ಇದು ಮಳೆ ಬರುವ ಮುನ್ಸೂಚನೆ ಕೊಡುವ ದೇವಾಲಯ; ವೈಜ್ಞಾನಿಕ ಲೋಕಕ್ಕೂ ಸವಾಲಾಗಿದೆ ಇಲ್ಲಿನ ವಿಸ್ಮಯ..!

ಇದು ಮಳೆ ಬರುವ ಮುನ್ಸೂಚನೆ ಕೊಡುವ ದೇವಾಲಯ; ವೈಜ್ಞಾನಿಕ ಲೋಕಕ್ಕೂ ಸವಾಲಾಗಿದೆ ಇಲ್ಲಿನ ವಿಸ್ಮಯ..!

 

ಮಳೆಯಿಲ್ಲದೆ ಬೆಳೆಯಿಲ್ಲ..ಬೆಳೆಯಿಲ್ಲದೆ ಮನುಷ್ಯನಿಲ್ಲ. ಜೀವಸಂಕುಲಕ್ಕೆ ದೇವರು ಕೊಟ್ಟ ದೊಡ್ಡ ವರ ಮಳೆ. ಮಳೆಯಿಂದಲೇ ಭೂಮಿ ಹಸನಾಗುತ್ತದೆ. ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಮಳೆಯಿಲ್ಲದೆ ಬರ ಬಂದಾಗ ಮನುಷ್ಯ ಕಂಗೆಟ್ಟು ಹೋಗುತ್ತಾನೆ. ಸಾಮಾನ್ಯವಾಗಿ ಜೂನ್‍ನಲ್ಲಿ ಮಳೆ ಬರುತ್ತೆ. ಆದರೆ ಇದೇ ದಿನ, ಇಷ್ಟೇ ದಿನ ಬರುತ್ತೆ, ಇಷ್ಟೇ ಪ್ರಮಾಣದಲ್ಲಿ ಬರುತ್ತೆ ಎಂಬುದನ್ನು ನಿರ್ಧಿಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೆಲವೊಮ್ಮೆ ರೈತರು ಬೆಳೆದ ಬೆಳೆ ನೀರಿಲ್ಲದೆ, ಇನ್ನು ಕೆಲವೊಂದು ಬಾರಿ ಅತಿಯಾದ ಮಳೆಗೆ ಹಾಳಾಗುತ್ತದೆ. 

ಹವಾಮಾನ ಇಲಾಖೆ ವೈಜ್ಞಾನಿಕ ಆಧಾರದಲ್ಲಿ, ಪರಿಸರದ ಆಗುಹೋಗುಗಳನ್ನು ಪರಾಮರ್ಶಿಸಿ ಜನರಿಗೆ ಮಳೆಯ ಬಗ್ಗೆ ಮುನ್ಸೂಚನೆ ನೀಡುತ್ತದೆ. ಮಳೆ ಯಾವಾಗ ಬರುತ್ತದೆ, ಎಷ್ಟು ಪ್ರಮಾಣದಲ್ಲಿ ಬರುತ್ತದೆ ಎಂಬುದನ್ನು ತಿಳಿಸುತ್ತದೆ. ಬಹುತೇಕ ಹವಾಮಾನ ಇಲಾಖೆಯ ಮುನ್ಸೂಚನೆಯ ಆಧಾರದ ಮೇಲೆಯೇ ಜನ ಕೂಡಾ ಮಳೆಯ ನಿರೀಕ್ಷೆ ಮಾಡುತ್ತಾರೆ. ಆದರೆ ಅದು ಕೆಲವೊಂದು ಸರಿ ತಪ್ಪಾಗಿರುವುದೂ ಇದೆ. ಆದರೆ, ಇಲ್ಲೊಂದು ಜಾಗ ಇದೆ. ಇಲ್ಲೂ ಮಳೆಯ ಮುನ್ಸೂಚನೆ ಸಿಗುತ್ತದೆ. ಹಾಗಂತ, ಇಲ್ಲಿ ಹವಾಮಾನ ಇಲಾಖೆಯ ತಜ್ಞರು ಮಳೆಯ ಮುನ್ಸೂಚನೆ ಕೊಡುವುದಿಲ್ಲ. ಬದಲಾಗಿ ಇಲ್ಲಿ ವರುಣನ ಆಗಮನದ ಸೂಚನೆ ನೀಡುವುದು ಒಂದು ದೇವಾಲಯ.

ಹೌದು..ಈ ದೇವಾಲಯದಲ್ಲಿ ಮಳೆ ಬರುವ ಮುಂಚೆಯೇ ಮಳೆಯ ಮುನ್ಸೂಚನೆ ಸಿಗುತ್ತೆ. ಅದು ಎಷ್ಟು ಪ್ರಮಾಣದಲ್ಲಿರುತ್ತೆ ಅನ್ನೋದು ಸಹ ಗೊತ್ತಾಗುತ್ತೆ. ಯಾವುದು ಆ ದೇವಾಲಯ. ಅದೆಲ್ಲಿದೆ. ಹೆಚ್ಚಿನ ಮಾಹಿತಿ ತಿಳಿಯೋಣ.

 

ಮಳೆಯ ಮುನ್ಸೂಚನೆ ನೀಡುತ್ತಾನೆ ಜಗನ್ನಾಥ ದೇಗುಲ

Rain temple in india

Image Credits : Trip advisor

ಕಾನ್ಪುರದ ಜಗನ್ನಾಥ ದೇವಾಲಯ, ಪುರಾತನ ದೇಗುಲ. ಹಿಂದಿನ ಕಾಲದ ವಾಸ್ತುಶಿಲ್ಪದ ಸೊಬಗು ಇಲ್ಲಿ ಕಣ್ಮನಸೂರೆಗೊಳ್ಳುತ್ತದೆ. ಇಂತಹ ಅಪೂರ್ವ ದೇಗುಲದ ಗರ್ಭಗುಡಿಯಲ್ಲೇ ಇದೆ ಮಳೆ ಭವಿಷ್ಯ ನುಡಿಯುವ ಕಲ್ಲು. ಜಗನ್ನಾಥ ಸ್ವಾಮಿ ದೇವರ ಬೃಹತ್ ಮೂರ್ತಿಯ ಮೇಲ್ಭಾಗದಲ್ಲಿ ಅಂದರೆ ಮಂದಿರದ ಛಾವಣಿಯ ನಡುವೆ ಒಂದು ಕಲ್ಲು ಇದೆ. ಈ ಕಲ್ಲಿನ ಮೇಲೆ ಮಳೆಯಾಗುವುದಕ್ಕೆ ಸ್ವಲ್ಪ ದಿನ ಮುಂಚೆ ನೀರ ಹನಿ ತೊಟ್ಟಿಕ್ಕುತ್ತದೆ ಎಂದು ಹೇಳುತ್ತಾರೆ.

ಮಳೆ ಬರುವ ಹದಿನೈದು ದಿನಕ್ಕೆ ಮುಂಚಿತವಾಗಿಯೇ ಈ ದೇಗುಲದಲ್ಲಿ ಮಳೆ ಬರುವ ಎಲ್ಲಾ ಸೂಚನೆಗಳು ಜನರಿಗೆ ಗೋಚರಿಸುತ್ತವೆಯಂತೆ. ಯಾವ ಪ್ರಮಾಣದಲ್ಲಿ ಮಳೆ ಬೀಳಬಹುದು ಎಂಬುದು ಕೂಡಾ ಗೊತ್ತಾಗುತ್ತದೆಯಂತೆ. ಒಂದೊಮ್ಮೆ ಹವಾಮಾನ ಇಲಾಖೆ ತಜ್ಞರು ನೀಡುವ ಮಳೆಯ ಸೂಚನೆಯಲ್ಲಿ ವ್ಯತ್ಯಾಸವಾಗಬಹುದು, ಆದರೆ, ಈ ದೇಗುಲದಲ್ಲಿ ಸಿಗುವ ಮುನ್ಸೂಚನೆ ಅದೆಷ್ಟೋ ವರ್ಷಗಳಿಂದ ಸುಳ್ಳಾಗಿಲ್ಲ ಎಂಬುದು ಜನರ ನಂಬಿಕೆ. ಈ ದೇವಾಲಯದ ವಿಶೇಷತೆಯೇ ಅದು. ಈ ದೇವಾಲಯದಿಂದ ಮಳೆಯ ಸೂಚನೆ ಸಿಕ್ಕ ನಂತರವೇ ಸುತ್ತಮುತ್ತಲಿನ ಊರಿನ ರೈತರು ಬೆಳೆ ಬೆಳೆಯುಲು ಮುಂದಾಗುತ್ತಾರೆ.

ಇಂಥಹಾ ವಿಶಿಷ್ಟ ದೇವಾಲಯ ಇರುವುದು ಉತ್ತರಪ್ರದೇಶದ ಕಾನ್ಪುರದಲ್ಲಿ. ಕಾನ್ಪುರದಿಂದ 45 ಕಿಲೋ ಮೀಟರ್ ದೂರದಲ್ಲಿರುವ ಭಿತರ್ಗ್ಯಾವ್ನ್ ಎಂಬ ಗ್ರಾಮದಲ್ಲಿರುವ ಈ ದೇಗುಲದಲ್ಲಿ ಮಳೆಯ ಮುನ್ಸೂಚನೆ ಸಿಗುತ್ತದೆ. ದೇವಾಲಯದಲ್ಲಿ ಸಿಗುವ ಸೂಚನೆಯೇನು..ಮಳೆಯ ಪ್ರಮಾಣ ತಿಳಿಯುವುದು ಹೇಗೆ..ಇಲ್ಲಿದೆ ಹೆಚ್ಚಿನ ಮಾಹಿತಿ..

ಇದನ್ನು ಓದಿ : ದೇವಾಲಯಗಳಲ್ಲಿ ರಾಕ್ಷಸನ ಮುಖವಾಡ ಇರುವುದು ಯಾಕೆ..? ಅದರ ಹಿಂದಿರುವ ಕಾರಣವೇನು..?

ದೇವರ ಮೂರ್ತಿಯಿಂದ ಹನಿಯುತ್ತೆ ನೀರು..!

behta kanpur

Image Credits : Punjab Kesari

ಕಾನ್ಪುರದ ಈ ಜಗನ್ನಾಥ ದೇವಾಲಯದಲ್ಲಿ ಮಳೆಯ ಸೂಚನೆಯು ಖುದ್ದು ದೇವರ ಗರ್ಭಗುಡಿಯಲ್ಲೇ ಸಿಗುತ್ತೆ. ಅಚ್ಚರಿಯಾದರೂ ಇದು ಸತ್ಯ. ಇಲ್ಲಿ ಮಳೆ ಬರುವ 15 ದಿನ ಮುನ್ನವೇ ದೇವರ ಗರ್ಭಗೃಹದಲ್ಲಿ, ದೇವರ ಮೂರ್ತಿಯ ಮೇಲ್ಬಾಗದ ಕಲ್ಲೊಂದರಿಂದ ನೀರಿನ ಹನಿಗಳು ಬೀಳೋಕೆ ಆರಂಭವಾಗುತ್ತದೆ. ಆಗ ಇಲ್ಲಿ ಸುತ್ತಮುತ್ತಲ ಹಳ್ಳಿಯ ರೈತರು ಬೇಸಾಯದ ಚಟುವಟಿಕೆಯನ್ನು ಆರಂಭಿಸುತ್ತಾರೆ. ಈ ದೇವಾಲಯದಲ್ಲಿ ಹನಿ ನೀರು ಬಿದ್ರೆ ದೇವಾಲಯದಿಂದ ಸುಮಾರು 5೦ ಕಿಲೋ ಮೀಟರ್ ವರೆಗೆ ಮಳೆ ಬರುತ್ತೆ ಎಂದು ಹೇಳಲಾಗುತ್ತದೆ. ಯಾವಾಗ ಮಳೆ ಬರಲು ಶುರುವಾಗುತ್ತೋ ಆಗ ದೇವರ ಮೇಲೆ ಕಲ್ಲಿನಿಂದ ನೀರು ಬೀಳೋದು ನಿಂತು ಹೋಗುತ್ತದೆ ಎಂದು ಹೇಳುತ್ತಾರೆ.

ಎಷ್ಟು ಪ್ರಮಾಣದಲ್ಲಿ ಮಳೆ ಆಗುತ್ತೆ ಅನ್ನೋದು ಕೂಡಾ ಈ ಬೀಳುವ ಹನಿಗಳಿಂದ ತಿಳಿಯಲಾಗುತ್ತದೆ. ಕಲ್ಲಿನಿಂದ ದೊಡ್ಡ ಹನಿ ನೀರು ಬೀಳೋಕೆ ಶುರು ಆದರೆ ಜೋರಾಗಿ ಮಳೆ ಬರುತ್ತೆ ಎಂದರ್ಥ. ಕಡಿಮೆ ಪ್ರಮಾಣದಲ್ಲಿ ಹನಿ ಬಿದ್ದರೆ ಕಡಿಮೆ ಮಳೆ ಎಂದು ನಂಬಲಾಗುತ್ತದೆ. ದೇವರ ಮೂರ್ತಿಯಿಂದ ಹನಿಯೇ ಬೀಳದಿದ್ದರೆ ಆ ವರುಷ ಬರಗಾಲ ಎಂದರ್ಥ. ಇಲ್ಲಿಯವರೆಗೂ ಈ ದೇವಸ್ಥಾನದಲ್ಲಿ ಸಿಕ್ಕಿರೋ ಮುನ್ಸೂಚನೆಗಳು ಸುಳ್ಳಾಗಿಲ್ಲ ಅಂತಾರೆ ಭಕ್ತರು.

ಊರಿನ ರೈತರೆಲ್ಲಾ ದೇಗುಲ ಗರ್ಭಗುಡಿಯಲ್ಲಿ ಹನಿ ಕಾಣುವುದನ್ನೇ ಕಾಯುತ್ತಾ ಇರುತ್ತಾರೆ. ಒಂದೊಮ್ಮೆ ದೇಗುಲದಲ್ಲಿ ಸಣ್ಣದಾಗಿ ಹನಿ ಕಂಡರೂ ಸಮೀಪದ ಊರವರೆಲ್ಲಾ ಸಂಭ್ರಮಿಸುತ್ತಾರೆ. ಅಷ್ಟೇ ಅಲ್ಲದೆ, ಮಳೆಯ ಕಾರಣದಿಂದ ಇಲ್ಲಿ ಇದುವರೆಗೆ ಯಾವುದೇ ಅನಾಹುತಗಳು ಸಂಭವಿಸಿಲ್ಲವಂತೆ. ಇದಕ್ಕೆ ಈ ದೇಗುಲವೇ ಕಾರಣ ಎಂಬುದು ಈ ಊರಿನ ಭಕ್ತರ ಬಲವಾದ ನಂಬಿಕೆ. ಪುರಿ ಜಗನ್ನಾಥ ದೇವಾಲಯದಷ್ಟೇ ಈ ದೇವಾಲಯ ಪ್ರಸಿದ್ದಿ ಹೊಂದಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ದೇಗುಲಕ್ಕೆ ಭೇಟಿ ನೀಡುತ್ತಾರೆ.

 

ಮಳೆಯ ಮುನ್ಸೂಚನೆ ನೀಡುವ ಮಾನ್ಸೂನ್ ಪತ್ತರ್

monsoon kanpur

Image Credits : wikipedia

ನೀರಿನ ಮುನ್ಸೂಚನೆ ಕೊಡುವ ಈ ಕಲ್ಲನ್ನು ಇಲ್ಲಿನ ಜನ ಮಾನ್ಸೂನ್ ಪತ್ತರ್ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಪತ್ತರ್ ಎಂದರೆ ಕಲ್ಲು. ಇದು ಮಳೆಯ ಭವಿಷ್ಯ ಹೇಳುವ ಕಲ್ಲು ಎಂದೇ ಇಲ್ಲಿ ಜನಜನಿತ. ದೇಗುಲದ ಗರ್ಭಗೃಹದ ಛಾವಣಿಯ ನಡುವಿನಲ್ಲಿ ಈ ಅಪೂರ್ವ ಕಲ್ಲಿದೆ. ಇಲ್ಲಿ ಇನ್ನೊಂದು ವಿಶೇಷ ಅಂದರೆ ಇಡೀ ದೇಗುಲ ಕಲ್ಲಿನಿಂದಲೇ ನಿರ್ಮಾಣವಾಗಿದೆ. ಈ ಭವಿಷ್ಯ ನುಡಿಯುವ ಕಲ್ಲಿನ ಪಕ್ಕದಲ್ಲೂ ಸುಂದರ ಕೆತ್ತನೆಯ ಕಲ್ಲುಗಳಿವೆ. ಆದರೆ, ಈ ಕಲ್ಲು ಬಿಟ್ಟು ಬೇರೆ ಯಾವ ಕಲ್ಲಿನಲ್ಲೂ ಮಳೆ ಮುನ್ಸೂಚನೆಯ ನೀರ ಹನಿ ಕಾಣುವುದೇ ಇಲ್ಲ. ಅದೂ ಅಲ್ಲದೆ, ಮಾನ್ಸೂನ್ ಅವಧಿ ಬಿಟ್ಟು ಬೇರೆ ಸಮಯದಲ್ಲಿ ಬರುವ ಮಳೆಯ ಮುನ್ಸೂಚನೆ ಈ ಕಲ್ಲಿನಲ್ಲಿ ಹನಿ ರೂಪದಲ್ಲಿ ಸಿಗುವುದಿಲ್ಲ. ಇದು ಕೂಡಾ ಇಲ್ಲಿನ ವಿಶೇಷತೆಗಳಲ್ಲಿ ಒಂದು.

ಇದನ್ನು ಓದಿ : ಶಿಲ್ಪಕಲೆಯ ನೆಲೆವೀಡು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ

ವೈಜ್ಞಾನಿಕ ಲೋಕಕ್ಕೂ ಅಚ್ಚರಿ

temple of indra kanpur

Image Credits : Yahoo movies

ಈ ಭವಿಷ್ಯ ನುಡಿಯುವ ಕಲ್ಲು ಎಲ್ಲೂ ಹೊರಗಡೆ ಕಾಣುವುದಿಲ್ಲ. ಬಾಹ್ಯ ಪರಿಸರದೊಂದಿಗೆ ಈ ಕಲ್ಲಿಗೆ ನೇರ ಸಂಪರ್ಕವೂ ಇಲ್ಲ. ಆದರೂ ಇಲ್ಲಿ ಮಳೆಯಾಗುವ 15 ದಿನದ ಮುಂಚೆನೇ ನೀರಿನ ಹನಿಗಳು ಬೀಳೋಕೆ ಶುರು ಆಗುತ್ತೆ. ಹೀಗಾಗಿ ಇದು ವೈಜ್ಞಾನಿಕ ಲೋಕಕ್ಕೂ ಸವಾಲಾಗಿ ಪರಿಣಮಿಸಿದೆ. ಈ ಬಗ್ಗೆ ಹಲವು ವಿಜ್ಞಾನಿಗಳು ಕೂಡಾ ಪರೀಕ್ಷೆ ನಡೆಸಿದ್ದಾರೆ. ಆದ್ರೆ ಇದರ ರಹಸ್ಯ ಬೇಧಿಸೋಕೆ ಯಾರಿಂದಲೂ ಸಾಧ್ಯವಾಗಿಲ್ಲ.

ಭೂಮಿಗೆ ಪ್ರವಾಹ ಬಂದ ವೇಳೆಯಲ್ಲಿ ಜನರಿಗೆ ಎಚ್ಚರಿಕೆ ಕೊಡೋಕೆ ಅಂತಾನೇ ದೇವತೆಗಳು ಈ ದೇವಾಲಯವನ್ನು ನಿರ್ಮಿಸಿದರು ಅನ್ನೋದು ಇಲ್ಲಿನ ಸ್ಥಳಪುರಾಣ. ಆದರೆ ವಿಜ್ಞಾನ ಹೇಳುವ ಪ್ರಕಾರ ಈ ದೇವಾಲಯಕ್ಕೆ ಸುಮಾರು 5000 ವರ್ಷಗಳ ಇತಿಹಾಸವಿದೆಯಂತೆ. ಅದೇನೆ ಇರ್ಲಿ, ಹವಾಮಾನ ಇಲಾಖೆಯಂತೆ ಮುನ್ಸೂಚನೆ ನೀಡೋ ಈ ಪುರಾತನ ದೇವಾಲಯ ಒಂದು ವಿಸ್ಮಯವೇ ಸರಿ.

Featured Image Credits : Odishabytes

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author