿಸುವುದು, ಹಣೆ ಬೊಟ್ಟು ಇಟ್ಟುಕೊಳ್ಳುವುದು ಹೀಗೆ ಹಲವಾರು ರೀತಿಯ ಪದ್ಧತಿಗಳಿವೆ. ಪೂಜೆ-ಪುನಸ್ಕಾರಗಳನ್ನು ನಡೆಸುವ ಸಂದರ್ಭದಲ್ಲೂ ಹಲವು ನಿಯಮಗಳನ್ನು ಪಾಲಿಸಾಗುತ್ತದೆ.

ಆದರೆ, ಈ ರೀತಿ ಅನಾದಿ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ಆಚರಣೆಗಳನ್ನು ಜನರು ಕೆಲವೊಮ್ಮೆ ಅರ್ಥ ತಿಳಿದುಕೊಂಡು ಅನುಸರಿಸಿದರೆ, ಇನ್ನು ಕೆಲವೊಮ್ಮೆ ಮೌಢ್ಯದಿಂದ ಹಾಗೆಯೇ ಪಾಲಿಸಿಕೊಂಡು ಬರುತ್ತಾರೆ. ಪೂಜೆ-ಪುನಸ್ಕಾರಗಳಲ್ಲಿರುವ ಆಚರಣೆಗಳನ್ನು ದೇವರ ಮೇಲಿರುವ ಭಕ್ತಿಯಿಂದ ಪಾಲಿಸಿಕೊಂಡು ಬರಲಾಗುತ್ತದೆ. ಹಾಗೆಯೇ ಆಚರಣೆಗಳಲ್ಲಿರುವ ನಿಯಮಗಳನ್ನು ಪವಿತ್ರವೆಂದು ನಂಬಲಾಗಿದೆ. ಆದರೆ ಇವಿಷ್ಟೇ ಅಲ್ಲದೆಯೂ, ಇಂಥಹಾ ಆಚರಣೆಗಳ ಹಿಂದೆ ವೈಜ್ಞಾನಿಕ ಸತ್ಯವೂ ಅಡಗಿದೆ. ಅದೇನೆಂದು ತಿಳಿಯೋಣ..

ಕೈ ಮುಗಿಯುವುದು

power of praying hindu godImage Source : memoriesandsuch.wordpress.com

ಹಿಂದೂ ಸಂಸ್ಕೃತಿಯಲ್ಲಿ ದೇವರ ಎದುರು ಸಹ ಎರಡೂ ಕೈಗಳನ್ನು ಜೋಡಿಸಿ ಕೈ ಮುಗಿಯುತ್ತಾರೆ. ಅದೇ ರೀತಿ ಪರಸ್ಪರ ಒಬ್ಬರನ್ನೊಬ್ಬರು ಕಂಡಾಗ, ಭೇಟಿಯಾದಾಗ ಕೈ ಮುಗಿದು ನಮಸ್ಕಾರ ಮಾಡುವುದು ವಾಡಿಕೆ. ಇದು ಒಬ್ಬರಿಗೆ ಇನ್ನೊಬ್ಬರು ಗೌರವ ನೀಡುವುದರ ಸೂಚಕ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಹೀಗೆ ಕೈ ಮುಗಿಯುವುದರಿಂದ ಎರಡೂ ಕೈಗಳ ಬೆರಳಿನ ತುದಿಗಳು ಒತ್ತಿದಂತಾಗುತ್ತದೆ. ಈ ತುದಿಗಳಲ್ಲಿ ಕಣ್ಣು, ಕಿವಿ ಮತ್ತು ಮನಸ್ಸುಗಳಿಗೆ ಸಂಬಂಧಿಸಿದ ಒತ್ತಡದ ಕೇಂದ್ರಗಳಿರುತ್ತವೆ. ಈ ಕೇಂದ್ರಗಳ ಮೇಲೆ ಒತ್ತಡ ಬೀಳುವುದರಿಂದ ಭೇಟಿಯಾದ ವ್ಯಕ್ತಿಯನ್ನು ನೆನಪಿಟ್ಟುಕೊಳ್ಳುವುದು ಸುಲಭವಾಗುತ್ತದೆ. ಅಲ್ಲದೆ ಪಾಶ್ಚಾತ್ಯರಂತೆ ಕೈ ಕುಲುಕಿದಾಗ ರೋಗಾಣುಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇದರಿಂದ ಇಲ್ಲ.

ಇದನ್ನು ಓದಿ : ವಿವಾಹವಾದ ಮಹಿಳೆಯರು ಮಾಂಗಲ್ಯಧಾರಣೆ ಮಾಡುವುದು ಯಾಕೆ..?

ಮದುವೆಯಾದವರು ಕಾಲುಂಗರ ಹಾಕಿಕೊಳ್ಳುವುದು

why do female wear ring in leg fingerImage Source : Quora

ಮದುವೆಯಾದ ಮಹಿಳೆಯರು ಕಾಲುಂಗುರ ಹಾಕಿಕೊಳ್ಳುವುದು ಮದುವೆಯಾಗಿದೆ ಎಂದು ತೋರಿಸಿಕೊಳ್ಳುವುದಕ್ಕೆ ಮಾತ್ರವಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಆದರೆ ಈ ಬಗ್ಗೆ ಹಲವರಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಕಾಲುಂಗುರವನ್ನು ಕಾಲಿನ ಎರಡನೇ ಬೆರಳಿಗೆ ಹಾಕುತ್ತಾರೆ. ಈ ಬೆರಳಿನ ಒಂದು ನರ ಗರ್ಭಕೋಶವನ್ನು ಹಾದು ಹೋಗಿ ಹೃದಯದ ವರೆಗೂ ಹೋಗುತ್ತದೆ. ಈ ಬೆರಳಿಗೆ ಉಂಗುರ ಹಾಕಿಕೊಳ್ಳುವುದರಿಂದ ಗರ್ಭಕೋಶಕ್ಕೆ ರಕ್ತಸಂಚಾರ ಚೆನ್ನಾಗಿ ಆಗುತ್ತದೆ. ಋತುಚಕ್ರ ಸಮಯಕ್ಕೆ ಸರಿಯಾಗಿ ಉಂಟಾಗುತ್ತದೆ. ಬೆಳ್ಳಿ ಶರೀರಕ್ಕೆ ಉತ್ತಮ ಆಗಿರುವುದರಿಂದ ಭೂಮಿಯ ಧ್ರುವ ಶಕ್ತಿಯನ್ನು ಗ್ರಹಿಸಿ ದೇಹಕ್ಕೆ ನೀಡುತ್ತದೆ.

ವಿವಾಹಿತ ಮಹಿಳೆ ಕರಿಮಣಿ ಸರ ಧರಿಸುವುದು

bride wearing thaliImage Source : stylesatlife.com

ಮಾಂಗಲ್ಯ ಸರದಲ್ಲಿರುವ ಕಪ್ಪು ಮಣಿಗಳು ಋಣಾತ್ಮಕ ಶಕ್ತಿಯನ್ನೆಲ್ಲಾ ಹೀರಿಕೊಳ್ಳುತ್ತದೆ. ಬಳಿಕ ಆ ಮಣಿಗಳು ನೆಗೆಟಿವ್ ಎನರ್ಜಿಯನ್ನು ವಧು ಹಾಗೂ ಅವಳ ಕುಟುಂಬವನ್ನು ತಗುಲದಂತೆ ಮಾಡುತ್ತದೆ ಎಂದು ನಂಬಲಾಗುತ್ತದೆ. ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯವೇನೆಂದರೆ ಇದು ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಇದರ ಅತಿ ಮುಖ್ಯವಾದ ಉಪಯುಕ್ತತೆ ಎಂದರೆ ಹಾಲುಣಿಸುವ ತಾಯಿಯಲ್ಲಿ ಎದೆಹಾಲಿನ ಉಷ್ಣತೆಯನ್ನು ಹೀರಿಕೊಂಡು ಎದೆಹಾಲು ಕೆಡದಂತೆ ಶಿಶುವಿಗೆ ಉಣಲು ಅನುಕೂಲವಾದ ಸಮ ಉಷ್ಣತೆಯಲ್ಲಿರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ : ಲಿಪ್ ಸ್ಟಿಕ್ ಹಚ್ಚುವಾಗ ಈ ಮಿಸ್ಟೇಕ್‍ಗಳನ್ನು ಮಾಡಬೇಡಿ

ಹಣೆಬೊಟ್ಟು ಇಟ್ಟುಕೊಳ್ಳುವುದು

keeping bindi Image Source: punjabirishtey.com

ಹಣೆಯ ಮೇಲೆ ಹುಬ್ಬುಗಳ ನಡುವೆ ಇರುವ ಜಾಗ ಮುಖದ ಒಂದು ಮುಖ್ಯವಾದ ಜಾಗ. ಆ ಜಾಗದಲ್ಲಿ ದೇಹಕ್ಕೆ ಸಂಬಂಧಿಸಿದ ಅತಿಮುಖ್ಯವಾದ ನರಗಳಿರುತ್ತವೆ ಎಂದು ಹೇಳಲಾಗುತ್ತದೆ. ಹೀಗಾಗಿ ಹಣೆಯ ಮೇಲೆ ಬೊಟ್ಟು ಇಡುವುದು ಎಲ್ಲಾ ರೀತಿಯಲ್ಲೂ ಪ್ರಶಸ್ತ ಎಂದು ನಂಬಲಾಗುತ್ತದೆ. ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದರಿಂದ ವ್ಯಕ್ತಿಯಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಅಲ್ಲದೆ, ಕುಂಕುಮ ಇಟ್ಟುಕೊಳ್ಳುವಾಗ ಆ ಜಾಗಕ್ಕೆ ಬೆರಳಿನಿಂದ ಒತ್ತಡ ಬೀಳುತ್ತದೆ. ಇದರಿಂದ ಮುಖಕ್ಕೆ. ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಚಾರವಾಗುತ್ತದೆ ಎಂದು ತಿಳಿದುಬಂದಿದೆ.

ದೇವರ ಮುಂದೆ ಅಗರಬತ್ತಿ ಹಚ್ಚುವುದು

agarbatti in front of hindu godImage Source : Quora

ಅಗರಬತ್ತಿಯ ಸುವಾಸನೆಯ ನಂಬ ಆಲೋಚನೆಗಳನ್ನು ಪರಿಶುದ್ಧ ಮಾಡುತ್ತದೆ, ಕೆಟ್ಟ ಆಲೋಚನೆಗಳನ್ನು ಮಾಡದಂತೆ ತಡೆಯುತ್ತದೆ ಎಂದು ಹೇಳುತ್ತಾರೆ. ಒಳ್ಳೆಯ ಗುಣಮಟ್ಟದ ಅಗರಬತ್ತಿಯ ಹೊಗೆ ನಮ್ಮ ಮನಸ್ಸಿಗೂ, ಆರೋಗ್ಯಕ್ಕೂ, ಪೂಜಾಸ್ಥಳದಲ್ಲಿರುವ ಕ್ರಿಮಿ-ಕೀಟಗಳನ್ನು ದೂರ ಓಡಿಸುವುದಕ್ಕೂ ಒಳ್ಳೆಯದು. ಧ್ಯಾನಕ್ಕೆ ಮನಸ್ಸನ್ನು ಸಿದ್ಧಗೊಳಿಸುವ, ನಾವು ಕುಳಿತುಕೊಳ್ಳುವ ಸ್ಥಳದಲ್ಲಿ ಪೂಜೆಯ ವಾತಾವರಣವನ್ನು ನಿರ್ಮಿಸುವ ಹಾಗೂ ಮನಸ್ಸನ್ನು ಏಕಾಗ್ರತೆಗೊಳಿಸುವ ಶಕ್ತಿ ಅಗರಬತ್ತಿಯ ಪರಿಮಳಕ್ಕಿದೆ ಎನ್ನುತ್ತಾರೆ.

ಇದನ್ನು ಓದಿ : ವಿಜಯವಾಡದಲ್ಲಿದೆ ಸ್ವಯಂ ಭೂ ಆಗಿ ನೆಲೆಸಿರುವ ಕನಕದುರ್ಗ ದೇವಿಯ ದೇವಾಲಯ

ದೇವರ ಮುಂದೆ ಶಂಖ ಊದುವುದು

Blowing shanka in front of godImage Source : Boldsky.com

ಹಿಂದೂ ಪುರಾಣಗಳ ಪ್ರಕಾರ ಹದಿನೆಂಟು ವಾದ್ಯಗಳಲ್ಲಿ ಶಂಖವಾದ್ಯವೂ ಒಂದು. ಆದ್ದರಿಂದಲೇ ಇದನ್ನು ಪೂಜೆಯಲ್ಲಿ ಊದುವುದಲ್ಲದೆ, ಮನೆ ಹಾಗೂ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕ್ಕೆ ಇದರ ಮೂಲಕವೇ ನೀರನ್ನು ಸುರಿಯಲಾಗುತ್ತದೆ.ಶಂಖವನ್ನು ಊದುವಾಗ ಅದೊರೊಳಗೆ ಪ್ರವೇಶಿಸುವ ಉಸಿರು ಶಂಖದೊಳಗಿನ ವಕ್ರದಾರಿಯನ್ನು ದಾಟಿ ಹೊರಬರುವಾಗ ತೀವ್ರ ವೇಗವುಳ್ಳದ್ದೂ ಹೆಚ್ಚು ಉಷ್ಣತೆಯುಳ್ಳದ್ದೂ ಆಗುವದೆಂದು ಪ್ರಯೋಗಗಳಿಂದ ದೃಢಪಡಿಸಲಾಗಿದೆ. ಇದರಿಂದ ವಾತಾವರಣದಲ್ಲಿನ ರೋಗಜನಕ ಕೀಟಾಣಿಗಳು ನಾಶವಾಗುವುದಲ್ಲದೆ ವಾತಾವರಣದಲ್ಲಿನ ತೇಜಸ್ಸತ್ಪದ ಪ್ರಮಾಣವೂ ಹೆಚ್ಚುವುದು. ಇಂತಹ ವಾತಾವರಣದಲ್ಲಿನ ವಾಯುವನ್ನು ಉಸಿರಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಬೆಳೆಯುವುದು ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಶಂಖ ನಾದದಿಂದ ಬರುವ ಕಂಪನ ಭೂಮಿಯಲ್ಲಿರುವ ಅನೇಕ ಕೆಟ್ಟ ಶಕ್ತಿಗಳನ್ನು ನಾಶಪಡಿಸುತ್ತದೆ ಶಂಖನಾದವನ್ನು ಕೇಳಿದಾಗ ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿಗಳ ಸಂಚಾರ ವಾಗುತ್ತದೆ. ಇದರಿಂದ ಧೈರ್ಯ, ನಿರ್ಣಯ, ನಂಬಿಕೆ, ಆತ್ಮವಿಶ್ವಾಸ ಮುಂತಾದ ಗುಣಗಳು ಜಾಗೃತವಾಗುತ್ತದೆ ಎಂದು ತಿಳಿದುಬಂದಿದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

About Author