ಕೂದಲು ಉದುರುವ ಸಮಸ್ಯೆಗೆ ಸರಳ ಪರಿಹಾರ

ಕೂದಲು ಉದುರುವ ಸಮಸ್ಯೆಗೆ ಸರಳ ಪರಿಹಾರ

 

ಈಗಂತೂ ಕೂದಲುದುರವ ಸಮಸ್ಯೆ ತೀರಾ ಸಾಮಾನ್ಯವಾಗಿಬಟ್ಟಿದೆ. ಆದರೆ ಈ ಸಮಸ್ಯೆಯಿಂದ ಪಾರಾಗಲು ಹಲವರು ಮಾರುಕಟ್ಟೆಗೆ ಬಂದಿರುವ ಹಲವು ಪ್ರಾಡಕ್ಟ್ ಗಳನ್ನ ಬಳಸಿ, ಕೆಲವೊಮ್ಮೆ ಪ್ರಯೋಜನವಾಗದೆ ನಿರಾಸೆ ಅನುಭವಿಸಿರುತ್ತೀರಿ. ಆದರೆ ಮನೆಯಲ್ಲೇ ಸಿಗುವ ಕೆಲವೊಂದು ಸಾಮಗ್ರಿಗಳನ್ನ ಬಳಸಿ ಹೇಗೆ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಒಂದಷ್ಟು ಸಲಹೆಗಳು ಇಲ್ಲಿವೆ ನೋಡಿ.

ಕೂದಲು ಉದರುರಲು ಒತ್ತಡ, ತಲೆಹೊಟ್ಟು, ಧೂಳು, ನೀರು ಸೇರಿದಂತೆ ಹಲವು ಕಾರಣಗಳಿರುತ್ತವೆ. ಆದ್ದರಿಂದ ಮೊದಲು ಯಾವ ಕಾರಣದಿಂದ ಕೂದಲು ಉದುರುತ್ತಿದೆ ಎಂಬುದನ್ನು ತಿಳಿಯಲು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬಹುದು. ಅಷ್ಟೇ ಅಲ್ಲದೆ ಮನೆಯಲ್ಲೇ ಸಿಗುವ ಕೆಲವೊಂದು ಸಾಮಗ್ರಿಗಳನ್ನ ಬಳಸಿ ನೈಸರ್ಗಿಕವಾಗಿಯೂ ಪರಿಹಾರ ಕಂಡುಕೊಳ್ಳಬಹುದು.

ಮೆಂತೆ ಕಾಳು ಪೇಸ್ಟ್

ರಾತ್ರಿಯಿಡೀ ಮೆಂತ್ಯೆಕಾಳನ್ನು ನೆನೆಸಿಟ್ಟು ಬೆಳಗ್ಗೆ ಅದನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಅಲೋವೆರಾ ಜೆಲ್ ಸೇರಿ ಕೂದಲಿನ ಬುಡಕ್ಕೆ ಹಚ್ಚಿ. ಒಂದುಗಂಟೆ ಬಿಟ್ಟು ಸ್ನಾನ ಮಾಡಿ. ಈ ವಿಧಾನವನ್ನು ನಿಯಮಿತವಾಗಿ ಅನುಸರಿಸುವುದರಿಂದ ಕೂದಲು ಉದುರುವುದು ಕ್ರಮೇಣ ಕಡಿಮೆಯಾಗುತ್ತದೆ ಅಷ್ಟೆ ಅಲ್ಲದೆ ಕೂದಲು ಸಾಫ್ಟ್ ಸಹ ಆಗುತ್ತದೆ. ವಾರದಲ್ಲಿ ಎರಡುಬಾರಿಯಾದರೂ ಈ ವಿಧಾನವನ್ನು ಅನುಸರಿಸುವುದು ಉತ್ತಮ.

ಆಯಿಲ್ ಮಸಾಜ್

ಕೊಬ್ಬರಿ ಎಣ್ಣೆ, ಆಮ್ಲ ಹೇರ್ ಆಯಿಲ್ ಅತವಾ ಬಾದಾಮಿ ಎಣ್ಣೆ ನೀವು ಕೂದಲಿಗೆ ಬಳಸುವ ಯಾವುದಾದರು ಎಣ್ಣೆಯನ್ನು ಕೂದಲಿನ ಬುದದಿಂದ ತುದಿಗೆ ಹಚ್ಚಿ. ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ ಮಸಾಜ್ ಮಾಡುತ್ತಿರಿ. ಇದರಿಂದ ರಕ್ತ ಪರಿಚಲನೆ ಉಂಟಾಗಿ ಕೂದಲು ಬೆಳೆಯಲು ಅವಕಾಶವಾಗುತ್ತದೆ. ಅಲ್ಲದೆ ಹೇರ್ ಡ್ಯಾಮೇಜ್ ಸಹ ಕಡಿಮೆಯಾಗಿ, ಕೂದಲು ತುಂಡಾಗುವುದು ನಿಯಂತ್ರಣಕ್ಕೆ ಬರುತ್ತದೆ. ಸ್ನಾಕ್ಕೂ ಎರಡರಿಂದ ಮೂರು ಗಂಟೆ ಮೊದಲು ತಲೆಗೆ ಎಣ್ಣೆ ಹಚ್ಚಿ, ಮಸಾಜ್ ಮಾಡಿ ನಂತರ ಸ್ನಾನ ಮಾಡಬಹುದು.

ಈರುಳ್ಳಿ ರಸದ ಮಸಾಜ್

ಮನೆಯಲ್ಲೇ ಸುಲಭವಾಗಿ ಸಿಗುವ ಈರುಳ್ಳಿಯನ್ನು ಜಜ್ಜಿ ಅಥವಾ ರುಬ್ಬಿ ರಸ ತೆಗೆದುಕೊಳ್ಳಿ. ಸ್ನಾನಕ್ಕೂ ಒಂದು ಗಂಟೆಗೂ ಮುನ್ನ ಈರುಳ್ಳಿ ರಸದಿಂದ ತಲೆಗೆ ಮಸಾಜ್ ಮಾಡಿ ನಂತರ ಸ್ನಾನ ಮಾಡಿ. ಕೆಲವೊಬ್ಬರು ತಾವು ಕೂಲಿಗೆ ಬಳಸು ಎಣ್ಣೆಗೇ ಈರುಳ್ಳಿ ರಸ ಸೇರಿ ಹೆಡ್ ಮಸಾಜ್ ಮಾಡುತ್ತಾರೆ. ಹೇಗೇ ಮಾಡಿದರು ಈರುಳ್ಳಿ ರಸ ಕೂದಲಿಗೆ ಹಚ್ಚಿದ ಒಂದು ಗಂಟೆ ನಂತರ ಸ್ನಾನಮಾಡುವುದು ಉತ್ತಮ. ಈರುಳ್ಳಿ ರಸದಿಂದ ಮಸಾಜ್ ಮಾಡುವುದರಿಂದ ಕೋದಲು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಕೂದಲ ಆರೋಗ್ಯಕ್ಕೆ ದಾಸವಾಳದ ಉಪಯೋಗ

ದಾಸವಾಳದ ಎಲೆಗಳು ಅಥವಾ ಎಸಳುಗಳು ಹಾಗೂ ಮೊಸರನ್ನು ರುಬ್ಬಿ ಕೂದಲಿಗೆ ಹಚ್ಚಿ ಒಂದುಗಂಟೆ ನಂತರ ಸ್ನಾನ ಮಾಡುವುದರಿಂದ ಕೂದು ಹೊಳಪು ಹೆಚ್ಚುತ್ತದೆ. ಅಷ್ಟೆ ಅಲ್ಲದೆ ಪ್ರತಿ ಬಾರಿ ಕೂದಲಿಗೆ ಎಣ್ಣೆ ಹಚ್ಚುವಾಗ ಎಣ್ನೆಯನ್ನು ಬಿಸಿ ಮಾಡಿ ಹಚ್ಚುವುದರಿಂದ ಕೂದಲು ನಯವಾಗಿರುತ್ತವೆ. ಇನ್ನು ತಲೆ ಸ್ನಾನ ಮಾಡುವಾಗ ಯಾವುದೇ ಕಾರಣಕ್ಕು ಹೆಚ್ಚು ಬಿಸಿ ನೀರು ಬಳಸುವುದನ್ನು ಬಿಟ್ಟು ಉಗುರು ಬೆಚ್ಚಗಿನ ನೀರು ಬಳಸುವುದು ಉತ್ತಮ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author