ಮೆಟ್ಟಿಲಿನ ಮೇಲೆ ತಟ್ಟಿದರೆ ಸಂಗೀತದ ಸ್ವರಗಳು ಕೇಳಿಸುವ ಐರಾವತೇಶ್ವರ ದೇವಾಲಯ

ಮೆಟ್ಟಿಲಿನ ಮೇಲೆ ತಟ್ಟಿದರೆ ಸಂಗೀತದ ಸ್ವರಗಳು ಕೇಳಿಸುವ ಐರಾವತೇಶ್ವರ ದೇವಾಲಯ

 

ಭಾರತದಲ್ಲಿ ಅಸಂಖ್ಯಾತ ಪುರಾತನ ದೇವಾಲಯಗಳಿವೆ. ವಿಭಿನ್ನ ಕೆತ್ತನೆ, ಕುಸುರಿ ಮತ್ತು ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿರುವ ದೇವಾಲಯಗಳನ್ನು ನಾವಿಲ್ಲಿ ನೋಡಬಹುದು. ಭಾರತದ ಶ್ರೀಮಂತ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರವನ್ನು ಈ ದೇವಾಲಯಗಳು ಪ್ರತಿನಿಧಿಸುತ್ತವೆ. ಅತ್ಯಪೂರ್ವ ಕೆತ್ತನೆ ಕೆಲಸ ಮಾಡಿರುವ ಕಂಬಗಳು, ಮಂಟಪಗಳು, ಅದ್ಭುತ ಶೈಲಿಯ ಗೋಪುರಗಳು ನಿಬ್ಬೆರಗಾಗಿಸುತ್ತವೆ. ಪ್ರಪಂಚದಲ್ಲಿಯೇ ಸಾಂಪ್ರದಾಯಿಕ ಮಟ್ಟದಲ್ಲಿ ಗುರುತಿಸಿಕೊಂಡ ಜಾಗಗಳಲ್ಲಿ ತಮಿಳುನಾಡು ಅಗ್ರಸ್ಥಾನವನ್ನು ಪಡೆದಿದೆ. ದೇವಸ್ಥಾನಗಳ ವಾಸ್ತುಶಿಲ್ಪಕ್ಕೆ ಹೋಲಿಸಿದರೆ ಇಡೀ ಭಾರತದಲ್ಲಿಯೇ ಅತ್ಯಂತ ಮನೋಹರವಾದ ದೇವಾಲಯಗಳು ತಮಿಳುನಾಡಿನಲ್ಲಿ ಕಾಣಸಿಗುತ್ತವೆ.

 

ತಮಿಳುನಾಡಿನ ದೇವಾಲಯಗಳ ವಾಸ್ತುಶಿಲ್ಪ ಶೈಲಿಯು ಹಲವಾರು ವಾಸ್ತುಶಿಲ್ಪ ಸಂಶೋಧಕರ ಹಾಗು ವಾಸ್ತುಶಿಲ್ಪ ವಿದ್ಯಾರ್ಥಿಗಳ ಅಧ್ಯಯನಕ್ಕೆ ತವರುಮನೆ ಎಂದೇ ಹೇಳಬಹುದು. ದಕ್ಷಿಣಭಾರತದ ಬಹುಪಾಲು ಹೆಸರಾಂತ ಹಿಂದು ದೇವರುಗಳ ದೇವಾಲಯಗಳನ್ನು ತಮಿಳುನಾಡಿನಲ್ಲೇ ನೋಡಬಹುದು. ಶಿವ, ಷಣ್ಮುಖ, ಹಾಗೂ ವಿಷ್ಣುವನ್ನು ಆರಾಧಿಸುವ ದೇವಾಲಯಗಳು ಇಲ್ಲಿ ಅಧಿಕವಾಗಿವೆ.

 

ದಾರಾಸುರಂನಲ್ಲಿದೆ ಐರಾವತೇಶ್ವರ ದೇವಾಲಯ

ದಾರಾಸುರಂನಲ್ಲಿದೆ ಐರಾವತೇಶ್ವರ ದೇವಾಲಯ Airavatesvara templeFeatured Image Source : Native Planet

ತಮಿಳುನಾಡು ಹಲವಾರು ಶತಮಾನಗಳಿಂದ ಚೋಳರ, ಪಾಂಡ್ಯರ, ನಾಯಕರ ಮತ್ತು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿನ ದೇವಾಲಯಗಳು ಆಗಿನಿಂದ ಈಗಿನವರೆಗೂ ತನ್ನ ವಿಶಿಷ್ಟ ವಾಸ್ತುಶಿಲ್ಪ ಶೈಲಿಯಿಂದ ದೇಶವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಾ ಪ್ರಸಿದ್ಧಿಯಾಗಿದೆ. ದಾರಾಸುರಂ ಪಟ್ಟಣವು ಇಲ್ಲಿರುವ ಐರಾವತೇಶ್ವರ ದೇವಾಲಯಕ್ಕೆ ಪ್ರಸಿದ್ಧವಾದದ್ದು. ಇದು ಪ್ರಸಿದ್ಧ ಯಾತ್ರಾ ಸ್ಥಳವಾದ ತಂಜಾವೂರಿನ ಕುಂಭಕೋಣಂನ ಹತ್ತಿರವಿದೆ. ದಾರಾಸುರಂ ತಮಿಳುನಾಡಿನ ರಾಜಧಾನಿ ಚೆನ್ನೈನಿಂದ 380 ಕಿ.ಮೀ ದೂರದಲ್ಲಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

 

ತಮಿಳುನಾಡಿನ ದಾರಾಸುರಂನಲ್ಲಿ ಐರಾವತೇಶ್ವರ ದೇವಾಲಯವಿದೆ. ಇದು ಮತ್ತೊಂದು ಪ್ರಸಿದ್ಧ ಯಾತ್ರಾ ಸ್ಥಳವಾದ ತಂಜಾವೂರಿನ ಕುಂಭಕೋಣಂನ ಹತ್ತಿರವಿದೆ. ದಾರಾಸುರಂ ಪಟ್ಟಣ ಮೊದಲು ರಾಜರಾಜಪುರಂ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಚೋಳರ ದೊರೆ ಎರಡನೇ ರಾಜರಾಜ ಚೋಳನ ಕಾಲದಲ್ಲಿ ಈ ಐರಾವತೇಶ್ವರ ದೇವಾಲಯವನ್ನು ನಿರ್ಮಿಸಲಾಯಿತು. ತಮಿಳುನಾಡಿನ ಇತರ ಚೋಳ ದೇವಾಲಯಗಳಂತೆ, ಇದನ್ನು ಸಹ ಶಿವನಿಗೆ ಸಮರ್ಪಿಸಲಾಗಿದೆ.

 

ಐರಾವತ ಶಿವನನ್ನು ಪೂಜಿಸಿದ ದೇವಸ್ಥಾನ

airavatesvara offering pooja to shivaImage source : Pholder

ಈ ದೇವಾಲಯದಲ್ಲಿ ನೆಲೆಸಿರುವುದು ಐರಾವತೇಶ್ವರ ಸ್ವಾಮಿ. ಪುರಾಣಗಳ ಪ್ರಕಾರ, ಭಗವಾನ್ ಇಂದ್ರನ ಆನೆಯಾದ ಐರಾವತ, ಇಲ್ಲಿ ಶಿವನನ್ನು ಪೂಜಿಸಿದನು. ದೂರ್ವಾಸಾ ಋಷಿ ಅವರನ್ನು ಗೌರವಿಸದ ಕಾರಣ ಶಾಪಗ್ರಸ್ತನಾದ ನಂತರ, ಯಮತೀರ್ಥಂನ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದ ನಂತರವೇ ಆನೆ ಶಾಪದಿಂದ ಮುಕ್ತವಾಯಿತು. ಕಳಂಕವಿಲ್ಲದ ಐರಾವತನು ಮತ್ತೆ ಬಿಳಿ ಬಣ್ಣದ ಆನೆಯಾಗಿ ಬದಲಾಯಿತು. ಹೀಗಾಗಿ ಈ ದೇವಾಲಯಕ್ಕೆ ಐರಾವತೇಶ್ವರ ದೇವಾಲಯ ಎಂಬ ಹೆಸರು ಬಂತು. ಯಮಧರ್ಮರಾಯ ಕೂಡ ಇಲ್ಲಿ ಶಿವನನ್ನು ಪೂಜಿಸುತ್ತಿದ್ದ ಎಂದು ನಂಬಲಾಗಿದೆ. ಋಷಿಯೊಬ್ಬರಿಂದ ಶಾಪಗ್ರಸ್ತನಾದ ಯಮ, ದೇವಾಲಯದ ಪವಿತ್ರ ತೊಟ್ಟಿಯಲ್ಲಿ ಸ್ನಾನ ಮಾಡಿ ಗುಣಮುಖನಾದನು. ಹಾಗಾಗಿ ಈ ದೇವಾಲಯದ ತೊಟ್ಟಿಗೆ ಯಮತೀರ್ಥಂ ಎಂದು ಹೆಸರಿಡಲಾಗಿದೆ.

 

ಐರಾವತೇಶ್ವರ ದೇವಸ್ಥಾನದಲ್ಲಿ ನೀರಿನ ತೊಟ್ಟಿ ಇದೆ. ಈ ನೀರಿನ ತೊಟ್ಟಿಗೆ ಕಾವೇರಿ ನದಿ ನೀರು ಬರುತ್ತದೆ, ಐರಾವತ ಇಂದ್ರನ ಬಿಳಿ ಆನೆಯು ಈ ತೊಟ್ಟಿಯಲ್ಲಿ ಸ್ನಾನ ಮಾಡಿದ ನಂತರ ಬಿಳಿ ಚರ್ಮವನ್ನು ಪಡೆಯಿತು ಎಂದು ಪುರಾಣ ತಿಳಿಸುತ್ತದೆ. ಈ ದಂತಕಥೆ ಚಿತ್ರಣವನ್ನು ದೇವಾಲಯದ ಒಳಗಿನ ಗೋಡೆಯಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ,

 

12ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ದೇವಾಲಯವು ವಾಸ್ತುಶಿಲ್ಪದ ಸುವರ್ಣಯುಗದ ಪ್ರತೀಕವಾಗಿದೆ. ಯುನೆಸ್ಕೋ ಇದನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ. ಐರಾವತೇಶ್ವರ ದೇವಾಲಯವು ತಂಜಾವೂರಿನಿಂದ 35 ಕಿ.ಮೀ ದೂರದಲ್ಲಿದೆ. ತಂಜಾವೂರು ಮತ್ತು ದಾರಾಸುರಂನಲ್ಲಿನ ದೇವಾಲಯಗಳನ್ನು ಚೋಳರ ಕಾಲದಲ್ಲೇ ನಿರ್ಮಿಸಿರುವುದರಿಂದ ಇವುಗಳ ವಾಸ್ತುಶಿಲ್ಪವು ಒಂದೇ ರೀತಿಯಲ್ಲಿದೆ. ಐರಾವತೇಶ್ವರ ದೇವಾಲಯದ ವಿಶೇಷತೆಯೆಂದರೆ ರಥ ರಚನೆಯ ಅದ್ಭುತ ವಾಸ್ತುಶಿಲ್ಪದ ದೇವಾಲಯ.

 

ರಥ ರಚನೆಯ ಅದ್ಭುತ ವಾಸ್ತುಶಿಲ್ಪದ ದೇವಾಲಯ

ರಥ ರಚನೆಯ ಅದ್ಭುತ ವಾಸ್ತುಶಿಲ್ಪದ ದೇವಾಲಯImage Source : nctamilsangam.wordpress.com

ಐರಾವತೇಶ್ವರ ದೇವಾಲಯವನ್ನು ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಬಳಸಿ ನಿರ್ಮಿಸಲಾಗಿದೆ ಮತ್ತು ಇದು ಸೊಗಸಾದ ಕೆತ್ತನೆಗಳು ಮತ್ತು ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಈ ದೇವಾಲಯವು ಕುದುರೆ ಮತ್ತು ಆನೆಯಿಂದ ಎಳೆಯಲ್ಪಟ್ಟ ರಥದ ಚಿತ್ರವಾಗಿದೆ. ವಾಸ್ತುಶಿಲ್ಪದ ಶೈಲಿ, ಚದರ ರಚನೆಗಳು ಎಲ್ಲರ ಗಮನಸೆಳೆಯುತ್ತವೆ. ದೇವಾಲಯದ ಸಂಕೀರ್ಣದ ಪ್ರವೇಶದ್ವಾರದಲ್ಲಿ ಲಿಂಗ, ಪೆರಿಯಾಯಾಗ ದೇವಿಯ ಬೃಹತ್ ಪ್ರತಿಮೆ ಮತ್ತು ಬೃಹತ್ ನಂದಿ ಇದೆ. ವರ್ಣಚಿತ್ರಗಳು ಮತ್ತು ಶಿಲಾಶಾಸನಗಳು ಚೋಳ ರಾಜವಂಶದ ಇತಿಹಾಸವನ್ನು ವಿವರಿಸುತ್ತದೆ. ಚಾವಣಿಯ ಮೇಲೆ ಶಿವ ಮತ್ತು ಪಾರ್ವತಿಯ ಕೆತ್ತನೆಗಳು ಭವ್ಯವಾಗಿ ಕಾಣುತ್ತವೆ.

 

ಆನೆ ರಥವನ್ನು ಎಳೆಯುವುದರಿಂದ ಮುಖ್ಯ ಮಂಟಪವನ್ನು ರಾಜಾ ಗಂಭೀರಾ ಎಂದು ಕರೆಯಲಾಗುತ್ತದೆ. ಕೈಲಾಸವನ್ನು ಹೊತ್ತ ರಾವಣನ ಕಲ್ಲಿನ ಚಿತ್ರಣ ಅದ್ಭುತವಾಗಿ ಮೂಡಿಬಂದಿದೆ. ವೀಣೆ ಇಲ್ಲದೆ ಸರಸ್ವತಿ, ಬುದ್ಧ, ಭಿಕ್ಷಟನೆ, ಅರ್ಧನಾರೀಶ್ವರ, ಬ್ರಹ್ಮ ಮತ್ತು ಸೂರ್ಯನ ಶಿಲ್ಪವನ್ನು ಇಲ್ಲಿ ನೋಡಬಹುದು. ಈ ದೇವಾಲಯದಲ್ಲಿರುವ ಇನ್ನೊಂದು ವಿಶೇಷತೆಯೆಂದರೆ, ಸಂಗೀತದ ಸ್ವರಗಳನ್ನು ಹೊಮ್ಮಿಸುವ ಕಲ್ಲಿನ ಮೆಟ್ಟಿಲು.

 

ಸ್ವರಗಳನ್ನು ಹೊಮ್ಮಿಸುವ ಸಂಗೀತದ ಮೆಟ್ಟಿಲು

ಸ್ವರಗಳನ್ನು ಹೊಮ್ಮಿಸುವ ಸಂಗೀತದ ಮೆಟ್ಟಿಲುImage Credits : Detechter

ಅಚ್ಚರಿ ಎನಿಸಿದರೂ ಇದು ನಿಜ. ಐರಾವತೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಮಂಟಪದಲ್ಲಿ ಮೆಟ್ಟಿಲುಗಳನ್ನು ತಟ್ಟಿದರೆ ಸಂಗೀತದ ಸ್ವರಗಳನ್ನು ಕೇಳಬಹುದು. ದೇವಾಲಯದ ಹೊರಾಂಗಣದಲ್ಲಿ ಒಂದು ಚಿಕ್ಕ ಮಂಟಪಕ್ಕೆ ಹೊಂದಿಕೊಂಡು ಕಟ್ಟೆಯಿದೆ. ದೇವಾಲಯದ ಎದುರು ಇರುವ ಕಂಬದ ಹಿಂದೆ ಇರುವ ಕಟ್ಟೆಯನ್ನು ಬಲಿಕಟ್ಟೆ ಎನ್ನುತ್ತಾರೆ. ಈ ಕಟ್ಟೆಗೆ 7 ಮೆಟ್ಟಿಲನ್ನು ಹೊಂದಿರುವ ಕಲ್ಲಿನ ಮೆಟ್ಟಿಲಿದೆ. ಈ ಮೆಟ್ಟಿಲುಗಳು ಸಂಗೀತದ ಸ್ವರಗಳನ್ನು ಹೊರಹೊಮ್ಮಿಸುತ್ತವೆ. ಒಂದೊಂದು ಮೆಟ್ಟಿಲುಗಳನ್ನು ತಟ್ಟುತ್ತಾ ಹೋದಂತೆ ಒಂದೊಂದು ಸ್ವರ ಕೇಳಿಸುತ್ತದೆ ಎಂದು ಹೇಳಲಾಗುತ್ತದೆ.

 

ದೇವಾಲಯಕ್ಕೆ ಆಗಮಿಸುವ ಮಂದಿ ಈ ಮೆಟ್ಟಿಲಲ್ಲೇ ಹೆಚ್ಚು ಸಮಯ ಕಳೆಯುವ ಕಾರಣ ಇದು ಹಾಳಾಗುವ ಸಾಧ್ಯತೆಯಿರುವ ಕಾರಣ, ಸದ್ಯ ಈ ಮೆಟ್ಟಿಲಿಗೆ ಕಬ್ಬಿಣದ ಕಂಬಿಗಳನ್ನು ಹಾಕಲಾಗಿದೆ. ಒಟ್ಟಿನಲ್ಲಿ ದಾರಾಸುರಂನ ಐರಾವತೇಶ್ವರ ಇತಿಹಾಸ ಹಾಗೂ ಶಿಲ್ಪಕಲಾ ಆಸಕ್ತರಿಗೆ ಕಣ್ಮನ ತಣಿಸುವ ಸುಂದರ ದೇವಾಲಯವಾಗಿದೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author